ಜುಲೈ 1ರಿಂದ ಹೊಸ ದರ- ಹೋಂಡಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಉತ್ಪಾದನಾ ವೆಚ್ಚ ಮತ್ತು ಹೊಸ ಸುರಕ್ಷಾ ಸೌಲಭ್ಯಗಳ ಕಡ್ಡಾಯ ಅಳವಡಿಕೆ ಹಿನ್ನೆಲೆಯಲ್ಲಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಜುಲೈ 1ರಿಂದಲೇ ಅನ್ವಯವಾಗುವಂತೆ ಹೊಸ ದರ ಪಟ್ಟಿ ಬಿಡುಗಡೆಗೊಳಿಸುತ್ತಿದ್ದು, ಹೊಸ ವಾಹನಗಳ ಖರೀದಿಯ ಪ್ರಕ್ರಿಯೆಯೂ ಮತ್ತಷ್ಟು ದುಬಾರಿಯಾಗಲಿದೆ.

ಜುಲೈ 1ರಿಂದ ಹೊಸ ದರ- ಹೋಂಡಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ವರ್ಷದ ಆರಂಭದಿಂದ ಹೊಸ ವಾಹನಗಳ ಮಾರಾಟ ಪ್ರಕ್ರಿಯೆಯು ನೆಲಕಚ್ಚಿದ್ದು, ಈ ನಡುವೆ ನಷ್ಟದ ಸುಳಿಗೆ ಸಿಲುಕಿರುವ ವಾಹನ ಉತ್ಪಾದನಾ ಸಂಸ್ಥೆಗಳು ಉತ್ಪಾದನಾ ವೆಚ್ಚ ಮತ್ತು ಹೊಸ ವಾಹನಗಳಲ್ಲಿನ ಕಡ್ಡಾಯ ಸುರಕ್ಷಾ ಸೌಲಭ್ಯಗಳ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಮೊರೆಹೋಗಿವೆ. ಹೋಂಡಾ ಕೂಡಾ ಗ್ರಾಹಕ ಬೆಲೆ ಏರಿಕೆಯ ಶಾಕ್ ನೀಡಿದ್ದು, ಕಾರುಗಳ ಬೆಲೆ ಆಧಾರದ ಮೇಲೆ ಶೇ. 1.2 ರಿಂದ ಶೇ. 1.5 ರಷ್ಟು ದರ ಹೆಚ್ಚಳ ಮಾಡಲಾಗಿದೆ.

ಜುಲೈ 1ರಿಂದ ಹೊಸ ದರ- ಹೋಂಡಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಹೊಸ ದರ ಪಟ್ಟಿಯು ಮುಂದಿನ ತಿಂಗಳು ಜುಲೈ 1ರಿಂದಲೇ ಅನ್ವಯವಾಗಲಿದ್ದು, ಹೊಸ ಕಾರುಗಳ ಬೆಲೆಯು ದರಗಳ ಪಟ್ಟಿಗೆ ಅನುಗುಣವಾಗಿ ಕನಿಷ್ಠ ರೂ.10 ಸಾವಿರದಿಂದ ಗರಿಷ್ಠ ರೂ.20 ಸಾವಿರ ತನಕ ಏರಿಕೆಯಾಗಲಿವೆ.

ಜುಲೈ 1ರಿಂದ ಹೊಸ ದರ- ಹೋಂಡಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಸದ್ಯ ಹೋಂಡಾ ಸಂಸ್ಥೆಯು ಮಾರುಕಟ್ಟೆಯಲ್ಲಿ ಎಂಟ್ರಿ ಲೆವಲ್‌ನಲ್ಲಿ ರೂ. 5.90 ಲಕ್ಷದಿಂದ ಐಷಾರಾಮಿ ಸೌಲಭ್ಯದೊಂದಿಗೆ ರೂ. 44.03 ಲಕ್ಷ ಬೆಲೆಯ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಅಮೇಜ್, ಡಬ್ಲ್ಯುಆರ್-ವಿ, ಬಿಆರ್-ವಿ, ಜಾಝ್, ಸಿ-ಆರ್‌ವಿ ಮತ್ತು ಅಕಾರ್ಡ್ ಹೈಬ್ರಿಡ್ ಕಾರುಗಳು ಹೋಂಡಾ ಸಂಸ್ಥೆಯ ಪ್ರಮುಖ ಆವೃತ್ತಿಗಳಾಗಿವೆ.

ಜುಲೈ 1ರಿಂದ ಹೊಸ ದರ- ಹೋಂಡಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಹೊಸ ದರಪಟ್ಟಿಯಲ್ಲಿ ಮೇಲಿನ ಎಲ್ಲಾ ಕಾರುಗಳ ಬೆಲೆ ಏರಿಕೆ ಮಾಡಲಾಗಿದ್ದು, ಕೇಂದ್ರ ಸರ್ಕಾರವು ಜುಲೈ 1ರಿಂದ ಜಾರಿಗೆ ತಂದಿರುವ ಕೆಲವು ಕಡ್ಡಾಯ ಸುರಕ್ಷಾ ಸೌಲಭ್ಯಗಳನ್ನು ಈಗಾಗಲೇ ನವೀಕರಿಸಿ ಹೋಂಡಾ ಸಂಸ್ಥೆಯು ಬಿಡುಗಡೆ ಮಾಡಿದೆ. ಹೊಸ ನಿಯಮದ ಪ್ರಕಾರ, ಹೊಸ ಕಾರುಗಳಲ್ಲಿ ಸ್ಟಾಂಡರ್ಡ್ ಆಗಿ ಏರ್‌ಬ್ಯಾಗ್, ಸೀಟ್ ಬೆಲ್ಟ್ ರಿಮೆಂಡರ್, ಸ್ಪೀಡ್ ಡ್ರೈವ್ ವಾರ್ನಿಂಗ್ ಸೇರಿದಂತೆ ಕೆಲವು ಸೆಫ್ಟಿ ಫೀಚರ್ಸ್‌ಗಳನ್ನು ನೀಡಬೇಕಿದ್ದು, ಹೊಸ ನಿಯಮ ಪಾಲಿಸದ ಕಾರುಗಳ ಮಾರಾಟಕ್ಕೆ ಬ್ರೇಕ್ ಬೀಳಲಿದೆ.

ಹೀಗಾಗಿಯೇ ಹೋಂಡಾ ಸಂಸ್ಥೆಯು ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಸ್ಟ್ಯಾಂಡಂರ್ಡ್ ಆಗಿ ಸೀಟ್ ಬೆಲ್ಟ್ ರಿಮೆಂಡರ್ ಅಲಾರಾಂ ಮತ್ತು ಸ್ಪೀಡ್ ವಾರ್ನಿಂಗ್ ಸಿಸ್ಟಂಗಳನ್ನು ಜೋಡಣೆ ಮಾಡಿದ್ದು, ಹೆಚ್ಚುವರಿ ಹೊಸ ಸೆಫ್ಟಿ ಫೀಚರ್ಸ್‌ಗಳ ಜೋಡಣೆಯಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ.

ಜುಲೈ 1ರಿಂದ ಹೊಸ ದರ- ಹೋಂಡಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಇನ್ನು ಕಾರುಗಳಲ್ಲಿ ಕಡ್ಡಾಯ ಹೊಸ ಸುರಕ್ಷಾ ಸೌಲಭ್ಯ ನಿಯಮದಿಂದಾಗಿ ಸೀಟ್ ಬೆಲ್ಟ್ ಹಾಕದೇ ಕಾರು ಚಾಲನೆ ಮಾಡುವವರನ್ನು ಎಚ್ಚರಿಸಲು ಸಹಕಾರಿಯಾಗಲಿದ್ದು, ಇದು ಕಾರು ಚಾಲನೆಯ ವೇಳೆ ಆಗಬಹುದಾದ ಅನಾಹುತ ತಪ್ಪಿಸುವ ಉದ್ದೇಶದಿಂದ ಈ ಸೌಲಭ್ಯವನ್ನು ಕಡ್ಡಾಯವಾಗಿ ಜಾರಿಗೆ ತರಲಾಗಿದೆ.

ಜುಲೈ 1ರಿಂದ ಹೊಸ ದರ- ಹೋಂಡಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಹಾಗೆಯೇ ಸ್ಪೀಡ್ ವಾರ್ನಿಂಗ್ ಸೌಲಭ್ಯವು ಸಹ ಅತಿ ವೇಗವಾಗಿ ಕಾರು ಚಾಲನೆ ಮಾಡುವವರನ್ನು ಎಚ್ಚರಿಸಲಿದ್ದು, ಗಂಟೆಗೆ 120 ಕಿ.ಮಿ ದಾಟಿದ್ದಲ್ಲಿ ಬೀಪ್ಸ್ ಸೌಂಡ್ ಮೂಲಕ ವೇಗವಾಗಿ ಡ್ರೈವ್ ಮಾಡುವ ಚಾಲಕನಿಗೆ ಎಚ್ಟರಿಕೆಯ ಗಂಟೆ ನೀಡುತ್ತದೆ. ಇದರಿಂದ ಸ್ಪೀಡ್ ಡ್ರೈವಿಂಗ್‌ನಿಂದ ಆಗಬಹುದಾದ ಅನಾಹುತಗಳನ್ನು ತಗ್ಗಿಸಲಿದ್ದು, ಸ್ಪೀಡ್ ಗವರ್ನರ್ ಮಾದರಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ.

MOST READ: ಅಪಘಾತದ ವೇಳೆ ಏರ್‌ಬ್ಯಾಗ್ ಇದ್ರು ಫ್ಲಾಪ್- ಟೊಯೊಟಾ ವಿರುದ್ಧ ಕಾರು ಮಾಲೀಕನ ಆಕ್ರೋಶ..!

ಜುಲೈ 1ರಿಂದ ಹೊಸ ದರ- ಹೋಂಡಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ

ಇದಲ್ಲದೇ ಡ್ಯುಯಲ್ ಏರ್‌ಬ್ಯಾಗ್ ಮತ್ತು ಎಬಿಎಸ್ ಸೌಲಭ್ಯವು ಸಹ ಅಪಘಾತಗಳ ತೀವ್ರತೆಯನ್ನು ತಗ್ಗಿಸಲು ನೆರವಾಗಲಿದ್ದು, ಮುಂದುವರಿದ ರಾಷ್ಟ್ರಗಳಲ್ಲಿ ಇಂತಹ ನಿಯಮಗಳು ಈಗಾಗಲೇ ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ. ಹೀಗಾಗಿಯೇ ಕೇಂದ್ರ ಸರ್ಕಾರವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಹೊಸ ನಿಯಮ ಜಾರಿಗೊಳಿಸುವ ಮೂಲಕ ಪ್ರಯಾಣಿಕ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡುವಂತೆ ಖಡಕ್ ಸೂಚನೆ ನೀಡಿದೆ.

Most Read Articles

Kannada
Read more on ಹೋಂಡಾ honda
English summary
Honda To Increase Car Prices From July 2019. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X