ಇವಿ ಮಾರುಕಟ್ಟೆ ವಿಸ್ತರಣೆಗಾಗಿ ಬರೋಬ್ಬರಿ ರೂ.1,400 ಕೋಟಿ ಹೂಡಿಕೆ ಮಾಡಲಿದೆ ಹ್ಯುಂಡೈ

ದಕ್ಷಿಣ ಕೊರಿಯಾದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಹ್ಯುಂಡೈ ಸಂಸ್ಥೆಯು ಸದ್ಯ ಭಾರತದಲ್ಲಿ ಎರಡನೇ ಅತಿ ಕಾರು ಮಾರಾಟ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಇದೀಗ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿ ಮೇಲೂ ವಿಶೇಷ ಗಮನಹರಿಸಿದೆ. ಹೀಗಾಗಿ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಅಧ್ಯಾಯ ಶುರು ಮಾಡಿರುವ ಹ್ಯುಂಡೈ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ನಮೂನೆಯ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಇವಿ ಮಾರುಕಟ್ಟೆ ವಿಸ್ತರಣೆಗಾಗಿ ಬರೋಬ್ಬರಿ ರೂ.1,400 ಕೋಟಿ ಹೂಡಿಕೆ ಮಾಡಲಿದೆ ಹ್ಯುಂಡೈ

2030ರ ವೇಳೆಗೆ ದೇಶದಲ್ಲಿ ಶೇ.100 ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳು ಮಾತ್ರವೇ ಸಂಚರಿಸಬೇಕು ಎನ್ನುವ ಗುರಿಯೊಂದಿಗೆ ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆ ತರಲಾಗುತ್ತಿದ್ದು, ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ತಗ್ಗಿಸಿ ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಗಮನಹರಿಸಲಾಗುತ್ತಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರದ ಬೃಹತ್ ಯೋಜನೆಯಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಸಾಂಪ್ರದಾಯಿಕ ವಾಹನಗಳ ಉತ್ಪಾದನೆ ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮೇಲೂ ವಿಶೇಷ ಆದ್ಯತೆ ನೀಡುತ್ತಿದ್ದು, ಹ್ಯುಂಡೈ ಸಂಸ್ಥೆಯು ಇದೇ ನಿಟ್ಟಿನಲ್ಲಿ ಯೋಜನೆ ರೂಪಿಸಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಇವಿ ಮಾರುಕಟ್ಟೆ ವಿಸ್ತರಣೆಗಾಗಿ ಬರೋಬ್ಬರಿ ರೂ.1,400 ಕೋಟಿ ಹೂಡಿಕೆ ಮಾಡಲಿದೆ ಹ್ಯುಂಡೈ

ಹ್ಯುಂಡೈ ಸಂಸ್ಥೆಯು ಸದ್ಯ ವಿದೇಶಿ ಮಾರುಕಟ್ಟೆಗಳಿಂದ ತನ್ನ ಎಲೆಕ್ಟ್ರಿಕ್ ಕಾರು ಆವೃತ್ತಿಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟಕ್ಕೆ ಚಾಲನೆ ನೀಡಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೇ ಪೂರ್ಣಪ್ರಮಾಣದಲ್ಲಿ ಇವಿ ಕಾರು ಉತ್ಪಾದನೆಗಾಗಿ ಎದುರು ನೋಡುತ್ತಿದೆ.

ಇವಿ ಮಾರುಕಟ್ಟೆ ವಿಸ್ತರಣೆಗಾಗಿ ಬರೋಬ್ಬರಿ ರೂ.1,400 ಕೋಟಿ ಹೂಡಿಕೆ ಮಾಡಲಿದೆ ಹ್ಯುಂಡೈ

ಈ ಕುರಿತಂತೆ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹ್ಯುಂಡೈ ಇಂಡಿಯಾ ಮುಖ್ಯಸ್ಥ ಎಸ್ಎಸ್ ಕಿಮ್ ಅವರು, ಮುಂಬರುವ ದಿನಗಳಲ್ಲಿ ಭಾರತದಲ್ಲೇ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮಾಡುವ ಸಂಬಂಧ ಈಗಾಗಲೇ ಹಲವು ಮಾರುಕಟ್ಟೆ ಅಧ್ಯಯನಗಳು ನಡೆದಿದ್ದು, ಹೊಸ ಯೋಜನೆಗಳಿಗಾಗಿ ಸದ್ಯದಲ್ಲೇ ರೂ. 1,400 ಕೋಟಿ ಹೂಡಿಕೆ ಕುರಿತಂತೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದಿದ್ದಾರೆ.

ಇವಿ ಮಾರುಕಟ್ಟೆ ವಿಸ್ತರಣೆಗಾಗಿ ಬರೋಬ್ಬರಿ ರೂ.1,400 ಕೋಟಿ ಹೂಡಿಕೆ ಮಾಡಲಿದೆ ಹ್ಯುಂಡೈ

ಇನ್ನು ಕೋನಾ ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡುತ್ತಿರುವುದರಿಂದ ತುಸು ದುಬಾರಿ ಎನ್ನಿಸಲಿದ್ದು, ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 25.30 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಬೇಡಿಕೆ ಹೆಚ್ಚಿದ ನಂತರವಷ್ಟೇ ಭಾರತದಲ್ಲೇ ಪೂರ್ಣ ಪ್ರಮಾಣದಲ್ಲಿ ಕೋನಾ ಉತ್ಪಾದನೆಗೆ ಚಾಲನೆ ಸಿಗಲಿದ್ದು, ತದನಂತರವಷ್ಟೇ ಬೆಲೆ ತಗ್ಗಲಿದೆ ಎನ್ನಬಹುದು. ಈ ಸಂಬಂಧ ಚೆನ್ನೈ ಬಳಿಯಿರುವ ಕಾರು ಉತ್ಪಾದನಾ ಘಟಕವನ್ನೇ ವಿಸ್ತರಣೆ ಮಾಡಲಾಗುತ್ತಿದ್ದು, 2021ರ ವೇಳೆಗೆ ಮೇಡ್ ಇನ್ ಇಂಡಿಯಾ ಹ್ಯುಂಡೈ ಎಲೆಕ್ಟ್ರಿಕ್ ಕಾರುಗಳು ರಸ್ತೆಗಿಳಿಯಲಿವೆ.

ಇವಿ ಮಾರುಕಟ್ಟೆ ವಿಸ್ತರಣೆಗಾಗಿ ಬರೋಬ್ಬರಿ ರೂ.1,400 ಕೋಟಿ ಹೂಡಿಕೆ ಮಾಡಲಿದೆ ಹ್ಯುಂಡೈ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇನ್ನು ಸದ್ಯ ಭಾರತದಲ್ಲಿ ಬಿಡುಗಡೆಯಾಗಿರುವ ಕೋನಾ ಎಲೆಕ್ಟ್ರಿಕ್ ಕಾರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎರಡು ಮಾದರಿಯ ಬ್ಯಾಟರಿ ಆಯ್ಕೆಯನ್ನು ಹೊಂದಿದ್ದು, 64kWh ಮತ್ತು 39.2kWh ಬ್ಯಾಟರಿ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ. ಇದರಲ್ಲಿ ಸದ್ಯಕ್ಕೆ 39.2kWh ಬ್ಯಾಟರಿ ಸಾಮಾರ್ಥ್ಯ ಮಾದರಿಯನ್ನು ಮಾತ್ರವೇ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, 52 ನಿಮಿಷಗಳಲ್ಲಿ ಶೇ.80 ರಷ್ಟು ಬ್ಯಾಟರಿ ಚಾರ್ಜ್‌ ಆಗಬಲ್ಲ ಫಾಸ್ಟ್ ಚಾರ್ಜರ್ ಸೌಲಭ್ಯ ಈ ಕಾರಿನಲ್ಲಿದೆ.

ಇವಿ ಮಾರುಕಟ್ಟೆ ವಿಸ್ತರಣೆಗಾಗಿ ಬರೋಬ್ಬರಿ ರೂ.1,400 ಕೋಟಿ ಹೂಡಿಕೆ ಮಾಡಲಿದೆ ಹ್ಯುಂಡೈ

ಮೈಲೇಜ್(ಪ್ರತಿ ಚಾರ್ಜ್‌ಗೆ)

ಕೋನಾ ಎಲೆಕ್ಟ್ರಿಕ್ ಕಾರು 39.2kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲ ವೈಶಿಷ್ಟ್ಯತೆಯನ್ನು ಹೊಂದಿದ್ದು, ಎಲೆಕ್ಟ್ರಿಕ್ ವಾಹನಗಳ ಮೈಲೇಜ್ ಪ್ರಮಾಣಕ್ಕೆ ಪ್ರಮಾಣ ಪತ್ರ ಒದಗಿಸುವ ಎಆರ್‌ಎಐ ಸಂಸ್ಥೆಯೇ ಕೋನಾ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಪ್ರಮಾಣವನ್ನು ಪ್ರಮಾಣಿಕರಿಸಿದೆ.

ಇವಿ ಮಾರುಕಟ್ಟೆ ವಿಸ್ತರಣೆಗಾಗಿ ಬರೋಬ್ಬರಿ ರೂ.1,400 ಕೋಟಿ ಹೂಡಿಕೆ ಮಾಡಲಿದೆ ಹ್ಯುಂಡೈ

ಹ್ಯುಂಡೈ ಹೊಸ ಎಲೆಕ್ಟ್ರಿಕ್ ಕಾರು ಸಾಮಾನ್ಯ ಕಾರುಗಳಂತೆಯೇ ಪರ್ಫಾಮೆನ್ಸ್‌ನಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, 100kW ಫ್ರಂಟ್ ವೀಲ್ಹ್ ಮೋಟಾರ್ ಪವರ್ ಮೂಲಕ 131-ಬಿಎಚ್‌ಪಿ ಮತ್ತು 395-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 9.7-ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮಿ ವೇಗ ತಲುಪಬಲ್ಲದು.

ಇವಿ ಮಾರುಕಟ್ಟೆ ವಿಸ್ತರಣೆಗಾಗಿ ಬರೋಬ್ಬರಿ ರೂ.1,400 ಕೋಟಿ ಹೂಡಿಕೆ ಮಾಡಲಿದೆ ಹ್ಯುಂಡೈ

ಕಾರಿನ ಉದ್ದಳತೆ

ಕ್ರೆಟಾ ಕಾರಿಗಿಂತಲೂ ತುಸು ಕಡಿಮೆ ಉದ್ದಳತೆ ಹೊಂದಿರುವ ಕೋನಾ ಎಲೆಕ್ಟ್ರಿಕ್ ಕಾರು ಹಲವು ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದಿದ್ದು, 4,180-ಎಂಎಂ ಉದ್ದ, 1,800-ಎಂಎಂ ಅಗಲ, 1,570-ಎಂಎಂ ಎತ್ತರ ಮತ್ತು 2,600-ಎಂಎಂ ವೀಲ್ಹ್‌ಬೇಸ್‌ನೊಂದಿಗೆ 332-ಲೀಟರ್ ಸಾಮರ್ಥ್ಯದ ಲಗೇಜ್ ಸ್ಪೆಸ್ ಪಡೆದುಕೊಂಡಿದೆ

ಇವಿ ಮಾರುಕಟ್ಟೆ ವಿಸ್ತರಣೆಗಾಗಿ ಬರೋಬ್ಬರಿ ರೂ.1,400 ಕೋಟಿ ಹೂಡಿಕೆ ಮಾಡಲಿದೆ ಹ್ಯುಂಡೈ

ಕೋನಾ ಕಾರು ಬೆಲೆ ದುಬಾರಿಯಾಗಿದ್ದರೂ ಸಹ ಉತ್ತಮ ಮೈಲೇಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ಖರೀದಿಗೆ ಉತ್ತಮ ಎನ್ನಿಸಲಿದ್ದು, ಸ್ಪೋರ್ಟಿ ವಿನ್ಯಾಸದ ಜೊತೆಗೆ ಕಾಸ್‌ಕ್ಲಾಡಿಂಗ್ ಫ್ರಂಟ್ ಗ್ರಿಲ್, ಬಾಡಿ ಕಲರ್ ಬಂಪರ್, ಸ್ಲಿಕ್ ಎಲ್ಇಡಿ ಟೈಲ್ ಲೈಟ್ಸ್, ಶಾರ್ಪ್ ಶೋಲ್ಡ್‌ರ್ ಲೈನ್ಸ್, ರಿಯರ್ ಸ್ಪಾಯ್ಲರ್ ನೀಡಿರುವುದು ಹೊಸ ಕಾರಿಗೆ ಮತ್ತಷ್ಟು ಆಕರ್ಷಣೆಯಾಗುವಂತೆ ಮಾಡಿದೆ.

ಇವಿ ಮಾರುಕಟ್ಟೆ ವಿಸ್ತರಣೆಗಾಗಿ ಬರೋಬ್ಬರಿ ರೂ.1,400 ಕೋಟಿ ಹೂಡಿಕೆ ಮಾಡಲಿದೆ ಹ್ಯುಂಡೈ

ಹೊರವಿನ್ಯಾಸದಲ್ಲಿ ಮಾತ್ರವಲ್ಲದೇ ಕಾರಿನ ಒಳಭಾಗದ ವಿನ್ಯಾಸವು ಸಹ ಎಲೆಕ್ಟ್ರಿಕ್ ಕಾರು ಖರೀದಿದಾರನ್ನು ಸೆಳೆಯುಲಿದ್ದು, ಬ್ಲ್ಯಾಕ್ ಥೀಮ್ ಡ್ಯಾಶ್‌ಬೋರ್ಡ್, ಹೋಂದಾಣಿಕೆ ಮಾಡಬಹುದಾದ 8-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್, ವೆಂಟಿಲೆಟೆಡ್ ಲೆದರ್ ಸೀಟುಗಳು, ಲೆದರ್ ಹೊದಿಕೆಯ ಸ್ಟಿರಿಂಗ್ ವೀಲ್ಹ್ ಮೌಂಟ್, 10 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಲ್ಲ ಚಾಲಕನ ಸೀಟು ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯ ಈ ಕಾರಿನಲ್ಲಿದೆ.

ಇವಿ ಮಾರುಕಟ್ಟೆ ವಿಸ್ತರಣೆಗಾಗಿ ಬರೋಬ್ಬರಿ ರೂ.1,400 ಕೋಟಿ ಹೂಡಿಕೆ ಮಾಡಲಿದೆ ಹ್ಯುಂಡೈ

ಸುರಕ್ಷತೆಗೂ ಕೋನಾ ಕಾರಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆರು ಏರ್‌ಬ್ಯಾಗ್‌ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ತುರ್ತು ಕರೆ ಸೌಲಭ್ಯ, ಎಬಿಎಸ್ ಜೊತೆ ಇಬಿಡಿ, ರೀ ಜನರೇಟಿವ್ ಬ್ರೇಕಿಂಗ್ ಸಿಸ್ಟಂ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಮತ್ತು ವಿವಿಧ ಮಾದರಿಯ ಚಾಲನಾ ಅನುಭವಕ್ಕಾಗಿ ಇಕೋ, ಇಕೋ ಪ್ಲಸ್, ಕಂಫರ್ಟ್ ಮತ್ತು ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ಬದಲಿಸಿಕೊಳ್ಳಬಹುದಾಗಿದೆ.

Source: Economic Times

Most Read Articles

Kannada
English summary
Hyundai is plannning to invest Rs. 1,400 Cr in India for electric cars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X