ಬಿಡುಗಡೆಯ ಸನಿಹದಲ್ಲಿ ಮಹೀಂದ್ರಾ ಕೆಯುವಿ100 ಎಲೆಕ್ಟ್ರಿಕ್
2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಕೆಯುವಿ100 ಎಲೆಕ್ಟ್ರಿಕ್ ಕಾರು ಅತ್ಯುತ್ತಮ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದು, ಈ ಹಿಂದೆ ಮುಂಬೈನಲ್ಲಿ ನಡೆದಿದ್ದ ಮಹೀಂದ್ರಾ ಹೊಸ ಎಂಪಿವಿ ಕಾರಿನ ಅಧಿಕೃತ ಹೆಸರನ್ನು ಬಹಿರಂಗಗೊಳಿಸುವ ಸಂದರ್ಭದಲ್ಲೇ ಕೆಯುವಿ100 ಎಲೆಕ್ಟ್ರಿಕ್ ಕಾರಿನ ಮಾಹಿತಿಯನ್ನ ಸಹ ಹಂಚಿಕೊಂಡಿತ್ತು. ಎಲೆಕ್ಟ್ರಿಕ್ ಕೆಯುವಿ100 ಕಾರುಗಳು ಸಾಮಾನ್ಯ ಕೆಯುವಿ100 ಮಾದರಿಯ ಹೋಲಿಕೆ ಇದ್ದರೂ ಎಂಜಿನ್ ವಿಭಾಗದಲ್ಲಿ ಮಹತ್ವರ ಬದಲವಾಣೆ ಮಾಡುತ್ತಿದೆ.

2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಕೆಯುವಿ100 ಎಲೆಕ್ಟ್ರಿಕ್ ಕಾರು ಅತ್ಯುತ್ತಮ ಮೈಲೇಜ್ ಸಾಮರ್ಥ್ಯವನ್ನು ಹೊಂದಿದ್ದು, ಈ ಹಿಂದೆ ಮುಂಬೈನಲ್ಲಿ ನಡೆದಿದ್ದ ಮಹೀಂದ್ರಾ ಹೊಸ ಎಂಪಿವಿ ಕಾರಿನ ಅಧಿಕೃತ ಹೆಸರನ್ನು ಬಹಿರಂಗಗೊಳಿಸುವ ಸಂದರ್ಭದಲ್ಲೇ ಕೆಯುವಿ100 ಎಲೆಕ್ಟ್ರಿಕ್ ಕಾರಿನ ಮಾಹಿತಿಯನ್ನ ಸಹ ಹಂಚಿಕೊಂಡಿತ್ತು. ಎಲೆಕ್ಟ್ರಿಕ್ ಕೆಯುವಿ100 ಕಾರುಗಳು ಸಾಮಾನ್ಯ ಕೆಯುವಿ100 ಮಾದರಿಯ ಹೋಲಿಕೆ ಇದ್ದರೂ ಎಂಜಿನ್ ವಿಭಾಗದಲ್ಲಿ ಮಹತ್ವರ ಬದಲಾವಣೆ ಮಾಡುತ್ತಿದೆ.

ಈ ಮೂಲಕ ಮಧ್ಯಮ ಗಾತ್ರದ ಮೈಕ್ರೊ ಎಸ್‌ಯುವಿ ಆಯ್ಕೆ ಮಾಡುವ ಗ್ರಾಹಕರಿಗೆ ಉತ್ತಮ ಆಯ್ಕೆಯನ್ನು ನೀಡುತ್ತಿರುವ ಮಹೀಂದ್ರಾ ಸಂಸ್ಥೆಯು ಹೊಸ ಎಲೆಕ್ಟ್ರಿಕ್ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದು, ಹೊಸ ಕಾರು ಲೀಥಿಯಂ ಅಯಾನ್ 16 kWh ಬ್ಯಾಟರಿ ಸೌಲಭ್ಯವನ್ನು ಪಡೆದುಕೊಂಡಿರಲಿದೆಯೆಂತೆ.

ಸದ್ಯ ಮಹೀಂದ್ರಾ ಸಂಸ್ಥೆಯು ಹೊಸ ನಿಯಮಗಳಿಗೆ ಅನುಗುಣವಾಗಿ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷತೆ ನೀಡುವ ಉದ್ದೇಶದಿಂದ ಈ ಹಿಂದಿನ ಇ2ಓ ಪ್ಲಸ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿ ಹೊಸ ಉತ್ಪನ್ನಗಳ ಮೇಲೆ ಗಮನಹರಿಸುತ್ತಿದೆ.

ಅಕ್ಟೋಬರ್ 1ರಿಂದ ಪ್ರತಿಯೊಂದು ವಾಹನ ಉತ್ಪಾದನಾ ಸಂಸ್ಥೆಗಳು ತಮ್ಮ ಹೊಸ ವಾಹನಗಳಲ್ಲಿ ಗರಿಷ್ಠ ಮಟ್ಟದ ಸುರಕ್ಷತೆಯನ್ನು ನೀಡಬೇಕಿದ್ದು, ಹೊಸ ನಿಯಮವನ್ನು ಪಾಲಿಸಲು ಸಾಧ್ಯವಾಗದ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಮಹೀಂದ್ರಾ ಕೂಡಾ ಹೊಸ ನಿಯಮ ಪಾಲಿಸಲು ಸಾಧ್ಯವಾಗದ ಇ2ಒ ಪ್ಲಸ್ ಕಾರನ್ನು ಉತ್ಪಾದನೆಯಿಂದ ಕೈಬಿಟ್ಟಿದ್ದು, ಹೊಸ ನಿಯಮಗಳಿಗೆ ಅನುಗುಣವಾಗಿ ಕೆಯುವಿ 100 ಎಲೆಕ್ಟ್ರಿಕ್ ಸೇರಿದಂತೆ ಇನ್ನು ಹಲವು ಕಾರುಗಳನ್ನು ಬಿಡುಗಡೆ ಮಾಡಲಿದೆ.

ಸದ್ಯಕ್ಕೆ ಇ-ವೆರಿಟೊ ಸೆಡಾನ್ ಕಾರನ್ನು ಮಾತ್ರವೇ ಮಾರಾಟ ಮಾಡುತ್ತಿರುವ ಮಹೀಂದ್ರಾ ಸಂಸ್ಥೆಯು ಮುಂಬರುವ ಸೆಪ್ಟೆಂಬರ್ ಅಥವಾ ನವೆಂಬರ್ ಹೊತ್ತಿಗೆ ಕೆಯುವಿ100 ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಿದ್ದವಾಗುತ್ತಿದ್ದು, 40ಕೆವಿ ಮೋಟಾರ್ ಮೂಲಕ 120-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲ ವೈಶಿಷ್ಟ್ಯತೆಯನ್ನು ಅಳವಡಿಸುತ್ತಿದೆ.

ಇದರಿಂದ ಕೆಯುವಿ100 ಎಲೆಕ್ಟ್ರಿಕ್ ಹೊಸ ಕಾರು ಪ್ರತಿ ಚಾರ್ಜ್‌ಗೆ 120 ಕಿ.ಮಿ ಮೈಲೇಜ್ ನೀಡುವ ಗುಣಲಕ್ಷಣಗಳನ್ನು ಹೊಂದಿದ್ದು, ಸಾಮಾನ್ಯ ಕಾರಿನ ಮಾದರಿಯಲ್ಲೇ ವೇಗ ಮತ್ತು ಎಂಜಿನ್ ಕಾರ್ಯಕ್ಷಮತೆ ಒದಗಿಸಲು ಇದು ಸಹಕಾರಿಯಾಗಿದೆ. ಜೊತೆಗೆ ಇ-ವೆರಿಟೊ ಕಾರಿಗಿಂತಲೂ ಉತ್ತಮ ಫೀಚರ್ಸ್‌ಗಳನ್ನು ಹೊಂದರಲಿದ್ದು, ಡಿಸಿ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಮಾರುತಿ ಸುಜುಕಿ ಸಂಸ್ಥೆಯ ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿಗೆ ಇದು ಪೈಪೋಟಿಯಾಗಲಿದೆ.
ಇನ್ನು ಕಾರಿನ ಒಳವಿನ್ಯಾಸದ ಕುರಿತಾಗಿ ಹೇಳುವುದಾದರೇ ಹೊಸ ಕಾರು ಸಾಮಾನ್ಯ ಕಾರಿನ ಮಾದರಿಯಲ್ಲೇ ಆಸನ ಸೌಲಭ್ಯವನ್ನು ಹೊಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣಗಾಗಿ ಗುಣಮಟ್ಟದ ಸುರಕ್ಷಾ ಸೌಲಭ್ಯಗಳು ಮತ್ತು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರಲಿದೆ.

ಬಿಡುಗಡೆ ಮತ್ತು ಬೆಲೆ(ಅಂದಾಜು)
ಮಹೀಂದ್ರಾ ಸಂಸ್ಥೆಯು ಹೊಸ ಕೆಯುವಿ100 ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮುಂಬರುವ ಸೆಪ್ಟೆಂಬರ್ ಅಥವಾ ಅಕ್ಟೊಬರ್ ಹೊತ್ತಿಗೆ ಬಿಡುಗಡೆ ಮಾಡುವ ನೀರಿಕ್ಷೆಗಳಿದ್ದು, ಹೊಸ ಕಾರಿನ ಬೆಲೆಯು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಆರಂಭಿಕವಾಗಿ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.11 ಲಕ್ಷ ಬೆಲೆ ಹೊಂದಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications