ಕೊನೆಯ ಕ್ಷಣದಲ್ಲಿ ಹೆಚ್‌ಆರ್-ವಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಹೋಂಡಾ

ಹೆಚ್ಆರ್-ವಿ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಗಾಗಿ ಭಾರೀ ಸಿದ್ದತೆಯಲ್ಲಿದ್ದ ಹೋಂಡಾ ಸಂಸ್ಥೆಯು ಕೊನೆಯ ಹಂತದಲ್ಲಿ ಹಿಂದೆ ಸರಿದಿದ್ದು, ಹೊಸ ಕಾರು ಬಿಡುಗಡೆ ಮಾಡದಿರಲು ಕೆಲವು ಮಹತ್ವದ ಕಾರಣಗಳನ್ನು ಬಿಚ್ಚಿಟ್ಟಿದೆ.

ಕೊನೆಯ ಕ್ಷಣದಲ್ಲಿ ಹೆಚ್‌ಆರ್-ವಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಹೋಂಡಾ

ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ವಿನೂತನ ಮಾದರಿಯ ಹೆಚ್ಆರ್-ವಿ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸುವ ಸಂಬಂಧ ಈ ಹಿಂದೆ ಹಲವು ಬಾರಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿತ್ತು. ಆದ್ರೆ ಹೊಸ ಕಾರು ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ಹೆಚ್ಆರ್-ವಿ ಬಿಡುಗಡೆ ಮಾಡದಿರಲು ನಿರ್ಧರಿಸಿದ್ದು, ಪ್ರತಿಸ್ಪರ್ಧಿ ಕಾರುಗಳ ಅಬ್ಬರದ ಮುಂದೆ ಹೆಚ್ಆರ್-ವಿ ಆಟ ನಡೆಯದು ಎಂಬ ನಿರ್ಧಾರಕ್ಕೆ ಬಂದಿದೆ.

ಕೊನೆಯ ಕ್ಷಣದಲ್ಲಿ ಹೆಚ್‌ಆರ್-ವಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಹೋಂಡಾ

ಹೌದು, ಭಾರತದಲ್ಲಿ ಹೆಚ್ಆರ್-ವಿ ಕಾರನ್ನು ಬಿಡುಗಡೆಯ ಉದ್ದೇಶಕ್ಕಾಗಿ ಸುಮಾರು 2 ವರ್ಷಗಳ ಕಾಲ ಮಾರುಕಟ್ಟೆ ಅಧ್ಯಯನ ನಡೆಸಿದ್ದ ಹೋಂಡಾ ಸಂಸ್ಥೆಯು ಕಳೆದ ವರ್ಷದಲ್ಲಿ ಹತ್ತಾರು ಬಾರಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿತ್ತು.

ಕೊನೆಯ ಕ್ಷಣದಲ್ಲಿ ಹೆಚ್‌ಆರ್-ವಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಹೋಂಡಾ

ಹೀಗಿರುವಾಗ ಹೆಚ್ಆರ್-ವಿ ಕಾರು 2019ರ ಕೊನೆಯಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತ ಎಂದುಕೊಂಡಿದ್ದ ಎಸ್‌ಯುವಿ ಪ್ರಿಯರಿಗೆ ಕೊನೆ ಗಳಿಗೆಯಲ್ಲಿ ನಿರಾಶೆ ಉಂಟು ಮಾಡಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಆರ್-ವಿ ಬಿಡುಗಡೆ ಸಾಧ್ಯವಿಲ್ಲ ಎಂದಿದೆ.

ಕೊನೆಯ ಕ್ಷಣದಲ್ಲಿ ಹೆಚ್‌ಆರ್-ವಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಹೋಂಡಾ

ಈ ಕುರಿತಂತೆ ಆಟೋ ಕಾರ್ ಇಂಡಿಯಾ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಹೋಂಡಾ ಕಾರ್ಸ್ ಇಂಡಿಯಾ ಹಿರಿಯ ಅಧಿಕಾರಿಯೊಬ್ಬರು ಹೆಚ್ಆರ್-ವಿ ಬಿಡುಗಡೆ ಕುರಿತಂತೆ ಸದ್ಯಕ್ಕೆ ಯಾವುದೇ ಯೋಚನೆಯಿಲ್ಲ ಎಂದಿದ್ದು, ಪ್ರತಿಸ್ಪರ್ಧಿ ಕಾರುಗಳ ಬೆಲೆ ಸಮರದಲ್ಲಿ ಹೆಚ್ಆರ್-ವಿ ಮಾರಾಟವು ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಇದಕ್ಕೆ ಕಾರಣ, ಹೊಸ ಕಾರನ್ನು ರೂ.12 ಲಕ್ಷದಿಂದ ರೂ.16 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆ ಮಾಡಬೇಕೆಂಬ ಹೋಂಡಾ ಯೋಜನೆಯು ಸಾಧ್ಯವಾಗದಿರುವುದು.

ಕೊನೆಯ ಕ್ಷಣದಲ್ಲಿ ಹೆಚ್‌ಆರ್-ವಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಹೋಂಡಾ

ಸದ್ಯ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಅಬ್ಬರ ಹೆಚ್ಚುತ್ತಿದ್ದು, ಹ್ಯುಂಡೈ ಕ್ರೆಟಾ, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೊಸ್ ಕಾರುಗಳು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವುದು ಹೆಚ್ಆರ್-ವಿ ಮಾರಾಟಕ್ಕೆ ತೀವ್ರ ಪೈಪೋಟಿ ನೀಡಲಿವೆ.

ಕೊನೆಯ ಕ್ಷಣದಲ್ಲಿ ಹೆಚ್‌ಆರ್-ವಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಹೋಂಡಾ

ಹ್ಯುಂಡೈ ಕ್ರೆಟಾ, ಟಾಟಾ ಹ್ಯಾರಿಯರ್, ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೊಸ್ ಕಾರುಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ಆರಂಭಿಕವಾಗಿ ರೂ. 9.70 ಲಕ್ಷದಿಂದ ರೂ.17 ಲಕ್ಷ ಬೆಲೆ ಅಂತರ ಮಾರಾಟವಾಗುತ್ತಿದ್ದು, ಹೆಚ್ಆರ್-ವಿ ಕಾರಿನ ಬೆಲೆಯನ್ನು ರೂ.12 ಲಕ್ಷದಿಂದ ರೂ.16 ಲಕ್ಷ ಬೆಲೆ ಅಂತರದಲ್ಲಿ ನಿಗದಿ ಮಾಡಲು ಹೋಂಡಾ ಸಂಸ್ಥೆಗೆ ಸಾಧ್ಯವಾಗುತ್ತಿಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಕೊನೆಯ ಕ್ಷಣದಲ್ಲಿ ಹೆಚ್‌ಆರ್-ವಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಹೋಂಡಾ

ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ತಾಂತ್ರಿಕ ಸೌಲಭ್ಯಗಳನ್ನು ನೀಡಿದ್ದಲ್ಲಿ ಹೆಚ್‌ಆರ್-ವಿ ಕಾರಿನ ಬೆಲೆಯು ಪ್ರತಿಸ್ಪರ್ಧಿ ಕಾರುಗಳಿಂತಲೂ ಸಾಕಷ್ಟು ದುಬಾರಿಯಾಗಲಿದ್ದು, ಬೆಲೆ ಇಳಿಕೆಗೆ ಸ್ಥಳೀಯ ಬೀಡಿಭಾಗಗಳನ್ನು ಬಳಕೆ ಮಾಡಿದರು ಸಹ ಕಾರಿನ ಬೆಲೆ ತಗ್ಗಿಸಲು ಸಾಧ್ಯವಾಗುತ್ತಿಲ್ಲ.

MOST READ: ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಕೊನೆಯ ಕ್ಷಣದಲ್ಲಿ ಹೆಚ್‌ಆರ್-ವಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಹೋಂಡಾ

ಮಾಹಿತಿಗಳ ಪ್ರಕಾರ ಹೆಚ್ಆರ್-ವಿ ಕಾರನ್ನು ಪ್ರತಿಸ್ಪರ್ಧಿ ಕಾರುಗಳಿಗೆ ಅನುಗುಣವಾಗಿ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲು ಮುಂದಾದರೇ ಕಾರಿನ ಬೆಲೆಯು ಆರಂಭಿಕವಾಗಿ ರೂ. 16 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22 ಲಕ್ಷಕ್ಕೆ ಬೆಲೆ ನಿಗದಿ ಮಾಡಬೇಕಾಗುತ್ತದೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಕೊನೆಯ ಕ್ಷಣದಲ್ಲಿ ಹೆಚ್‌ಆರ್-ವಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಹೋಂಡಾ

ಈ ಹಿನ್ನಲೆಯಲ್ಲಿ ಹೊಸ ಕಾರು ಬಿಡುಗಡೆಯ ಯೋಜನೆಯನ್ನು ಸದ್ಯಕ್ಕೆ ಮುಂದೂಡಿರುವ ಹೋಂಡಾ ಸಂಸ್ಥೆಯು ಬಿಡುಗಡೆಯ ನೀರಿಕ್ಷೆಯಲ್ಲಿರುವ ನೆಕ್ಸ್ಟ್ ಜನರೇಷನ್ ಕಾರುಗಳ ಅಭಿವೃದ್ದಿ ಮೇಲೆ ಗಮನಹರಿಸಿದ್ದು, ಬಿಆರ್-ವಿ ಕಾರು ಮಾದರಿಯನ್ನೇ ಮತ್ತಷ್ಟು ಹೊಸ ಬದಲಾವಣೆಯೊಂದಿಗೆ ಬಿಡುಗಡೆಗೆ ಚಿಂತನೆ ನಡೆಸಿದೆ.

ಕೊನೆಯ ಕ್ಷಣದಲ್ಲಿ ಹೆಚ್‌ಆರ್-ವಿ ಕಾರು ಬಿಡುಗಡೆಯ ಯೋಜನೆಯನ್ನು ಕೈಬಿಟ್ಟ ಹೋಂಡಾ

ಇನ್ನು ಯುರೋಪಿನ್ ಮಾರುಕಟ್ಟೆಗಳಲ್ಲಿ ವೆಝೆಲ್ ಹೆಸರಿನಲ್ಲಿ ಮಾರಾಟವಾಗುತ್ತಿರುವ ಹೆಚ್ಆರ್-ವಿ ಕಾರು ದುಬಾರಿ ಬೆಲೆ ಹೊಂದಿದ್ದು, 2.0-ಲೀಟರ್ ಪೆಟ್ರೋಲ್ ಮತ್ತು 1.8-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಹಲವು ಐಷಾರಾಮಿ ಫೀಚರ್ಸ್‌ನೊಂದಿಗೆ ಅಧಿಕ ಮಾರಾಟವನ್ನು ಹೊಂದಿದೆ. ಆದರೆ, ಭಾರತದಲ್ಲಿ ಹೆಚ್ಆರ್-ವಿ ಮಾರಾಟಕ್ಕೆ ಪೂರಕವಾದ ವಾತಾವರಣ ಇಲ್ಲದಿರುವುದರಿಂದ ಹೊಸ ಕಾರಿನ ಬಿಡುಗಡೆಯ ಯೋಜನೆಯಿಂದ ಹೋಂಡಾ ಹಿಂದೆ ಸರಿದಿದೆ.

Most Read Articles

Kannada
Read more on ಹೋಂಡಾ honda
English summary
Honda has called off launch plan of its Honda HR-V mid size SUV in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X