ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ

ಹ್ಯುಂಡೈ ಮೋಟಾರ್ಸ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಮೊದಲನೆಯ ಎಲೆಕ್ಟ್ರಿಕ್ ಕಾರು ಕೋನಾ ಎಲೆಕ್ಟ್ರಿಕ್ ಎಸ್‍ಯುವಿ ಕಾರನ್ನು ಬಿಡುಗಡೆ ಮಾಡಲಾಗಿದ್ದು, ಎಕ್ಸ್ ಶೂರುಂ ಪ್ರಕಾರ ರೂ. 25.30 ಲಕ್ಷದ ಬೆಲೆಯನ್ನು ನಿಗದಿ ಮಾಡಲಾಗಿದೆ. ಇದರ ಜೊತೆಗೆ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಖರೀದಿಯನ್ನು ಅಧಿಕಗೊಳಿಸಲು ಈ ಕಾರಿನ ಮೇಲೆ ಸುಮಾರು ರೂ. 1.40 ಲಕ್ಷದ ಸಬ್ಸಿಡಿಯನ್ನು ಸಹ ನೀಡಲಾಗುತ್ತಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ

ಹ್ಯುಂಡೈ ಕೋನಾ ದೇಶದ ಮೊದಲ ಎಸ್‍ಯುವಿ ಕಾರು ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದು, ಬೆಲೆ ಜಾಸ್ತಿಯಾದರೂ ಸಹ ಇದರಲ್ಲಿರುವ ವೈಶಿಷ್ಟ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರು ಇದನ್ನು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ಹ್ಯುಂಡೈ ಕೋನಾ ಇವಿ ಬಿಡುಗಡೆಗೊಂಡ ಕೇವಲ 10 ದಿನದಲ್ಲಿ ಸುಮಾರು 120ಕ್ಕು ಹೆಚ್ಚಿನ ಬುಕ್ಕಿಂಗ್ ಅನ್ನು ಪಡೆದಿದ್ದು, ಅಂದಾಜಿಗೆ ದಿನಕ್ಕೆ 12 ಕಾರುಗಳು ಬುಕ್ಕಿಂಗ್ ಆಗುತ್ತಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ

ಕೋನಾ ಬ್ಯಾಟರಿ ಸಾಮರ್ಥ್ಯ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ಮಾದರಿಯ ಬ್ಯಾಟರಿ ಆಯ್ಕೆಯನ್ನು ಹೊಂದಿರುವ ಕೋನಾ ಎಲೆಕ್ಟ್ರಿಕ್ ಕಾರು 64kWh ಮತ್ತು 39.2kWh ಬ್ಯಾಟರಿ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದರಲ್ಲಿ ಸದ್ಯಕ್ಕೆ 39.2kWh ಬ್ಯಾಟರಿ ಸಾಮಾರ್ಥ್ಯ ಮಾದರಿಯನ್ನು ಮಾತ್ರವೇ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, 52 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್‌ ಆಗಬಲ್ಲ ಫಾಸ್ಟ್ ಚಾರ್ಜರ್ ಸೌಲಭ್ಯ ಈ ಕಾರಿನಲ್ಲಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ

ಮೈಲೇಜ್(ಪ್ರತಿ ಚಾರ್ಜ್‌ಗೆ)

ಕೋನಾ ಎಲೆಕ್ಟ್ರಿಕ್ ಕಾರು 39.2kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲ ವೈಶಿಷ್ಟ್ಯತೆಯನ್ನು ಹೊಂದಿದ್ದು, ಎಲೆಕ್ಟ್ರಿಕ್ ವಾಹನಗಳ ಮೈಲೇಜ್ ಪ್ರಮಾಣಕ್ಕೆ ಪ್ರಮಾಣ ಪತ್ರ ಒದಗಿಸುವ ಎಆರ್‌ಎಐ ಸಂಸ್ಥೆಯೇ ಕೋನಾ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಪ್ರಮಾಣವನ್ನು ಪ್ರಮಾಣಿಕರಿಸಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ

ಇನ್ನು ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಸಾಮಾರ್ಥ್ಯ ಕಾರುಗಳಂತೆಯೇ ಪರ್ಫಾಮೆನ್ಸ್‌ನಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್‌ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಕೋನಾ ಕಾರು 155 ಕಿ.ಮಿ ಟಾಪ್ ಸ್ಪೀಡ್ ಸೌಲಭ್ಯವನ್ನು ಹೊಂದಿದ್ದು, ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜ್‌ ಆಗಲು ಕನಿಷ್ಠ 8 ಗಂಟೆ ತೆಗೆದುಕೊಳ್ಳಲಿದೆ. ಹೀಗಾಗಿ ಕೋನಾ ಕಾರಿನಲ್ಲಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಆಕರ್ಷಕವಾಗಿದ್ದು, ಶೇ.80 ರಷ್ಟು ಚಾರ್ಜಿಂಗ್ ಮಾಡಲು ಕೇವಲ 52 ನಿಮಿಷ ತೆಗೆದುಕೊಳ್ಳುತ್ತದೆ.

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಕಾರಿನ ಉದ್ದಳತೆ

ಕ್ರೆಟಾ ಕಾರಿಗಿಂತಲೂ ತುಸು ಕಡಿಮೆ ಉದ್ದಳತೆ ಹೊಂದಿರುವ ಕೋನಾ ಎಲೆಕ್ಟ್ರಿಕ್ ಕಾರು ಹಲವು ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದಿದ್ದು, 4,180-ಎಂಎಂ ಉದ್ದ, 1,800-ಎಂಎಂ ಅಗಲ, 1,570-ಎಂಎಂ ಎತ್ತರ ಮತ್ತು 2,600-ಎಂಎಂ ವೀಲ್ಹ್‌ಬೇಸ್‌ನೊಂದಿಗೆ 332-ಲೀಟರ್ ಸಾಮರ್ಥ್ಯದ ಲಗೇಜ್ ಸ್ಪೆಸ್ ಪಡೆದುಕೊಂಡಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ

ಕಾರಿನ ವೈಶಿಷ್ಟ್ಯತೆಗಳು

ಕೋನಾ ಕಾರು ಬೆಲೆ ದುಬಾರಿಯಾಗಿದ್ದರೂ ಸಹ ಉತ್ತಮ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಖರೀದಿಗೆ ಉತ್ತಮ ಎನ್ನಿಸಲಿದ್ದು, ಸ್ಪೋರ್ಟಿ ವಿನ್ಯಾಸದ ಜೊತೆಗೆ ಕಾಸ್‌ಕ್ಲಾಡಿಂಗ್ ಫ್ರಂಟ್ ಗ್ರಿಲ್, ಬಾಡಿ ಕಲರ್ ಬಂಪರ್, ಸ್ಲಿಕ್ ಎಲ್ಇಡಿ ಟೈಲ್ ಲೈಟ್ಸ್, ಶಾರ್ಪ್ ಶೋಲ್ಡ್‌ರ್ ಲೈನ್ಸ್, ರಿಯರ್ ಸ್ಪಾಯ್ಲರ್ ನೀಡಿರುವುದು ಹೊಸ ಕಾರಿಗೆ ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ

ಹೊರವಿನ್ಯಾಸದಲ್ಲಿ ಮಾತ್ರವಲ್ಲದೇ ಕಾರಿನ ಒಳಭಾಗದ ವಿನ್ಯಾಸವು ಸಹ ಎಲೆಕ್ಟ್ರಿಕ್ ಕಾರು ಖರೀದಿದಾರನ್ನು ಸೆಳೆಯುಲಿದ್ದು, ಬ್ಲ್ಯಾಕ್ ಥೀಮ್ ಡ್ಯಾಶ್‌ಬೋರ್ಡ್, ಹೋಂದಾಣಿಕೆ ಮಾಡಬಹುದಾದ 8-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಲೆದರ್ ಹೊದಿಕೆಯ ಸ್ಟಿರಿಂಗ್ ವೀಲ್ಹ್ ಮೌಂಟ್, 10 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಲ್ಲ ಚಾಲಕನ ಸೀಟು ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯ ಈ ಕಾರಿನಲ್ಲಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ

ಸುರಕ್ಷತೆಗೂ ಕೋನಾ ಕಾರಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆರು ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ತುರ್ತು ಕರೆ ಸೌಲಭ್ಯ, ಎಬಿಎಸ್ ಜೊತೆ ಇಬಿಡಿ, ರೀ ಜನರೇಟಿವ್ ಬ್ರೇಕಿಂಗ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಮತ್ತು ವಿವಿಧ ಮಾದರಿಯ ಚಾಲನಾ ಅನುಭವಕ್ಕಾಗಿ ಇಕೋ, ಇಕೋ ಪ್ಲಸ್, ಕಂಫರ್ಟ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ಬದಲಿಸಿಕೊಳ್ಳಬಹುದಾಗಿದೆ.

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ

ಮಾರಾಟದ ನಂತರದ ಬೆಂಬಲ

ಹ್ಯುಂಡೈ ಕೋನಾ ದೇಶದಲ್ಲಿ ಬಿಡುಗಡೆಗೊಂಡ ಮೊದಲ ಎಸ್‍ಯುವಿ ಕಾರು ಆದುದರಿಂದ, ಈ ಕಾರಿನ ಹೆಚ್ಚಿನ ಮಾರಾಟಕ್ಕಾಗಿ ಸಂಸ್ಥೆಯು ಮಾರಾಟದ ನಂತರವು ಗ್ರಾಹಕರಿಗೆ ಬೇಕಾದ ಕೆಲವು ಸೌಲತ್ತುಗಳನ್ನು ನೀಡಬೇಕಾಗುತ್ತದೆ, ಹೀಗಾಗಿ ಹ್ಯುಂಡೈ ಸಂಸ್ಥೆಯು ಈ ಕಾರು ಖರೀದಿಯ ಜೊತೆಯಾಗಿ 3 ವರ್ಷ/ಅನಿಯಮಿತ ಕಿಲೋಮೀಟರ್ ವೆಹಿಕಲ್ ವಾರೆಂಟಿ ಮತ್ತು 3 ವರ್ಷ/1,60,000 ಕಿಲೋಮೀಟರ್ ಬ್ಯಾಟರಿ ವಾರೆಂಟಿಯನ್ನು ನೀಡಲಾಗುತ್ತಿದೆ.

More from DriveSpark

Article Published On: Saturday, July 20, 2019, 9:32 [IST]
English summary
Hyundai Kona Electric SUV Bags 120 Bookings In Just 10 Days. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+