ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಮಾರುತಿ ಸುಜುಕಿ ನಿರ್ಮಾಣದ ಎರ್ಟಿಗಾ ಆವೃತ್ತಿಯು ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದು, ಕಳೆದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಎರ್ಟಿಗಾ ಮಾದರಿ ಕೂಡಾ ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ. ಹೀಗಿರುವಾಗಲೇ ಡೀಸೆಲ್ ಮಾದರಿಯ ಆರಂಭಿಕ ಆವೃತ್ತಿಯಲ್ಲಿ ಕೆಲವು ಬದಲಾವಣೆಯಾಗುತ್ತಿದ್ದು, ಆರಂಭಿಕ ಆವೃತ್ತಿ ಖರೀದಿಸುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಹೌದು, ಎರ್ಟಿಗಾ ಕಾರು ಮಾದರಿಯಲ್ಲಿ ಸದ್ಯಕ್ಕೆ 4 ಡೀಸೆಲ್ ಆವೃತ್ತಿಗಳು ಮತ್ತು 6 ಪೆಟ್ರೋಲ್ ಆವೃತ್ತಿಗಳು ಖರೀದಿಗೆ ಲಭ್ಯವಿದ್ದು, ಇದರಲ್ಲಿ ಡೀಸೆಲ್ ಆರಂಭಿಕ ಆವೃತ್ತಿಯಾದ ಎಲ್‌ಡಿಐ ಮಾದರಿಯು ಮುಂದಿನ ತಿಂಗಳು ಏಪ್ರಿಲ್ 1ರಿಂದಲೇ ಮಾರಾಟದಿಂದ ಸ್ಥಗಿತಗೊಳ್ಳುತ್ತಿದೆ. ಹೀಗಾಗಿ ಎಲ್‌ಡಿಐ ಆವೃತ್ತಿಯು ಸ್ಥಗಿತಗೊಂಡಲ್ಲಿ ವಿಡಿಐ ಆವೃತ್ತಿಯೇ ಆರಂಭಿಕ ಮಾದರಿಯಾಗಲಿದ್ದು, ಆರಂಭಿಕ ಆವೃತ್ತಿ ಖರೀದಿಸುವ ಗ್ರಾಹಕರಿಗೆ ಇದು ತುಸು ಹೊರೆಯಾಗಿ ಪರಿಣಮಿಸಲಿದೆ.

ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಎರ್ಟಿಗಾ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಆರಂಭಿಕ ಪೆಟ್ರೋಲ್ ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.7.44 ಲಕ್ಷ ಬೆಲೆ ಹೊಂದಿದ್ದು, ಟಾಪ್ ಎಂಡ್ ಪೆಟ್ರೋಲ್ ಆವೃತ್ತಿಯು ಎಕ್ಸ್‌ಶೊರೂಂ ಪ್ರಕಾರ ರೂ. 9.95 ಲಕ್ಷ ಬೆಲೆ ಹೊಂದಿದೆ.

ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಹಾಗೆಯೇ ಡೀಸೆಲ್ ಮಾದರಿಗಳಲ್ಲಿ ಆರಂಭಿಕ ಆವೃತ್ತಿಯಾದ ಎಲ್‌ಡಿಐ ಕಾರಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.84 ಲಕ್ಷ ಬೆಲೆ ಹೊಂದಿದ್ದಲ್ಲಿ ಟಾಪ್ ಎಂಡ್ ಮಾದರಿಯು ರೂ.10.90 ಲಕ್ಷ ಬೆಲೆ ಪಡೆದುಕೊಂಡಿದೆ. ಆದ್ರೆ ಮುಂಬರುವ ಏಪ್ರಿಲ್ 1ರಿಂದ ಎಲ್‌ಡಿಐ ಆವೃತ್ತಿಯು ಮಾರಾಟದಿಂದ ಸ್ಥಗಿತಗೊಂಡಲ್ಲಿ ವಿಡಿಐ ಕಾರು ಆರಂಭಿಕ ಆವೃತ್ತಿಯಾಗಿ ಮಾರಾಟವಾಗಲಿದೆ.

ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಹೀಗಾಗಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿಯನ್ನು ಖರೀದಿ ಬಯಸುವ ಗ್ರಾಹಕರು ಅನಿವಾರ್ಯವಾಗಿ ರೂ. 9.56 ಲಕ್ಷ ಪಾವತಿ ವಿಡಿಐ ಆವೃತ್ತಿಯನ್ನೇ ಆಯ್ಕೆ ಮಾಡಬೇಕಾದ ಅನಿವಾರ್ಯತೆಗಳಿದ್ದು, ಸ್ಥಗಿತಗೊಳ್ಳಲಿರುವ ಎಲ್‌ಡಿಐ ಆವೃತ್ತಿಗಿಂತಲೂ ವಿಡಿಐ ಆವೃತ್ತಿಯು ರೂ.72 ಸಾವಿರ ದುಬಾರಿ ಎನ್ನಿಸಲಿದೆ.

ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಎರ್ಟಿಗಾ ಕಾರಿನ ವೆರಿಯೆಂಟ್‌ಗಳು ಮತ್ತು ಬೆಲೆ ಪಟ್ಟಿ(ದೆಹಲಿ ಎಕ್ಸ್‌ಶೋರೂಂ ಪ್ರಕಾರ)

ಎಲ್ಎಕ್ಸ್ಐ(ಪೆಟ್ರೋಲ್ ಮ್ಯಾನುವಲ್) - ರೂ. 7,44,000

ವಿಎಕ್ಸ್ಐ(ಪೆಟ್ರೋಲ್ ಮ್ಯಾನುವಲ್) - ರೂ. 8,16,000

ಜೆಡ್ಎಕ್ಸ್ಐ (ಪೆಟ್ರೋಲ್ ಮ್ಯಾನುವಲ್) - ರೂ. 8,99,000

ಜೆಡ್ಎಕ್ಸ್ಐ ಪ್ಲಸ್ (ಪೆಟ್ರೋಲ್ ಮ್ಯಾನುವಲ್)- 9,50,000

*****

ವಿಎಕ್ಸ್ಐ- (ಪೆಟ್ರೋಲ್ ಆಟೋಮ್ಯಾಟಿಕ್) - ರೂ. 9,18,000

ಜೆಡ್ಎಕ್ಸ್ಐ- (ಪೆಟ್ರೋಲ್ ಆಟೋಮ್ಯಾಟಿಕ್) - ರೂ. 9,95,000

*****

ಎಲ್‌ಡಿಐ (ಡೀಸೆಲ್ ಮ್ಯಾನುವಲ್) - 8,84,000(ಸ್ಥಗಿತಗೊಳ್ಳಲಿರುವ ಕಾರು)

ವಿಡಿಐ (ಡೀಸೆಲ್ ಮ್ಯಾನುವಲ್) - 9,56,000

ಜೆಡ್‌ಡಿಐ (ಡೀಸೆಲ್ ಮ್ಯಾನುವಲ್) - 10,39,000

ಜೆಡ್‌ಡಿಐ ಪ್ಲಸ್ (ಡೀಸೆಲ್ ಮ್ಯಾನುವಲ್)- 10,90,000

ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಇನ್ನು ಎರ್ಟಿಗಾ ಎಲ್‌ಡಿಐ ಆವೃತ್ತಿಯನ್ನ ಸ್ಥಗಿತಗೊಳಿಸುತ್ತಿರುವ ಬಗ್ಗೆ ಮಾರುತಿ ಸುಜುಕಿ ತನ್ನ ಅಧಿಕೃತ ಡೀಲರ್ಸ್‌ಗಳಿಗೆ ಮಾಹಿತಿ ರವಾನೆ ಮಾಡಿದ್ದು, ಮಾರ್ಚ್ 1ರಿಂದಲೇ ಎಲ್‌ಡಿಐ ಆವೃತ್ತಿಯ ಖರೀದಿಗಾಗಿ ಬುಕ್ಕಿಂಗ್ ಸ್ವಿಕರಿಸದಂತೆ ಸೂಚನೆ ನೀಡಿದೆ. ಇದರಿಂದ ಈ ಹಿಂದೆ ಬುಕ್ ಮಾಡಿರುವ ಗ್ರಾಹಕರಿಗೆ ಮಾತ್ರವೇ ಎಲ್‌ಡಿಐ ಲಭ್ಯವಾಗಲಿದ್ದು, ವಾಣಿಜ್ಯ ಬಳಕೆಗಾಗಿ ಈ ಆವೃತ್ತಿಯು ಅತಿ ಹೆಚ್ಚು ಬೇಡಿಕೆ ಪಡೆದಿತ್ತು.

ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಹೀಗಿದ್ದರೂ ಕೂಡಾ ಎಲ್‌ಡಿಐ ಆವೃತ್ತಿಯನ್ನು ಸ್ಥಗಿತಗೊಳಿಸುತ್ತಿರುವ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡದ ಮಾರುತಿ ಸುಜುಕಿ ಸಂಸ್ಥೆಯು ಕೇವಲ ಸ್ಥಗಿತಗೊಳಿಸುತ್ತಿರುವ ಬಗ್ಗೆ ಸುಳಿವು ನೀಡಿದ್ದು, ಕೆಲವು ಮಾಹಿತಿಗಳ ಪ್ರಕಾರ ಎರ್ಟಿಗಾದಲ್ಲಿಯೇ ಮತ್ತೊಂದು ಸಿಕ್ಸ್ ಸೀಟರ್ ಬಿಡುಗಡೆಯ ಉದ್ದೇಶ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಮಾರುತಿ ಸುಜುಕಿ ಸಂಸ್ಥೆಯ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಎರ್ಟಿಗಾ ಮಾರಾಟದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಪ್ರಸ್ತುತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೆಕ್ಸ್ಟ್ ಜನರೇಷನ್ ಎರ್ಟಿಗಾ ಕಾರನ್ನು ರಸ್ತೆಗಿಳಿಸಿದೆ. 'ಹಾರ್ಟ್‍ಟೆಕ್ಟ್' ಪ್ಲಾಟ್‍‍ಫಾರ್ಮ್‍ನ ಅಡಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಹಿಂದಿನ ತಲೆಮಾರಿನ ಎರ್ಟಿಗಾ ಕಾರುಗಳಿಗಿಂತಾ ಹೊಸ ತಲೆಮಾರಿನ ಎರ್ಟಿಗಾ ಕಾರು ತುಸು ದೊಡ್ಡ ಆಕಾರವನ್ನು ಪಡೆದುಕೊಂಡಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಹೊಸ ಎರ್ಟಿಗಾ ಕಾರಿನಲ್ಲಿ ಈ ಬಾರಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‍‍ಬೋರ್ಡ್ ಅನ್ನು ಅಳವಡಿಸಲಾಗಿದ್ದು, ಹೊಸ ಸಿಯಾಜ್ ಕಾರಿನಲ್ಲಿ ಒದಗಿಸಲಾಗಿರುವ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್ ಮತ್ತು ವುಡನ್ ಟ್ರಿಮ್ ಅನ್ನು ಇಲ್ಲು ಸಹ ನೀಡಲಾಗಿದೆ. ಇದು ಕಾರಿನ ಒಳಾಂಗಣ ವಿನ್ಯಾಸಕ್ಕೆ ಮತ್ತಷ್ಟು ಮೆರಗು ತಂದಿದೆ ಎನ್ನಬಹುದು.

ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿರುವ 7-ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಸ ಎರ್ಟಿಗಾದಲ್ಲೂ ಬಳಕೆ ಮಾಡಲಾಗಿದ್ದು, ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಮತ್ತು ಬ್ಲೂಟೂಥ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೇ ಕಪ್ ಹೋಲ್ಡರ್ಸ್ ಅನ್ನೂ ಕೂಡಾ ನೀಡಲಾಗುತ್ತಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್‍‍‍ಗೆ ಸಹಾಯವಾಗುವ ಹಲವಾರು ಬಟನ್‍‍ಗಳೊಂದಿಗೆ ಲೆದರ್‍ ಹೊದಿಕೆಯಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಜೋಡಿಸಲಾಗಿದೆ.

MOST READ: ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಮೈಲೇಜ್- ಭಾರೀ ಸದ್ದು ಮಾಡಲಿವೆ ಈ ಮೂರು ಎಲೆಕ್ಟ್ರಿಕ್ ಕಾರುಗಳು..!

ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಎರ್ಟಿಗಾ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕಾರಿನ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಇದಲ್ಲದೆ ಹೈ ಎಂಡ್ ಮಾದರಿಗಳಲ್ಲಿ ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಒದಗಿಸಲಾಗಿದೆ.

ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಎಂಜಿನ್ ಸಾಮರ್ಥ್ಯ

ಎರ್ಟಿಗಾ ಹೊಸ ತಲೆಮಾರಿನ ಕಾರಿನಲ್ಲಿ ಪ್ರಮುಖ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಈ ಹಿಂದಿನ 1.4-ಲೀಟರ್ ಪೆಟ್ರೋಲ್ ಎಂಜಿನ್ ಬದಲಾಗಿ 1.5-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದೆ. ಹಾಗೆಯೇ ಡೀಸೆಲ್ ಕಾರು 1.3-ಲೀಟರ್ ಎಂಜಿನ್ ಪಡೆದಿದ್ದು, ಇಂಧನ ದಕ್ಷತೆ ಹೆಚ್ಚಿಸಲು ಎಸ್‍‍ಹೆಚ್‍‍ವಿಎಸ್ ಮೈಲ್ಡ್-ಹೈಬ್ರಿಡ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ.

ಏಪ್ರಿಲ್ 1ರಿಂದ ಮಾರುತಿ ಎರ್ಟಿಗಾ ಡೀಸೆಲ್ ಆರಂಭಿಕ ಆವೃತ್ತಿ ಮತ್ತಷ್ಟು ದುಬಾರಿ..!

ಮಾರುತಿ ಸುಜುಕಿ ಸಂಸ್ಥೆಯು ಹೇಳಿಕೊಂಡಿರುವ ಪ್ರಕಾರ, ಡಿಸೇಲ್ ವರ್ಷನ್‌ಗಳು ಪ್ರತಿ ಲೀಟರ್‌ಗೆ 25 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಪೆಟ್ರೋಲ್ ಮಾದರಿಯ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ 19 ಕಿ.ಮಿ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18 ಕಿ.ಮಿ ಮೈಲೇಜ್ ಹಿಂದಿರುಗಿಸಲಿದೆ.

Kannada
English summary
Maruti Ertiga Diesel To Become More Expensive From April 1. Read in Kannada.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more