ಆಕರ್ಷಕ ವಿನ್ಯಾಸವನ್ನು ಹೊತ್ತು ಬರಲಿದೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಹ್ಯುಂಡೈ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸುವುದಾಗಿ ಮಾಹಿಯನ್ನು ಹೊರಹಾಕಿದ್ದು, ಇದೇ ವರ್ಷದ ಜುಲೈ 9ರಂದು ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ. ಇವುಗಳ ನಡುವೆ ಇದೀಗ ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ಕೂಡಾ ನಡೆಸುತ್ತಿದ್ದು, ಬಿಡುಗಡೆಗೊಳ್ಳಲಿರುವ ಎಲೆಕ್ಟ್ರಿಕ್ ಕಾರುಗಳಲ್ಲಿ ವಿಶೇಷವಾದ ವಿನ್ಯಾಸವನ್ನು ಈ ಕಾರು ಪಡೆದಿದೆಯಂತೆ.

ಆಕರ್ಷಕ ವಿನ್ಯಾಸವನ್ನು ಹೊತ್ತು ಬರಲಿದೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಸೋರಿಕೆಯಾದ ಚಿತ್ರಗಳ ಅನುಸಾರ ಹೊಸ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ವಿಭಿನ್ನವಾದ ಅಲಾಯ್ ವ್ಹೀಲ್ಸ್ ಅನ್ನು ಹೊಂದಿರಲಿದ್ದು, ಅಲ್ಲಲ್ಲಿ ನೀಲಿ ಬಣ್ಣವನ್ನು ನೀಡಲಾಗಿದೆ. ಹಾಗೆಯೆ ಹಿಂಭಾಗದಿಂದಲೂ ಇದು ಕೋನಾ ಕಾರೆಂದೆ ಕಂಡು ಹಿಡಿಯುವ ಹಾಗೆ ಟೈಲ್‍ಲ್ಯಾಂಪ್ಸ್ ಅನ್ನು ಸಹ ಒದಗಿಸಲಾಗಿದೆ. ಕೇವಲ ವಿನ್ಯಾಸದಲ್ಲಿ ಮಾತ್ರವಲ್ಲದೆಯೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಇನ್ನಿತರೆ ವಿಶೇಷಗಳಲ್ಲಿಯು ಗ್ರಾಹಕರಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಆಕರ್ಷಕ ವಿನ್ಯಾಸವನ್ನು ಹೊತ್ತು ಬರಲಿದೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಕೊನಾ ಎಲೆಕ್ಟ್ರಿಕ್ ಮಾದರಿಯನ್ನು ಈಗಾಗಲೇ ದೇಶಾದ್ಯಂತ ರೋಡ್ ಟೆಸ್ಟ್ ನಡೆಸಿರುವ ಹ್ಯುಂಡೈ ಸಂಸ್ಥೆಯು ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಪ್ರೇರಿತ ಕೊನಾ ಕಾರನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಸಾಂಪ್ರದಾಯಿಕ ಕಾರು ಮಾದರಿಗಳಂತೆ ಇದು ಕೂಡಾ ಮಾರಾಟದಲ್ಲಿ ಮುಂಚೂಣಿ ಸಾಧಿಸುವ ನೀರಿಕ್ಷೆಯಲ್ಲಿದೆ.

ಆಕರ್ಷಕ ವಿನ್ಯಾಸವನ್ನು ಹೊತ್ತು ಬರಲಿದೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಎರಡು ವಿಭಿನ್ನ ಪವರ್ ಟ್ರೈನ್ ಗಳಿಂದ ಸಿದ್ದವಾಗಿರುವ ಕೋನಾ ಕಾರು ಮಾದರಿಗಳು ಪ್ರತಿ ಚಾರ್ಜ್‌ಗೆ 300 ಕಿ.ಮೀ ನಿಂದ ಹೈ ಎಂಡ್ ಮಾದರಿಯು 400 ಕಿ.ಮೀ.ವರೆಗೆ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದು, ಎಲೆಕ್ಟ್ರಿಕ್ ಕಾರು ಆವೃತ್ತಿಗಳಲ್ಲೇ ಅತಿ ಹೆಚ್ಚು ಬೇಡಿಕೆ ಪಡೆಯುವ ಎಲ್ಲಾ ಗುಣಲಕ್ಷಣಗಳು ಈ ಹೊಸ ಕಾರಿನಲ್ಲಿವೆ.

ಆಕರ್ಷಕ ವಿನ್ಯಾಸವನ್ನು ಹೊತ್ತು ಬರಲಿದೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಮಾಹಿತಿಗಳ ಪ್ರಕಾರ, ಹ್ಯುಂಡೈ ಸಂಸ್ಥೆಯು ಕಾರಿನ ಎಲೆಕ್ಟ್ರಿಕ್ ಪವರ್ ಟ್ರೈನ್ ನಿರ್ಮಿಸಲು ಎಲ್‌ಜಿ ಕೆಮಿಕಲ್ಸ್ ಜೊತೆ ಕೈಜೋಡಿಸಿದ್ದು, ಇದೇ ಬ್ಯಾಟರಿಯನ್ನು ಚೆವಿ ಬೋಲ್ಟ್ ಹ್ಯಾಚ್ ಬ್ಯಾಕ್ ಕಾರಿನಲ್ಲೂ ಕೂಡಾ ಇರಿಸಲಾಗಿರಲಿದೆ ಎನ್ನಲಾಗಿದೆ.

ಆಕರ್ಷಕ ವಿನ್ಯಾಸವನ್ನು ಹೊತ್ತು ಬರಲಿದೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಬ್ಯಾಟರಿ ವೈಶಿಷ್ಟ್ಯತೆ

ಕೋನಾ ಕಾರುಗಳಲ್ಲಿ ಎರಡು ಮಾದರಿಯ ಬ್ಯಾಟರಿ ಚಾಲಿತ ವಿಭಾಗಗಳಿದ್ದು, ಗ್ರಾಹಕರು ಬೇಡಿಕೆಗೆ ಅನುಗುಣವಾಗಿ 39. 2 ಕೆವಿ ಮತ್ತು 64 ಕೆವಿ ಬ್ಯಾಟರಿಯನ್ನು ಆಯ್ಕೆ ಮಾಡಬಹುದು. 39.2 ಕೆವಿ ಪ್ರೇರಿತ ಕೋನಾ ಕಾರುಗಳಿಗಿಂತಲೂ 64 ಕೆ.ವಿ ಪ್ರೇರಿತ ಕೋನಾ ಕಾರುಗಳು ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿವೆ.

ಆಕರ್ಷಕ ವಿನ್ಯಾಸವನ್ನು ಹೊತ್ತು ಬರಲಿದೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಇನ್ನು ಹ್ಯುಂಡೈ ಸಂಸ್ಥೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕಾಗಿ ಹೊಸ ಘಟಕಗಳಿಗೆ ಚಾಲನೆ ನೀಡಿದ್ದು, ಭಾರತದಲ್ಲಿ ಅಭಿವೃದ್ಧಿಗೊಳಿಸಲು ನಿರ್ಧರಿಸುವ ಹೊಸ ಎಲೆಕ್ಟ್ರಿಕ್ ಕಾರು ನಿರ್ಮಾಣ ಘಟಕದ ಸ್ಥಾಪನೆಗಾಗಿ ಹಂತ ಹಂತವಾಗಿ ಬರೋಬ್ಬರಿ ರೂ. 7 ಸಾವಿರ ಕೋಟಿ ಹೂಡಿಕೆ ಮಾಡುತ್ತಿದೆ.

ಆಕರ್ಷಕ ವಿನ್ಯಾಸವನ್ನು ಹೊತ್ತು ಬರಲಿದೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಸದ್ಯ ತಮಿಳುನಾಡಿನ ಚೆನ್ನೈ ಬಳಿ ಒಂದೇ ಒಂದು ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಹ್ಯುಂಡೈ ಸಂಸ್ಥೆಯು ವಿವಿಧ ಸಂಸ್ಥೆಗಳ ಜೊತೆಗೂಡಿ ಬೀಡಿಭಾಗಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಕಾರು ಮಾರಾಟ ಮಾಡುತ್ತಿದೆ.

ಆಕರ್ಷಕ ವಿನ್ಯಾಸವನ್ನು ಹೊತ್ತು ಬರಲಿದೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಇದೀಗ ಇದೇ ಘಟಕವನ್ನು ವಿಸ್ತರಿಸಲು ನಿರ್ಧರಿಸಿರುವ ಹ್ಯುಂಡೈ, ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕೂ ಸಹಕಾರಿಯಾಗುವಂತೆ ಹೊಸ ಪ್ಲ್ಯಾಟ್‌ಫಾರ್ಮ್ ಸಿದ್ದಗೊಳಿಸುತ್ತಿದ್ದು, ಕೊನಾ ಸೇರಿದಂತೆ ಇನ್ನು ಮೂರು ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಇಲ್ಲಿಯೇ ನಿರ್ಮಾಣ ಮಾಡಿ ವಿದೇಶಿ ಮಾರುಕಟ್ಟೆಗಳಿಗೂ ಇಲ್ಲಿಂದಲೇ ರಫ್ತು ಮಾಡುವ ಯೋಜನೆಯಲ್ಲಿದೆ.

ಆಕರ್ಷಕ ವಿನ್ಯಾಸವನ್ನು ಹೊತ್ತು ಬರಲಿದೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು

ಕೊನಾ ಕಾರುಗಳ ಬೆಲೆ(ಅಂದಾಜು)

ಅತ್ಯುತ್ತಮ ಬ್ಯಾಟರಿ ಬಳಕೆಯ ಜೊತೆ ಅಧಿಕ ಮೈಲೇಜ್ ರೇಂಜ್ ಹೊಂದಿರುವ ಕೊನಾ ಕಾರುಗಳ ಬೆಲೆಯು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.18 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.22 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Image Courtesy: Guru Lay/Twitter

More from DriveSpark

Article Published On: Friday, June 21, 2019, 10:32 [IST]
English summary
Hyundai Kona Electric Car Spotted Ahead Of Launch. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+