ಬಿಡುಗಡೆಗೆ ಸಜ್ಜಾದ 1.5-ಲೀಟರ್ ಡೀಸೆಲ್ ಎಂಜಿನ್ ಪ್ರೇರಿತ ಹೊಸ ಎರ್ಟಿಗಾ
ಮಾರುತಿ ಸುಜುಕಿ ಸಂಸ್ಥೆಯು ಎಂಪಿವಿ ಮಾದರಿಯಾದ ಎರ್ಟಿಗಾ ಉತ್ಪಾದನೆ ಮತ್ತು ಮಾರಾಟದಲ್ಲಿ ಈಗಾಗಲೇ ಯಶಸ್ವಿ ಸಾಧಿಸಿದ್ದು, ಮುಂದಿನ ದಿನಗಳಲ್ಲಿ ಕೆಲವೇ 1.5-ಲೀಟರ್ ಡೀಸೆಲ್ ಎಂಜಿನ್ ಪ್ರೇರಿತ ಹೊಸ ಎರ್ಟಿಗಾ ಆವೃತ್ತಿಯನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿರುವುದಲ್ಲದೇ ಸ್ಪಾಟ್ ಟೆಸ್ಟಿಂಗ್ ಕೂಡಾ ನಡೆಸುತ್ತಿದೆ.

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ಮಾರುಕಟ್ಟೆಯಲ್ಲಿ 1.5-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಪ್ರೇರಿತ ಎರ್ಟಿಗಾ ಆವೃತ್ತಿಯನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮುಂದಿನ ಕೆಲವೇ ದಿನಗಳಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಪರಿಚಯಿಸುವ ಇರಾದೆಯಲ್ಲಿದೆ. ಹೀಗಾಗಿ ಬರಲಿರುವ ಹೊಸ ಕಾರು ಪ್ರಸ್ತುತ ಕಾರು ಮಾದರಿಗಿಂತಲೂ ಹೆಚ್ಚಿನ ಮಟ್ಟದ ಎಂಜಿನ್ ಪರ್ಫಾಮೆನ್ಸ್ ಹೊಂದಿರಲಿದ್ದು, ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

ಜೊತೆಗೆ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಹೊಂದಿರುವ ಹೊಸ ಡೀಸೆಲ್ ಎಂಜಿನ್ ಮಾದರಿಯು 95-ಬಿಎಚ್‌ಪಿ ಮತ್ತು 225-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಡೀಸೆಲ್‌ಗೆ ಗರಿಷ್ಠ 26.83 ಕಿ.ಮಿ ಮೈಲೇಜ್ ಹಿಂದಿರುಗಿಸಲಿದೆ ಎನ್ನಲಾಗಿದೆ.
MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಹಾಗೆಯೇ ಹೊಸ ಕಾರಿನಲ್ಲಿ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಬದಲಾವಣೆಗೊಳಿಸುವ ಸಾಧ್ಯತೆಗಳಿದ್ದು, 7 ಸೀಟರ್ ಬದಲಾಗಿ ಹೊಸ ಕಾರು 6 ಸೀಟರ್ ಸೌಲಭ್ಯದೊಂದಿಗೆ ಕೆಲವು ಐಷಾರಾಮಿ ಗುಣಲಕ್ಷಣಗಳನ್ನು ಪಡೆದುಕೊಳ್ಳುತ್ತಿರುವುದು ಟೊಯೊಟಾ ಇನೋವಾ ಕ್ರಿಸ್ಟಾ ಆರಂಭಿಕ ಆವೃತ್ತಿ ಜಿ ಪ್ಲಸ್ ಕಾರಿಗೂ ಪ್ರತಿಸ್ಪರ್ಧೆಯಾಗಲಿದೆ ಎನ್ನಲಾಗಿದೆ.

ಇನ್ನು ಹೊಸ ಎರ್ಟಿಗಾ ಕಾರು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.44 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.10.90 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಒಟ್ಟು 10 ವೆರಿಯೆಂಟ್‌ಗಳಲ್ಲಿ ಎರ್ಟಿಗಾ ಕಾರುಗಳನ್ನು ಆಯ್ಕೆ ಮಾಡಬಹುದಾಗಿದೆ.
MOST READ: ಮಂಗಳೂರಿನಲ್ಲಿ ತಪ್ಪಿದ ಭೀಕರ ಅಪಘಾತ- ಎಬಿಎಸ್ ಇಲ್ಲವಾಗಿದ್ರೆ ಕಥೆ ಅಷ್ಟೇ..!

ಒಟ್ಟಿನಲ್ಲಿ 7 ಸೀಟರ್ ಮಾದರಿಯ ಎರ್ಟಿಗಾ ಕಾರು ಟೂರಿಸ್ಟ್ ಬಳಕೆಗೆ ಮತ್ತು ಕುಟುಂಬಸ್ಥರು ಒಟ್ಟಿಗೆ ಪಯಣಿಸಲು ಅನೂಕಲಕರವಾದ ಸೌಲಭ್ಯ ಹೊಂದಿದ್ದು, ಹಾಗೆಯೇ ಬರಲಿರುವ 1.5-ಡೀಸೆಲ್ ಎಂಜಿನ್ 6 ಸೀಟರ್ ಮಾದರಿಯು ಕಾರ್ಪೊರೆಟ್ ಕ್ಷೇತ್ರದ ಉದ್ಯಮಿಗಳ ಬಳಕೆಗೆ ವಿಷೇಶವಾಗಿ ನಿರ್ಮಾಣಗೊಳಿಸಲಾಗುತ್ತಿದೆ.
Source: Gaddiwaadi


Click it and Unblock the Notifications