ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಟಿಯುವಿ300 ಫೇಸ್‍ಲಿಫ್ಟ್

ದೇಶದಲ್ಲಿ ಬಿಎಸ್-6 ನಿಯಮಾವಳಿಗಳು ಪ್ರಾರಂಭವಾಗುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ವಾಹನ ತಯಾರಕ ಸಂಸ್ಥೆಗಳು ತಮ್ಮಲ್ಲಿರುವ ಜನಪ್ರೀಯ ವಾಹನಗಳಿಗೆ ಬಿಎಸ್-6 ಎಂಜಿನ್ ಅನ್ನು ಅಳವಡಿಸಿ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ. ಅವುಗಳಲ್ಲಿ ಮಹೀಂದ್ರಾ ಸಂಸ್ಥೆಯು ಕೂಡಾ ಒಂದಾಗಿದ್ದು, ತಮ್ಮ ಜನಪ್ರಿಯೆ ಟಿಯುವಿ300 ಕಾರಿಗೆ ಬಿಎಸ್-6 ಎಂಜಿನ್ ಅನ್ನು ಅಳವಡಿಸಿ ಆ ಎಂಜಿನ್‍ ಅನ್ನು ಪರೀಕ್ಷಿಸಲು ರಸ್ತೆಗಿಳಿದಿವೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300

ಹೊಸದಾಗಿ ಅಳವಡಿಸಲಾಗಿರುವ ಬಿಎಸ್-6 ಎಂಜಿನ್‍ನ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಮಹೀಂದ್ರಾ ಟಿಯುವಿ300 ಎಸ್‍ಯುವಿ ಕಾರು ಹಲವಾರು ಪ್ರದೇಶದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಇದೀಗ ನಮ್ಮ ಬೆಂಗಳೂರಿನಲ್ಲಿಯೂ ಸಹ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ. ಈ ಕುರಿತಾದ ಚಿತ್ರಗಳು ಸೋರಿಕೆಯಾಗಿದ್ದು, ಶೀಘ್ರವೇ ಮಹೀಂದ್ರಾ ಸಂಸ್ಥೆಯು ಈ ಕಾರಿನ ಪರೀಕ್ಷೆಯನ್ನು ಮುಗಿಸಿ ಬಿಡುಗಡೆ ಮಾಡುವ ತವಕದಲ್ಲಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300

ದೇಶಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಹೊಸ ವಾಹನಗಳ ಎಂಜಿನ್‌ ತಂತ್ರಜ್ಞಾನದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ಕಡ್ಡಾಯ ನಿಯಮಗಳನ್ನು ಜಾರಿ ತರುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300

ಭಾರತದಲ್ಲಿ ಸದ್ಯ ಬಿಎಸ್-4(ಭಾರತ್ ಸ್ಟೇಜ್) ವೈಶಿಷ್ಟ್ಯತೆಯುಳ್ಳ ವಾಹನಗಳು ಮಾತ್ರ ಮಾರಾಟಗೊಳ್ಳುತ್ತಿದ್ದು, ಇದು ಕೂಡಾ ಮುಂಬರುವ 2020ರ ಏಪ್ರಿಲ್ 1ರಿಂದ ನಿಷೇಧಗೊಂಡು ಬಿಎಸ್-6 ನಿಯಮವು ಜಾರಿಗೆ ಬರಲಿದೆ. ಹೀಗಾಗಿ ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಮಹೀಂದ್ರಾ ಸೇರಿದಂತೆ ಬಹುತೇಕ ಸಂಸ್ಥೆಗಳು 2019ರ ಕೊನೆಯಲ್ಲಿ ಇಲ್ಲವೇ 20202ರ ಆರಂಭದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300

ಇದರಲ್ಲಿ ಮಹೀಂದ್ರಾ ನಿರ್ಮಾಣದ ಟಿಯುವಿ300, ನ್ಯೂ ಜನರೇಷನ್ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ಥಾರ್ ಕಾರುಗಳು ಹೊಸ ಮಾದರಿಯ ಬಿಎಸ್-6 ಎಂಜಿನ್ ಸೌಲಭ್ಯದೊಂದಿಗೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಮಾಹಿತಿಗಳ ಪ್ರಕಾರ ಮಹೀಂದ್ರಾ ಹೊಸ ಕಾರುಗಳು ಮುಂದಿನ ನಾಲ್ಕು ತಿಂಗಳಲ್ಲಿ ಅವಧಿಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಲಾಗಿದೆ. ಬಿಡುಗಡೆಯ ಉದ್ದೇಶಕ್ಕಾಗಿಯೇ ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುತ್ತಿದ್ದು, ತದನಂತರವಷ್ಟೇ ಉತ್ಪಾದನಾ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇನ್ನು ಬಿಎಸ್-6 ವೈಶಿಷ್ಟ್ಯತೆಗಳಿಂದಾಗಿ ಹೊಸ ಕಾರುಗಳಲ್ಲಿ ಹಲವಾರು ಹೊಸ ಸುರಕ್ಷಾ ಸೌಲಭ್ಯಗಳನ್ನು ನೀಡಲಾಗಿದ್ದು, ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300, ಟಿಯುವಿ300 ಮತ್ತು ಥಾರ್ ಕಾರುಗಳಲ್ಲಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್ ಸಿಸ್ಟಂ, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯಗಳಿವೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300

ಹಾಗೆಯೇ 6 ಏರ್‌ಬ್ಯಾಗ್‌ಗಳು(ಟಾಪ್ ಎಂಡ್‌ಗಳಲ್ಲಿ), ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಸನ್‌ರೂಫ್, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟು ಮತ್ತು ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ ಟಚ್ ಸ್ಕ್ರಿನ್ ಇನ್ಪೋಟೈನ್‌ಟೆಂಟ್ ಸಿಸ್ಟಂ ಜೋಡಣೆ ಮಾಡಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300

ಇದರೊಂದಿಗೆ ಕಾರು ಕಳ್ಳತನಗಳಿಗೆ ಬ್ರೇಕ್ ಹಾಕಲು ಜಿಯೋ ಫೆನ್ಸ್ ಅಲರ್ಟ್ ಸೇರಿದಂತೆ ಸೆಂಟರ್ ಲಾಕಿಂಗ್ ಸಿಸ್ಟಂ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಒಟ್ಟಿನಲ್ಲಿ ಪ್ರಯಾಣಿಕರ ಸುರಕ್ಷೆತೆಗಾಗಿ ಗರಿಷ್ಠ ಮಟ್ಟದಲ್ಲಿ ಸುರಕ್ಷಾ ಸೌಲಭ್ಯ ಗಳನ್ನು ಅಳವಡಿಸಿರುವುದೇ ಹೊಸ ಕಾರುಗಳ ಪ್ರಮುಖ ಆಕರ್ಷಣೆಯಾಗಲಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300

ಅದಕ್ಕಿಂತಲೂ ಮುಖ್ಯವಾಗಿ ಸ್ಕಾರ್ಪಿಯೋ, ಎಕ್ಸ್‌ಯುವಿ500, ಎಕ್ಸ್‌ಯುವಿ300, ಟಿಯುವಿ300 ಮತ್ತು ಥಾರ್ ನ್ಯೂ ಜನರೇಷನ್ ಕಾರುಗಳಲ್ಲಿ ಬಿಎಸ್-6 ಎಂಜಿನ್ ಅಳವಡಿಸಿರುವುದು ಮಾಲಿನ್ಯ ತಡೆಯುವಲ್ಲಿ ಸಾಕಷ್ಟು ಸಹಕಾರಿಯಾಗಲಿದ್ದು, ಶೇ.25ರಷ್ಚು ಹೊಗೆ ಉಗುಳುವ ಪ್ರಮಾಣ ಕಡಿಮೆಯಾಗಿದ್ದಲ್ಲಿ ಶೇ. 10ರಷ್ಟು ಮೈಲೇಜ್ ಪ್ರಮಾಣದಲ್ಲೂ ಏರಿಕೆಯಾಗಲಿದೆ.

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಮಹೀಂದ್ರಾ ಟಿಯುವಿ300

ಇದರೊಂದಿಗೆ ಹೊಸ ಕಾರುಗಳ ಬೆಲೆಯಲ್ಲೂ ತುಸು ಏರಿಕೆಯಾಗಲಿದ್ದು, ಬಿಎಸ್-4 ಕಾರುಗಳ ಬೆಲೆಗಳಿಂತಲೂ ಬಿಎಸ್-6 ಕಾರುಗಳ ಬೆಲೆಯು ತಾಂತ್ರಿಕ ಸೌಲಭ್ಯಗಳ ಅಳವಡಿಕೆಯ ಆಧಾರದ ಮೇಲೆ ರೂ. 1.50 ಲಕ್ಷದಿಂದ ರೂ.2.50 ಲಕ್ಷದ ತನಕ ಹೆಚ್ಚಿನ ಬೆಲೆ ಪಡೆದುಕೊಳ್ಳಬಹುದು ಎಂದು ನೀರಿಕ್ಷಿಸಲಾಗಿದೆ.

Source: Rushlane

Most Read Articles

Kannada
English summary
Mahindra TUV 300 Spotted Testing In Bengaluru. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more