ತಿಂಗಳಿಂದ ತಿಂಗಳಿಗೆ ಕುಸಿಯುತ್ತಿದೆ ಮಹೀಂದ್ರಾ ಮರಾಜೋ ಕಾರಿನ ಮಾರಾಟ.!

ಮಹೀಂದ್ರಾ & ಮಹೀಂದ್ರಾ ಸಂಸ್ಥೆಯು ಸೆಪ್ಟೆಂಬರ್ 2018ರಂದು ತಮ್ಮ ಬಹುನಿರೀಕ್ಷಿತ ಮರಾಜೊ ಎಂಪಿವಿ ಕಾರನ್ನು ದೇಶಿಯ ಮಾರಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಸಧ್ಯ ಮಾರುಕಟ್ಟೆಯಲ್ಲಿ ಈ ಕಾರು ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ಪೈಪೋಟಿ ನೀಡುತ್ತಿದೆ. ಆದ್ರೆ ಎರ್ಟಿಗಾ ಕಾರಿಗಿಂತಲೂ ಹೆಚ್ಚಿನ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಕಾರು ತಿಂಗಳಿಂದ ತಿಂಗಳಿಗೆ ಕಡಿಮೆ ಅಂಕಿಯಲ್ಲಿ ಮಾರಾಟವಾಗುತ್ತಿದೆ ಎಂದು ಮಾಹಿತಿ ಹೊರಬಂದಿದೆ.

ತಿಂಗಳಿಂದ ತಿಂಗಳಿಗೆ ಕುಸಿಯುತ್ತಿದೆ ಮಹೀಂದ್ರಾ ಮರಾಜೋ ಕಾರಿನ ಮಾರಾಟ.!

ಬಿಡುಗಡೆಗೊಂಡ ಮೊದಲನೆಯ ತಿಂಗಳಿನಲ್ಲಿ ಅಂದರೇ ಸೆಪ್ಟೆಂಬರ್‍‍ನಲ್ಲಿ ಸುಮಾರು 3000 ಯೂನಿಟ್ ಮಾರಾಟಗೊಂಡ ಮಹೀಂದ್ರಾ ಮರಾಜೊ ಕಾರುಗಳು, ಕಳೆದ ಮೂರು ತಿಂಗಳಿನಿಂದ ಕಡಿಮೆ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಹೌದು, ಮಾರ್ಚ್ 2018ರಲ್ಲಿ 1381 ಯೂನಿಟ್ ಮಾರಾಟಗೊಂಡರೇ ಇನ್ನು ಏಪ್ರಿಲ್ ತಿಂಗಳಿನಲ್ಲಿ 1692 ಯೂನಿಟ್ ಮಾರಾಟಗೊಂಡಿದೆ. ಮತ್ತು ಇನ್ನು ಕಳೆದ ತಿಂಗಳದ ಮೇನಲ್ಲಿ 1381 ಯೂನಿಟ್ ಮಾತ್ರ ಮಾರಟಗೊಂಡಿದೆ ಎಂದು ಆಟೋ ಪಂಡಿತ್ಸ್ ಅಂಕಿ ಅಂಶಗಳು ಹೇಳುತ್ತಿದೆ.

ತಿಂಗಳಿಂದ ತಿಂಗಳಿಗೆ ಕುಸಿಯುತ್ತಿದೆ ಮಹೀಂದ್ರಾ ಮರಾಜೋ ಕಾರಿನ ಮಾರಾಟ.!

ಈ ಕಾರಿನ ಬಗ್ಗೆ ಹೇಳುವುದಾದರೆ ಇನ್ನು ಮರಾಜೊ' ಅಂದ್ರೆ ಸ್ಪಾನಿಷ್ ಭಾಷೆಯಲ್ಲಿ ತಿಮಿಂಗಿಲ ಎಂದರ್ಥ. ಇದೇ ಆಕಾರವನ್ನು ಹೊಂದಿರುವ ಈ ಕಾರು ಸಹ ಸದ್ದುಗದ್ದಲವಿಲ್ಲದೇ ಸರಾಗವಾಗಿ ನುಗ್ಗಬಲ್ಲ ಗುಣಹೊಂದಿದ್ದು, ಎಂಟ್ರಿ ಲೆವಲ್ ಎಂಪಿವಿ ಮಾರುತಿ ಸುಜುಕಿ ಎರ್ಟಿಗಾ ಹಾಗೂ ದುಬಾರಿ ಬೆಲೆಯ ಇನೋವಾ ಕ್ರಿಸ್ಟಾ ಕಾರುಗಳ ನಡುವಿನ ಅಂತರವನ್ನು ತುಂಬಲು ಈ ಹೊಸ ಉತ್ಪನ್ನವನ್ನು ಸಿದ್ದಗೊಳಿಸಲಾಗಿದೆ.

ತಿಂಗಳಿಂದ ತಿಂಗಳಿಗೆ ಕುಸಿಯುತ್ತಿದೆ ಮಹೀಂದ್ರಾ ಮರಾಜೋ ಕಾರಿನ ಮಾರಾಟ.!

ಮರಾಜೊ ಕಾರುಗಳು ಗುಣಮಟ್ಟದಲ್ಲಿ ಇತರೆ ಎಂಪಿವಿ ಕಾರುಗಳಿಂತಲೂ ಭಿನ್ನವಾಗಿದ್ದು, ಶಾರ್ಕ್ ಡಿಸೈನ್ ಡಿಸೈನ್ ಪ್ರೇರಿತ ಈ ಕಾರಿನ ಮುಂಭಾಗದ ಗ್ರಿಲ್ ಕೂಡಾ ಶಾರ್ಕ್ ಹಲ್ಲುಗಳ ಆಕಾರವನ್ನೇ ಹೊಂದಿರುವುದನ್ನು ನೀವು ಗಮನಿಸಬಹುದು.

ತಿಂಗಳಿಂದ ತಿಂಗಳಿಗೆ ಕುಸಿಯುತ್ತಿದೆ ಮಹೀಂದ್ರಾ ಮರಾಜೋ ಕಾರಿನ ಮಾರಾಟ.!

ಜೊತೆಗೆ ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್ಸ್, ಆಕರ್ಷಕ ಬಂಪರ್, 17-ಇಂಚಿನ ಅಲಾಯ್ ಚಕ್ರಗಳು, ಒಆರ್‌ವಿಎಂಗಳಲ್ಲಿ ಟರ್ನ್ ಇಂಡಿಕೇಟರ್ ಮತ್ತು ಕಾರಿನ ಹಿಂಭಾಗದ ಪ್ರೋಫೈಲ್‌ನಲ್ಲಿ ಶಾರ್ಕ್ ಎಲ್‌ಇಡಿ ಟೈಲ್ ಲೈಟ್ಸ್ , ಹೈ ಸ್ಟಾಪ್ ಲ್ಯಾಂಪ್ ಸೇರಿದಂತೆ ಸ್ಪೋರ್ಟಿ ರಿಯರ್ ಬಂಪರ್ ಪಡೆದಿದೆ.

ತಿಂಗಳಿಂದ ತಿಂಗಳಿಗೆ ಕುಸಿಯುತ್ತಿದೆ ಮಹೀಂದ್ರಾ ಮರಾಜೋ ಕಾರಿನ ಮಾರಾಟ.!

ಕಾರಿನ ಒಳಾಂಗಣ

ವಿನ್ಯಾಸ ಮಹೀಂದ್ರಾ ಮರಾಜೊ ಕಾರುಗಳಲ್ಲಿ ಡ್ಯುಯಲ್ ಟೋನ್ ಥೀಮ್ ಇಂಟಿರಿಯರ್ ಮತ್ತು ಕ್ಲಟರ್ ಫ್ರಿ ಡ್ಯಾಶ್‌ಬೋರ್ಡ್ ನೀಡಲಾಗಿದ್ದು, 7-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಟಾಪ್ ರೂಫ್‌ನಲ್ಲಿ ಸರೌಂಡ್‌ ಎಸಿ ವೆಂಟ್ಸ್, ಡ್ಯುಯಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಾಯ್ಸ್‌ ಕಮಾಂಡ್‌ ಮತ್ತು ಏರ್‌ಕ್ರಾಫ್ಟ್ ಸ್ಟೈಲ್ ಹ್ಯಾಂಡಲ್‌ಬ್ರೇಕ್ ವಿನ್ಯಾಸ ಪಡೆದುಕೊಂಡಿದೆ. ಇದೀಗ ಹೆಚ್ಚುವರಿಯಾಗಿ ಆ್ಯಪಲ್ ಕಾರ್ ಪ್ಲೇ ಸೇರಿದಂತೆ ಪ್ರಮುಖ ಬದಲಾವಣೆ ಮುಂದಾಗಿದೆ.

ತಿಂಗಳಿಂದ ತಿಂಗಳಿಗೆ ಕುಸಿಯುತ್ತಿದೆ ಮಹೀಂದ್ರಾ ಮರಾಜೋ ಕಾರಿನ ಮಾರಾಟ.!

ಇದಲ್ಲದೇ ಕೆಲವು ಸುಧಾರಿತ ಸೌಲಭ್ಯಗಳು ಆಯ್ಕೆ ರೂಪದಲ್ಲಿದ್ದು, ಇವುಗಳಲ್ಲಿ ವೀಲ್ಹ್ ಮೌಟೆಂಡ್ ಆಡಿಯೋ ಕಂಟ್ರೋಲರ್, ತುರ್ತುನಿರ್ವಹಣಾ ಕರೆ ಸೌಲಭ್ಯ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಕ್ರೂಸ್ ಕಂಟ್ರೋಲ್ ಆಯ್ಕೆಯಾಗಿ ಪಡೆಯಬಹುದುದಾಗಿದೆ.

ತಿಂಗಳಿಂದ ತಿಂಗಳಿಗೆ ಕುಸಿಯುತ್ತಿದೆ ಮಹೀಂದ್ರಾ ಮರಾಜೋ ಕಾರಿನ ಮಾರಾಟ.!

ಎಂಜಿನ್ ಸಾಮರ್ಥ್ಯ

ಮಹೀಂದ್ರಾ ಮರಾಜೊ ಕಾರುಗಳು 1.5-ಲೀಟರ್(1500 ಸಿಸಿ) ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 120-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಹೊಸ ಮರಾಜೊ ಕಾರು 7- ಸೀಟರ್ ಮತ್ತು 8-ಸೀಟರ್ ಮಾದರಿಗಳು ಖರೀದಿಸಬಹುದಾಗಿದ್ದು, ಸದ್ಯದಲ್ಲೇ ಎಎಂಟಿ(ಆಟೋಮ್ಯಾಟಿಕ್ ಗೇರ್‌ಬಾಕ್ಸ್) ವರ್ಷನ್‌ಗಳು ಬಿಡುಗಡೆಯಾಗುವ ಬಗ್ಗೆ ಮಹೀಂದ್ರಾ ಸುಳಿವು ನೀಡಿದೆ.

ತಿಂಗಳಿಂದ ತಿಂಗಳಿಗೆ ಕುಸಿಯುತ್ತಿದೆ ಮಹೀಂದ್ರಾ ಮರಾಜೋ ಕಾರಿನ ಮಾರಾಟ.!

ಕಾರಿನ ಮೇಲೆ ಗರಿಷ್ಠ ವಾರಂಟಿ

ಹೊಸ ಕಾರಿನ ಮೇಲೆ 3 ವರ್ಷ ಅಥವಾ 1 ಲಕ್ಷ ಕಿ.ಮೀ ವರೆಗೆ ವಾರಂಟಿ ದೊರೆಯಲಿದ್ದು, ಹೊಸ ಕಾರುಗಳು ಪ್ರತಿ ಲೀಟರ್ ಡೀಸೆಲ್‌ಗೆ 17.6 ಕಿ.ಮೀ ಮೈಲೇಜ್ ನೀಡುವ ಮೂಲಕ ಅತಿ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರಲಿವೆ.

ತಿಂಗಳಿಂದ ತಿಂಗಳಿಗೆ ಕುಸಿಯುತ್ತಿದೆ ಮಹೀಂದ್ರಾ ಮರಾಜೋ ಕಾರಿನ ಮಾರಾಟ.!

ಸುರಕ್ಷಾ ಸೌಲಭ್ಯಗಳು

ಹೊಸ ಮರಾಜೊ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಪ್ರತಿ ಚಕ್ರಕ್ಕೂ ಡಿಸ್ಕ್‌ಬ್ರೇಕ್, ISOFIX ಚೈಲ್ಡ್ ಮೌಂಟ್ಸ್ ಸೀಟಿನ ಸೌಲಭ್ಯದೊಂದಿಗೆ ಎಂ6 ಹಾಗೂ ಎಂ8 ವೆರಿಯೆಂಟ್‌ಗಳಲ್ಲಿ ಹೆಚ್ಚುವರಿಯಾಗಿ ರಿಯರ್ ಪಾರ್ಕಿಂಗ್ ಸೆನ್ಸಾರ್, ಕಾರ್ನರಿಂಗ್ ಲ್ಯಾಂಪ್ಸ್ ಸೌಲಭ್ಯವನ್ನು ಇರಿಸಲಾಗಿದೆ.

More from DriveSpark

Article Published On: Saturday, June 8, 2019, 13:06 [IST]
English summary
Mahindra Marazzo MPV Sales Decline In May 2019. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+