ಹೊಸ ಎಂಜಿನ್ ಪಡೆಯಲಿವೆ ವರ್ನಾ ಹಾಗೂ ಐ20 ಕಾರುಗಳು
ಹ್ಯುಂಡೈ ಕಂಪನಿಯು ಇತ್ತೀಚಿಗಷ್ಟೆ ತನ್ನ ಮೊದಲ ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಸ್‍ಯುವಿಯಾದ ವೆನ್ಯೂ ವಾಹನವನ್ನು ಭಾರತೀಯ ಮಾರುಕಟ್ಟೆಯಲಿ ಬಿಡುಗಡೆಗೊಳಿಸಿದೆ. ಈ ವಾಹನದ ಬೆಲೆಯು ಭಾರತದ ಎಕ್ಸ್ ಶೋ ರೂಂ ದರದಂತೆ ರೂ. 6.50 ಲಕ್ಷಗಳಾಗಿದೆ.

ವೆನ್ಯೂ ವಾಹನದಲ್ಲಿ ಮೂರು ಬಗೆಯ ಎಂಜಿನ್‍ಗಳಿರಲಿವೆ. ಅದರಲ್ಲಿ ಮುಖ್ಯವಾದುದು ಆಲ್ ಪವರ್‍ಟ್ರೇನ್ ಎಂಜಿನ್. ಈ ಎಂಜಿನ್‍ನಲ್ಲಿ 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್‍ಯಿದ್ದು, 120 ಬಿಹೆಚ್‍ಪಿ ಹಾಗೂ 172 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿ 6 ಸ್ಪೀಡಿನ ಮ್ಯಾನುಯಲ್ ಹಾಗೂ 7 ಸ್ಪೀಡಿನ ಡ್ಯೂಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.
ಹ್ಯುಂಡೈ ಕಂಪನಿಯು ಹೊಸ ಪವರ್‍ಟ್ರೇನ್ ಎಂಜಿನ್ ಅನ್ನು ತನ್ನ ವರ್ನಾ ಹಾಗೂ ಎಲೈಟ್ ಐ20 ವಾಹನಗಳಲ್ಲಿ ಅಳವಡಿಸುವ ಯೋಜನೆಯಲ್ಲಿದೆ.

ಒವರ್‍ಡ್ರೈವ್ ಸುದ್ದಿಸಂಸ್ಥೆಯ ವರದಿಗಳ ಪ್ರಕಾರ, ಕೊರಿಯಾ ಮೂಲದ ಕಂಪನಿಯು ಸೆಡಾನ್ ಮಾದರಿಯ ವರ್ನಾ ಹಾಗೂ ಹ್ಯಾಚ್‍ಬ್ಯಾಕ್ ಮಾದರಿಯಲ್ಲಿರುವ ಎಲೈಟ್ ಐ20 ಕಾರುಗಳಲ್ಲಿ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸುವ ಚಿಂತನೆಯಲ್ಲಿದೆ.

ಸದ್ಯಕ್ಕೆ ವರ್ನಾ ಹಾಗೂ ಎಲೈಟ್ ಕಾರುಗಳಲ್ಲಿ ಕ್ರಮವಾಗಿ 1.6 ಲೀಟರ್ ಹಾಗೂ 1.2 ಲೀಟರ್ ಪೆಟ್ರೋಲ್‍ನ ದೊಡ್ಡ ಎಂಜಿನ್‍ಗಳನ್ನು ಅಳವಡಿಸಲಾಗಿದೆ. ಚಿಕ್ಕದಾದ 3 ಸಿಲಿಂಡರ್ ಎಂಜಿನ್ ಈ ಎರಡು ಎಂಜಿನ್‍ಗಳಿಗಿಂತ ಹೆಚ್ಚು ಬಲಶಾಲಿಯಾಗಿದೆ.

1.6 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿರುವ ಹ್ಯುಂಡೈ ವರ್ನಾ 121 ಬಿಹೆಚ್‍ಪಿ ಹಾಗೂ 153 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 1.2 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿರುವ ಎಲೈಟ್ ಐ20 84 ಬಿಹೆಚ್‍ಪಿ ಹಾಗೂ 115 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 1.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಎಲೈಟ್ ಐ20 ಹ್ಯಾಚ್‍ಬ್ಯಾಕ್ ಕಾರಿಗಾಗಿ ಟ್ಯೂನ್ ಮಾಡಬಹುದಾಗಿದೆ. ಹೊಸ ಪೆಟ್ರೋಲ್ ಎಂಜಿನ್ ಹೊರತಾಗಿ ಹ್ಯುಂಡೈ ಕಂಪನಿಯು ಎಲೈಟ್ ಐ20 ಹಾಗೂ ವರ್ನಾ ಕಾರುಗಳಲ್ಲಿ 7 ಸ್ಪೀಡಿನ ಡ್ಯೂಯಲ್ ಕ್ಲಚ್ ಗೇರ್ ಬಾಕ್ಸ್ ಅನ್ನು ಅಳವಡಿಸುವ ಯೋಜನೆಯಲ್ಲಿದೆ.

ಆದರೆ ಈ ಸುದ್ದಿಯನ್ನು ಹ್ಯುಂಡೈ ಕಂಪನಿಯು ಇನ್ನೂ ಖಚಿತಪಡಿಸಿಲ್ಲ. ಕಳೆದ ವಾರ ಬಿಡುಗಡೆಯಾದ ಹ್ಯುಂಡೈ ಕಂಪನಿಯ ವೆನ್ಯೂ ವಾಹನವು ಮಾರುಕಟ್ಟೆಯಲ್ಲಿ ತನ್ನದೇ ಆದ ಕ್ರೇಜ್ ಸೃಷ್ಟಿಸಿದೆ. ಈಗಾಗಲೇ ಈ ಕಾಂಪ್ಯಾಕ್ಟ್ ಎಸ್‍ಯುವಿಗಾಗಿ 17,000ಕ್ಕೂ ಹೆಚ್ಚು ಬುಕ್ಕಿಂಗ್‍ಗಳನ್ನು ಮಾಡಲಾಗಿದ್ದು, ಶೀಘ್ರದಲ್ಲಿಯೇ ಗ್ರಾಹಕರಿಗೆ ವಾಹನಗಳನ್ನು ವಿತರಿಸಲಾಗುವುದು.
MOST READ: ಹೀಟೆಡ್ ಸೀಟ್ ಬೆಲ್ಟ್ ಅಭಿವೃದ್ಧಿಪಡಿಸುತ್ತಿರುವ ಮರ್ಸಿಡಿಸ್

ಹ್ಯುಂಡೈ ವೆನ್ಯೂ ವಾಹನವು ಭಾರತದ ಮೊದಲ ಕನೆಕ್ಟೆಡ್ ವಾಹನವಾಗಿದೆ. ಇದರಲ್ಲಿ ಮೊದಲ ಬಾರಿಗೆ ಹ್ಯುಂಡೈ ಬ್ರಾಂಡಿನ ಬ್ಲೂ ಲಿಂಕ್ ಕನೆಕ್ಟಿವಿಟಿಯನ್ನು ಅಳವಡಿಸಲಾಗಿದೆ. ಇದರಲ್ಲಿ 33 ಫೀಚರ್‍ಗಳಿವೆ, 10 ಕ್ಕೂ ಹೆಚ್ಚು ಫೀಚರ್‍ಗಳನ್ನು ಭಾರತಕ್ಕಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಇದರ ಹೊರತಾಗಿ ವೆನ್ಯೂ ವಾಹನದಲ್ಲಿ ಕಂಪನಿಯ ಹೊಸ ಡಿಸೈನ್ ಲ್ಯಾಂಗ್ವೇಜ್ ಅನ್ನು ಅಳವಡಿಸಲಾಗಿದೆ, ಜೊತೆಗೆ ಟ್ವಿನ್ ಹೆಡ್‍ಲ್ಯಾಂಪ್ ಕ್ಲಸ್ಟರ್, ಹೊಸ ಬಗೆಯ ಮುಂಭಾಗದ ಗ್ರಿಲ್ ಸೇರಿದಂತೆ ಅನೇಕ ಫೀಚರ್‍ಗಳನ್ನು ಅಳವಡಿಸಲಾಗಿದೆ.

ಹ್ಯುಂಡೈ ವೆನ್ಯೂ ವಾಹನವು ಹಲವು ಮಾದರಿಗಳಲ್ಲಿ ಲಭ್ಯವಿದ್ದು, ಪ್ರತಿಯೊಂದು ಮಾದರಿಯು ತನ್ನದೇ ಆದ ಫೀಚರ್ ಹಾಗೂ ಎಕ್ವಿಪ್‍ಮೆಂಟ್‍ಗಳನ್ನು ಒಳಗೊಂಡಿವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ವರ್ನಾ ಹಾಗೂ ಎಲೈಟ್ ಐ20 ವಾಹನಗಳು ತಮ್ಮ ಸೆಗ್‍ಮೆಂಟ್‍ಗಳಲ್ಲಿ ಜನಪ್ರಿಯ ವಾಹನಗಳಾಗಿವೆ. ಎರಡೂ ವಾಹನಗಳನ್ನು ಶೀಘ್ರದಲ್ಲಿಯೇ ಅಪ್‍ಗ್ರೇಡ್ ಮಾಡಲಾಗುವುದು. ಹ್ಯುಂಡೈ ಕಂಪನಿಯು ಹೊಸ ಮಾಲಿನ್ಯ ನಿಯಮಗಳ ಅಳವಡಿಕೆಗೆ ವಿಧಿಸಲಾಗಿರುವ ಗಡುವಿಗೆ, ಏಪ್ರಿಲ್ 2020, ಮುನ್ನ ಹೊಸ ಎಂಜಿನ್‍ಗಳನ್ನು ವರ್ನಾ ಹಾಗೂ ಐ20 ಕಾರುಗಳಲ್ಲಿ ಅಳವಡಿಸುವ ಸಾಧ್ಯತೆಗಳಿವೆ.


Click it and Unblock the Notifications