ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಕ್ರೆಟಾ ಸ್ಪೋರ್ಟ್

ಹ್ಯುಂಡೈ ಭಾರತದಲ್ಲಿ ಮಿಡ್ ಸರಣಿಯ ಹೊಸ ಕ್ರೆಟಾ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಿದ್ದು, ಬಿಡುಗಡೆಗೂ ಮುನ್ನ 2020 ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿವೆ. ಈ ವಾಹನವನ್ನು ಈಗಾಗಲೇ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಐ‍ಎಕ್ಸ್ 25 ಎಂಬ ಹೆಸರಿನಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದ್ದು, ದೊಡ್ಡ ಗಾತ್ರ ಹಾಗೂ ಹೆಚ್ಚು ಪ್ರೀಮಿಯಂ ಬಾಡಿಯನ್ನು ಹೊಂದಿದೆ.

ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಕ್ರೆಟಾ ಸ್ಪೋರ್ಟ್

ಹ್ಯುಂಡೈ ಕಂಪನಿಯು ಮಿಡ್ ಸರಣಿಯ ಎಸ್‍‍ಯುವಿಯನ್ನು ಬಿಡುಗಡೆಗೊಳಿಸುವ ಮುನ್ನ ದೇಶಿಯ ಮಾರುಕಟ್ಟೆಯಲ್ಲಿ ಕ್ರೆಟಾದ ಸ್ಪೋರ್ಟ್ ಎಡಿಷನ್ ಬಿಡುಗಡೆಗೊಳಿಸಲಿದ್ದು, ಕಾರು ಪ್ರಿಯರನ್ನು ಹೆಚ್ಚು ತಲುಪುವ ಉದ್ದೇಶ ಹೊಂದಿದೆ. ಈ ಎಸ್‍ಯುವಿಯು ಕೈಗೆಟುಕುವ ದರದಲ್ಲಿ ಲಭ್ಯವಿರಲಿದೆ. ಈ ಎಸ್‍‍ಯು‍‍ವಿಯನ್ನು ಹಬ್ಬಗಳ ಋತುವಿಗೂ ಮುನ್ನ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಕ್ರೆಟಾ ಸ್ಪೋರ್ಟ್

ಹ್ಯುಂಡೈ ಕ್ರೆಟಾ ಸ್ಪೋರ್ಟ್ ಎಸ್‍‍ಯು‍‍ವಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೇವಲ ವಿನ್ಯಾಸದಿಂದ ಮಾತ್ರ ಗಮನಸೆಳೆಯದೆ ಇನ್ನೂ ಹೆಚ್ಚಿನ ಕಾರಣಗಳಿಗೆ ಸದ್ದು ಮಾಡುತ್ತಿದೆ. ಆದರೆ, ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಎಸ್‍‍ಯು‍‍ವಿಯಲ್ಲಿ ವಿನ್ಯಾಸದಿಂದ ಗಮನ ಸೆಳೆಯಲಿದೆ. ಹೊಸ ಹ್ಯುಂಡೈ ಕ್ರೆಟಾ ಸ್ಪೋರ್ಟ್ ಆವೃತ್ತಿಯನ್ನು ಆಲ್-ಬ್ಲ್ಯಾಕ್ ಬಣ್ಣದ ಥೀಮ್‍‍ನಲ್ಲಿ ಮಾರಾಟ ಮಾಡಲಾಗುವುದು. ಇದರಲ್ಲಿ ಹೆಕ್ಸಾಗನಲ್ ಗ್ರಿಲ್, ಕಪ್ಪು ಔಟರ್ ರೇರ್ ವೀವ್ ಮಿರರ್, ಬ್ಲ್ಯಾಕ್ ರೂಫ್-ಮೌಂಟೆಡ್ ಸ್ಪಾಯ್ಲರ್, ಬ್ಲ್ಯಾಕ್ ರೂಫ್ ರೇಲ್‍‍ಗಳಿವೆ.

ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಕ್ರೆಟಾ ಸ್ಪೋರ್ಟ್

17 ಇಂಚಿನ ಕಪ್ಪು ಅಲಾಯ್ ವೀಲ್ಸ್ ಹಾಗೂ ಗ್ಲಾಸ್ ಬ್ಲ್ಯಾಕ್ ಬಂಪರ್‍‍ಗಳಿರಲಿದ್ದು, ಕ್ರೆಟಾ ಎಸ್‍‍ಯು‍‍ವಿಗೆ ಸ್ಪೋರ್ಟ್‍‍ನೆಸ್ ಲುಕ್ ನೀಡಲಿವೆ. ಕಪ್ಪು ಥೀಮ್ ಅನ್ನು ಇಂಟಿರಿಯರ್‍‍ನಲ್ಲೂ ಸಹ ಅಳವಡಿಸಲಾಗಿದ್ದು, ಕ್ಯಾಬಿನ್‍‍ನಲ್ಲಿ ಕಪ್ಪು ಸೀಟುಗಳು ಹಾಗೂ ಸ್ಪೋರ್ಟ್ ಡೋರ್ ಸಿಲ್‍‍ಗಳಿದ್ದು, ಇವೆಲ್ಲವೂ ಕಪ್ಪು ಥೀಮ್ ಹೊಂದಿರಲಿವೆ. ಹ್ಯುಂಡೈ ಕಂಪನಿಯು ಈ ಎಸ್‍‍ಯುವಿಯಲ್ಲಿ ಬ್ಲೂ ಮೀಡಿಯಾ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅಳವಡಿಸಿದೆ.

ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಕ್ರೆಟಾ ಸ್ಪೋರ್ಟ್

ಈ ಸಿಸ್ಟಂ ಡಿಜಿಟಲ್ ಟಿವಿ, ಆಂಡ್ರಾಯಿಡ್ ಆಟೋ ಹಾಗೂ ಆಪಲ್ ಕಾರ್‍‍ಪ್ಲೇಗಳು ಕಾರ್ಯನಿರ್ವಹಿಸಲು ನೆರವಾಗಲಿದೆ. ಉಳಿದಂತೆ ವೈರ್‍‍ಲೆಸ್ ಚಾರ್ಜರ್ ಹಾಗೂ ಸನ್‍‍‍ರೂಫ್‍‍ಗಳಿರಲಿವೆ. ಪವರ್‍‍ಟ್ರೇನ್ ಬಗ್ಗೆ ಹೇಳುವುದಾದರೆ, ಕ್ರೆಟಾ ಸ್ಪೋರ್ಟ್ಸ್ ಅಂತರ್‍‍ರಾಷ್ಟ್ರೀಯ ಆವೃತ್ತಿಯಲ್ಲಿ 2.0 ಲೀಟರಿನ ಡಿವಿವಿಟಿ 16ವಿ ಪೆಟ್ರೋಲ್ ಎಂಜಿನ್ ಇರಲಿದ್ದು, 156 ಬಿ‍‍ಹೆಚ್‍‍ಪಿ ಪವರ್ ಹಾಗೂ 187.31 ಎನ್‍‍ಎಂ ಟಾರ್ಕ್ ಉತ್ಪಾದಿಸಲಿದೆ.

ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಕ್ರೆಟಾ ಸ್ಪೋರ್ಟ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಎಥೆನಾಲ್ ಬಳಸಿದಾಗ ಇದೇ ಎಂಜಿನ್ 166 ಬಿ‍ಹೆಚ್‍‍ಪಿ ಹಾಗೂ 210.40 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಆದರೆ, ಈ ಎಂಜಿನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದಿಲ್ಲ. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವ ಎಸ್‍‍ಯು‍‍ವಿಯಲ್ಲಿ 1.6 ಲೀಟರಿನ ಡೀಸೆಲ್ ಎಂಜಿನ್ ಇರಲಿದ್ದು, ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುವುದು.

ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ ಕ್ರೆಟಾ ಸ್ಪೋರ್ಟ್

ಕ್ರೆಟಾ ಸ್ಪೋರ್ಟ್ ಉತ್ತಮ ಚಾಲನಾ ಅನುಭವಕ್ಕಾಗಿ ದೃಢವಾದ ಸಸ್ಪೆಂಷನ್ ಸೆಟಪ್ ಹೊಂದಿರಲಿದ್ದು, ಎಸ್‍‍ಯು‍‍ವಿಯ ಸುತ್ತಲಿರುವ ಬಾಡಿ ರೋಲ್‍‍ಗಳನ್ನು ಕಡಿಮೆಗೊಳಿಸಲಾಗಿದೆ. ಹ್ಯುಂಡೈ ಕ್ರೆಟಾ ಸ್ಪೋರ್ಟ್ಸ್ ಆವೃತ್ತಿಯ ಬೆಲೆ ಬ್ರೆಜಿಲ್‌ನಲ್ಲಿ ಬಿಆರ್‌ಎಲ್ 98,990ಗಳಾಗಿದ್ದು, ಭಾರತದ ಮೌಲ್ಯದಲ್ಲಿ ರೂ.17.40 ಲಕ್ಷಗಳಾಗಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಯಾವುದೇ 2.0 ಲೀಟರ್ ಎಂಜಿನ್ ಲಭ್ಯವಿಲ್ಲದ ಕಾರಣ, ಬೆಲೆ ಟಾಪ್ ಮಾದರಿಗಿಂತ ಸ್ವಲ್ಪ ಹೆಚ್ಚಿರಲಿದೆ.

Article Published On: Monday, July 15, 2019, 10:45 [IST]
English summary
Hyundai Creta Sport Edition Launch Expected In September - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+