ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ಮಹೀಂದ್ರಾ ಮಾರ್ಕ್ಸ್‌ಮನ್ ಬುಲೆಟ್ ಪ್ರೂಫ್

ಭಾರತೀಯ ಸೇನೆಯು ಹಿಂದೆಂದಿಗಿಂತಲೂ ಶಕ್ತಿಶಾಲಿಯಾಗುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ವಾಹನಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಭಾರತೀಯ ಸೇನೆಯು ಹಲವು ಹೊಸ ವಾಹನಗಳನ್ನು ಖರೀದಿಸುತ್ತಿದೆ. ಈಗಾಗಲೇ ಹಲವು ಬುಲೆಟ್ ಪ್ರೂಫ್ ವಾಹನಗಳನ್ನು ಹೊಂದಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ಮಹೀಂದ್ರಾ ಮಾರ್ಕ್ಸ್‌ಮನ್ ಬುಲೆಟ್ ಪ್ರೂಫ್

ಮಹೀಂದ್ರಾ ಕಂಪನಿಯು ಸಹ ಭಾರತೀಯ ಸೇನೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಮಹೀಂದ್ರಾ ಮಾರ್ಕ್ಸ್‌ಮನ್ ಭಾರತದಲ್ಲಿ ತಯಾರಾದ ಮೊದಲ ಬುಲೆಟ್ ಪ್ರೂಫ್ ವಾಹನವಾಗಿದ್ದು, ರಕ್ಷಣಾ ಸಿಬ್ಬಂದಿ, ಪ್ಯಾರಾ ಮಿಲಿಟರಿ ಸಿಬ್ಬಂದಿ ಹಾಗೂ ಪೊಲೀಸ್ ಪಡೆಗಳಿಗೆ ರಕ್ಷಣೆ ನೀಡುತ್ತದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ಮಹೀಂದ್ರಾ ಮಾರ್ಕ್ಸ್‌ಮನ್ ಬುಲೆಟ್ ಪ್ರೂಫ್

ರಕ್ಷಣಾ ಕಾರ್ಯಗಳಿಗಾಗಿ ಬಳಸಲಾಗುವ ಈ ಮಾರ್ಕ್ಸ್‌ಮನ್ ಬುಲೆಟ್ ಪ್ರೂಫ್ ವಾಹನವನ್ನು ಮಹೀಂದ್ರಾ ಕಂಪನಿಯು ಅಭಿವೃದ್ಧಿಪಡಿಸುತ್ತಿದೆ. ಅಭಿವೃದ್ಧಿಪಡಿಸಲಾಗಿರುವ ಈ ವಾಹನವನ್ನು ಚೆನ್ನೈನಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ಮಹೀಂದ್ರಾ ಮಾರ್ಕ್ಸ್‌ಮನ್ ಬುಲೆಟ್ ಪ್ರೂಫ್

ಈ ವಾಹನವನ್ನು ಭಾರತೀಯ ಸೇನೆಯು ಉಗ್ರ ಹಾಗೂ ನಕ್ಸಲ್‍‍ಗಳ ವಿರುದ್ಧದ ಕಾರ್ಯಾಚರಣೆಗೆ ಬಳಸುತ್ತದೆ. ಮಹೀಂದ್ರಾ ಮಾರ್ಕ್ಸ್‌ಮನ್ ಎಂದು ಕರೆಯಲ್ಪಡುವ ಈ ಬುಲೆಟ್ ಪ್ರೂಫ್ ಎಸ್‌ಯುವಿಯನ್ನು ಮುಂಬೈ ಮತ್ತು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿರುವ ಹೈಸ್ಪೀಡ್ ಸೈನಿಕರು ಬಳಸುತ್ತಾರೆ.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ಮಹೀಂದ್ರಾ ಮಾರ್ಕ್ಸ್‌ಮನ್ ಬುಲೆಟ್ ಪ್ರೂಫ್

ಮಹೀಂದ್ರಾ ಕಂಪನಿಯು ಸುಧಾರಿತ ಫೀಚರ್‍‍ಗಳೊಂದಿಗೆ ಹೊಸ ಮಾರ್ಕ್ಸ್‌ಮನ್ ವಾಹನವನ್ನು ಅಭಿವೃದ್ಧಿಪಡಿಸಿದೆ. ಮಾರ್ಕ್ಸ್‌ಮನ್ ವಾಹನವನ್ನು ಹೆಚ್ಚಿನ ಮೆಕಾನಿಕಲ್ ಅಂಶಗಳೊಂದಿಗೆ ನವೀಕರಿಸಲಾಗಿದೆ. ಮಾರ್ಕ್ಸ್‌ಮನ್ ಈಗ ಮೊದಲಿಗಿಂತ ಹೆಚ್ಚಿನ ಸ್ಪೇಸ್ ಹೊಂದಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ಮಹೀಂದ್ರಾ ಮಾರ್ಕ್ಸ್‌ಮನ್ ಬುಲೆಟ್ ಪ್ರೂಫ್

ಚೆನ್ನೈನಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿದ್ದ ಈ ವಾಹನವನ್ನು ಡ್ರೈವ್‌ಸ್ಪಾರ್ಕ್ ತಮಿಳು ಪತ್ರಿಕೆಯ ಓದುಗ ಹಾಗೂ ಛಾಯಾಗ್ರಾಹಕ ಜಯಸೂರ್ಯ ಅವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ವಾಹನದಲ್ಲಿ ಹಳೆಯ ವಾಹನದಲ್ಲಿದ್ದ 2.5 ಲೀಟರಿನ ಸಿ‍ಆರ್‍‍ಟಿ‍ಇ ಡೀಸೆಲ್ ಎಂಜಿನ್ ಬದಲಿಗೆ ಹೊಸ ಬಿ‍ಎಸ್ 6 ಡೀಸೆಲ್ ಎಂಜಿನ್ ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ಮಹೀಂದ್ರಾ ಮಾರ್ಕ್ಸ್‌ಮನ್ ಬುಲೆಟ್ ಪ್ರೂಫ್

ಈ ವಾಹನದಲ್ಲಿ ಅಳವಡಿಸಲಾಗಿರುವ ಮಿಷಿನ್ ಗನ್‍‍ನಿಂದ 270 ಡಿಗ್ರಿ ಆಂಗಲ್‍‍ನಲ್ಲಿ ಶೂಟ್ ಮಾಡಬಹುದಾಗಿದೆ. ಈ ವಾಹನದ ಹಿಂಬದಿಯಲ್ಲಿ ಅಳವಡಿಸಲಾಗಿರುವ ಕ್ಯಾಮರಾದಿಂದ ಯಾವುದೇ ರೀತಿಯ ಅಡ್ಡಿ ಆತಂಕಗಳನ್ನು, ವೈರಿಗಳನ್ನು ಪತ್ತೆ ಹಚ್ಚಬಹುದಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ಮಹೀಂದ್ರಾ ಮಾರ್ಕ್ಸ್‌ಮನ್ ಬುಲೆಟ್ ಪ್ರೂಫ್

ಈ ವಾಹನದ ಮುಂಭಾಗದಲ್ಲಿ ಇಬ್ಬರು ಹಾಗೂ ಹಿಂಭಾಗದಲ್ಲಿ ನಾಲ್ಕು ಜನರು ಕುಳಿತು ಪ್ರಯಾಣ ಮಾಡಬಹುದಾಗಿದೆ. ಈ ವಾಹನವನ್ನು ಸಾಕಷ್ಟು ಪ್ರಮಾಣದಲ್ಲಿ ಗಟ್ಟಿಮುಟ್ಟಾಗಿ ನಿರ್ಮಿಸಲಾಗಿದೆ. ಯಾವುದೇ ರೀತಿಯ ಗುಂಡುಗಳು ತಗುಲಿದರೂ ತಡೆಯುವಷ್ಟು ಬಲಶಾಲಿಯಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ಮಹೀಂದ್ರಾ ಮಾರ್ಕ್ಸ್‌ಮನ್ ಬುಲೆಟ್ ಪ್ರೂಫ್

ಸದ್ಯಕ್ಕೆ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿರುವ ವಾಹನದ ಇಂಟಿರಿಯರ್‍‍ನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಮಿಲಿಟರಿ ನಿಯಮಗಳಿಗೆ ಅನುಗುಣವಾಗಿ ಈ ವಾಹನದಲ್ಲಿ ಎಂಜಿನ್ ಅನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಣ್ಣಿಗೆ ಬಿದ್ದ ಮಹೀಂದ್ರಾ ಮಾರ್ಕ್ಸ್‌ಮನ್ ಬುಲೆಟ್ ಪ್ರೂಫ್

ಈ ಎಂಜಿನ್ 105 ಬಿ‍‍ಹೆಚ್‍‍ಪಿ ಪವರ್ ಹಾಗೂ 228 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಈ ಎಂಜಿನ್ ಬಿ‍ಎಸ್ 6 ಆಗಿರಲಿದೆ. ಈ ಎಂಜಿನ್‍‍ಗೆ 5 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

More from DriveSpark

Article Published On: Tuesday, October 1, 2019, 16:14 [IST]
English summary
New Mahindra Marksman Bulletproof Vehicle Test Drive - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+