ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ರೀ ಎಂಟ್ರಿ ಕೊಟ್ಟ ಮಾರುತಿ ಸುಜುಕಿ ಡಿಜೈರ್ ಟೂರ್ ಎಸ್

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಜನಪ್ರಿಯ ಡಿಜೈರ್ ಟೂರ್ ಎಸ್ ಆವೃತ್ತಿಯನ್ನು ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉನ್ನತಿಕರಿಸಿ ಬಿಡುಗಡೆಗೊಳಿಸಿದ್ದು, ಹೊಸ ಕಾರಿನಲ್ಲಿ ಈ ಬಾರಿ ಹಲವು ಸುರಕ್ಷಾ ಸೌಲಭ್ಯಗಳನ್ನು ಒದಗಿಸಲಾಗಿದೆ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ರೀ ಎಂಟ್ರಿ ಕೊಟ್ಟ ಮಾರುತಿ ಸುಜುಕಿ ಡಿಜೈರ್ ಟೂರ್ ಎಸ್

ಸದ್ಯ ಮಾರುಕಟ್ಟೆಯಲ್ಲಿ ಟೂರಿಸ್ಟ್ ಮತ್ತು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳ ವಿಭಾಗದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಡಿಜೈರ್ ಟೂರ್ ಎಸ್ ಕಾರಿಗೆ ಸಾಕಷ್ಟು ಬೇಡಿಕೆಯಿದ್ದು, ಕಾಲಕ್ಕೆ ತಕ್ಕಂತೆ ಹೊಸ ಕಾರಿನಲ್ಲಿ ಮಹತ್ವದ ಬದಲಾವಣೆಗಳನ್ನು ಪರಿಚಯಿಸುತ್ತಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ರೀ ಎಂಟ್ರಿ ಕೊಟ್ಟ ಮಾರುತಿ ಸುಜುಕಿ ಡಿಜೈರ್ ಟೂರ್ ಎಸ್

ಜೊತೆಗೆ 2019ರ ಅಕ್ಟೋಬರ್ 1ರಿಂದ ಜಾರಿಯಾಗುತ್ತಿರುವ ಹೊಸ ನಿಯಮದ ಪ್ರಕಾರ ಪ್ರತಿ ಹೊಸ ಕಾರು ಉತ್ಪನ್ನಗಳು ಸಹ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಬೇಕಿದ್ದು, ಇಲ್ಲವಾದಲ್ಲಿ ಅಂತಹ ಕಾರು ಮಾದರಿಗಳ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ರೀ ಎಂಟ್ರಿ ಕೊಟ್ಟ ಮಾರುತಿ ಸುಜುಕಿ ಡಿಜೈರ್ ಟೂರ್ ಎಸ್

ಹೀಗಾಗಿ ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಹೊಸ ಕಾಯ್ದೆಗೆ ಅನುಗುಣವಾಗಿ ಉನ್ನತಿಕರಿಸುತ್ತಿದ್ದು, ಇದರ ಭಾಗವಾಗಿ ಡಿಜೈರ್ ಟೂರ್ ಎಸ್ ಕೂಡಾ ಹಲವು ಹೊಸ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ರೀ ಎಂಟ್ರಿ ಕೊಟ್ಟ ಮಾರುತಿ ಸುಜುಕಿ ಡಿಜೈರ್ ಟೂರ್ ಎಸ್

2019ರ ಡಿಜೈರ್ ಟೂರ್ ಎಸ್ ಕಾರಿನಲ್ಲಿ ಈ ಬಾರಿ ಹಲವು ಹೊಸ ಸುರಕ್ಷಾ ಸೌಲಭ್ಯಗಳನ್ನು ಜೋಡಿಸಲಾಗಿದ್ದು, ಎಬಿಎಸ್ ಜೊತೆಗೆ ಇಬಿಡಿ, ಡ್ರೈವರ್ ಸೈಡ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಹೈ ಸ್ಪೀಡ್ ಅಲರ್ಟ್ ಸೇರಿದಂತೆ ಇನ್ನು ಕೆಲವು ಹೊಸ ಫೀಚರ್ಸ್‌ಗಳನ್ನು ಅಳವಡಿಸಿದ್ದು, ಚಾಲಕನ ಜೊತೆಗೆ ಪ್ರಯಾಣಿಕರಿಗೂ ಹೆಚ್ಚಿನ ಸುರಕ್ಷತೆ ಸಿಗಲಿದೆ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ರೀ ಎಂಟ್ರಿ ಕೊಟ್ಟ ಮಾರುತಿ ಸುಜುಕಿ ಡಿಜೈರ್ ಟೂರ್ ಎಸ್

ಕಾರಿನ ಬೆಲೆಯಲ್ಲಿ ಹೆಚ್ಚಳ

ಈ ಬಾರಿ ಡಿಜೈರ್ ಟೂರ್ ಎಸ್ ಬೆಲೆಯು ತುಸು ದುಬಾರಿ ಎನ್ನಿಸಲಿದ್ದು, ಹೊಸ ಸುರಕ್ಷಾ ಸೌಲಭ್ಯಗಳನ್ನು ಒದಗಿಸಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಹೀಗಾಗಿ ಕಾರಿನ ಬೆಲೆಯು ಸೌಲಭ್ಯಕ್ಕೆ ಅನುಗುಣವಾಗಿ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.5.60 ಲಕ್ಷದಿಂದ ರೂ.6.60 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ರೀ ಎಂಟ್ರಿ ಕೊಟ್ಟ ಮಾರುತಿ ಸುಜುಕಿ ಡಿಜೈರ್ ಟೂರ್ ಎಸ್

ಎಂಜಿನ್ ಸಾಮರ್ಥ್ಯ

ಸದ್ಯ ಮಾರುಕಟ್ಟೆಯಲ್ಲಿರುವ ಡಿಜೈರ್ ಟೂರ್ ಎಸ್ ಆವೃತ್ತಿಯೆಂತೆಯೇ ಹೊಸ ಆವೃತ್ತಿಯಲ್ಲೂ ಈ ಹಿಂದಿನ ಎಂಜಿನ್ ಮಾದರಿಯನ್ನೇ ಮುಂದುವರಿಸಲಾಗಿದ್ದು, ಕಾರಿನ ಸೇಫ್ಟಿ ಫೀಚರ್ಸ್‌ಗಳನ್ನು ಮಾತ್ರವೇ ಬದಲಾವಣೆ ಮಾಡಲಾಗಿದೆ.

MOST READ: ತುಕ್ಕು ಹಿಡಿದ ಕಾರನ್ನು ಮಾರಾಟ ಮಾಡಿದ್ದ ಡೀಲರ್ಸ್‌ಗೆ ಬಿತ್ತು ಭಾರೀ ದಂಡ

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ರೀ ಎಂಟ್ರಿ ಕೊಟ್ಟ ಮಾರುತಿ ಸುಜುಕಿ ಡಿಜೈರ್ ಟೂರ್ ಎಸ್

ಡಿಜೈರ್ ಟೂರ್ ಎಸ್ ಮಾದರಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಇದರಲ್ಲಿ ಪೆಟ್ರೋಲ್ 1.2-ಲೀಟರ್ ಎಂಜಿನ್ ಸಿಎನ್‌ಜಿ ಆಯ್ಕೆ ಜೋಡಿಸಲಾಗಿದೆ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ರೀ ಎಂಟ್ರಿ ಕೊಟ್ಟ ಮಾರುತಿ ಸುಜುಕಿ ಡಿಜೈರ್ ಟೂರ್ ಎಸ್

ಈ ಮೂಲಕ ಪೆಟ್ರೋಲ್ ಮಾದರಿಯು 83-ಬಿಎಚ್‌ಪಿ ಉತ್ಪಾದನೆ ಮಾಡಿದರೆ, ಪೆಟ್ರೋಲ್ ಮತ್ತು ಸಿಎನ್‌ಜಿ ಜೊತೆಗಾಗಿ 70-ಬಿಎಚ್‌ಪಿ ಉತ್ಪಾದನೆ ಮಾಡುವ ಮೂಲಕ ಉತ್ತಮ ಮೈಲೇಜ್ ನೀಡಬಲ್ಲದು. ಹಾಗೆಯೇ ಡೀಸೆಲ್ ಮಾದರಿಯು 75-ಬಿಎಚ್‌ಪಿ ಮೂಲಕ ಉತ್ತಮ ಮೈಲೇಜ್ ನೀಡಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದಿವೆ.

MOST READ: ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಎಸ್‌ಬಿಐನಿಂದ ಬಂಪರ್ ಆಫರ್

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ರೀ ಎಂಟ್ರಿ ಕೊಟ್ಟ ಮಾರುತಿ ಸುಜುಕಿ ಡಿಜೈರ್ ಟೂರ್ ಎಸ್

ಇನ್ನು 2020ಕ್ಕೆ ಜಾರಿಗೆ ಬರಲಿರುವ ಬಿಎಸ್ 6 ನಿಯಮ ಕೂಡಾ ಆಟೋ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗುತ್ತಿದ್ದು, ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ವಾಹನ ಎಂಜಿನ್ ಹೊಸ ಬದಲಾವಣೆಯನ್ನು ತರಲಾಗುತ್ತಿದೆ. ಹೊಸ ನಿಯಮದಿಂದ ಪ್ರತಿ ಕಾರುಗಳಲ್ಲೂ ಸ್ಮಾರ್ಟ್ ಹೈಬ್ರಿಡ್ ಜೋಡಣೆಯಾಗಲಿದ್ದು, ಮಾಲಿನ್ಯ ತಗ್ಗಿಸುವುದಲ್ಲದೇ ಮೈಲೇಜ್ ಹೆಚ್ಚಳಕ್ಕೂ ಸಹಕಾರಿಯಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಟೂರ್ ಎಸ್ ಸೇರಿದಂತೆ ಬಹುತೇಕ ಕಾರುಗಳು ಮತ್ತಷ್ಟು ಬದಲಾವಣೆ ಹೊಂದಲಿವೆ.

Most Read Articles

Kannada
English summary
Maruti Dzire ‘Tour S’ Taxi Variant Updated — Receives Price Hike As Well. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X