ಐಷಾರಾಮಿ ಲುಕ್ ಪಡೆದ ಮಾಡಿಫೈ ಹ್ಯುಂಡೈ ಕ್ರೆಟಾ..!
ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಬಹುತೇಕ ಕಾರು ಪ್ರಿಯರು ಸ್ಪೋರ್ಟಿ ವರ್ಷನ್ ಮಾದರಿಗಳನ್ನು ಆಯ್ಕೆ ಮಾಡಲು ಮುಂದಾಗುತ್ತಾರೆ. ಆದ್ರೆ ಕೆಲವು ಗ್ರಾಹಕರು ಬೆಲೆ ವಿಚಾರವಾಗಿ ಸ್ಪೋರ್ಟಿ ವರ್ಷನ್‌ಗಳ ಬದಲಾಗಿ ಸಾಮಾನ್ಯ ಮಾದರಿಗಳನ್ನು ಆಯ್ಕೆ ಮಾಡಿಕೊಂಡು ಸುಮ್ಮನಾಗಿ ಬಿಡುತ್ತಾರೆ. ಆದ್ರೆ ಮಾಡಿಫೈ ತಂತ್ರಜ್ಞಾನ ಮಾತ್ರ ಕಡಿಮೆ ಬೆಲೆಗಳಲ್ಲೇ ಹೈ ಎಂಡ್ ಕಾರುಗಳ ವಿನ್ಯಾಸವನ್ನೇ ಪಡೆಯಲು ಸಹಕಾರಿಯಾಗಿದೆ ಎನ್ನಬಹುದು.

ಇದೇ ಕಾರಣಕ್ಕೆ ದೆಹಲಿ ಮೂಲದ ಆಟೋ ಮಾರ್ಕ್ ಎನ್ನುವ ಮಾಡಿಫೈ ಸಂಸ್ಥೆಯೊಂದು ಕ್ರೇಟಾ ಕಾರುಗಳಿಗೆ ಸ್ಪೋರ್ಟಿ ಗ್ರೀಲ್ ಮತ್ತು ಬ್ಲ್ಯಾಕ್ ಗ್ಲ್ಯಾಸಿ ಪೇಟಿಂಗ್ ಮೂಲಕ ಐಷಾರಾಮಿ ಲುಕ್ ನೀಡಿದ್ದು, ಕಡಿಮೆ ಬೆಲೆಗಳಲ್ಲಿ ಈ ವಿನೂತನ ವಿನ್ಯಾಸದ ಗ್ರೀಲ್ ಸ್ಲಾಟ್‌ಗಳನ್ನು ಅಳವಡಿಕೆ ಮಾಡಿರುವುದು ಕಾರಿಗೆ ಹೊಸ ಖದರ್ ನೀಡಿವೆ ಎನ್ನಬಹುದು.

ನಾವು ಸಾಮಾನ್ಯವಾಗಿ ಎಲ್ಲಾ ಕಾರು ಖರೀದಿದಾರರಿಗೂ ತುಸು ತಾಂತ್ರಿಕವಾಗಿ ಬಲಿಷ್ಠವಾಗಿರುವ ಎಸ್‌ಯುವಿಗಳನ್ನೇ ಖರೀದಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಕಡಿಮೆ ಬೆಲೆಗಳಲ್ಲಿ ಸಿಗಬಹುದಾದ ಮತ್ತೊಂದು ಎಸ್‌ಯುವಿ ಕ್ರೇಟಾ ಕಾರುಗಳನ್ನೇ ಬಳಕೆ ಮಾಡಿಕೊಂಡು ಆಕರ್ಷಕ ಮಾಡಿಫೈ ಮಾಡಲಾಗಿದೆ.

ಹಾಗೆಯೇ ಕಾರಿನ ಒಳಭಾಗವನ್ನು ಸಹ ರೆಡ್ ಲೆದರ್‌ನೊಂದಿಗೆ ಆಕರ್ಷಣೆಯಾಗಿ ಕಾಣುತ್ತಿದ್ದು, ಹೊರ ಭಾಗದ ಐಷಾರಾಮಿ ಲುಕ್‌ಗೆ ತಕ್ಕಂತೆ ಒಳಭಾಗದ ಡಿಸೈನ್‌ಗಳನ್ನು ಸಹ ಬದಲಾವಣೆ ಮಾಡಲಾಗಿದೆ.

ಒಂದು ವೇಳೆ ನಿಮ್ಮ ಬಳಿಯು ಕ್ರೇಟಾ ಕಾರುಗಳಿದ್ದು, ಅದಕ್ಕೆ ಸ್ಪೋರ್ಟಿ ಲುಕ್ ಜೋಡಿಸುವ ಯೋಜನೆ ಇದ್ದಲ್ಲಿ ಆಟೋ ಮಾರ್ಕ್ ಸಂಸ್ಥೆಯನ್ನು ಸಂಪರ್ಕಿಸಬಹುದು. ಮಾಡಿಫೈ ಮಾಡಲಾದ ಹೊಸ ಗ್ರೀಲ್‌ಗಳು ಕಾರಿನ ವಿನ್ಯಾಸಕ್ಕೆ ಮೆರಗು ತರಲಿದ್ದು, ಇದಕ್ಕಾಗಿ ಒಂದಿಷ್ಟು ಹಣ ಹಾಕಲೇಬೇಕಾಗುತ್ತೆ.
ಆಟೋ ಮಾರ್ಕ್ ಸಂಸ್ಥೆಯು ಸಿದ್ದಪಡಿಸಿರುವ ಕ್ರೇಟಾ ಮಾಡಿಫೈ ಕಾರುಗಳು ಗ್ರೀಲ್ ವಿನ್ಯಾಸವನ್ನು ಹೊರತು ಪಡಿಸಿ ಉಳಿದ ತಾಂತ್ರಿಕ ಅಂಶಗಳಲ್ಲಿ ಯಾವುದೇ ಮಾಡಿಲ್ಲ. ಹೀಗಾಗಿ ಸ್ಪೋರ್ಟಿ ಲುಕ್ ಹೊಂದಿರುವ ಕಾರು ನೋಡಲು ಐಷಾರಾಮಿ ಹೋಲಿಕೆ ಇದ್ದರೂ ಎಂಜಿನ್ ಮಾದರಿ ಮಾತ್ರ ಕ್ರೇಟಾ ಕಾರಿನದ್ದೆ ಆಗಿದೆ.

ಎಂಜಿನ್ ಸಾಮರ್ಥ್ಯ
1.4-ಲೀಟರ್ ಡೀಸೆಲ್, 1.6-ಲೀಟರ್ ಪೆಟ್ರೋಲ್ ಮತ್ತು 1.6-ಡೀಸೆಲ್ ಎಂಜಿನ್‌ಗಳನ್ನು ಹೊಂದಿದ್ದು, ಇದರಲ್ಲಿ 1.4-ಲೀಟರ್ ಪೆಟ್ರೋಲ್ ಎಂಜಿನ್‌ಗಳು 88.7-ಬಿಎಚ್‌ಪಿ, 1.6-ಲೀಟರ್ ಪೆಟ್ರೋಲ್ ಎಂಜಿನ್‌ಗಳು 121-ಬಿಎಚ್‌ಪಿ ಮತ್ತು 1.6-ಲೀಟರ್ 126-ಬಿಎಚ್‌ಪಿ ಉತ್ಪಾದನಾ ಗುಣ ಪಡೆದಿವೆ.
MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಇನ್ನು ಹೊಸ ಕಾರುಗಳಲ್ಲಿ ವಿನ್ಯಾಸ ಮಾಡಲಾಗಿರುವ ಕಾಸ್ ಕ್ಲ್ಯಾಡಿಂಗ್ ಫ್ರಂಟ್ ಗ್ರಿಲ್, ನ್ಯೂ ಫ್ರಂಟ್ ಬಂಪರ್, ಹೊಸ ವಿನ್ಯಾಸ ಫಾಗ್ ಲ್ಯಾಂಪ್, ಸಿಲ್ವರ್ ಸ್ಕೀಡ್ ಪ್ಲೇಟ್, ಡ್ಯುಯಲ್ ಟೋನ್ ಇಂಟಿರಿಯರ್ ಸೌಲಭ್ಯ ಪಡೆದಿದೆ.

ಹೊಸ ಕಾರುಗಳಲ್ಲಿನ ರಿಯಲ್ ಬಂಪರ್ ಕೂಡಾ ಆಕರ್ಷಣೆಯಾಗಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ 7-ಇಂಚಿನ್ ಇನ್ಪೋಟೈನ್‌ಮೆಂಟ್, ಬೆಸ್ ವೆರಿಯೆಂಟ್‌ಗಳಿಂದಲೇ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೈಡ್ ಸೀಟುಗಳು, ಆರ್ಮ್ ರೆಸ್ಟ್ ವಿನ್ಯಾಸವು ಗಮನ ಸೆಳೆಯುತ್ತೆ.


Click it and Unblock the Notifications








