ಮಹೀಂದ್ರಾ ಆಲ್ಟುರಾಸ್ ಜಿ4 ಕಾರಿಗೆ ಮಾರುಕಟ್ಟೆಯಲ್ಲಿ ಫುಲ್ ಡಿಮ್ಯಾಂಡ್..!

ಮಹೀಂದ್ರಾ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಎಲ್ಲಾ ಕಾರುಗಳು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಮೊನ್ನೆಯಷ್ಟೆ ಬಿಡುಗಡೆಗಾದ ಎಕ್ಸ್‌ಯುವಿ300 ಕಾರಿಗೂ ಸಹ ಡಿಮ್ಯಾಂಡ್ ಅಧಿಕವಾಗಿದೆ. ಇನ್ನು ಎಂಪಿವಿ ಕಾರುಗಳ ಸರಣಿಯಲ್ಲಿ ಬಿಡುಗಡೆಯಾದ ಮರಾಜೊ ಕಾರು ಸಹ ಹೆಚ್ಚು ಬುಕ್ಕಿಂಗ್ ಅನ್ನು ಪಡೆದುಕೊಳ್ಳುತ್ತಿದೆ.

ಕಳೆದ ನವೆಂಬರ್ ತಿಂಗಳಿನಲ್ಲಿ ಮಹೀಂದ್ರಾ ಸಂಸ್ಥೆಯು ತಮ್ಮ ಐಷಾರಾಮಿ ಎಯ್‍ಯುವಿ ಕಾರಾದ ಆಲ್ಟುರಾಸ್ ಜಿ4 ಕಾರನ್ನು ಬಿಡುಗಡೆಗೊಳಿಸಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿದೆ. ಮೂಲಗಳ ಪ್ರಕಾರ ಆಲ್ಟುರಾಸ್ ಜಿ4 ಕಾರು ಇಲ್ಲಿಯ ವರೆಗು ಸಮರು 1000ಕ್ಕು ಹೆಚ್ಚು ಬುಕ್ಕಿಂಗ್ ಅನ್ನು ಪಡೆದುಕೊಂಡಿದೆ.

ಮಹೀಂದ್ರಾ ಆಲ್ಟುರಾಸ್ ಜಿ4 ಕಾರಿಗೆ ಮಾರುಕಟ್ಟೆಯಲ್ಲಿ ಫುಲ್ ಡಿಮ್ಯಾಂಡ್..!

ಬೆಲೆಯಲ್ಲಿ ಕೊಂಚ ದುಬಾರಿಯಾದ್ರು ಗ್ರಾಹಕರು ಮಹೀಂದ್ರಾ ಆಲ್ಟುರಾಸ್ ಕಾರನ್ನು ಖರೀದಿಸುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಕಾರಿನ ಬುಕ್ಕಿಂಗ್ ಮಾಡಿಕೊಂಡ ಗ್ರಾಹಕರಿಗೆ ಡೆಲಿವರಿ ಮಾಡುವ ಕಾರ್ಯದಲ್ಲಿ ತೊಡಗಿದೆ.

ದಕ್ಷಿಣ ಕೊರಿಯಾದ ಮೂಲದ ಸ್ಯಾಂಗ್‌ಯಾಂಗ್‌ ಆಟೋ ಉತ್ಪಾದನಾ ಸಂಸ್ಥೆಯೊಂದಿಗೆ ಜೊತೆಗೂಡಿರುವ ಮಹೀಂದ್ರಾ ಸಂಸ್ಥೆಯು ಭಾರತದಲ್ಲಿ ಸುಧಾರಿತ ಮಾದರಿಯ ಎಸ್‌ಯುವಿ ಕಾರುಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ್ದು, ಸ್ಯಾಂಗ್‌ಯ್ಯಾಂಗ್ ಸಂಸ್ಥೆಯ ಜಿ4 ಕಾರಿನ ಪ್ರೇರಣೆಯೊಂದಿಗೆ ಅಲ್ಟುರಾಸ್ ಜಿ4 ಎಸ್‌ಯುವಿ ಕಾರನ್ನು ನಿರ್ಮಾಣ ಮಾಡಿದೆ.

ಮಹೀಂದ್ರಾ ಸಂಸ್ಥೆಯು ಬಿಡುಗಡೆಗೊಳಿಸಿರುವ ಅಲ್ಟುರಾಸ್ ಜಿ4 ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ 2 ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, ಕಾರುಗಳಲ್ಲಿ ಒದಗಿಸಲಾಗಿರುವ ತಾಂತ್ರಿಕ ಸೌಲಭ್ಯಗಳ ಆಧಾರ ಮೇಲೆ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 26.95 ಲಕ್ಷಕ್ಕೆ ಹಾಗೂ ಟಾಪ್ ಎಂಡ್ ಮಾದರಿಯನ್ನು ರೂ. 29.95 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಮಹೀಂದ್ರಾ ಆಲ್ಟುರಾಸ್ ಜಿ4 ಕಾರಿಗೆ ಮಾರುಕಟ್ಟೆಯಲ್ಲಿ ಫುಲ್ ಡಿಮ್ಯಾಂಡ್..!

ಕಾರಿನ ಡಿಸೈನ್‌ನಲ್ಲಿ ಈ ಹಿಂದಿನ ಸ್ಯಾಂಗ್‌ಯಾಂಗ್ ರೆಕ್ಸ್‌ಸ್ಟಾನ್ ಜಿ4 ಕಾರಿನ ಕೆಲವು ವಿನ್ಯಾಸಗಳನ್ನು ಎರವಲು ಪಡೆಯಲಾಗಿದ್ದು, ಎಲೆಕ್ಟ್ರಿಕ್ ಸನ್ ರೂಫ್, ಪವರ್ಡ್ ಟೈಲ್‌ಗೆಟ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‌ಎಲ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೈಬೀಮ್ ಮತ್ತು ಲೋ ಬೀಮ್ ಲೈಟ್ಸ್, 18-ಇಂಚಿನ ಫೈವ್ ಸ್ಪೋಕ್ ಅಲಾಯ್ ವೀಲ್ಹ್‌ಗಳು, ಫಾಗ್ ಲ್ಯಾಂಪ್ ಜೊತೆ ಕಾರ್ನರ್ ಲೈಟಿಂಗ್ ಸೌಲಭ್ಯ ಪಡೆದಿದೆ.

ಹೊಸ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು 2.2-ಲೀಟರ್(2,200ಸಿಸಿ) 4 ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ 178-ಬಿಹೆಚ್‍‍ಪಿ ಮತ್ತು 420-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿವೆ. ಇವುಗಳಲ್ಲಿ ಪೆಟ್ರೋಲ್ ವರ್ಷನ್ ಮುಂದಿನ ಒದಗಿಸುವ ಬಗ್ಗೆ ಮಹೀಂದ್ರಾ ಸುಳಿವು ನೀಡಿದೆ.

ಅಲ್ಟುರಾಸ್ ಜಿ4 ಕಾರುಗಳು ಕೇವಲ ಪ್ರೀಮಿಯಂ ಎಸ್‌ಯುವಿ ಮಾದರಿಯಷ್ಟೇ ಅಲ್ಲದೇ ಆಫ್ ರೋಡ್ ವೈಶಿಷ್ಟ್ಯತೆಯನ್ನು ಸಹ ಹೊಂದಿರುವ ಈ ಕಾರುಗಳಲ್ಲಿ ಹಿಂಬದಿ ಚಕ್ರಗಳಿಗೂ ಗೇರ್‌ಬಾಕ್ಸ್ ಶಕ್ತಿ ಪೂರೈಕೆಯ ಸೌಲಭ್ಯವಿದ್ದು, ಇದು ಕಠಿಣ ಪರಿಸ್ಥಿತಿಗಳಲ್ಲೂ ಸರಾಗವಾಗಿ ನುಗ್ಗಬಲ್ಲ ಬಲಿಷ್ಠ ಕಾರು ಮಾದರಿಯಾಗಲಿದೆ.

ಮಹೀಂದ್ರಾ ಆಲ್ಟುರಾಸ್ ಜಿ4 ಕಾರಿಗೆ ಮಾರುಕಟ್ಟೆಯಲ್ಲಿ ಫುಲ್ ಡಿಮ್ಯಾಂಡ್..!

ಸುರಕ್ಷಾ ಸೌಲಭ್ಯಗಳು
ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 9 ಏರ್‍‍ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಅಡ್ವಾನ್ಸ್ಡ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಲೇನ್ ಡಿಪಾರ್ಚುರ್ ವಾರ್ನಿಂಗ್, ಲೇನ್ ಚೇಂಜ್ ಅಸ್ಸಿಸ್ಟ್, ಟ್ರಾಫಿಕ್ ಸೇಫ್ಟಿ ಅಸ್ಸಿಸ್ಟ್, ಐಎಸ್ಒಎಫ್ಐಎಕ್ಸ್ ಚೈಲ್ಡ್-ಸೀಟ್ ಮೌಂಟ್ ಸೀಟ್, ಹಿಲ್ ಕ್ಲೈಮ್ / ಡಿಸೆಂಟ್ ಅಸಿಸ್ಟ್ಸ್ ಮತ್ತು ಹೈ ಬೀಮ್ ಅಸ್ಸಿಸ್ಟ್ ಅನ್ನು ಅಳವಡಿಸಲಾಗಿದೆ.

ಅಲ್ಟುರಾಸ್ ಜಿ4 ಕಾರುಗಳು ಒಟ್ಟು 5 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ನ್ಯೂ ಪರ್ಲ್ ವೈಟ್, ನಪೊಲಿ ಬ್ಯಾಕ್, ಲೆಕ್ ಸೈಡ್ ಬ್ರೌನ್, ಡಸಾಟ್ ಸಿಲ್ವರ್ ಮತ್ತು ರಿಗಾಲ್ ಬ್ಲ್ಯೂ ಬಣ್ಣದಲ್ಲಿ ಖರೀದಿಸಬಹುದು.

ಸದ್ಯ ಮಾರುಕಟ್ಟೆಯಲ್ಲಿ ಅಲ್ಟುರಾಸ್ ಜಿ4 ಕಾರಿಗೆ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳು ತೀವ್ರ ಪೈಪೋಟಿ ನೀಡಲಿದ್ದು, ಎಂಜಿನ್ ಸಾಮರ್ಥ್ಯದಲ್ಲಿ ಫಾರ್ಚೂನರ್ ಮತ್ತು ಎಂಡೀವರ್‌ಗಿಂತ ಕಡಿಮೆ ಸಾಮರ್ಥ್ಯವಿದ್ದರೂ ಸಹ ಅಲ್ಟುರಾಸ್ ಜಿ4 ಕಾರುಗಳು ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಯಲ್ಲಿ ಗಮನಸೆಳೆಯಲಿವೆ.

More from DriveSpark

Article Published On: Sunday, February 17, 2019, 9:30 [IST]
English summary
Mahindra Alturas G4 Has Bagged 1000 Bookings Since Launch. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+