ಆಪಲ್ ಕಾರ್ ಪ್ಲೇ ಅಪ್ಡೇಟ್ ಪಡೆಯಲಿದೆ ಮಹೀಂದ್ರಾ ಎಕ್ಸ್‌ಯುವಿ500

ಮಹೀಂದ್ರಾ ಕಂಪನಿಯು ತನ್ನ ಎಕ್ಸ್‌ಯುವಿ 500 ವಾಹನವನ್ನು ನಿರಂತರವಾಗಿ ಅಪ್ಡೇಟ್ ಮಾಡುತ್ತಲೇ ಬಂದಿದೆ. ಈಗ ಹೊಸದಾಗಿ ಅಪ್ಡೇಟ್ ಮಾಡಿ ಟಾಟಾ ಹ್ಯಾರಿಯರ್‍‍ಗಿಂತ ಕಡಿಮೆ ಬೆಲೆಯ ಡಬ್ಲ್ಯೂ3 ಮಾದರಿಯ ವಾಹನವನ್ನು ಬಿಡುಗಡೆ ಮಾಡಿದೆ.

ಆಪಲ್ ಕಾರ್ ಪ್ಲೇ ಅಪ್ಡೇಟ್ ಪಡೆಯಲಿದೆ ಮಹೀಂದ್ರಾ ಎಕ್ಸ್‌ಯುವಿ500

ಈ ತಿಂಗಳ ಕೊನೆಗೆ ಮಹೀಂದ್ರಾ ಕಂಪನಿಯ ವಾಹನವು ಹೊಸ ಅಪ್‍‍ಡೇಟ್ ಪಡೆಯಲಿದೆ. ಆದರೆ ಈ ಬಾರಿ ಟಾಪ್ ಮಾದರಿಯ ವಾಹನಗಳನ್ನು ಮಾತ್ರ ಅಪ್‍‍ಡೇಟ್ ಮಾಡಲಾಗಿದೆ. ಆಪಲ್ ಕಾರ್‍‍ಪ್ಲೇ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಸೌಲಭ್ಯವನ್ನು ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 500 ವಾಹನಗಳಲ್ಲಿ ಮೇ 31 ರಿಂದ ಅಳವಡಿಸಲಾಗುವುದು. ಈ ಅಪ್‍‍ಡೇಟ್ ನೊಂದಿಗೆ ಈ ವಾಹನದಲ್ಲಿರುವ ಟಚ್‍‍ಸ್ಕ್ರೀನ್‍‍ಸಿಸ್ಟಂ ಗಳಿಗಾಗಿ ಆಂಡ್ರಾಯಿಡ್ ಆಟೋ ಮತ್ತು ಆಪರ್ ಕಾರ್ ಪ್ಲೇ ಕನೆಕ್ಟಿವಿಟಿ ಎರಡನ್ನೂ ನೀಡಲಾಗಿದೆ.

ಆಪಲ್ ಕಾರ್ ಪ್ಲೇ ಅಪ್ಡೇಟ್ ಪಡೆಯಲಿದೆ ಮಹೀಂದ್ರಾ ಎಕ್ಸ್‌ಯುವಿ500

ಆಂಡ್ರಾಯಿಡ್ ಮತ್ತು ಆಪಲ್ ಐಒ‍ಎಸ್ ಈಗ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್ ಫೋನ್‍‍ಗಳಲ್ಲಿನ ಜನಪ್ರಿಯ ಆಪರೇಟಿಂಗ್ ಸಿಸ್ಟಂಗಳಾಗಿವೆ. ಇದರ ಜೊತೆಗೆ ಐಫೋನ್ ಗ್ರಾಹಕರು ತಮ್ಮ ಫೋನ್‍‍ಗಳನ್ನು ಬಳಸಿ ಈ ವಾಹನದಲ್ಲಿರುವ ಇನ್ಫೋಟೇನ್ಮೆಂಟ್ ಸಿಸ್ಟಂಗಳನ್ನು ಆಪರೇಟ್ ಮಾಡಬಹುದಾಗಿದೆ.

ಆಪಲ್ ಕಾರ್ ಪ್ಲೇ ಅಪ್ಡೇಟ್ ಪಡೆಯಲಿದೆ ಮಹೀಂದ್ರಾ ಎಕ್ಸ್‌ಯುವಿ500

ಆಪಲ್ ಕಾರ್ ಪ್ಲೇನಿಂದ ನ್ಯಾವಿಗೇಶನ್, ಮೆಸೆಜಿಂಗ್, ಆಪ್ ಆಕ್ಸೆಸ್ ಮತ್ತು ಕಾಲಿಂಗ್ ಸೇರಿದಂತೆ ಅನೇಕ ಕಾರ್ಯಗಳನ್ನು ನಿರ್ವಹಿಸಬಹುದು. ಮಹೀಂದ್ರಾ ಕಂಪನಿಯು ಆಪಲ್ ಕಾರ್ ಪ್ಲೇ ಸೌಲಭ್ಯವನ್ನುಟಾಪ್ ಮಾದರಿಯ ಡಬ್ಲ್ಯು11 (ಒ) ವಾಹನಗಳಲ್ಲಿ ಮಾತ್ರವೇ ಅಳವಡಿಸಲಿದೆ.

ಆಪಲ್ ಕಾರ್ ಪ್ಲೇ ಅಪ್ಡೇಟ್ ಪಡೆಯಲಿದೆ ಮಹೀಂದ್ರಾ ಎಕ್ಸ್‌ಯುವಿ500

ಆಂಡ್ರಾಯಿಡ್ ಆಟೋ ಸೌಲಭ್ಯವನ್ನು ಡಬ್ಲ್ಯು7 ಸರಣಿಯ ಎಲ್ಲಾ ಮಾದರಿಗಳಲ್ಲೂ ಅಳವಡಿಸಲಾಗಿತ್ತು. ಮಹೀಂದ್ರಾ ಎಕ್ಸ್‌ಯುವಿ 500 ವಾಹನವನ್ನು ಭಾರತದಲ್ಲಿ - 11 ಡೀಸೆಲ್, 1 ಪೆಟ್ರೋಲ್ - ಸೇರಿದಂತೆ ಒಟ್ಟು 12 ಎಂಜಿನ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇದರಲ್ಲಿ 5 ಡೀಸೆಲ್ ಮಾದರಿಗಳು ಆಟೋಮ್ಯಾಟಿಕ್ ಆಗಿದ್ದರೆ, ಉಳಿದ ಡೀಸೆಲ್ ಮಾದರಿಗಳು ಮ್ಯಾನುವಲ್ ಆಗಿವೆ.

ಆಪಲ್ ಕಾರ್ ಪ್ಲೇ ಅಪ್ಡೇಟ್ ಪಡೆಯಲಿದೆ ಮಹೀಂದ್ರಾ ಎಕ್ಸ್‌ಯುವಿ500

ಪೆಟ್ರೋಲ್ ಮಾದರಿಯ ಎಕ್ಸ್‌ಯುವಿ 500 ವಾಹನವು ಸಿಂಗಲ್, ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದ್ದು, ಫ್ರಂಟ್ ವ್ಹೀಲ್ ಡ್ರೈವ್ ಮಾದರಿಯಾಗಿದ್ದರೆ, ಡೀಸೆಲ್ ಮಾದರಿಯ ವಾಹನಗಳು ಫ್ರಂಟ್ ವ್ಹೀಲ್ ಮತ್ತು ಆಲ್ ಫೋರ್ ವ್ಹೀಲ್ ಡ್ರೈವ್ ಸೌಲಭ್ಯಗಳನ್ನು ಹೊಂದಿವೆ.

ಆಪಲ್ ಕಾರ್ ಪ್ಲೇ ಅಪ್ಡೇಟ್ ಪಡೆಯಲಿದೆ ಮಹೀಂದ್ರಾ ಎಕ್ಸ್‌ಯುವಿ500

ಮಹೀಂದ್ರಾ ಎಕ್ಸ್‌ಯುವಿ 500 ಡೀಸೆಲ್ ವಾಹನವು 2.2 ಲೀಟರ್ 4 ಸಿಲಿಂಡರ್ ಎಂಜಿನ್ ಹೊಂದಿದ್ದು, ಟರ್ಬೊ ಚಾರ್ಜ್ ಯೂನಿಟ್ ನೊಂದಿಗೆ 154 ಬಿ‍‍ಹೆಚ್‍‍ಪಿ ಪೀಕ್ ಪವರ್ ಮತ್ತು 360 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಆಯ್ಕೆಗಳಿದ್ದು, ಫ್ರಂಟ್ ವ್ಹೀಲ್ ಡ್ರೈವ್ ಮತ್ತು ಆಲ್ ವ್ಹೀಲ್ ಡ್ರೈವ್ ಲೇ‍ಔ‍‍ಟ್‍‍ಗಳನ್ನು ಹೊಂದಿವೆ.

MOST READ: ರಾಯಲ್ ಎನ್‍‍ಫೀಲ್ಡ್ ಅನ್ನು ಕೋರ್ಟಿಗೆಳೆದ ಫ್ಲಾಶ್ ಎಲೆಕ್ಟ್ರಾನಿಕ್ಸ್

ಆಪಲ್ ಕಾರ್ ಪ್ಲೇ ಅಪ್ಡೇಟ್ ಪಡೆಯಲಿದೆ ಮಹೀಂದ್ರಾ ಎಕ್ಸ್‌ಯುವಿ500

ಇನ್ನು ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ವಾಹನವು 2.2 ಲೀಟರ್ 4 ಸಿಲಿಂಡರ್ ಎಂಜಿನ್ ಹೊಂದಿದ್ದು, ಟರ್ಬೊ ಚಾರ್ಜ್ ಯೂನಿಟ್ ನೊಂದಿಗೆ 140 ಬಿ‍‍ಹೆಚ್‍‍ಪಿ ಪೀಕ್ ಪವರ್ ಮತ್ತು 320 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್‍‍ಗಳಿದ್ದು, ಫ್ರಂಟ್ ವ್ಹೀಲ್ ಡ್ರೈವ್ ಹೊಂದಿದೆ.

ಆಪಲ್ ಕಾರ್ ಪ್ಲೇ ಅಪ್ಡೇಟ್ ಪಡೆಯಲಿದೆ ಮಹೀಂದ್ರಾ ಎಕ್ಸ್‌ಯುವಿ500

2011ರಲ್ಲಿ ಬಿಡುಗಡೆಯಾದ ಈ ವಾಹನವು ಕಳೆದ ವರ್ಷ ಹೊಸ ವಿನ್ಯಾಸವನ್ನು ಪಡೆದಿತ್ತು. ಈ ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗಿ ಜನಪ್ರಿಯತೆಯನ್ನು ಪಡೆದಿದೆ. ಈಗ ಜೀಪ್ ಕಾಂಪಸ್ ಹಾಗೂ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಟಾಟಾ ಹ್ಯಾರಿಯರ್ ವಾಹನಗಳಿಂದ ಪ್ರಬಲ ಪೈಪೋಟಿಯನ್ನು ಎದುರಿಸುತ್ತಿದೆ.

ಆಪಲ್ ಕಾರ್ ಪ್ಲೇ ಅಪ್ಡೇಟ್ ಪಡೆಯಲಿದೆ ಮಹೀಂದ್ರಾ ಎಕ್ಸ್‌ಯುವಿ500

ಮಹೀಂದ್ರಾ ಕಂಪನಿಯು ಎರಡನೇ ತಲೆಮಾರಿನ ಹೊಸ ಎಕ್ಸ್‌ಯುವಿ 500 ವಾಹನವನ್ನು ಅಭಿವೃದ್ಧಿಪಡಿಸುತ್ತಿದೆ. ಎರಡನೇ ತಲೆಮಾರಿನ ವಾಹನವು ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು ತನ್ನ ಪ್ಲಾಟ್‍‍ಫಾರಂ ಅನ್ನು ಸ್ಯಾಂಗ್‍‍ಯೊಂಗ್ ಕೊರಾಂಡೊ ಕಂಪನಿಯ ಜೊತೆ ಹಂಚಿಕೊಳ್ಳುವ ನಿರೀಕ್ಷೆಯಿದೆ.

ಆಪಲ್ ಕಾರ್ ಪ್ಲೇ ಅಪ್ಡೇಟ್ ಪಡೆಯಲಿದೆ ಮಹೀಂದ್ರಾ ಎಕ್ಸ್‌ಯುವಿ500

ಎರಡನೇ ತಲೆಮಾರಿನ ಮಹೀಂದ್ರಾ ಎಕ್ಸ್‌ಯುವಿ 500 ವಾಹನದಲ್ಲಿರುವ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ಗಳನ್ನು ಬಿ‍ಎಸ್ 6 ನಿಯಮಗಳಿಗೆ ಅನುಸಾರವಾಗಿ ಅಭಿವೃದ್ಧಿಪಡಿಸಲಾಗುವುದು. ಮಹೀಂದ್ರಾ ತನ್ನ ಮೊದಲ ಮೊನೊಕಾಕ್ ವಾಹನದ ವಿನ್ಯಾಸವನ್ನು ಬದಲಾಯಿಸದೆ, ಹಾಗೆಯೇ ಮುಂದುವರೆಸುವ ನಿರೀಕ್ಷೆಯಿದ್ದು, ಹೆಚ್ಚು ಗಾತ್ರವನ್ನು ಹೊಂದುವ ಸಾಧ್ಯತೆಗಳಿವೆ.

ಆಪಲ್ ಕಾರ್ ಪ್ಲೇ ಅಪ್ಡೇಟ್ ಪಡೆಯಲಿದೆ ಮಹೀಂದ್ರಾ ಎಕ್ಸ್‌ಯುವಿ500

ಹೊಸ ಫೀಚರ್‍‍ಗಳ ಜೊತೆಗೆ ಉತ್ತಮವಾದ ರಿಫೈನ್‍‍ಮೆಂಟ್ ಲೆವೆಲ್‍, ಸುಧಾರಿತ ಹ್ಯಾಂಡ್ಲಿಂಗ್, ಗುಣಮಟ್ಟದ ಚಾಲನೆ, ಇಂಧನ ದಕ್ಷತೆಗಳನ್ನು ಹೊಸ ವಾಹನದಿಂದ ನಿರೀಕ್ಷಿಸಬಹುದು.

More from DriveSpark

Article Published On: Tuesday, May 21, 2019, 15:30 [IST]
English summary
Apple CarPlay will be the latest update that the Mahindra XUV500 will receive soon - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+