ಅಧಿಕ ಮೈಲೇಜ್ ಪ್ರೇರಿತ ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ ಆವೃತ್ತಿ ಬಿಡುಗಡೆ

ಮಾರುತಿ ಸುಜುಕಿ ಸಂಸ್ಥೆಯು ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿದ್ದು, ಡೀಸೆಲ್ ಎಂಜಿನ್ ಕಾರುಗಳ ಉತ್ಪಾದನೆಯನ್ನು ಕೈಬಿಡಲು ನಿರ್ಧರಿಸಿದ ಬೆನ್ನಲ್ಲೇ ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ಆವೃತ್ತಿಗಳ ಮೇಲೆ ಹೆಚ್ಚಿನ ಗಮನಹರಿಸಿದೆ. ಇದೀಗ ಎರ್ಟಿಗಾ ಮಾದರಿಯಲ್ಲೂ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಕಡಿಮೆ ಮಾಲಿನ್ಯದ ಜೊತೆಗೆ ಉತ್ತಮ ಮೈಲೇಜ್ ಗಿಟ್ಟಿಸಿಕೊಳ್ಳಬಹುದಾಗಿದೆ.

ಅಧಿಕ ಮೈಲೇಜ್ ಪ್ರೇರಿತ ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ ಆವೃತ್ತಿ ಬಿಡುಗಡೆ

ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ಕೇಂದ್ರ ಸರ್ಕಾರವು ಆಟೋ ಉದ್ಯಮದಲ್ಲಿ ಹಲವು ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿದ್ದು, 2020ರ ಏಪ್ರಿಲ್ 1ರಿಂದ ಬಿಎಸ್-6 ನಿಯಮವನ್ನು ಅನುಷ್ಠಾನಕ್ಕೆ ತರಲು ಸಿದ್ದತೆ ನಡೆಸುತ್ತಿದೆ. ಈ ಹಿನ್ನೆಲೆ ಹೊಸ ನಿಯಮವನ್ನು ಪಾಲಿಸುತ್ತಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಅಧಿಕ ಪ್ರಮಾಣದ ಮಾಲಿನ್ಯ ಉತ್ಪತ್ತಿ ಮಾಡುವ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌‌ಗಳಿಗೆ ಗುಡ್ ಬೈ ಹೇಳಿ ಪರಿಸರ ಸ್ನೇಹಿ ವಾಹನಗಳಾದ ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ವಾಹನಗಳತ್ತ ಹೆಚ್ಚು ಗಮನಹರಿಸುತ್ತಿವೆ.

ಅಧಿಕ ಮೈಲೇಜ್ ಪ್ರೇರಿತ ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ ಆವೃತ್ತಿ ಬಿಡುಗಡೆ

ಇದೀಗ ಮಾರುತಿ ಸುಜುಕಿ ಸಂಸ್ಥೆಯು ಇದೇ ಕಾರಣಕ್ಕೆ ಅಗ್ಗದ ಬೆಲೆಯ ಡೀಸೆಲ್ ಎಂಜಿನ್‌ಗಳನ್ನು 2020ರ ಏಪ್ರಿಲ್ 1ರಿಂದ ಮಾರಾಟವನ್ನು ಬಂದ್ ಮಾಡುವುದಾಗಿ ಹೇಳಿಕೊಂಡಿದ್ದು, ಡೀಸೆಲ್ ಎಂಜಿನ್‌ಗೆ ಪರ್ಯಾಯವಾಗಿ ಸ್ಮಾರ್ಟ್ ಹೈಬ್ರಿಡ್ ಮತ್ತು ಸಿಎನ್‌ಜಿ ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಅಧಿಕ ಮೈಲೇಜ್ ಪ್ರೇರಿತ ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ ಆವೃತ್ತಿ ಬಿಡುಗಡೆ

ಈಗಾಗಲೇ ಮಾರುಕಟ್ಟೆಯಲ್ಲಿ ವ್ಯಾಗನ್‌ಆರ್, ಸೆಲೆರಿಯೊ, ಆಲ್ಟೋ 800 ಮಾದರಿಗಳಲ್ಲಿ ಸಿಎನ್‌ಜಿ ಆಯ್ಕೆಯನ್ನು ಪರಿಚಯಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಇದೀಗ ಎಂಪಿವಿ ಆವೃತ್ತಿಯಾದ ಎರ್ಟಿಗಾ ಮಾದರಿಯಲ್ಲೂ ಸಿಎನ್‌ಜಿ ಆಯ್ಕೆಯನ್ನು ನೀಡಲಾಗಿದ್ದು, ವಿಎಕ್ಸ್ಐ ಮತ್ತು ಟೂರ್ ಎಂ ಆವೃತ್ತಿಗಳಲ್ಲಿ ಸಿಎನ್‌ಜಿ ಮಾದರಿಯನ್ನು ಖರೀದಿ ಮಾಡಬಹುದಾಗಿದೆ.

ಅಧಿಕ ಮೈಲೇಜ್ ಪ್ರೇರಿತ ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ ಆವೃತ್ತಿ ಬಿಡುಗಡೆ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸಿಎನ್‌ಜಿ ಎರ್ಟಿಗಾ ಮಾದರಿಯು ವಿಎಕ್ಸ್ಐನಲ್ಲಿ ರೂ. 8,87,689ಕ್ಕೆ ಮತ್ತು ಟೂರ್ ಎಂ ಸಿಎನ್‌ಜಿ ಮಾದರಿಯು ರೂ. 8,82,689ಕ್ಕೆ ಖರೀದಿಗೆ ಲಭ್ಯವಿದ್ದು, ಸಿಎನ್‌ಜಿ ಆಯ್ಕೆ ಹೊಂದಿರುವ 1.5-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 103-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇನ್ನುಳಿದಂತೆ ಸಾಮಾನ್ಯ ಕಾರುಗಳಲ್ಲಿ ಬಹುತೇಕ ಫೀಚರ್ಸ್‌‌ಗಳನ್ನು ಹೊಸ ಆವೃತ್ತಿಯಲ್ಲೂ ಮುಂದುವರಿಸಲಾಗಿದೆ.

ಅಧಿಕ ಮೈಲೇಜ್ ಪ್ರೇರಿತ ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ ಆವೃತ್ತಿ ಬಿಡುಗಡೆ

ಸಿಎನ್‌ಜಿ ಎರ್ಟಿಗಾ ಮೈಲೇಜ್

ವ್ಯಯಕ್ತಿಯ ಬಳಕೆಗಾಗಿ ವಿಎಕ್ಸ್ಐ ಸಿಎನ್‌ಜಿಯನ್ನು ಮತ್ತು ವಾಣಿಜ್ಯ ಬಳಕೆಯಾಗಿ ಟೂರ್ ಎಂ ಸಿಎನ್‌ಜಿ ಕಾರನ್ನು ಖರೀದಿ ಮಾಡಬಹುದಾಗಿದ್ದು, ಪ್ರತಿ ಕೆ.ಜಿ ಸಿಎನ್‌ಜಿಗೆ ಎರ್ಟಿಗಾ ಮಾದರಿಯು 26.2ಕಿ.ಮಿ ಮೈಲೇಜ್ ನೀಡುತ್ತದೆ. ಇದು ಸಾಮಾನ್ಯ ಎರ್ಟಿಗಾ ಪೆಟ್ರೋಲ್ ಆವೃತ್ತಿಗಿಂತಲೂ ಅಧಿಕ ಮಟ್ಟದ ಮೈಲೇಜ್ ಕಾರು ಮಾದರಿಯಾಗಿದ್ದು, ಮಾಲಿನ್ಯ ಪ್ರಮಾಣ ಕೂಡಾ ಗಣನೀಯ ಪ್ರಮಾಣದಲ್ಲಿ ತಗ್ಗಿಸುತ್ತದೆ.

ಅಧಿಕ ಮೈಲೇಜ್ ಪ್ರೇರಿತ ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ ಆವೃತ್ತಿ ಬಿಡುಗಡೆ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಈ ಮೂಲಕ ಡೀಸೆಲ್ ಎಂಜಿನ್‌ನಲ್ಲಿ ದೊರೆಯುತ್ತಿದ್ದ ಮೈಲೇಜ್ ಪ್ರಮಾಣವನ್ನೇ ಪೆಟ್ರೋಲ್ ಹೈಬ್ರಿಡ್ ಮತ್ತು ಪೆಟ್ರೋಲ್ ಸಿಎನ್‌ಜಿ ವರ್ಷನ್‌ಗಳ ಮೂಲಕ ಒದಗಿಸಲು ಪ್ರಯತ್ನಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ಜಾರಿಯಾಗುವುದಕ್ಕೂ ಮುನ್ನವೇ ಗ್ರಾಹಕರನ್ನು ಹೊಸ ಕಾರುಗಳತ್ತ ಸೆಳೆಯುವ ವಿಶ್ವಾಸದಲ್ಲಿದೆ.

ಅಧಿಕ ಮೈಲೇಜ್ ಪ್ರೇರಿತ ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ ಆವೃತ್ತಿ ಬಿಡುಗಡೆ

ಹೀಗಾಗಿ ನಿಧಾನವಾಗಿ ಡೀಸೆಲ್ ಎಂಜಿನ್‌ಗಳ ಆಯ್ಕೆಯನ್ನು ಕಡಿತಗೊಳಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ಪ್ರತಿ ಕಾರು ಮಾದರಿಯಲ್ಲೂ ಸ್ಮಾರ್ಟ್ ಹೈಬ್ರಿಡ್, ಸಿಎನ್‌ಜಿ ಆವೃತ್ತಿಗಳನ್ನು ಪರಿಚಯಿಸುತ್ತಿದ್ದು, ಇದೀಗ ಎಂಪಿವಿ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಎರ್ಟಿಗಾ ಆವೃತ್ತಿಯಲ್ಲೂ ಸಿಎನ್‌ಜಿ ಬಿಡುಗಡೆ ಮಾಡಿದೆ.

ಅಧಿಕ ಮೈಲೇಜ್ ಪ್ರೇರಿತ ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ ಆವೃತ್ತಿ ಬಿಡುಗಡೆ

ಇನ್ನು ಎರ್ಟಿಗಾ ಸಾಮಾನ್ಯ ಆವೃತ್ತಿಯು ಕೂಡಾ ಸದ್ಯ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಬೇಡಿಕೆ ಹೊಂದಿದ್ದು, 1.5-ಲೀಟರ್ ಪೆಟ್ರೋಲ್, 1.3-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಎಕ್ಸ್‌ಶೋರೂಂ ಪ್ರಕಾರ ರೂ.7.45 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.11.21 ಲಕ್ಷ ಬೆಲೆ ಪಡೆದುಕೊಂಡಿದೆ.

ಅಧಿಕ ಮೈಲೇಜ್ ಪ್ರೇರಿತ ಮಾರುತಿ ಸುಜುಕಿ ಎರ್ಟಿಗಾ ಸಿಎನ್‌ಜಿ ಆವೃತ್ತಿ ಬಿಡುಗಡೆ

ಒಟ್ಟಿನಲ್ಲಿ 7-ಸೀಟರ್ ಕಾರು ಮಾದರಿಗಳಲ್ಲಿ ವಿಶೇಷ ಎನ್ನಿಸುವ ಹೊಸ ಎರ್ಟಿಗಾ ಮಾದರಿಯು ದೇಶದಲ್ಲಿ ಉತ್ತಮ ಇಂಧನ ದಕ್ಷತೆ ಹೊಂದಿರುವ ಎಂಪಿವಿ ಕಾರುಗಳಲ್ಲಿ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಮರಾಜೊ ಮತ್ತು ಇನೋವಾ ಕ್ರಿಸ್ಟಾ ಆರಂಭಿಕ ಆವೃತ್ತಿಗಳನ್ನು ಖರೀದಿಗೆ ಬಯಸುವ ಗ್ರಾಹಕರಿಗೆ ಎರ್ಟಿಗಾ ಅತ್ಯುತ್ತಮ ಆಯ್ಕೆಯಾಗಲಿದೆ.

Most Read Articles

Kannada
English summary
Maruti Suzuki Ertiga CNG Launched In India — Prices Start At Rs 8.82 Lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X