ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಹ್ಯುಂಡೈ ಮೋಟಾರ್ ಇಂಡಿಯಾ ಇತ್ತೀಚಿಗೆ ದೇಶಾದ್ಯಂತ ಮೆಗಾ ಕ್ಯಾಂಪ್‍‍ವೊಂದನ್ನು ಆಯೋಜಿಸಿತ್ತು. ಈ ಕ್ಯಾಂಪ್ ಹ್ಯುಂಡೈ ಕಂಪನಿಯ ಗ್ರಾಹಕರಿಗೆ ಹ್ಯುಂಡೈ ಕಂಪನಿಯ ಎಲ್ಲಾ ಸೇವೆ ಸಂಬಂಧಿತ ಅಗತ್ಯಗಳ ಬಗ್ಗೆ, ಹೊಸ ವಾಹನಗಳ ಖರೀದಿ ಬಗ್ಗೆ ಹಾಗೂ ಅವರು ಹೊಂದಿರುವ ಹ್ಯುಂಡೈ ಕಾರಿನ ಮೌಲ್ಯಮಾಪನಕ್ಕಾಗಿ ಒಂದು ವೇದಿಕೆಯನ್ನು ಒದಗಿಸಿತು.

ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಇದಲ್ಲದೆ, ಗ್ರಾಹಕರು ಈ ಶಿಬಿರದಲ್ಲಿ ತಮ್ಮ ನೆಚ್ಚಿನ ಹ್ಯುಂಡೈ ಕಾರಿನ ಟೆಸ್ಟ್ ಡ್ರೈವ್ ಅನ್ನು ಕಾಯ್ದಿರಿಸಲು ಅವಕಾಶ ನೀಡಲಾಗಿತ್ತು. ಈ ಶಿಬಿರದಲ್ಲಿ ಹ್ಯುಂಡೈ ಸ್ಯಾಂಟ್ರೊ, ಎಲೈಟ್ ಐ 20 ಹಾಗೂ ಎಕ್ಸ್ ಸೆಂಟ್ ನಂತಹ ಕಾರುಗಳನ್ನು ಸಹ ಪ್ರದರ್ಶಿಸಲಾಯಿತು.

ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್‌ನ ಕಸ್ಟಮರ್ ಕೇರ್ ಸರ್ವಿಸ್‍‍ನ ಉಪಾಧ್ಯಕ್ಷರಾದ ಪುನ್ನೈವನಂ ಎಸ್ ರವರು ಮಾತನಾಡಿ ಪ್ರತಿವರ್ಷವೂ ಹ್ಯುಂಡೈ ಕಂಪನಿಯು ಆಯೋಜಿಸುತ್ತಿರುವ ಮೆಗಾ ಎಕ್ಸ್‌ಪೀರಿಯೆನ್ಸ್ ಕ್ಯಾಂಪ್‌ಗೆ ಇಂತಹ ಅಭೂತಪೂರ್ವ ಪ್ರತಿಕ್ರಿಯೆಯನ್ನು ಸಿಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಪ್ರತಿವರ್ಷವೂ ಗ್ರಾಹಕರ ಪ್ರತಿಕ್ರಿಯೆ ನಮ್ಮ ನಿರೀಕ್ಷೆಗಳನ್ನು ಮೀರುತ್ತಿದ್ದು, ಸಹಭಾಗಿತ್ವದಲ್ಲಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.

ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಹ್ಯುಂಡೈ ಕಂಪನಿಯು ಈ ಮೆಗಾ ಎಕ್ಸ್‌ಪೀರಿಯೆನ್ಸ್ ಕ್ಯಾಂಪ್ ಅನ್ನು 303 ನಗರಗಳಲ್ಲಿನ 495 ಸ್ಥಳಗಳಲ್ಲಿ ಆಯೋಜಿಸಿತ್ತು. ಶಿಬಿರವನ್ನು ಸಾಮಾನ್ಯವಾಗಿ ಮಾಲ್‌ಗಳು, ವಸತಿ ಪ್ರದೇಶಗಳು, ಪಾರ್ಕಿಂಗ್ ಸ್ಥಳಗಳು ಹಾಗೂ ಪೆಟ್ರೋಲ್ ಪಂಪ್‌ಗಳಲ್ಲಿ ಆಯೋಜಿಸಲಾಗುತ್ತದೆ. ಇದರಿಂದ ಗ್ರಾಹಕರು ತಮ್ಮ ವಾಹನಗಳಿಗೆ ಅಗತ್ಯವಾಗಿರುವ ನಿಯಮಿತ ಸರ್ವಿಸ್‍‍ನ ಮಹತ್ವದ ಬಗ್ಗೆ ತಿಳಿಯುತ್ತಾರೆ.

ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಭಾರತದ ಮೊದಲ ಸ್ಮಾರ್ಟ್ ಮೊಬಿಲಿಟಿ ಸೊಲ್ಯೂಷನ್ಸ್ ಪ್ರೊವೈಡರ್ ಆಗಿರುವುದರಿಂದ, ನಾವು ಗ್ರಾಹಕ ಸೇವೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುತ್ತೇವೆ. ಗ್ರಾಹಕರ ಸರ್ವಿಸ್‍‍ಗೆ ಸಂಬಂಧಪಟ್ಟ ಎಲ್ಲ ಅಗತ್ಯಗಳನ್ನು ಪೂರೈಸಲು ಉದ್ಯಮದ ಅತ್ಯುತ್ತಮ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಈ ಕ್ಯಾಂಪ್ ತೋರಿಸುತ್ತದೆ ಎಂದು ಪುನ್ನೈವನಂರವರು ಹೇಳಿದರು.

ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಶೀಘ್ರದಲ್ಲೇ, ಹ್ಯುಂಡೈ ಕಂಪನಿಯು ಹಳೆಯ ಕಾರುಗಳನ್ನು ಹೊಂದಿರುವ ಸ್ಯಾಂಟ್ರೊ ಗ್ರಾಹಕರಿಗೆ ತಮ್ಮ ಕಂಪನಿಯೊಂದಿಗೆ ದೀರ್ಘಾವಧಿಯ ಒಡನಾಟವನ್ನು ಹೊಂದಿರುವ ಕಾರಣಕ್ಕಾಗಿ ಕ್ಯಾಂಪ್‍‍ವೊಂದನ್ನು ಆಯೋಜಿಸಲಿದೆ.

ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಈ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಹೊಸದಾಗಿ ಬಿಡುಗಡೆಯಾದ ಹ್ಯುಂಡೈ ಕಾರುಗಳ ಅಪ್‍‍ಡೇಟ್‍‍ಗಳ ಬಗ್ಗೆ ಮಾಹಿತಿ ನೀಡಲು ಇದರಿಂದ ಸಾಧ್ಯವಾಗಲಿದೆ. ಹಳೆಯ ಸ್ಯಾಂಟ್ರೊ ಕಾರುಗಳನ್ನು ಆಕರ್ಷಕ ಡಿಸ್ಕೌಂಟ್‍‍ಗಳೊಂದಿಗೆ ಮಾರಾಟ ಮಾಡಬಹುದು ಹಾಗೂ ಹೊಸ ಕಾರುಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದು. ಗ್ರಾಹಕರಿಗೆ ರೂ.20,000ಗಳವರೆಗೆ ವಿನಿಮಯ ಸೌಲಭ್ಯಗಳನ್ನು ನೀಡಲಾಗುವುದು.

ಮೆಗಾ ಸರ್ವಿಸ್ ಕ್ಯಾಂಪ್ ಆಯೋಜಿಸಿದ ಹ್ಯುಂಡೈ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಈ ಕ್ಯಾಂಪ್ ಮೂಲಕ, ಹ್ಯುಂಡೈ ಇಂಡಿಯಾ ತಮ್ಮ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ತಮ್ಮ ಕಾರಿಗಳಿಗೆ ಸರ್ವಿಸ್ ಮಾಡಿಸುವುದು ಎಷ್ಟು ಮುಖ್ಯ ಹಾಗೂ ಕಾರುಗಳಿಗೆ ಸರ್ವಿಸ್ ಅನ್ನು ಎಷ್ಟು ದಿನಗಳಿಗೆ ಮಾಡಿಸಬೇಕು ಎಂಬುದರ ಬಗ್ಗೆ ತಿಳಿಸುತ್ತದೆ. ಜೊತೆಗೆ, ಟೆಸ್ಟ್ ಡ್ರೈವ್ ಸೌಲಭ್ಯದಿಂದಾಗಿ, ಹೆಚ್ಚು ಹೆಚ್ಚು ಗ್ರಾಹಕರು ಆಕರ್ಷಿತರಾಗುತ್ತಾರೆ.

Article Published On: Tuesday, July 23, 2019, 16:02 [IST]
English summary
Hyundai Organizes Mega Experience Service Camp In India — Existing Customers Get Educated - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+