ಗುಡ್‍ವುಡ್ ಫೆಸ್ಟಿವಲ್‍ನಲ್ಲಿ ಅನಾವರಣಗೊಂಡ ಲೆಕ್ಸಸ್ ಎಲ್‍ಸಿ
ಲೆಕ್ಸಸ್ ಎಲ್ಸಿ ಕನ್ವರ್ಟಿಬಲ್ ವಾಹನವನ್ನು ಮೊದಲ ಬಾರಿಗೆ 2019ರ ಡೆಟ್ರಾಯಿಟ್ ಆಟೋ ಶೋದಲ್ಲಿ ಪ್ರದರ್ಶಿಸಲಾಗಿತ್ತು. ಇದಾದ ನಂತರ ಕಂಪನಿಯು ಈ ಕಾರಿನ ಟೀಸರ್‍ಗಳನ್ನು ಆಗಾಗ ಪ್ರದರ್ಶಿಸುತ್ತಿತ್ತು. ಎಲ್‍ಸಿ ಕನ್ವರ್ಟಿಬಲ್‍ನ ಉತ್ಪಾದನಾ ಆವೃತ್ತಿಯನ್ನು 2019ರ ಗುಡ್‍ವುಡ್ ಫೆಸ್ಟಿವಲ್ ಆಫ್ ಸ್ಪೀಡ್‍ನಲ್ಲಿ ಅನಾವರಣಗೊಳಿಸಲಾಯಿತು.

ಅನಾವರಣಗೊಂಡಿದ್ದಕ್ಕಿಂತ, ಲೆಕ್ಸಸ್ ಕಂಪನಿಯು ಎಲ್‍ಸಿಯ ಮೇಲೆ ಬಳಕೆ ಮಾಡಿರುವ ಕ್ಯಾಮೊದಿಂದ ಹೆಚ್ಚು ಗಮನ ಸೆಳೆಯುತ್ತಿತ್ತು. ಕ್ಯಾಮೊ ಹೊಂದಿರುವ ಎಲ್‍ಸಿ ಅದ್ಭುತವಾಗಿ ಕಾಣುತ್ತಿದೆ. ಲೆಕ್ಸಸ್ ಎಲ್ಸಿ ಕನ್ವರ್ಟಿಬಲ್ ಪ್ರೊಟೊಟೈಪ್ ಮಾದರಿಯನ್ನು ನಿನ್ನೆ ಗುಡ್‍ವುಡ್ ಫೆಸ್ಟಿವಲ್ ಆಫ್ ಸ್ಪೀಡ್‍ನಲ್ಲಿ ಪ್ರದರ್ಶಿಸಲಾಯಿತು. ಮರೆಮಾಚಲಾಗಿದ್ದ, ಈ ಕಾರು ದೊಡ್ಡ ಮಟ್ಟದಲ್ಲಿ ಮೊದಲ ಬಾರಿಯ ಪ್ರದರ್ಶನಕ್ಕೆ ಸಿದ್ಧವಾಗಿದೆ.

ಆದರೆ ಲೆಕ್ಸಸ್ ಇನ್ನೂ ದೊಡ್ಡ ಮಟ್ಟದ ಆಟೋ ಪ್ರದರ್ಶನವನ್ನು ಎದುರು ನೋಡುತ್ತಿರುವ ಸಾಧ್ಯತೆಗಳಿವೆ. ಪ್ರೊಟೊಟೈಪ್ ಮಾದರಿಯ ಲೆಕ್ಸಸ್ ಎಲ್ಸಿ ಕನ್ವರ್ಟಿಬಲ್, ಅದರ ಕಾನ್ಸೆಪ್ಟ್ ಮಾದರಿಯನ್ನೇ ಹೋಲುತ್ತದೆ. ಲೆಕ್ಸಸ್‍ನ ಎಲ್‍ಸಿ ಕೂಪೆಯ ಬೇಡಿಕೆಯು ನಿಧಾನಗತಿಯಲ್ಲಿದೆ. ವೃತ್ತಿಪರ ರೇಸ್ ಕಾರ್ ಡ್ರೈವರ್ ನಿಕ್ ಕ್ಯಾಸಿಡಿರವರಿಗೆ ಗುಡ್‍ವುಡ್ ಫೆಸ್ಟಿವಲ್ ಸಂದರ್ಭದಲ್ಲಿಎಲ್‍ಸಿ ಕನ್ವರ್ಟಿಬಲ್ ಪ್ರೊಟೊಟೈಪ್ ಮಾದರಿಯನ್ನು ಬೆಟ್ಟದ ಮೇಲೆ ಚಲಾಯಿಸುವ ಜವಾಬ್ದಾರಿಯನ್ನು ನೀಡಲಾಗಿದೆ.

ಗುಡ್ವುಡ್ ಫೆಸ್ಟಿವಲ್ ಆಫ್ ಸ್ಪೀಡ್‌ನ ನಂತರ ಲೆಕ್ಸಸ್, ಎಲ್ಸಿ ಕನ್ವರ್ಟಿಬಲ್ ಪ್ರೊಟೊಟೈಪ್ ಮಾದರಿಯನ್ನು ವಿವಿಧ ಆಟೋ ಎಕ್ಸ್ ಪೋಗಳಲ್ಲಿ ಪ್ರದರ್ಶಿಸಲಿದೆ. ಇದರಿಂದಾಗಿ ಲೆಕ್ಸಸ್ ಕಂಪನಿಯ ಇಂಜಿನಿಯರ್‌ಗಳಿಗೆ ಚೊಚ್ಚಲ ಪ್ರವೇಶಕ್ಕೆ ಮುಂಚೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿದೆ.

ಕಾರು ಯಾವಾಗ ಮೊದಲ ಬಾರಿಗೆ ಪ್ರದರ್ಶನಗೊಳ್ಳಲಿದೆ ಎಂಬುದನ್ನು ಲೆಕ್ಸಸ್ ಬಹಿರಂಗಪಡಿಸಿಲ್ಲ. ಬಹುಶಃ ಸೆಪ್ಟೆಂಬರ್‌ನಲ್ಲಿ ಫ್ರಾಂಕ್‌ಫರ್ಟ್‌ನಲ್ಲಿ ನಡೆಯುವ ಆಟೋ ಎಕ್ಸ್ ಪೋ ಅಥವಾ ನವೆಂಬರ್‌ನಲ್ಲಿ ಲಾಸ್ ಏಂಜಲೀಸ್‌ನಲ್ಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳ್ಳುವ ನಿರೀಕ್ಷೆಗಳಿವೆ. ಎಲ್‍ಸಿ ಕನ್ವರ್ಟಿಬಲ್ ನಮ್ಮಲ್ಲಿ ಕೆಲವರು ಇಷ್ಟಪಡುವ ಮೊದಲ ಕನ್ವರ್ಟಿಬಲ್ ಆಗಿರಬಹುದು. ವಾಹನವು ಅದ್ಭುತವಾಗಿ ಕಂಡರೂ, ಕಾರ್ಯಕ್ಷಮತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಾಗಿದೆ.

ನಿಕ್ ಕ್ಯಾಸಿಡಿ ಅವರು ಈ ವಾಹನವನ್ನು ಚಲಾಯಿಸಿದ ನಂತರ ನಂತರ ಈ ಬಗ್ಗೆ ತಿಳಿಯಲಿದೆ. ಗುಡ್‍ವುಡ್ ಫೆಸ್ಟಿವಲ್ ಆಫ್ ಸ್ಪೀಡ್ ನಂತಹ ಸ್ಪರ್ಧೆಗಳು ಭಾರತದಲ್ಲಿ ನಡೆಯದಿರುವುದು ನಿಜಕ್ಕೂ ದುಃಖದ ಸಂಗತಿ. ಈ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲು ನಮಲ್ಲಿ ಸಾಕಷ್ಟು ಅನುಕೂಲವಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ರೀತಿಯ ಸ್ಪರ್ಧೆಗಳಿಗೆ ಅವಕಾಶ ನೀಡದಿರುವುದು ನಿಜಕ್ಕೂ ದುರದೃಷ್ಟಕರ.


Click it and Unblock the Notifications








