ಬಿಡುಗಡೆಯಾದ 8 ಸೀಟರ್ ಮಹೀಂದ್ರಾ ಮರಾಜೊ ಕಾರು. ಬೆಲೆ ಎಷ್ಟು.?
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಈ ಹಿಂದೆಯೆ ತಮ್ಮ 7 ಸೀಟರ್ ಮರಾಜೊ ಕಾರನ್ನು ಬಿಡುಗಡೆ ಮಾಡಲಾಗಿದ್ದು, ಇದೀಗ ಮರಾಜೊ ಕಾರಿನ ಟಾಪ್ ಸ್ಪೆಕ್ ವೇರಿಯಂಟ್‍ನಲ್ಲಿ 8 ಆಸನಗಳುಳ್ಳ ಕಾರಿನ ಮಾದರಿಯನ್ನು ಬಿಡುಗಡೆಗೊಳಿಸಿದೆ.

ಮಹೀಂದ್ರಾ ಮರಾಜೊ ಕಾರಿನ ಟಾಪ್ ಸ್ಪೆಕ್ ವೇರಿಯಂಟ್ ಆದ ಎಂ8 ವೇರಿಯಂಟ್‍ನಲ್ಲಿ ಮಾತ್ರ 8 ಸೀಟರ್ ಸಂರಚನೆಯು ದೊರೆಯಲಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.13.98 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಈ ಮೂಲವಾಗಿ 8 ಆಸನವುಳ್ಳ ಮರಾಜೊ ಕಾರು ಹೆಚ್ಚು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಈ ಕುರಿತಾದ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ...

8 ಆಸಗಳುಳ್ಳ ಟಾಪ್ ಸ್ಪೆಕ್ ವೇರಿಯಂಟ್ ಮಹೀಂದ್ರಾ ಮರಾಜೊ ಕಾರಿನಲ್ಲಿ ಎಲ್ಇಡಿ ಡಿಆರ್‍ಎಲ್, 17 ಇಂಚಿನ ಅಲಾಯ್ ಚಕ್ರಗಳು, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್/ಕ್ಯಾಮೆರಾ, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸಹಕರಿಸುವ 7.0 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, ಎಲೆಕ್ಟ್ರಾನಿಕ್ ಒಅರ್‍ವಿಎಂ, ಕ್ರೂಸ್ ಕಂಟ್ರೋಲ್, ಲೆಧರ್‍ನಿಂದ ಸಜ್ಜುಗೊಳಿಸಿದ ಸೀಟ್‍ಗಳು, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಇನ್ನತರೆ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

'ಮರಾಜೊ' ಅಂದ್ರೆ ಸ್ಪಾನಿಷ್ ಭಾಷೆಯಲ್ಲಿ ತಿಮಿಂಗಿಲ ಎಂದರ್ಥ. ಇದೇ ಆಕಾರವನ್ನು ಹೊಂದಿರುವ ಈ ಕಾರು ಸಹ ಸದ್ದುಗದ್ದಲವಿಲ್ಲದೇ ಸರಾಗವಾಗಿ ನುಗ್ಗಬಲ್ಲ ಗುಣಹೊಂದಿದ್ದು, ಎಂಟ್ರಿ ಲೆವಲ್ ಎಂಪಿವಿ ಮಾರುತಿ ಸುಜುಕಿ ಎರ್ಟಿಗಾ ಹಾಗೂ ದುಬಾರಿ ಬೆಲೆಯ ಇನೋವಾ ಕ್ರಿಸ್ಟಾ ಕಾರುಗಳ ನಡುವಿನ ಅಂತರವನ್ನು ತುಂಬಲು ಈ ಹೊಸ ಉತ್ಪನ್ನವನ್ನು ಸಿದ್ದಗೊಳಿಸಲಾಗಿದೆ.

ಸದ್ಯ ಹೊಸ ಮರಾಜೊ ಕಾರುಗಳಿಗಾಗಿ ದಾಖಲಾಗುತ್ತಿರುವ ಬುಕ್ಕಿಂಗ್‌ಗಳಲ್ಲಿ ಶೇ.80ಕ್ಕೂ ಹೆಚ್ಚು ಗ್ರಾಹಕರು ಟಾಪ್ ಎಂಡ್ ಮಾದರಿಯಾದ ಎಂ8 ವೆರಿಯೆಂಟ್‌ಗಳಿಗೆ ಹೆಚ್ಚು ಬೇಡಿಕೆ ಸಲ್ಲಿಸುತ್ತಿದ್ದು, ಪ್ರೀಮಿಯಂ ವೈಶಿಷ್ಟ್ಯತೆಗಳಿಂದಾಗಿ ಗ್ರಾಹಕರು ಮರಾಜೊ ಖರೀದಿಗೆ ಒಲವು ತೋರುತ್ತಿದ್ದಾರೆ.

ಮರಾಜೊ ಕಾರುಗಳು ಗುಣಮಟ್ಟದಲ್ಲಿ ಇತರೆ ಎಂಪಿವಿ ಕಾರುಗಳಿಂತಲೂ ಭಿನ್ನವಾಗಿದ್ದು, ಶಾರ್ಕ್ ಡಿಸೈನ್ ಡಿಸೈನ್ ಪ್ರೇರಿತ ಈ ಕಾರಿನ ಮುಂಭಾಗದ ಗ್ರಿಲ್ ಕೂಡಾ ಶಾರ್ಕ್ ಹಲ್ಲುಗಳ ಆಕಾರವನ್ನೇ ಹೊಂದಿರುವುದನ್ನು ನೀವು ಗಮನಿಸಬಹುದು.

ಕಾರಿನ ಒಳಾಂಗಣ ವಿನ್ಯಾಸ
ಮಹೀಂದ್ರಾ ಮರಾಜೊ ಕಾರುಗಳಲ್ಲಿ ಡ್ಯುಯಲ್ ಟೋನ್ ಥೀಮ್ ಇಂಟಿರಿಯರ್ ಮತ್ತು ಕ್ಲಟರ್ ಫ್ರಿ ಡ್ಯಾಶ್‌ಬೋರ್ಡ್ ನೀಡಲಾಗಿದ್ದು, 7-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಟಾಪ್ ರೂಫ್‌ನಲ್ಲಿ ಸರೌಂಡ್ ಎಸಿ ವೆಂಟ್ಸ್, ಡ್ಯುಯಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಾಯ್ಸ್ ಕಮಾಂಡ್ ಮತ್ತು ಏರ್‌ಕ್ರಾಫ್ಟ್ ಸ್ಟೈಲ್ ಹ್ಯಾಂಡಲ್‌ಬ್ರೇಕ್ ವಿನ್ಯಾಸ ಪಡೆದುಕೊಂಡಿದೆ. ಇದೀಗ ಹೆಚ್ಚುವರಿಯಾಗಿ ಆ್ಯಪಲ್ ಕಾರ್ ಪ್ಲೇ ಸೇರಿದಂತೆ ಪ್ರಮುಖ ಬದಲಾವಣೆ ಮುಂದಾಗಿದೆ.

ಇದಲ್ಲದೇ ಕೆಲವು ಸುಧಾರಿತ ಸೌಲಭ್ಯಗಳು ಆಯ್ಕೆ ರೂಪದಲ್ಲಿದ್ದು, ಇವುಗಳಲ್ಲಿ ವೀಲ್ಹ್ ಮೌಟೆಂಡ್ ಆಡಿಯೋ ಕಂಟ್ರೋಲರ್, ತುರ್ತುನಿರ್ವಹಣಾ ಕರೆ ಸೌಲಭ್ಯ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್ ಮತ್ತುಕ್ರೂಸ್ ಕಂಟ್ರೋಲ್ ಆಯ್ಕೆಯಾಗಿ ಪಡೆಯಬಹುದುದಾಗಿದೆ.

ಎಂಜಿನ್ ಸಾಮರ್ಥ್ಯ
ಮಹೀಂದ್ರಾ ಮರಾಜೊ ಕಾರುಗಳು 1.5-ಲೀಟರ್(1500 ಸಿಸಿ) ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 120-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಹೊಸ ಮರಾಜೊ ಕಾರು 7- ಸೀಟರ್ ಮತ್ತು 8-ಸೀಟರ್ ಮಾದರಿಗಳು ಖರೀದಿಸಬಹುದಾಗಿದ್ದು, ಸದ್ಯದಲ್ಲೇ ಎಎಂಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ವರ್ಷನ್‌ಗಳು ಬಿಡುಗಡೆಯಾಗುವ ಬಗ್ಗೆ ಮಹೀಂದ್ರಾ ಸುಳಿವು ನೀಡಿದೆ.

ಕಾರಿನ ಮೇಲೆ ಗರಿಷ್ಠ ವಾರಂಟಿ
ಹೊಸ ಕಾರಿನ ಮೇಲೆ 3 ವರ್ಷ ಅಥವಾ 1 ಲಕ್ಷ ಕಿ.ಮೀ ವರೆಗೆ ವಾರಂಟಿ ದೊರೆಯಲಿದ್ದು, ಹೊಸ ಕಾರುಗಳು ಪ್ರತಿ ಲೀಟರ್ ಡೀಸೆಲ್‌ಗೆ 17.6 ಕಿ.ಮೀ ಮೈಲೇಜ್ ನೀಡುವ ಮೂಲಕ ಅತಿ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರಲಿವೆ.

ಇಷ್ಟೆ ಅಲ್ಲದೇ ಮಹೀಂದ್ರಾ ಸಂಸ್ಥೆಯು ಹೊಸ ವರ್ಷದ ಅಂಗವಾಗಿ ತಮ್ಮ ವಾಹನಗಳಾ ಮೇಲೆ ರಿಯಾಯಿತಿ ಮತ್ತು ಎಕ್ಸ್ಚೇಂಜ್ ಆಫರ್ಸ್ ಹಾಗು ರೂ.47,000 ವರೆಗಿನ ಕಾರ್ಪರೇಟ್ ಡಿಸ್ಕೌಂಟ್ ಅನ್ನು ಸಹ ನೀಡಲಾಗುತ್ತಿದೆ.

ಈ ಮೂಲಕ ಟೊಯೊಟಾ ಇನೋವಾ ಕ್ರಿಸ್ಟಾ, ಮಾರುತಿ ಸುಜುಕಿ ಎರ್ಟಿಗಾ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ಮರಾಜೊ ಕಾರುಗಳು ಸ್ವಂತ ಬಳಕೆ ಹಾಗೂ ಟೂರಿಸ್ಟ್ ವಿಭಾಗದಲ್ಲಿ ಭಾರೀ ಬೇಡಿಕೆ ಹುಟ್ಟುಹಾಕಿವೆ ಎನ್ನಬಹುದು.


Click it and Unblock the Notifications








