ಬಿಡುಗಡೆಯಾಯ್ತು ಎರ್ಟಿಗಾ ಟೂರ್ ಎಂ ಡೀಸೆಲ್ ಕಾರು

ಕಳೆದ ಜುಲೈ ತಿಂಗಳಿನಲ್ಲಿ ಮಾರುತಿ ಕಂಪನಿಯು ಎರ್ಟಿಗಾ ಟೂರ್ ಎಂ ಕಾರಿನ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಈ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.8 ಲಕ್ಷಗಳಾಗಿದೆ. ನಂತರ ಇದೇ ಮಾದರಿಯ ಸಿ‍ಎನ್‍‍ಜಿ ಆವೃತ್ತಿಯನ್ನು ರೂ.8.83 ಲಕ್ಷ ಬೆಲೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಬಿಡುಗಡೆಯಾಯ್ತು ಎರ್ಟಿಗಾ ಟೂರ್ ಎಂ ಡೀಸೆಲ್ ಕಾರು

ಟೂರ್ ಎಂ ಮಾದರಿಯ ಕಾರುಗಳು ಟ್ಯಾಕ್ಸಿಗಳಿಗಾಗಿ ಹಾಗೂ ಪ್ರವಾಸಗಳಿಗಾಗಿ ಹೇಳಿ ಮಾಡಿಸಿದ ಕಾರುಗಳಾಗಿವೆ. ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಮಾರುತಿ ಸುಜುಕಿ ಕಂಪನಿಯು ಟೂರ್ ಎಂ ಮಾದರಿಯ ಡೀಸೆಲ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಡೀಸೆಲ್ ಆವೃತ್ತಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.9.81 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಎರ್ಟಿಗಾ ಟೂರ್ ಎಂ ಡೀಸೆಲ್ ಕಾರು

ಮಾರುತಿ ಎರ್ಟಿಗಾ ಟೂರ್ ಎಂ ಡೀಸೆಲ್ ಆವೃತ್ತಿಯು ವಿ‍ಡಿ‍ಐ ಟ್ರಿಮ್ ಮೇಲೆ ಆಧಾರಿತವಾಗಿದೆ. ಈ ಕಾರು ವಿ‍‍‍ಡಿ‍ಐ ಟ್ರಿಮ್‍‍ಗಿಂತ ರೂ.5,000 ಕಡಿಮೆ ಬೆಲೆಯನ್ನು ಹೊಂದಿದೆ. ಬೆಲೆ ಕಡಿಮೆ ಮಾಡುವ ಉದ್ದೇಶದಿಂದ ಟ್ಯಾಕ್ಸಿಗಾಗಿ ಅಭಿವೃದ್ಧಿಪಡಿಸಲಾಗುವ ಕಾರುಗಳಲ್ಲಿ ಹಲವಾರು ಫೀಚರ್‍‍ಗಳನ್ನು ತೆಗೆದು ಹಾಕಲಾಗುತ್ತದೆ. ಆದರೆ ಎರ್ಟಿಗಾ ಕಾರಿನಲ್ಲಿ ಹೆಚ್ಚು ಫೀಚರ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಎರ್ಟಿಗಾ ಟೂರ್ ಎಂ ಡೀಸೆಲ್ ಕಾರು

ಈ ಪ್ರಯಾಣಿಕ ಕ್ಯಾರಿಯರ್ ಕಾರು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್, ಬಾಡಿ ಕಲರ್ ಡೋರ್ ಹ್ಯಾಂಡಲ್, ಒ‍ಆರ್‍‍ವಿ‍ಎಂ, ಹಬ್‍‍ಕ್ಯಾಪ್ಸ್ ಹಾಗೂ ಹಿಂಭಾಗದಲ್ಲಿ ಎಲ್‍ಇ‍‍ಡಿ ಲ್ಯಾಂಪ್‍‍ಗಳನ್ನು ಹೊಂದಿದೆ. ಈ ಆವೃತ್ತಿಯ ಕಾರ್ ಅನ್ನು ಬಿಳಿ, ಕಪ್ಪು ಹಾಗೂ ಸಿಲ್ವರ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಬಿಡುಗಡೆಯಾಯ್ತು ಎರ್ಟಿಗಾ ಟೂರ್ ಎಂ ಡೀಸೆಲ್ ಕಾರು

ಇನ್ನು ಈ ಕಾರಿನ ಒಳಭಾಗದಲ್ಲಿಯೂ ಸಹ ಅನೇಕ ಫೀಚರ್‍‍ಗಳನ್ನು ನೀಡಲಾಗಿದೆ. ಮಾರುತಿ ಎರ್ಟಿಗಾ ಟೂರ್ ಎಂ ಡೀಸೆಲ್ ಆವೃತ್ತಿಯು ಪವರ್ ವಿಂಡೊ, ಅಡ್ಜಸ್ಟಬಲ್ ಸ್ಟಿಯರಿಂಗ್, ರೇರ್ ಎಸಿ ವೆಂಟ್ಸ್, ಎಲೆಕ್ಟ್ರಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಹಾಗೂ ಮಡಚಬಹುದಾದ ಒ‍ಆರ್‍‍ವಿ‍ಎಂ, ಕೀ ಲೆಸ್ ಎಂಟ್ರಿಯ ರಿಮೋಟ್ ಸೇರಿದಂತೆ ಹಲವು ಫೀಚರ್‍‍ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಎರ್ಟಿಗಾ ಟೂರ್ ಎಂ ಡೀಸೆಲ್ ಕಾರು

ಹೊಸ ಸುರಕ್ಷಾ ನಿಯಮಗಳ ಪ್ರಕಾರ ಈ ಕಾರಿನಲ್ಲಿ ಡ್ಯುಯಲ್ ಏರ್‍‍ಬ್ಯಾಗ್, ಇ‍‍ಬಿ‍‍ಡಿ ಹೊಂದಿರುವ ಎ‍‍ಬಿ‍ಎಸ್, ಬ್ರೇಕ್ ಅಸಿಸ್ಟ್, ರೇರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಅಲರ್ಟ್ ಸಿಸ್ಟಂ ಹಾಗೂ ಮುಂಭಾಗದ ಪ್ರಯಾಣಿಕರಿಗಾಗಿ ಸೀಟ್ ಬೆಲ್ಟ್ ರಿಮೇಂಡರ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಎರ್ಟಿಗಾ ಟೂರ್ ಎಂ ಡೀಸೆಲ್ ಕಾರು

ಎರ್ಟಿಗಾ ಟೂರ್ ಎಂ ಡೀಸೆಲ್ ಆವೃತ್ತಿಯ ಕಾರಿನಲ್ಲಿ 1.5 ಲೀಟರಿನ ಡಿ‍‍ಡಿ‍ಐ‍ಎಸ್ 225 ಟರ್ಬೊ‍‍ಚಾರ್ಜ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 95 ಬಿ‍‍ಹೆಚ್‍‍ಪಿ ಪವರ್ ಹಾಗೂ 225 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಎ‍ಆರ್‍ಎ‍ಐ ಪ್ರಮಾಣ ಪತ್ರದಂತೆ ಈ ಕಾರು ಪ್ರತಿ ಲೀಟರ್ ಡೀಸೆಲಿಗೆ 24.2 ಕಿ.ಮೀ ಮೈಲೇಜ್ ನೀಡುತ್ತದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಬಿಡುಗಡೆಯಾಯ್ತು ಎರ್ಟಿಗಾ ಟೂರ್ ಎಂ ಡೀಸೆಲ್ ಕಾರು

ಭಾರತದ ಆಟೋ ಮೊಬೈಲ್ ಉದ್ಯಮವು ನಿಧಾನಗತಿಯ ಪ್ರಗತಿಯನ್ನು ಎದುರಿಸುತ್ತಿದ್ದರೂ ಅದರ ಪರಿಣಾಮವು ಮಾರುತಿ ಸುಜುಕಿ ಎರ್ಟಿಗಾದ ಮೇಲೆ ಅಷ್ಟಾಗಿ ಪರಿಣಾಮ ಬೀರಿಲ್ಲ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾದ ಎರಡನೇ ತಲೆಮಾರಿನ 7 ಸೀಟುಗಳ ಎರ್ಟಿಗಾ ಕಾರು ಟ್ಯಾಕ್ಸಿ ಸಂಸ್ಥೆಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.

MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಬಿಡುಗಡೆಯಾಯ್ತು ಎರ್ಟಿಗಾ ಟೂರ್ ಎಂ ಡೀಸೆಲ್ ಕಾರು

ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ಕಾರಿನ ಆಧಾರದ ಮೇಲೆ ತಯಾರಾದ ಎಕ್ಸ್ ಎಲ್6 ಪ್ರೀಮಿಯಂ ಕಾರ್ ಅನ್ನು ಕೆಲ ದಿನಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಎಕ್ಸ್ ಎಲ್ 6 ಕಾರ್ ಅನ್ನು ಯುವಜನರನ್ನು ಸೆಳೆಯುವ ಗುರಿಯನ್ನಿಟ್ಟುಕೊಂಡು ತಯಾರಿಸಲಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಿಡುಗಡೆಯಾಯ್ತು ಎರ್ಟಿಗಾ ಟೂರ್ ಎಂ ಡೀಸೆಲ್ ಕಾರು

ಎಕ್ಸ್ ಎಲ್6 ಕಾರುಗಳನ್ನು ನೆಕ್ಸಾ ಶೋರೂಂಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಎರ್ಟಿಗಾ ಹಾಗೂ ಎಕ್ಸ್ ಎಲ್6 ಕಾರುಗಳ 10,000ಕ್ಕೂ ಹೆಚ್ಚು ಯುನಿಟ್‍ಗಳು ಮಾರಾಟವಾಗಿವೆ.

ಬಿಡುಗಡೆಯಾಯ್ತು ಎರ್ಟಿಗಾ ಟೂರ್ ಎಂ ಡೀಸೆಲ್ ಕಾರು

ಸೆಪ್ಟೆಂಬರ್ ಕೊನೆಯಲ್ಲಿ ಎಸ್ ಪ್ರೆಸ್ಸೊ ಕ್ರಾಸ್ ಒವರ್ ಕಾರ್ ಅನ್ನು ಬಿಡುಗಡೆಗೊಳಿಸಿದ್ದ ಮಾರುತಿ ಸುಜುಕಿ ಕಂಪನಿಯು ಸದ್ಯಕ್ಕೆ ವ್ಯಾಗನ್ ಆರ್ ಹ್ಯಾಚ್‍‍ಬ್ಯಾಕ್ ಕಾರಿನ ಪ್ರೀಮಿಯಂ ಆವೃತ್ತಿಯನ್ನು ಅಭಿವೃದ್ಧಿಪಡಿಸುತ್ತಿದೆ.

Most Read Articles

Kannada
English summary
Maruti Ertiga Tour M diesel launched - Read in Kannada
Story first published: Monday, October 14, 2019, 10:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X