ಎರ್ಟಿಗಾ ಕಾರಿನಲ್ಲಿರುವ 1.3 ಲೀ ಹಾಗೂ 1.5 ಲೀ ಡೀಸೆಲ್ ಎಂಜಿನ್‍ಗಳಲ್ಲಿ ಯಾವುದು ಬೆಸ್ಟ್?
ಮಾರುತಿ ಸುಜುಕಿ ಕಂಪನಿಯು ಇತ್ತೀಚಿಗಷ್ಟೆ ದೇಶಿಯ ಮಾರುಕಟ್ಟೆಯಲ್ಲಿ ಅಪ್‍ಡೇಟ್ ಮಾಡಲಾದ ಎರ್ಟಿಗಾ ಎಂಪಿವಿ ವಾಹನವನ್ನು ಬಿಡುಗಡೆಗೊಳಿಸಿದೆ. ಈ ಕಾರಿನಲ್ಲಿ ಹೊಸ ಬಗೆಯ ವಿನ್ಯಾಸಗಳ ಜೊತೆಗೆ ಹೊಸ ಫೀಚರ್ ಹಾಗೂ ಎಕ್ವಿಪ್‍ಮೆಂಟ್‍ಗಳನ್ನು ಅಳವಡಿಸಲಾಗಿದೆ. ಹಳೆ ಮಾದರಿಯ ಕಾರಿಗಿಂತ ಹೆಚ್ಚಿನ ಫೀಚರ್‍ಗಳನ್ನು ಅಳವಡಿಸಲಾಗಿದೆ.

ಮೊದಲಿಗೆ ಮಾರುತಿ ಕಂಪನಿಯು ಎರ್ಟಿಗಾ ಕಾರ್ ಅನ್ನು 1.3 ಲೀಟರಿನ ಡೀಸೆಲ್ ಎಂಜಿನ್‍ನೊಂದಿಗೆ ಬಿಡುಗಡೆಗೊಳಿಸಿತ್ತು. ಅಪ್‍ಡೇಟ್‍ನ ನಂತರ 1.5 ಲೀಟರಿನ ಡೀಸೆಲ್ ಎಂಜಿನ್ ಹೊಂದಿರುವ ಹೊಸ ವಾಹನವನ್ನು ಬಿಡುಗಡೆಗೊಳಿಸಿದೆ. ಎರ್ಟಿಗಾ ಕಾರ್ ಅನ್ನು ಈಗ 1.3 ಲೀಟರಿನ ಡಿಡಿಐಎಸ್200 ಎಂಜಿನ್ ಹಾಗೂ ಹೊಸ 1.5 ಲೀಟರಿನ ಡಿಡಿಐಎಸ್225 ಎಂಜಿನ್ ಎರಡೂ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಎರಡೂ ಎಂಜಿನ್‍ಗಳಲ್ಲಿರುವ ವ್ಯತ್ಯಾಸವೇನು, ಎರಡರಲ್ಲಿ ಯಾವುದು ಉತ್ತಮವೆನ್ನುವುದನ್ನು ತಿಳಿಯೋಣ.

ಎಂಜಿನ್
1.3 ಲೀಟರಿನ ಡಿಡಿಐಎಸ್200 ಮಾರುತಿ ಕಂಪನಿಯ ವಿಶ್ವಾಸಾರ್ಹವಾದ ಎಂಜಿನ್ ಆಗಿದೆ. ಈ ಎಂಜಿನ್ ಅನ್ನು ಫಿಯೆಟ್ ಕಂಪನಿಯ ವಾಹನಗಳಲ್ಲಿದ್ದ ಎಂಜಿನ್‍ನ ಆಧಾರದ ಮೇಲೆ ತಯಾರಿಸಲಾಗಿದೆ. ಈ ಎಂಜಿನ್ ಅನ್ನು ಮೊದಲ ಬಾರಿಗೆ 2007ರಲ್ಲಿ ಬಿಡುಗಡೆಯಾದ ಸ್ವಿಫ್ಟ್ ಹ್ಯಾಚ್‍ಬ್ಯಾಕ್ ಕಾರಿನಲ್ಲಿ ಅಳವಡಿಸಲಾಗಿತ್ತು.

ನಂತರದ ವರ್ಷಗಳಲ್ಲಿ ಈ ಎಂಜಿನ್ ಅನ್ನು ಹಲವಾರು ಬಾರಿ ಅಪ್‍ಡೇಟ್ ಮಾಡಲಾಗಿದೆ. ಈಗ ಈ ಎಂಜಿನ್ ಅನ್ನು ಸ್ವಿಫ್ಟ್, ಡಿಜೈರ್, ಎರ್ಟಿಗಾ, ಸಿಯಾಜ್ ಹಾಗೂ ವಿಟಾರಾ ಬ್ರಿಝಾ ವಾಹನಗಳಲ್ಲಿ ಅಳವಡಿಸಲಾಗಿದೆ.

1.5 ಲೀಟರಿನ ಡಿಡಿಐಎಸ್225 ದೇಶಿಯ ಮಾರುಕಟ್ಟೆಯಲ್ಲಿರುವ ಹೊಸ ಬಗೆಯ ಡೀಸೆಲ್ ಎಂಜಿನ್ ಆಗಿದೆ. ಈ ಹೊಸ ಎಂಜಿನ್ ಅನ್ನು ಮಾರುತಿ ಕಂಪನಿಯು ತನ್ನದೇ ಘಟಕದಲ್ಲಿ ಅಭಿವೃದ್ಧಿಪಡಿಸಿದ್ದು, ಮೊದಲ ಬಾರಿಗೆ ಹೊಸ ತಲೆಮಾರಿನ ಸಿಯಾಜ್ ಸೆಡಾನ್ ಕಾರಿನಲ್ಲಿ ಅಳವಡಿಸಿತ್ತು. ನಂತರ ಎರ್ಟಿಗಾ ಕಾರಿನಲ್ಲಿ ಈ ಎಂಜಿನ್ ಅನ್ನು ಅಳವಡಿಸಲಾಯಿತು. ಈ ಎಂಜಿನ್ ಅನ್ನು ಮುಂಬರುವ ದಿನಗಳಲ್ಲಿ ಮತ್ತಷ್ಟು ಕಾರುಗಳಲ್ಲಿ ಅಳವಡಿಸಲಾಗುವುದು.

ಎಂಜಿನ್ ವಿಶೇಷತೆಗಳು
1.3 ಲೀಟರಿನ ಡಿಡಿಐಎಸ್ ಡೀಸೆಲ್ ಎಂಜಿನ್ 1,248 ಸಿಸಿ ಸಾಮರ್ಥ್ಯ ಹೊಂದಿದ್ದು, 89 ಬಿಹೆಚ್‍ಪಿ ಹಾಗೂ 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನಲ್ಲಿ 5 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಈ ಎಂಜಿನ್‍ನಲ್ಲಿ ಮಾರುತಿ ಕಂಪನಿಯ ಎಸ್‍ಹೆಚ್‍ವಿಎಸ್, ಸ್ಮಾರ್ಟ್ ಹೈಬ್ರಿಡ್ ಸಿಸ್ಟಂ ಅಳವಡಿಸಲಾಗಿದೆ. 1.3 ಲೀಟರ್ ಎಂಜಿನ್ ಹೊಂದಿರುವ ಎರ್ಟಿಗಾ ಕಾರು ಪ್ರತಿ ಲೀಟರಿಗೆ 25 ಕಿ.ಮೀ ನಷ್ಟು ಮೈಲೇಜ್ ನೀಡಲಿದೆ.
MOST READ: ಟ್ಯೂಬ್‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍ಲೆಸ್ ಟಯರ್ ಸದ್ದು ಶುರು

1.5 ಲೀಟರಿನ ಡಿಡಿಐಎಸ್225 ಎಂಜಿನ್ 1,498 ಸಿಸಿ ಸಾಮರ್ಥ್ಯ ಹೊಂದಿದ್ದು, 95 ಬಿಹೆಚ್‍ಪಿ ಹಾಗೂ 225 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ ಹೊಸ 6 ಸ್ಪೀಡಿನ ಮ್ಯಾನುವಲ್ ಗೇರ್‍ಬಾಕ್ಸ್ ಅಳವಡಿಸಲಾಗಿದೆ. ಈ ಎಂಜಿನ್‍ನಲ್ಲಿ ಮಾರುತಿ ಕಂಪನಿಯ ಎಸ್‍ಹೆಚ್‍ವಿಎಸ್ ಸಿಸ್ಟಂ ಅಳವಡಿಸಲಾಗಿಲ್ಲ. 1.5 ಲೀಟರಿನ ಎಂಜಿನ್ ಹೊಂದಿರುವ ಎರ್ಟಿಗಾ ಕಾರು ಪ್ರತಿ ಲೀಟರಿಗೆ 24 ಕಿ.ಮೀ ಮೈಲೇಜ್ ನೀಡಲಿದೆ.

ಎಂಜಿನ್ ಪರ್ಫಾಮೆನ್ಸ್
1.3 ಲೀಟರಿನ ಎಂಜಿನ್ ಅನ್ನು ಹಲವಾರು ಬಾರಿ ಅಪ್‍ಡೇಟ್ ಮಾಡಲಾಗಿದ್ದರೂ, 1.5 ಲೀಟರಿನ ಎಂಜಿನ್‍ಗೆ ಹೋಲಿಸಿದರೆ, ಸ್ವಲ್ಪ ಔಟ್‍ಡೇಟೆಡ್ ಆಗಿದೆ. 1.5 ಲೀಟರಿನ ಕಾರು ಆರಾಮದಾಯಕವಾದ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಈ ಎಂಜಿನ್‍ನಲ್ಲಿರುವ ಎನ್‍ಹೆಚ್‍ವಿ ಲೆವೆಲ್‍ಗಳಿಂದಾಗಿ ಕ್ಯಾಬಿನ್‍ನಲ್ಲಿ ಹೆಚ್ಚು ನಿಶಬ್ದವಿರಲಿದೆ. ಹೊಸ 6 ಸ್ಪೀಡಿನ ಮ್ಯಾನುವಲ್ ಗೇರ್‍ಬಾಕ್ಸ್ ನಿಂದಾಗಿ ಚಾಲನಾ ಅನುಭವವು ಹೆಚ್ಚಾಗಲಿದೆ.
MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಬಿಎಸ್ 6 ಮಾಲಿನ್ಯ ನಿಯಮಗಳು
ಎರಡೂ ಎಂಜಿನ್‍ಗಳನ್ನು ಬಿಎಸ್ 4 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ತಯಾರಿಸಲಾಗಿದೆ. ಮಾರುತಿ ಕಂಪನಿಯು 1.3 ಲೀಟರ್ ಡೀಸೆಲ್ ಎಂಜಿನ್‍ನ ನಿರ್ಮಾಣವನ್ನು, ಬಿಎಸ್6 ನಿಯಮಗಳಿಗೆ ತಕ್ಕಂತೆ ಇರದ ಕಾರಣ, ಸ್ಥಗಿತಗೊಳಿಸುವುದಾಗಿ ಈಗಾಗಲೇ ಘೋಷಿಸಿದೆ. 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಸ ನಿಯಮಗಳಿಗೆ ಅನುಸಾರವಾಗಿ ಅಪ್‍ಡೇಟ್ ಮಾಡಲಾಗುವುದು.

ಬೆಲೆಗಳು
1.3 ಲೀಟರ್ ಡೀಸೆಲ್ ಎಂಜಿನ್ ಅನ್ನು, ಎರ್ಟಿಗಾ ಕಾರಿನ ನಾಲ್ಕು ಮಾದರಿಗಳಲ್ಲೂಅಳವಡಿಸಲಾಗಿದೆ. ಈ ಕಾರಿನ ಆರಂಭಿಕ ಬೆಲೆಯು ರೂ.8.84 ಲಕ್ಷಗಳಾಗಿದ್ದು, ಟಾಪ್ ಮಾದರಿಯ ಕಾರಿನ ಬೆಲೆಯು ರೂ.10.90 ಲಕ್ಷಗಳಾಗಿದೆ. 1.5 ಲೀಟರ್ ಡೀಸೆಲ್ ಎಂಜಿನ್ ಬೆಲೆಯು ಪ್ರಿಮೀಯಂ ಕಾರುಗಳ ಆರಂಭಿಕ ಬೆಲೆಯು ರೂ.9.86 ಲಕ್ಷಗಳಾಗಿದ್ದು, ಟಾಪ್ ಮಾದರಿಯ ಕಾರಿನ ಬೆಲೆಯು ರೂ.11.20 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂ ದರಗಳಂತೆ ಇವೆ.
MOST READ: ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಎರಡೂ ಎಂಜಿನ್‍ಗಳಿಗೆ ಹೋಲಿಸಿದರೆ, ಮಾರುತಿ ಯ ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಉತ್ತಮವೆನಿಸುತ್ತದೆ. ಈ ಎಂಜಿನ್ ಇರುವ ಕಾರುಗಳು ಮೂಲ ಮಾದರಿಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಮಾದರಿಯಲ್ಲೂ ದೊರೆಯುತ್ತವೆ. ಹೊಸ ಎಂಜಿನ್ ಹೊಸ ಡ್ರೈವಿಂಗ್ ಅನುಭವವನ್ನು ಹೆಚ್ಚಿಸಲಿದೆ. ಹೆಚ್ಚುವರಿಯಾಗಿ 6 ಸ್ಫೀಡಿನ ಮ್ಯಾನುಯಲ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.


Click it and Unblock the Notifications