ಭರ್ಜರಿ ಆಫರ್ ಘೋಷಿಸಿದ ಮಹೀಂದ್ರಾ

ಆಟೋಮೊಬೈಲ್ ಕ್ಷೇತ್ರ ಕುಸಿತ ಕಂಡಿರುವ ಹಿನ್ನಲೆಯಲ್ಲಿ ವಾಹನ ಮಾರಾಟದಲ್ಲಿ ಕುಸಿತವಾಗಿತ್ತು. ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಲ್ಲಿ ಹಬ್ಬಗಳ ಪ್ರಯುಕ್ತ ವಿಶೇಷ ರಿಯಾಯಿತಿಯನ್ನು ಘೋಷಿಸಿದ್ದರು, ಇದರಿಂದ ಮಾರಾಟದಲ್ಲಿ ಸ್ವಲ್ಪ ಪ್ರಮಾಣದ ಏರಿಕೆಯನ್ನು ಕಂಡಿತು.

ಭರ್ಜರಿ ಆಫರ್ ಘೋಷಿಸಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಕಾರುಗಳಿಗೆ ಭರ್ಜರಿ ಆಫರ್ ಅನ್ನು ಘೋಷಿಸಿತು. ಈ ಭರ್ಜರಿ ಆಫರ್‍ ಘೋಷಿಸಿದ ಕಾರಣ ಕಾರುಗಳ ಮಾರಾಟದಲ್ಲಿ ಹೆಚ್ಚಳವನ್ನು ಕಂಡಿತು. ಇದೇ ಕಾರಣ ಮಹೀಂದ್ರ ತನ್ನ ಶ್ರೇಣಿಯ ಕಾರುಗಳಿಗೆ ಮತ್ತು ಯು‍‍ವಿಗಳಿಗೆ ಘೋಷಿಸಿದ ಭರ್ಜರಿ ಆಫರ್ ಅನ್ನು ಮುಂದುವರೆಸಿದೆ.

ಭರ್ಜರಿ ಆಫರ್ ಘೋಷಿಸಿದ ಮಹೀಂದ್ರಾ

ಮಹೀಂದ್ರಾ ಅಲ್ತುರಾಸ್ ಜಿ4

ಮಹೀಂದ್ರಾ ಅಲ್ತುರಸ್ ಜಿ4 ಕಾರು ಬೃಹತ್‍ ಆಕಾರದ ಎಸ್‍‍ಯು‍ವಿ ಮತ್ತು 7 ಸೀಟ್‍‍ಗಳನ್ನು ಹೊಂದಿರುವ ಎಸ್‍‍ಯು‍ವಿಯಾಗಿದೆ. ಟೊಯೋಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಮತ್ತ ಇಸು‍‍ಜು ಎಂ‍ಯು ಎಕ್ಸ್, ಎಸ್‍‍ಯು‍ವಿಗಳಿಗೆ ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಅಲ್ತುರಾಸ್ ಜಿ4 ಎಸ್‍‍ಯು‍ವಿ ಪೈಪೋಟಿ ನೀಡಲಿದೆ. ಈ ಎಸ್‍‍ಯು‍ವಿಯು 2.2 ಲೀಟರ್ ಎಂಜಿನ್‍‍ನಿಂದ 181 ಎಚ್‍‍ಪಿಯನ್ನು ಉತ್ಪಾದಿಸುತ್ತದೆ. ಮರ್ಸಿಡಿಸ್ ಮೂಲದ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಮಹೀಂದ್ರಾ ಕಂಪನಿಯ ದುಬಾರಿ ಈ ಎಸ್‍‍ಯು‍ವಿಗೆ ಭರ್ಜರಿಯಾಗಿ ರೂ.1.15 ಲಕ್ಷ ರಿಯಾಯಿತಿಯನ್ನು ಘೋಷಿಸಿದ್ದಾರೆ.

ಭರ್ಜರಿ ಆಫರ್ ಘೋಷಿಸಿದ ಮಹೀಂದ್ರಾ

ಮಹೀಂದ್ರಾ ಮರಾಜೋ

ಮರಾಜೋ ಎಂಪಿವಿ ವಿಭಾಗದಲ್ಲಿ ಮಹೀಂದ್ರಾ ಮರಾಜೋ ಗಾತ್ರ ಮತ್ತು ಬೆಲೆಯ ವಿಷಯದಲ್ಲಿ ಮಾರುತಿ ಸುಜುಕಿ, ಎರ್ಟಿಗಾ ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾ ನಡುವಿನ ಸ್ಥಾನವನ್ನು ಹೊಂದಿದೆ. ಮಹೀಂದ್ರಾ ಮರಾಜೋ 1.5 ಲೀಟರ್ ಡೀಸೆಲ್ ಎಂಜಿನ್ 123 ಬಿ‍ಎಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ ಜೊತೆಗೆ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಹೊಂದಿರಲಿದೆ.

ಭರ್ಜರಿ ಆಫರ್ ಘೋಷಿಸಿದ ಮಹೀಂದ್ರಾ

ಮಹೀಂದ್ರಾ ಕೆಯುವಿ 100

ಮಹೀಂದ್ರಾ ಕೆಯುವಿ 100 ಎಸ್‍‍ಯು‍ವಿ ಮಾದರಿಯ ಹ್ಯಾಚ್‍‍ಬ್ಯಾಕ್ ಆಗಿದೆ. ಈ ಹ್ಯಾಚ್‍ಬ್ಯಾಕ್ ಮಾರುತಿ ಸುಜುಕಿ ಇಗ್ನಿಸ್ ಮತ್ತು ಫೋರ್ಡ್ ಫ್ರೀ ಸ್ಟೈಲ್‍‍ಗೆ ಕಾರುಗಳಿಗೆ ಪೈಪೋಟಿ ನೀಡಲಿದೆ. ಇದು 6 ಸೀಟ್‍‍‍ಗಳನು ಹೊಂದಿದ್ದು, 1.2 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಹೊಂದಿದೆ. ಕೆ‍ಯುವಿ ಹ್ಯಾಚ್‍ಬ್ಯಾಕ್‍‍ಗೆ ರೂ.71,000 ರಿಯಾಯಿತಿಯನ್ನು ಹೊಂದಿದೆ.

ಭರ್ಜರಿ ಆಫರ್ ಘೋಷಿಸಿದ ಮಹೀಂದ್ರಾ

ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಕಂಪನಿಯ ಜನಪ್ರಿಯ ವಾಹನಗಳಲ್ಲಿ ಒಂದಾದ ಸ್ಕಾರ್ಪಿಯೋ ಮುಂದಿನ ವರ್ಷ ನವೀಕರಿಸಿ ಬಿಡುಗಡೆಗೊಳಿಸಲಿದೆ. ಜನಪ್ರಿಯ ಈ ಸ್ಕಾರ್ಪಿಯೋ ಕಾರಿಗೆ ಬರೊಬ್ಬರಿ ರೂ.64,000 ಆಕರ್ಷಕ ರಿಯಾಯಿತಿಯನ್ನು ಹೊಂದಿದೆ. ಈ ಎಸ್‍‍ಯು‍ವಿ 2.2-ಲೀಟರ್ ಡೀಸೆಲ್ ಎಂಜಿನ್ 138-ಬಿಎಚ್‌ಪಿ ಮತ್ತು 120-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ.

ಭರ್ಜರಿ ಆಫರ್ ಘೋಷಿಸಿದ ಮಹೀಂದ್ರಾ

ಮಹೀಂದ್ರಾ ಎಕ್ಸ್‌ಯುವಿ 300

ಈ ಎಸ್‍ಯು‍ವಿಯು ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ ಮತ್ತು ಟಾಟಾ ನೆಕ್ಸಾನ್ ಮುಂತಾದ ಕಾಂಪಾಕ್ಟ್ ಎಸ್‍‍ಯು‍ವಿ ವಿಭಾಗದಲ್ಲಿ ಎಕ್ಸ್‌ಯುವಿ 300 ಹೆಚ್ಚು ಶಕ್ತಿಶಾಲಿ ಮತ್ತು ಉತ್ತಮ ಸುಸಜ್ಜಿತ ವಾಹನಗಳಲ್ಲಿ ಒಂದಾಗಿದೆ. ಇದು ದುಬಾರಿ ವಾಹನಗಳಲ್ಲಿ ಒಂದಾಗಿದೆ. ಎಕ್ಸ್‌ಯುವಿ 300 ನಲ್ಲಿ 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ 115 ಬಿಹೆಚ್‌ಪಿ ಮತ್ತು 300 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ 6 ಸ್ಪೀಡಿನ ಮ್ಯಾನ್ಯುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಭರ್ಜರಿ ಆಫರ್ ಘೋಷಿಸಿದ ಮಹೀಂದ್ರಾ

ಮಹೀಂದ್ರಾ ಬೊಲೆರೋ

ಮಹೀಂದ್ರಾ ಬೊಲೆರೋ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಸ್‍‍ಯು‍‍ವಿಗಳಲ್ಲಿ ಒಂದಾಗಿದೆ. ಬೊಲೆರೋ ವಾಹನದ ಮೇಲೆ ರೂ.50,000 ರಿಯಾಯಿತಿ ನೀಡಲಾಗುತ್ತಿದೆ. ಬೊಲೆರೊ 2.5-ಲೀಟರ್ ಎಂ2ಡಿಸಿಆರ್ ಡೀಸೆಲ್ ಎಂಜಿನ್ ಮಾದರಿಯು 63-ಬಿಎಚ್‌ಪಿ, 195-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇಂದಿಗೂ ಜನಪ್ರಿಯ ಎಸ್‍‍ಯು‍ವಿ ಯಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಭರ್ಜರಿ ಆಫರ್ ಘೋಷಿಸಿದ ಮಹೀಂದ್ರಾ

ಮಹೀಂದ್ರಾ ಥಾರ್

ಥಾರ್ ವಾಹನವು ಭಾರತದಲ್ಲಿ ಅತ್ಯಂತ ಪ್ರಬಲವಾದ ಆಫ್-ರೋಡರ್ ಆಗಿದೆ. ಮಹೀಂದ್ರಾ ಥಾರ್ ಎಸ್‍‍ಯು‍ವಿಯು ಫೋರ್ಸ್ ಗೂರ್ಖಾ ಎಸ್‍‍ಯು‍ವಿಗೆ ಪೈಪೋಟಿ ನೀಡಲಿದೆ. ಮಹೀಂದ್ರಾ ಥಾರ್‍ ಎಸ್‍‍ಯು‍‍ವಿಗೆ ರೂ.45,000 ರಿಯಾಯಿತಿಯನ್ನು ಘೋಷಿಸಿದೆ.

Article Published On: Monday, October 7, 2019, 18:40 [IST]
English summary
Big discounts on Mahindra SUVs this festive season - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+