ಕಳೆದ 8 ತಿಂಗಳ ಅವಧಿಯಲ್ಲಿ ನೆಲಕಚ್ಚಿದ ಮಾರುತಿ ಸುಜುಕಿ ಕಾರು ಮಾರಾಟ..!

ಭಾರತದ ನಂ.1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿ ಹೊರಹೊಮ್ಮಿರುವ ಮಾರುತಿ ಸುಜುಕಿ ಸಂಸ್ಥೆಯು ಇದೇ ಮೊದಲ ಬಾರಿಗೆ ಕಾರು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದು, ಪ್ರಸ್ತುತ ವಿದ್ಯಮಾನಗಳೇ ಕಾರು ಮಾರಾಟ ಪ್ರಮಾಣ ತಗ್ಗಲು ಪ್ರಮುಖ ಕಾರಣ ಎನ್ನುವ ಅಂಶವನ್ನು ಮಾರುತಿ ಸುಜುಕಿ ಸಂಸ್ಥೆಯೇ ಬಹಿರಂಗಪಡಿಸಿದೆ.

ಕಳೆದ 8 ತಿಂಗಳ ಅವಧಿಯಲ್ಲಿ ನೆಲಕಚ್ಚಿದ ಮಾರುತಿ ಸುಜುಕಿ ಕಾರು ಮಾರಾಟ..!

ಹೌದು, ಕಳೆದ 2 ದಶಕಗಳಿಂದಲೂ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ಬಂದಿರುವ ಮಾರುತಿ ಸುಜುಕಿ ಸಂಸ್ಥೆಯು ಕಳೆದ ತಿಂಗಳಿನಿಂದ ಕಾರು ಮಾರಾಟ ಪ್ರಮಾಣದಲ್ಲಿ ಅಷ್ಟಾಗಿ ಪ್ರಗತಿ ಸಾಧಿಸಿಲ್ಲ. ಈ ಬಗ್ಗೆ ಎಕಾನಮಿಕ್ ಟೈಮ್ಸ್ ಸುದ್ದಿ ಸಂಸ್ಥೆಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾರುತಿ ಸುಜುಕಿ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಆಯುಕಾವಾ ಅವರು ಕಾರು ಮಾರಾಟದಲ್ಲಿ ಆಗುತ್ತಿರುವ ಏರುಪೇರುಗಳ ಹಿಂದಿನ ಕಾರಣಗಳ ಕುರಿತು ಚರ್ಚಿಸಿದ್ದಾರೆ.

ಕಳೆದ 8 ತಿಂಗಳ ಅವಧಿಯಲ್ಲಿ ನೆಲಕಚ್ಚಿದ ಮಾರುತಿ ಸುಜುಕಿ ಕಾರು ಮಾರಾಟ..!

ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಕಳೆದ 8 ತಿಂಗಳಿನಿಂದ ಅತಿ ಕಡಿಮೆ ಪ್ರಮಾಣದ ಪ್ರಗತಿ ಸಾಧಿಸಿದ್ದು, 2019ರ ಜನವರಿಯಲ್ಲಿ ಶೇ. 1.1 ಮತ್ತು ಫೆಬ್ರುವರಿ ಅವಧಿಯಲ್ಲಿ ಶೇ. 0.9 ರಷ್ಟು ಮಾತ್ರ ಮುನ್ನಡೆ ಸಾಧಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಕಳೆದ 8 ತಿಂಗಳ ಅವಧಿಯಲ್ಲಿ ನೆಲಕಚ್ಚಿದ ಮಾರುತಿ ಸುಜುಕಿ ಕಾರು ಮಾರಾಟ..!

ಇದು ಕಳೆದ ಕೆಲವು ವರ್ಷಗಳ ಕಾರು ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಪ್ರಸ್ತುತ ರಾಜಕೀಯ ವಿದ್ಯಮಾನಗಳು ಮತ್ತು ಮಾರುಕಟ್ಟೆಯಲ್ಲಿ ಅನುಸರಿಸಲಾಗುತ್ತಿರುವ ಮಾರಾಟ ತಂತ್ರಗಳಿಂದಾಗಿ ಎರಡಂಕಿ ದಾಟಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ ಕೆನೆಚಿ ಆಯುಕಾವಾ.

ಕಳೆದ 8 ತಿಂಗಳ ಅವಧಿಯಲ್ಲಿ ನೆಲಕಚ್ಚಿದ ಮಾರುತಿ ಸುಜುಕಿ ಕಾರು ಮಾರಾಟ..!

ಕಾರು ಮಾರಾಟದ ಮೇಲೆ ಲೋಕಸಭಾ ಎಲೆಕ್ಷನ್ ಎಫೆಕ್ಟ್?

ಅರೇ, ಕಾರು ಮಾರಾಟಕ್ಕೂ ಚುನಾವಣೆಗಳಿಗೂ ಏನ್ ಸಂಬಂಧ ಅಂತಾ ತಲೆಕೆಡಿಸಿಕೊಳ್ಳಬೇಡಿ. ವಾಸ್ತವವಾಗಿ ಆರ್ಥಿಕ ಬೆಳವಣಿಗೆಯ ಮೇಲೆ ರಾಜಕೀಯ ವಿದ್ಯಮಾನಗಳು ಕೂಡಾ ಪರೋಕ್ಷವಾಗಿ ಪರಿಣಾಮ ಉಂಟುಮಾಡಬಲ್ಲವು.

ಕಳೆದ 8 ತಿಂಗಳ ಅವಧಿಯಲ್ಲಿ ನೆಲಕಚ್ಚಿದ ಮಾರುತಿ ಸುಜುಕಿ ಕಾರು ಮಾರಾಟ..!

ಇದೇ ಕಾರಣಕ್ಕೆ ಇದೀಗ ವಾಹನ ಉದ್ಯಮ ಕೂಡಾ ಅಂದುಕೊಂಡಷ್ಟು ಬೆಳವಣಿಗೆ ಕಾಣದೆ ನಷ್ಟದ ಹಾದಿ ಹಿಡಿದ್ದು, ಮಾರುಕಟ್ಟೆಯಲ್ಲಿ ಆಗುತ್ತಿರುವ ವ್ಯತರಿಕ್ತ ಪರಿಣಾಮಗಳಿಂದಾಗಿ ವಾಹನ ಖರೀದಿದಾರರು ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ.

ಕಳೆದ 8 ತಿಂಗಳ ಅವಧಿಯಲ್ಲಿ ನೆಲಕಚ್ಚಿದ ಮಾರುತಿ ಸುಜುಕಿ ಕಾರು ಮಾರಾಟ..!

ಹೀಗಾಗಿ ಲೋಕಸಭಾ ಚುನಾವಣೆ ನಂತರವಷ್ಟೇ ವಾಹನ ಉದ್ಯಮವು ಮತ್ತೆ ಯಥಾಸ್ಥಿತಿಗೆ ಬರಬಹುದು ಎನ್ನುವ ವಿಶ್ವಾಸ ವ್ಯಕ್ತಪಡಿಸಿರುವ ಮಾರುತಿ ಸುಜುಕಿ ಸಂಸ್ಥೆಯು, ಹೆಚ್ಚುತ್ತಿರುವ ಮಾಲಿನ್ಯ ತಡೆಯಲು ಭವಿಷ್ಯ ವಾಹನಗಳ ಮೇಲೂ ಹೆಚ್ಚಿನ ಒತ್ತು ನೀಡುತ್ತಿರುವುದಾಗಿ ತಿಳಿಸಿದೆ.

ಕಳೆದ 8 ತಿಂಗಳ ಅವಧಿಯಲ್ಲಿ ನೆಲಕಚ್ಚಿದ ಮಾರುತಿ ಸುಜುಕಿ ಕಾರು ಮಾರಾಟ..!

ಇದಲ್ಲದೇ ಮುಂಬರುವ 2020ರ ಏಪ್ರಿಲ್ 1ರಿಂದ ಬಿಎಸ್ 4 ವಾಹನಗಳು ಮಾರುಕಟ್ಟೆಯಿಂದ ಸ್ಥಗಿತಗೊಳ್ಳಲಿದ್ದು, ಮಾಲಿನ್ಯ ತಡೆಯುವ ಉದ್ದೇಶದಿಂದ ಬಿಎಸ್ 6 ನಿಯಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಹೀಗಾಗಿ ಮಾರುತಿ ಸುಜುಕಿ ಸಂಸ್ಥೆಯು ಡೀಸೆಲ್ ಬದಲಾಗಿ ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಸಿಎನ್‍‌ಜಿ ಕಾರುಗಳ ಮೇಲೆ ವಿಶೇಷ ಗಮನಹರಿಸಿದೆ.

MOST READ: ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಮಾಹಿತಿ ಬಹಿರಂಗ ಪಡಿಸಿದ ಮಾರುತಿ ಸುಜುಕಿ

ಕಳೆದ 8 ತಿಂಗಳ ಅವಧಿಯಲ್ಲಿ ನೆಲಕಚ್ಚಿದ ಮಾರುತಿ ಸುಜುಕಿ ಕಾರು ಮಾರಾಟ..!

ಇದಕ್ಕಾಗಿಯೇ ಟೊಯೊಟಾ ಸಂಸ್ಥೆಯ ಜೊತೆ ಕೈಜೋಡಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಜಂಟಿಯಾಗಿ ಅಭಿವೃದ್ದಿಗೊಳಿಸುವ ಬೃಹತ್ ಯೋಜನೆಗೆ ಹಸಿರು ನಿಶಾನೆ ತೋರಿದ್ದು, ಎಲೆಕ್ಟ್ರಿಕ್ ಕಾರುಗಳ ಮುಖ್ಯ ತಾಂತ್ರಿಕ ಅಂಶವಾಗಿರುವ ಲೀಥಿಯಂ ಅಲಾಯ್ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪನೆಗಾಗಿ ಬರೋಬ್ಬರಿ ರೂ. 800 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಕಳೆದ 8 ತಿಂಗಳ ಅವಧಿಯಲ್ಲಿ ನೆಲಕಚ್ಚಿದ ಮಾರುತಿ ಸುಜುಕಿ ಕಾರು ಮಾರಾಟ..!

2020ರ ವೇಳೆಗೆ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿರುವ ಎಲೆಕ್ಟ್ರಿಕ್ ಕಾರುಗಳು ಮಾರಾಟಕ್ಕೆ ಲಭ್ಯವಾಗಲಿದ್ದು, ಬಿಡುಗಡೆಗಾಗಿ ಸಿದ್ದವಾಗುತ್ತಿರುವ ವ್ಯಾಗನ್ ಆರ್ ಎಲೆಕ್ಟ್ರಿಕ್ ಕಾರು ಕೂಡಾ ಟೊಯೊಟಾ ಉತ್ಪಾದನೆಯ ಅಲ್ಟ್ರಾ ಹೈ ಎಫಿಶಿಯೆನ್ಸಿ ಪವರ್‌ಟ್ರೈನ್ ಬ್ಯಾಟರಿ ಪಡೆದುಕೊಂಡಿದೆ.

MOST READ: ಮಂಗಳೂರಿನಲ್ಲಿ ತಪ್ಪಿದ ಭೀಕರ ಅಪಘಾತ- ಎಬಿಎಸ್ ಇಲ್ಲವಾಗಿದ್ರೆ ಕಥೆ ಅಷ್ಟೇ..!

ಕಳೆದ 8 ತಿಂಗಳ ಅವಧಿಯಲ್ಲಿ ನೆಲಕಚ್ಚಿದ ಮಾರುತಿ ಸುಜುಕಿ ಕಾರು ಮಾರಾಟ..!

ಒಟ್ಟಿನಲ್ಲಿ ಸದ್ಯದ ಮಾರುಕಟ್ಟೆಯ ಸನ್ನಿವೇಶಗಳಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಕನಿಷ್ಠ ಮಟ್ಟದ ಪ್ರಗತಿ ಸಾಧಿಸಲು ಕೂಡಾ ಪರದಾಟುವಂತಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯ ನಂತರವಷ್ಟೇ ಒಂದು ಸ್ಥಿರತೆಗೆ ಬರಬಹುದು ಎನ್ನುವ ವಿಶ್ವಾಸದಲ್ಲಿವೆ ಎನ್ನುವುದು ಕೆನೆಚಿ ಆಯುಕಾವಾ ಅವರ ಅಭಿಪ್ರಾಯವಾಗಿದೆ.

Article Published On: Wednesday, March 6, 2019, 13:51 [IST]
English summary
Maruti Suzuki Sales In India — Low Sales Growth To Continue Till End Of Election Period. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+