ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಹ್ಯುಂಡೈ
ದೇಶಾದ್ಯಂತ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಆರ್ಥಿಕ ಹಿಂಜರಿತದಿಂದ ಹೊಸ ವಾಹನಗಳ ಮಾರಾಟದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿವೆ. ಈ ಹಿನ್ನೆಲೆಯಲ್ಲಿ ಪ್ರಮುಖ ಕಾರು ಮಾರಾಟ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ಶುರುವಾಗಿದ್ದು, ಹ್ಯುಂಡೈ ಸಂಸ್ಥೆಯು ತನ್ನ ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡುತ್ತಿದೆ.

ಸತತ ತೈಲ ಬೆಲೆಗಳ ಏರಿಕೆ, ಹೊಸ ನಿಯಮ ಜಾರಿ, ಜಿಎಸ್‌ಟಿ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳಿಂದ ಹೊಸ ವಾಹನ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದ ಆಟೋ ಉತ್ಪಾದನಾ ಸಂಸ್ಥೆಗಳು ಇದೀಗ ಮಾರಾಟ ಹೆಚ್ಚಳ ಸಿದ್ದತೆಯಲ್ಲಿದ್ದು, ಆರ್ಥಿಕವಾಗಿ ಹೊರೆಯಾಗಿರುವ ಸ್ಟಾಕ್ ಪ್ರಮಾಣವನ್ನು ಕರಗಿಸಲು ತಹರೇವಾರಿ ಆಫರ್‌ಗಳನ್ನು ನೀಡುವ ಮೂಲಕ ಗರಿಷ್ಠ ಪ್ರಮಾಣದ ವಾಹನ ಮಾರಾಟ ಯೋಜನೆ ರೂಪಿಸಿವೆ. ಹಾಗಾದರೆ ಹ್ಯುಂಡೈ ಸಂಸ್ಥೆಯು ಯಾವ ಕಾರಿನ ಮೇಲೆ ಎಷ್ಟು ಪ್ರಮಾಣದ ಡಿಸ್ಕೌಂಟ್ ನೀಡುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ..

ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್
ಹ್ಯುಂಡೈ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ಹೊಸ ಡಿಸೈನ್ ಪ್ರೇರಿತ ಗ್ರಾಂಡ್ ಐ10 ಬಿಡುಗಡೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ಟಾಕ್ ಕ್ಲಿಯೆರೆನ್ಸ್ ಸಂಬಂಧ ಗ್ರಾಂಡ್ ಐ10 ಖರೀದಿ ಮೇಲೆ ರೂ.1 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಈ ಹೊಸ ಆಫರ್ ಸ್ಟಾಕ್ ಮುಗಿಯುವ ತನಕ ಲಭ್ಯವಿರಲಿದ್ದು, ಗ್ರಾಂಡ್ ಐ10 ನಿಯೋಸ್ ಆವೃತ್ತಿಯ ಮೇಲೆ ಯಾವುದೇ ಆಫರ್‌ಗಳನ್ನು ನೀಡಿಲ್ಲ.

ಎಕ್ಸ್‌ಸೆಂಟ್ ಕಂಪ್ಯಾಕ್ ಸೆಡಾನ್
ಟ್ಯಾಕ್ಸಿ ಮತ್ತು ವೈಯಕ್ತಿಯ ಬಳಕೆ ಕಾರು ಮಾದರಿಯಾಗಿರುವ ಎಕ್ಸ್‌ಸೆಂಟ್ ಕಂಪ್ಯಾಕ್ಟ್ ಸೆಡಾನ್ ಮಾದರಿಯು ಹ್ಯುಂಡೈ ಸಂಸ್ಥೆಯ ಜನಪ್ರಿಯ ಕಾರು ಆವೃತ್ತಿಯಾಗಿದ್ದು, ಎಕ್ಸ್‌ಸೆಂಟ್ ಕೂಡಾ ಮುಂಬರುವ ಡಿಸೆಂಬರ್ ಹೊತ್ತಿಗೆ ಹೊಸ ಡಿಸೈನ್ ಪ್ರೇರಣೆಯೊಂದಿಗೆ ಉನ್ನತಿಕರಣಗೊಳ್ಳಲಿದೆ. ಹೀಗಾಗಿ ಸ್ಟಾಕ್ ತೆರವು ಮಾಡಲಾಗುತ್ತಿದ್ದು, ಎಕ್ಸ್‌ಸೆಂಟ್ ಖರೀದಿ ಮೇಲೂ ರೂ.1 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.

ವೆರ್ನಾ ಸೆಡಾನ್
ಸಿ ಸೆಗ್ಮೆಂಟ್‌ನಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ವೆರ್ನಾ ಸೆಡಾನ್ ಆವೃತ್ತಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಉತ್ತಮ ಪೈಪೋಟಿ ಮಾದರಿಯಾಗಿದೆ. ಆದ್ರೆ ಕೆಲ ತಿಂಗಳಿನಿಂದ ಕಾರು ಮಾರಾಟವು ತಗ್ಗಿರುವ ಹಿನ್ನೆಲೆಯಲ್ಲಿ ವೆರ್ನಾ ಮೇಲೂ ಕೆಲವು ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ವೆರ್ನಾ ಮೇಲೆ ರೂ.65 ಸಾವಿರ ಆಫರ್ ನೀಡಲಾಗುತ್ತಿದ್ದು, ಆಯ್ದ ಕೆಲವು ಡೀಲರ್ಸ್‌ನಲ್ಲಿ ಹೆಚ್ಚುವರಿ ಉಚಿತ ಸರ್ವಿಸ್‌ಗಳು ಕೂಡಾ ಲಭ್ಯವಿರಲಿವೆ.

ಕ್ರೆಟಾ ಕಂಪ್ಯಾಕ್ಟ್ ಎಸ್‌ಯುವಿ
ಹ್ಯುಂಡೈ ಜನಪ್ರಿಯ ಕಾರು ಆವೃತ್ತಿಯಾದ ಕ್ರೆಟಾ ಮೇಲೆ ರೂ.55 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದ್ದು, ಎಂಜಿ ಹೆಕ್ಟರ್ ಮತ್ತು ಕಿಯಾ ಸೆಲ್ಟೊಸ್ ಮಾರಾಟ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಮೊತ್ತದ ಡಿಸ್ಕೌಂಟ್ ಘೋಷಿಸಲಾಗಿದೆ.

ಸ್ಯಾಂಟ್ರೋ ಹ್ಯಾಚ್‌ಬ್ಯಾಕ್
ಕಳೆದ 2018ರ ನವೆಂಬರ್‌ನಲ್ಲಿ ಹೊಸ ಬದಲಾವಣೆಗಳೊಂದಿಗೆ ಮರಳಿ ಮಾರುಕಟ್ಟೆಗೆ ಪ್ರವೇಶಿಸಿರುವ ಸ್ಯಾಂಟ್ರೋ ಹ್ಯಾಚ್‌ಬ್ಯಾಕ್ ಖರೀದಿ ಮೇಲೆ ರೂ. 45 ಸಾವಿರ ಡಿಸ್ಕೌಂಟ್ ಘೋಷಿಸಲಾಗಿದ್ದು, ಮಾರುತಿ ಸೆಲೆರಿಯೊ ಮತ್ತು ಟಾಟಾ ಟಿಯಾಗೋ ಕಾರುಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಗರಿಷ್ಠ ಮಟ್ಟದ ಗ್ರಾಹಕರನ್ನು ಸೆಳೆಯಲು ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ.

ಎಲೈಟ್ ಐ20 ಮತ್ತು ಐ20 ಆಕ್ಟಿವ್
ಹ್ಯಾಚ್‌ಬ್ಯಾಕ್ ಮಾದರಿಗಳಲ್ಲಿ ಸದ್ಯ ಸ್ವಿಫ್ಟ್ ನಂತರ 2ನೇ ಸ್ಥಾನದಲ್ಲಿರುವ ಎಲೈಟ್ ಐ20 ಮತ್ತು ಐ20 ಆಕ್ಟಿವ್ ಕಾರುಗಳ ಮೇಲೆ ಹ್ಯುಂಡೈ ಸಂಸ್ಥೆಯು ರೂ. 30 ಸಾವಿರ ಡಿಸ್ಕೌಂಟ್ ನೀಡಲಾಗಿದ್ದು, ಭಾರೀ ಪ್ರಮಾಣದಲ್ಲಿರುವ ಸ್ಟಾಕ್ ಪ್ರಮಾಣವನ್ನು ತಗ್ಗಿಸಲು ಆಫರ್‌ಗಳನ್ನು ನೀಡಲಾಗುತ್ತಿದೆ.

ಎಲಂಟ್ರಾ ಸೆಡಾನ್
ಹ್ಯುಂಡೈ ಸಂಸ್ಥೆಯು ಈಗಾಗಲೇ ಯುರೋಪ್ ಮಾರುಕಟ್ಟೆಯಲ್ಲಿ ಫೇಸ್‌ಲಿಫ್ಟ್ ಎಲಂಟ್ರಾ ಮಾದರಿಯನ್ನು ಕಳೆದ ಕೆಲದಿನಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದು, ಇದೀಗ ಭಾರತದಲ್ಲೂ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಹೀಗಾಗಿ ಸ್ಟಾಕ್ ಪ್ರಮಾಣದ ಮೇಲೆ ರೂ. 2.05 ಲಕ್ಷದ ತನಕ ಡಿಸ್ಕೌಂಟ್ ನೀಡಲಾಗುತ್ತಿದ್ದು, ಹೊಸ ಆವೃತ್ತಿಯು ಸೆಪ್ಟೆಂಬರ್ ಅಥವಾ ಅಕ್ಟೋಬರ್ ಅಂತ್ಯಕ್ಕೆ ಖರೀದಿಗೆ ಲಭ್ಯವಾಗಲಿದೆ.

ಟಕ್ಸನ್ ಎಸ್‌ಯುವಿ
ಹ್ಯುಂಡೈ ಸಂಸ್ಥೆಯ ಫ್ಯಾಗ್‌ಶಿಫ್ ಎಸ್‌ಯುವಿ ಮಾದರಿಯಾದ ಟಕ್ಸನ್ ಮಾದರಿ ಮೇಲೆ ರೂ.2.05 ಲಕ್ಷ ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದ್ದು, ಪ್ರತಿ ವೆರಿಯೆಂಟ್ ಮೇಲೆ ವಿವಿಧ ಮಾದರಿಯ ಹೆಚ್ಚುವರಿ ಆಫರ್‌ಗಳು ಸಿಗಲಿವೆ. ಇದು 2.0-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನಲ್ಲಿ ಖರೀದಿ ಲಭ್ಯವಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಈ ಕಾರಿಗೆ ಭಾರೀ ಬೇಡಿಕೆಯಿದೆ.

ಇನ್ನು ಹ್ಯುಂಡೈ ನಿಹೊಸದಾಗಿ ಬಿಡುಗಡೆ ಮಾಡಲಾಗಿರುವ ವೆನ್ಯೂ ಮೇಲೆ ಯಾವುದೇ ಆಫರ್ ನೀಡಿಲ್ಲವಾದರೂ ಡೀಲರ್ಸ್ ಮಟ್ಟದಲ್ಲಿ ಕೆಲವು ವಿಶೇಷ ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲಾಗುತ್ತಿದ್ದು, ಮಾರುತಿ ಸುಜುಕಿ ಸಂಸ್ಥೆಯು ನೀಡಿರುವ ಆಫರ್‌ಗಳಿಗೆ ಪೈಪೋಟಿಯಾಗಿ ಹ್ಯುಂಡೈ ಕೂಡಾ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದೆ.


Click it and Unblock the Notifications