ಮಾರುಕಟ್ಟೆಯಲ್ಲಿ ನಾಲ್ಕು ವರ್ಷ ಪೂರೈಸಿದ ಹ್ಯುಂಡೈ ಕ್ರೆಟಾ - 5 ಲಕ್ಷಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ
ದೇಶಿಯ ಮಾರುಕಟ್ಟೆಯಲ್ಲಿ ಹಲವಾರು ವಾಹನ ತಯಾರಕ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುತಿದ್ದು, ಅವುಗಳ ಮಾರಾಟದಲ್ಲಿ ಏರಿಳಿತವನ್ನು ಕಾಣಬಹುದಾಗಿದೆ. ಸಧ್ಯ ಮಾರುಕಟ್ಟೆಯಲ್ಲಿರುವ ಎಂಪಿವಿ, ಹ್ಯಾಚ್‍ಬ್ಯಾಕ್ ಮತ್ತು ಸೆಡಾನ್ ಕಾರುಗಳಿಗಿಂತಲೂ ಗ್ರಾಹಕರು ಎಸ್‍ಯುವಿ ಕಾರುಗಳ ಕಡೆಗೆ ತಮ್ಮ ಒಲವನ್ನು ತೋರುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಎಸ್‍ಯುವಿ ಕಾರುಗಳು ಮಾರಾಟವಾಗುತ್ತಿದೆ.

ಹೀಗಾಗಿ ದೇಶಿಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಕಾರುಗಳಿಗೆ ಅಧಿಕವಾಗುತ್ತಿರುವ ಬೇಡಿಕೆಯ ಅನುಸಾರ ಹ್ಯುಂಡೈ ಸಂಸ್ಥೆಯು ಮೊದಲನೆಯ ತಲೆಮಾರಿನ ತಮ್ಮ ಕ್ರೆಟಾ ಕಾರನ್ನು ಜುಲೈ 21, 2019ರಂದು ಬಿಡುಗಡೆ ಮಾಡಲಾಗಿದ್ದು, ಇದೀಗ ಎಸ್‍ಯುವಿ ಕಾರುಗಳ ಮಾರಾಟದಲ್ಲಿ ಮುನ್ನುಗ್ಗುತ್ತಿದೆ. ಮಾರಕಟ್ಟೆಯಲ್ಲಿ ನಾಲ್ಕು ವರ್ಷ ಪೂರೈಸಿದ ಹ್ಯುಂಡೈ ಕ್ರೆಟಾ ಎಸ್‍ಯುವಿ ಅಕರುಗಳು ಇಲ್ಲಿಯವರೆಗೂ ಸುಮಾರು 5 ಲಕ್ಷಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ ಎಂದು ವರದಿಗಳು ಹೇಳುತ್ತಿದೆ.

ಇನ್ನು ಹ್ಯುಂಡೈ ಕ್ರೆಟಾ ಕಾರಿನ ಬಗ್ಗೆ ಹೇಳುವುದಾದ್ರೆ ಕಳೆದ ವರ್ಷ ಹ್ಯುಂಡೈ ಇಂಡಿಯಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಆರಂಭಿಕ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 9.43 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ. 15.03 ಲಕ್ಷಕ್ಕೆ ನಿಗದಿಗೊಳಿಸಿದೆ.

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳು ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಇವುಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಆವೃತ್ತಿಯಲ್ಲಿ 6 ವೇರಿಯೆಂಟ್‌ಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ 7 ವೇರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ಈ ಹಿಂದಿನಂತೆಯೇ 1.4-ಲೀಟರ್ ಡೀಸೆಲ್, 1.6-ಲೀಟರ್ ಪೆಟ್ರೋಲ್ ಮತ್ತು 1.6-ಡೀಸೆಲ್ ಎಂಜಿನ್‌ಗಳನ್ನು ಹೊಂದಿದ್ದು, ಇದರಲ್ಲಿ 1.4-ಲೀಟರ್ ಪೆಟ್ರೋಲ್ ಎಂಜಿನ್‌ಗಳು 88.7-ಬಿಎಚ್‌ಪಿ, 1.6-ಲೀಟರ್ ಪೆಟ್ರೋಲ್ ಎಂಜಿನ್‌ಗಳು 121-ಬಿಎಚ್‌ಪಿ ಮತ್ತು 1.6-ಲೀಟರ್ 126-ಬಿಎಚ್‌ಪಿ ಉತ್ಪಾದನಾ ಗುಣ ಪಡೆದಿವೆ.

ಇದರಲ್ಲಿ 1.4-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದಿದ್ದು, ಇನ್ನುಳಿದ 1.6-ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಮಾದರಿಗಳಲ್ಲಿ 6-ಸ್ಪೀಡ್ ಆಟೋ ಮ್ಯಾಟಿಕ್ ಒದಗಿಸಲಾಗಿದೆ.

ಹೊಸ ಕಾರುಗಳ ಪರ್ಫಾಮೆನ್ಸ್ ಹೆಚ್ಚಿಸಲು ಕ್ಲಾಸ್ ಲೀಡಿಂಗ್ ಎನ್‌ವಿಹೆಚ್ ತಂತ್ರಜ್ಞಾನ ಬಳಕೆ ಮಾಡಿದ್ದು, ಇವು ಆರಾಮದಾಯಕ ಕಾರು ಚಾಲನೆಗೆ ಸಹಕಾರಿಯಾಗಿದೆ. ಆದ್ರೆ ಟಾಪ್ ಎಂಡ್ ಮಾದರಿಯಾದ ಎಸ್ಎಕ್ಸ್(ಒ) ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಬದಲಾಗಿ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವುದು ಗ್ರಾಹಕರ ಆಯ್ಕೆಗೆ ಕೊಂಚ ಹಿನ್ನಡೆಯಾಗಬಹುದು

ಒಂದು ವೇಳೆ ಟಾಪ್ ಎಂಡ್ ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಆವೃತ್ತಿಯನ್ನು ಆಯ್ಕೆ ಮಾಡುವುದಾದ್ರೆ ಅದಕ್ಕೂ ಒಂದು ಅವಕಾಶವಿದ್ದು, ಇದಕ್ಕಾಗಿ ಎಲೆಕ್ಟ್ರಾನಿಕ್ ಸನ್‌ರೂಫ್ ಮತ್ತು ವೈರ್‌ಲೇಸ್ ಚಾರ್ಜಿಂಗ್ ಸೌಲಭ್ಯಗಳು ಕಳೆದುಕೊಳ್ಳಬೇಕಾಗುತ್ತೆ. ಇಲ್ಲವೇ ಈ ಸೌಲಭ್ಯಗಳು ಬೇಕೆ ಬೇಕು ಎಂದಲ್ಲಿ ಮ್ಯಾನುವಲ್ ಆವೃತ್ತಿಯನ್ನು ಆಯ್ಕೆ ಮಾಡುವುದು ಅನಿವಾರ್ಯ

ಇನ್ನು ಕಾರಿನ ಡಿಸೈನ್ ಕುರಿತು ಹೇಳುವುದಾದರೇ, ಹೊಸ ಕಾರುಗಳಲ್ಲಿ ವಿನ್ಯಾಸ ಮಾಡಲಾಗಿರುವ ಕಾಸ್ ಕ್ಲ್ಯಾಡಿಂಗ್ ಫ್ರಂಟ್ ಗ್ರಿಲ್, ನ್ಯೂ ಫ್ರಂಟ್ ಬಂಪರ್, ಹೊಸ ವಿನ್ಯಾಸ ಫಾಗ್ ಲ್ಯಾಂಪ್, ಸಿಲ್ವರ್ ಸ್ಕೀಡ್ ಪ್ಲೇಟ್, ಡ್ಯುಯಲ್ ಟೋನ್ ಇಂಟಿರಿಯರ್ ಸೌಲಭ್ಯ ಪಡೆದಿದೆ.

ಹೊಸ ಕಾರುಗಳಲ್ಲಿನ ರಿಯಲ್ ಬಂಪರ್ ಕೂಡಾ ಆಕರ್ಷಣೆಯಾಗಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ 7-ಇಂಚಿನ್ ಇನ್ಪೋಟೈನ್‌ಮೆಂಟ್, ಬೆಸ್ ವೆರಿಯೆಂಟ್‌ಗಳಿಂದಲೇ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೈಡ್ ಸೀಟುಗಳು, ಆರ್ಮ್ ರೆಸ್ಟ್ ವಿನ್ಯಾಸವು ಗಮನ ಸೆಳೆಯುತ್ತೆ.

ಖರೀದಿಗೆ ಲಭ್ಯವಿರುವ ಬಣ್ಣಗಳು
ಒಟ್ಟು 7 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳನ್ನು ವೈಟ್, ಆರೇಂಜ್, ಬ್ಲ್ಯಾಕ್, ಸಿಲ್ವರ್ ಬ್ಲ್ಯೂ, ರೆಡ್, ವೈಟ್ ಆ್ಯಂಡ್ ಬ್ಲ್ಯಾಕ್(ಡ್ಯುಯಲ್ ಟೋನ್) ಮತ್ತು ಆರೇಂಜ್ ಆ್ಯಂಡ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿ ಮಾಡಬಹುದು.


Click it and Unblock the Notifications








