ಹೊಸ ಮಹೀಂದ್ರಾ ಎಕ್ಸ್‌ಯುವಿ300 ಕಾರಿನಲ್ಲಿ ಇಷ್ಟೆಲ್ಲಾ ಸೇಫ್ಟಿ ಫೀಚರ್ಸ್ ಇದ್ಯಾ.?
ಮಹೀಂದ್ರಾ ನಿರ್ಮಾಣದ ಹೊಚ್ಚ ಹೊಸ ಎಕ್ಸ್‌ಯುವಿ300 ಕಾರು ಮುಂದಿನ ತಿಂಗಳು ಫೆಬ್ರವರಿ 14ರಂದು ಬಿಡುಗಡೆಯಾಗುತ್ತಿದೆ ಎಂಬ ಮಾಹಿತಿ ಖಚಿತವಾಗಿದ್ದು, ಈಗಾಗಲೆ ಹೊಸ ಕಾರು ಖರೀದಿಗಾಗಿ ಇಂದಿನಿಂದ ರೂ. 20 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕ್ಕಿಂಗ್ ಮಾಡಬಹುದಾಗಿದೆ ಅಂತಾ ಮಹೀಂದ್ರಾ ಸಂಸ್ಥೆಯು ಮಾಹಿತಿ ಹೊರಹಾಕಿದೆ.

ಮಹೀಂದ್ರಾ ಸಂಸ್ಥೆಯು ದಕ್ಷಿಣ ಕೊರಿಯಾದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಸ್ಯಾಂಗ್‌ಯಾಂಗ್ ಜೊತೆಗೂಡಿ ಹೊಸ ನಮೂನೆಯ ಕಾರು ಉತ್ಪನ್ನಗಳನ್ನು ಅಭಿವೃದ್ಧಿ ಪಡೆಸುತ್ತಿದ್ದು, ಸ್ಯಾಂಗ್‌ಯಾಂಗ್ ನಿರ್ಮಾಣದ ಟಿವೊಲಿ ಕಾರಿನ ಮಾದರಿಯಲ್ಲೇ ಹೊಸ ಎಕ್ಸ್‌ಯುವಿ300 ಕಾರನ್ನು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ನಿರ್ಮಾಣ ಮಾಡಲಾಗಿದೆ.

ಈ ನಿಟ್ಟಿನಲ್ಲಿ ಮಹೀಂದ್ರಾ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಎಕ್ಸ್‌ಯುವಿ300 ಕಾರಿನಲ್ಲಿ ಏನೆಲ್ಲಾ ಸುರಕ್ಷಾ ಸಾಧನಗಳು ಇರಲಿದೆ ಎಂದು ಸಂಸ್ಥೆಯು ಟೀಸರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸೆಗ್ಮೆಂಟ್ ಫಸ್ಟ್ ಫೀಚರ್‍ಗಳು ಇರುವುದು ಗ್ರಾಹಕರಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಮಹೀಂದ್ರಾ ಸಂಸ್ಥೆಯು ಬಿಡುಗಡೆ ಮಾಡಿದ ಈ ವಿಡಿಯೋನಲ್ಲಿ 7 ಏರ್‍ಬ್ಯಾಗ್‍ಗಳು ಮತ್ತು ನಾಲ್ಕು ಚಕ್ರಗಳಿಗೆ ಡಿಸ್ಕ್ ಬ್ರೇಕ್‍ಗಳನ್ನು ನೀಡಲಾಗಿದ್ದು, ಜೊತೆಗೆ ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‍ಗಳನ್ನು ಅಳವಡಿಸಲಾಗಿದೆ. ಇವುಗಳ ಜೊತೆಗೆ ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಯ ಅನುಸಾರ ಎಬಿಎಸ್, ಇಬಿಡಿ, ಐಎಸ್ಒಫಿಕ್ಸ್ ಚೈಲ್ಡ್-ಸೀಟ್ ಮೌಂಟ್ಸ್, 3 ಪಾಯಿಂಟ್ ಸೀಟ್‍ಬೆಲ್ಟ್ಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‍ಪಿ) ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಫೀಚರ್‍ಗಳನ್ನು ಕಾರಿನ ಎಲ್ಲಾ ವೇರಿಯಂಟ್‍ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಕ್ಸ್‌ಯುವಿ300 ಕಾರು 5 ಆಸನವುಳ್ಳ ಕಾರು ಮಾದರಿಯಾಗಿದ್ದು, ಎಸ್‌ಯುವಿ ಕಾರು ಪ್ರಿಯರನ್ನು ಸೆಳೆಯಬಲ್ಲ ಬಹುತೇಕ ಪ್ರೀಮಿಯಂ ಸೌಲಭ್ಯಗಳನ್ನು ಈ ಕಾರಿನಲ್ಲಿವೆ ಎಂದ್ರೆ ತಪ್ಪಾಗುವುದಿಲ್ಲ.

ಈ ಕಾರಿನಲ್ಲಿ ಗ್ರಾಹಕರು ನಿರೀಕ್ಷಿಸಬಹುದಾದ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದ್ದು, ಮೊದಲಿಗೆ ಕಾರಿನ ಒಳಭಾಗವನು ಡ್ಯುಯಲ್ ಟೋನ್ ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಮತ್ತು ಕಾರಿನಲ್ಲಿನ ಡ್ಯಾಶ್‍ಬೋರ್ಡ್, ಇನ್ಫೋಟೈನ್ಮೆಂಟ್ ಸಿಸ್ಟಂ, ಎಸಿ ವೆಂಟ್ಸ್ ಮತ್ತು ಸ್ಟೀರಿಂಗ್ ವ್ಹೀಲ್‍ನ ಮೇಲೆ ಸಿಲ್ವರ್ ಆಕ್ಸೆಂಟ್‍ಗಳನ್ನು ನೀಡಲಾಗಿದೆ.

ಡ್ಯುಯಲ್ ಟೋನ್ ಇಂಟೀರಿಯರ್ ಅನ್ನು ಹೊರತುಪಡಿಸಿ ಮಹೀಂದ್ರಾ ಎಕ್ಸ್‌ಯುವಿ300 ಕಾರಿನಲ್ಲಿ ದೊಡ್ಡದಾದ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗಿದ್ದು, ಇದು ಆಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಆಯ್ಕೆಯನ್ನು ಪಡೆಯಬಹುದಾಗಿದೆ. ಇಷ್ಟೆ ಅಲ್ಲದೇ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸಾರ್‍ಗಳನ್ನು ಸಹ ಅಳವಡಿಸಲಾಗಿದೆ.

ಜೊತೆಗೆ ಮಹೀಂದ್ರಾ ಎಕ್ಸ್‌ಯುವಿ300 ಕಾರು ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಸೆಂಟ್ರಲ್ ಮಲ್ಟಿ ಇನ್ಫಾರ್ಮೇಷನ್ ಡಿಸ್ಪ್ಲೇ ಹೊಂದಿರುವ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ.

ಇವುಗಳ ಜೊತೆಗೆ ಮಹೀಂದ್ರಾ ಎಕ್ಸ್‌ಯುವಿ300 ಕಾಂಪ್ಯಾಕ್ಟ್ ಎಸ್‍ಯುವಿ ಕಾರಿನಲ್ಲಿ ಸನ್‍ರೂಫ್ ಕೂಡಾ ಬಳಸಲಾಗಿದ್ದು, ಹಿಂಬದಿಯ ಸವಾರರ ಸೀಟ್‍ಗಳಿಗೆ ಸೆಂಟ್ರಲ್ ಆರ್ಮ್‍ರೆಸ್ಟ್ ಅನ್ನು ನೀಡಲಾಗಿದೆ. ಆದರೆ ಹಿಂಬದಿಯ ಸವಾರರಿಗೆ ಎಸಿವೆಂಟ್ಸ್ ಅನ್ನು ನೀಡಲಿದೆಯೆ ಎಂದು ಮತ್ತಷ್ಟು ಮಾಹಿತಿಗಳು ಹೊರ ಬಂದ ಮೇಲೆ ತಿಳಿಯಬೇಕಿದೆ.

ಎಂಜಿನ್ ಸಾಮರ್ಥ್ಯ
ಹೊಸ ಎಕ್ಸ್‌ಯುವಿ300 ಕಾರು ಡಿಸೇಲ್ ಮತ್ತು ಪೆಟ್ರೋಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಾಗಲಿದ್ದು, ಡಿಸೇಲ್ ಕಾರುಗಳು 1.5-ಲೀಟರ್( 1,500ಸಿಸಿ) ಎಂಜಿನ್‌ನೊಂದಿಗೆ 121-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿರಲಿವೆ.

ಹಾಗೆಯೇ ಪೆಟ್ರೋಲ್ ಮಾದರಿಯು ಸಹ 1.2-ಲೀಟರ್ ಎಂಜಿನ್‌ನೊಂದಿಗೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಡಿಸೇಲ್ ವರ್ಷನ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಪೆಟ್ರೋಲ್ ವರ್ಷನ್ ಕಾರುಗಳಲ್ಲಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಲಿದೆ.

ಮಹೀಂದ್ರಾ ಸಂಸ್ಥೆಯು ನೀಡಿರುವ ಮಾಹಿತಿ ಪ್ರಕಾರ, ಸದ್ಯಕ್ಕೆ ಡೀಸೆಲ್ ವರ್ಷನ್‌ಗಳಲ್ಲಿ ಮಾತ್ರ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರನ್ನು ಮೊದಲು ಬಿಡುಗಡೆ ಮಾಡಿ ನಂತರವಷ್ಟೇ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡುವುದಾಗಿ ಸುಳಿವು ನೀಡಿದೆ.

ಕಾರಿನ ಬೆಲೆಗಳು(ಅಂದಾಜು)
ಮಾರುಕಟ್ಟೆಯಲ್ಲಿ ಲಭ್ಯವಿರುವ ಕಂಪ್ಯಾಕ್ಟ್ ಎಸ್‌ಯುವಿಗಳಿಂತೂ ತಾಂತ್ರಿಕವಾಗಿ ಬಲಿಷ್ಠವಾಗಿರುವ ಎಕ್ಸ್‌ಯುವಿ300 ಕಾರುಗಳ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.0 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 13 ಲಕ್ಷ ಬೆಲೆ ನಿಗದಿಯಾಗುವ ಸಾಧ್ಯತೆಗಳಿವೆ. ಮತ್ತು ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








