ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನಲ್ಲಿ ಯಾವ ವೆರಿಯೆಂಟ್ ಖರೀದಿಗೆ ಬೆಸ್ಟ್?

ಮಾರುತಿ ಸುಜುಕಿ ಸಂಸ್ಥೆಯು ತನ್ನ ಬಹುನೀರಿಕ್ಷಿತ ಎಸ್-ಪ್ರೆಸ್ಸೊ ಮೈಕ್ರೊ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರು ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಗ್ರಾಹಕರ ಬೇಡಿಕೆಯೆಂತೆ ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾಗಿರುವ ಎಸ್-ಪ್ರೆಸ್ಸೊದಲ್ಲಿ ಯಾವ ವೆರಿಯೆಂಟ್ ಖರೀದಿಗೆ ಉತ್ತಮ ಎನ್ನುವ ಕುರಿತು ಇಲ್ಲಿ ಚರ್ಚಿಸಲಾಗಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನಲ್ಲಿ ಯಾವ ವೆರಿಯೆಂಟ್ ಖರೀದಿಗೆ ಬೆಸ್ಟ್?

ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಕಾರು ಮಾರಾಟವನ್ನು ಹೆಚ್ಚಿಸಲು ಎಸ್-ಪ್ರೆಸ್ಸೊ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದು, ಬಿಎಸ್-6 ವೈಶಿಷ್ಟ್ಯತೆಯ 998 ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕಯನ್ನು ಹೊಂದಿದೆ. ಸಣ್ಣ ಕಾರುಗಳಲ್ಲೇ ವಿಶೇಷ ತಾಂತ್ರಿಕ ಸೌಲಭ್ಯ ಹೊಂದಿರುವ ಎಸ್-ಪ್ರೆಸ್ಸೊ ಕಾರು ಮುಂಬರುವ ದಿನಗಳಲ್ಲಿ ಭಾರೀ ಬೇಡಿಕೆ ಗಿಟ್ಟಿಸಿಕೊಳ್ಳುವ ನೀರಿಕ್ಷೆಯಲ್ಲಿದ್ದು, ವಿವಿಧ ವೆರಿಯೆಂಟ್‌ಗಳಲ್ಲಿ ನೀಡಲಾಗಿರುವ ತಾಂತ್ರಿಕ ಸೌಲಭ್ಯಗಳ ಬಗ್ಗೆ ವಿವರ ಇಲ್ಲಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನಲ್ಲಿ ಯಾವ ವೆರಿಯೆಂಟ್ ಖರೀದಿಗೆ ಬೆಸ್ಟ್?

ಎಸ್-ಪ್ರೆಸ್ಸೊ ಸ್ಟ್ಯಾಂಡರ್ಡ್( ಎಕ್ಸ್‌ಶೋರಂ ಬೆಲೆ ರೂ. 3.19 ಲಕ್ಷ)

ಹೊಸ ಎಸ್-ಪ್ರೆಸ್ಸೊ ಕಾರಿನ ಆರಂಭಿಕ ಕಾರು ಆವೃತ್ತಿಯಾಗಿರುವ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಚಾಲಕನ ವಿಭಾಗದ ಏರ್‌ಬ್ಯಾಗ್, ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಫ್ರಂಟ್ ಸೀಟ್‌ಬೆಲ್ಟ್ ರಿಮೆಂಡರ್, ಸ್ಪೀಡ್ ಅಲರ್ಟ್ ಸಿಸ್ಟಂ, ಡಿಜಿಟಲ್ ಸ್ಪೀಡೋ ಮೀಟರ್, ವೆಹಿಕಲ್ ಇಮ್‌ಮೊಬಿಲೆಸರ್ ಮತ್ತು 13-ಇಂಚಿನ ಸ್ಟಿಲ್ ವೀಲ್ಹ್ ನೀಡಲಾಗಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನಲ್ಲಿ ಯಾವ ವೆರಿಯೆಂಟ್ ಖರೀದಿಗೆ ಬೆಸ್ಟ್?

ಎಸ್-ಪ್ರೆಸ್ಸೊ ಎಲ್ಎಕ್ಸ್ಐ(ಎಕ್ಸ್‌ಶೋರೂಂ ಬೆಲೆ ರೂ. 4.05 ಲಕ್ಷ)

ಆರಂಭಿಕ ಆವೃತ್ತಿಯಾದ ಸ್ಟ್ಯಾಂಡರ್ಡ್ ಮಾದರಿಯಲ್ಲಿನ ಸೌಲಭ್ಯಗಳೊಂದಿಗೆ ಹೆಚ್ಚುವರಿಯಾಗಿ ಏರ್ ಕಂಡೀಷನರ್, ಪವರ್ ಸ್ಟೀರಿಂಗ್, ಸನ್ ವಿಷನರ್ ಸೌಲಭ್ಯಗಳನ್ನು ಹೊಂದಿದ್ದು, ಆರಂಭಿಕ ಆವೃತ್ತಿಯನ್ನು ಖರೀದಿ ಬಯಸುವ ಗ್ರಾಹಕರಿಗೆ ಇದು ಉತ್ತಮವಾಗಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನಲ್ಲಿ ಯಾವ ವೆರಿಯೆಂಟ್ ಖರೀದಿಗೆ ಬೆಸ್ಟ್?

ಎಸ್-ಪ್ರೆಸ್ಸೊ ವಿಎಕ್ಸ್ಐ, ವಿಎಕ್ಸ್ಐ (ಎಕ್ಸ್‌ಶೋರೂಂ ಪ್ರಕಾರ ರೂ. 4.48 ಲಕ್ಷದಿಂದ ರೂ. 4.91 ಲಕ್ಷ)

ಸ್ಟ್ಯಾಂಡರ್ಡ್ ಮತ್ತು ಎಲ್ಎಕ್ಸ್ಐ ಕಾರು ಮಾದರಿಗಳಲ್ಲಿನ ತಾಂತ್ರಿಕ ಸೌಲಭ್ಯಗಳೊಂದಿಗೆ ಹೆಚ್ಚುವರಿಯಾಗಿ ಕೀ ಲೆಸ್ ಎಂಟ್ರಿ, ಸೆಂಟ್ರಲ್ ಲಾಕಿಂಗ್, ಸ್ಪೀಡ್ ಸೆನ್ಸಿಟಿವ್ ಡೋರ್ ಲಾಕ್ಸ್, ಸ್ಮಾರ್ಟ್ ಡಾಕ್ ಆಡಿಯೋ ಸಿಸ್ಟಂ ಜೊತೆ ಬ್ಲೂ‌ಥೂತ್ ಕನೆಕ್ಟಿವಿಟಿ, ಫ್ರಂಟ್ ಪವರ್ ವಿಂಡೋ, ಬಾಡಿ ಕಲರ್ ಬಂಪರ್, ವೀಲ್ಹ್ ಕವರ್ ಜೊತೆಗೆ 14-ಇಂಚಿನ ಚಕ್ರಗಳು, ಗೇರ್‌ಶಿಫ್ಟ್ ಇಂಡಿಕೇಟರ್, 12ವಿ ಆಕ್ಸೆಸರಿಸ್ ಸಾಕೆಟ್ ಮತ್ತು ಗೇರ್ ಪೊಸಿಷನ್ ಇಂಡೀಕೆಟರ್ ಹೊಂದಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನಲ್ಲಿ ಯಾವ ವೆರಿಯೆಂಟ್ ಖರೀದಿಗೆ ಬೆಸ್ಟ್?

ಎಸ್-ಪ್ರೆಸ್ಸೊ ವಿಎಕ್ಸ್ಐ ಪ್ಲಸ್ (ರೂ.4.48 ಲಕ್ಷದಿಂದ ರೂ. 4.91 ಲಕ್ಷ)

ಟಾಪ್ ಎಂಡ್ ಮಾದರಿಯಾಗಿರುವ ವಿಎಕ್ಸ್ಐ ಪ್ಲಸ್ ಮಾದರಿಯು ಮೇಲಿನ ಸ್ಟ್ಯಾಂಡರ್ಡ್, ಎಲ್ಎಕ್ಸ್ಐ ಮತ್ತು ವಿಎಕ್ಸ್ಐ ಕಾರುಗಳಲ್ಲಿ ತಾಂತ್ರಿಕ ಸೌಲಭ್ಯದೊಂದಿಗೆ ಫ್ರಂಟ್ ಪ್ಯಾಸೆಂಜರ್ ಏರ್‌ಬ್ಯಾಗ್, 7-ಇಂಚಿನ ಸ್ಮಾರ್ಟ್ ಪ್ಲೇ ಸ್ಟುಡಿಯೋ, ಆ್ಯಪಲ್ ಕಾರ್ ಪ್ಲೇ/ಆಂಡ್ರಾಯಿಡ್ ಆಟೋ ಪ್ಲೇ, ಸ್ಟೀರಿಂಗ್ ಮೌಟೆಂಡ್ ಕಂಟ್ರೊಲ್ಸ್, ರಿಯರ್ ಪಾರ್ಸಲ್ ಟ್ರಾಯ್, ಬಾಡಿ ಕಲರ್ ವಿಂಗ್ ಮಿರರ್, ಪಾರ್ಕಿಂಗ್ ಬ್ರೇಕ್ ಮಿಯರ್ ಸೌಲಭ್ಯಗಳನ್ನು ನೀಡಲಾಗಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನಲ್ಲಿ ಯಾವ ವೆರಿಯೆಂಟ್ ಖರೀದಿಗೆ ಬೆಸ್ಟ್?

ಎಸ್-ಪ್ರೆಸ್ಸೊ ವೆರಿಯೆಂಟ್‌ಗಳ ಬೆಲೆ ಪಟ್ಟಿ

ವೆರಿಯೆಂಟ್‌ಗಳು ಬೆಲೆಗಳು(ಎಕ್ಸ್‌ಶೋರೂಂ)
ಎಸ್‌ಟಿಡಿ ರೂ. 3,69,000
ಎಲ್ಎಕ್ಸ್ಐ ರೂ. 4,05,000
ವಿಎಕ್ಸ್ಐ ರೂ. 4,24,500
ವಿಎಕ್ಸ್ಐ ಪ್ಲಸ್ ರೂ. 4,48,000
ವಿಎಕ್ಸ್ಐ ಎಜಿಎಸ್ ರೂ. 4,67,500
ವಿಎಕ್ಸ್ಐ ಪ್ಲಸ್ ಎಜಿಎಸ್ ರೂ. 4,91,000
ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನಲ್ಲಿ ಯಾವ ವೆರಿಯೆಂಟ್ ಖರೀದಿಗೆ ಬೆಸ್ಟ್?

ಇದರೊಂದಿಗೆ ಹೊಸ ಕಾರು ಕ್ವಿಡ್ ಮಾದರಿಯಲ್ಲೇ ಉದ್ದಳತೆ ಹೊಂದಿದ್ದು, 3,565-ಎಂಎಂ ಉದ್ದ, 1,520-ಎಂಎಂ ಅಗಲ, 1,564-ಎಂಎಂ ಎತ್ತರ, 2,380-ಎಂಎಂ ವೀಲ್ಹ್‌ಬೆಸ್, 180-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 165/70 ಆರ್14 ಟೈರ್ ಹೊಂದಿದೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನಲ್ಲಿ ಯಾವ ವೆರಿಯೆಂಟ್ ಖರೀದಿಗೆ ಬೆಸ್ಟ್?

ಈ ಮೂಲಕ ಎಂಟ್ರಿ ಲೆವೆಲ್ ಕಾರುಗಳಲ್ಲಿ ಅತ್ಯುತ್ತಮ ಆಯ್ಕೆಯನ್ನು ಹೊಂದಿರುವ ಕಾರು ಮಾದರಿ ಇದಾಗಿದ್ದು, ಮೊದಲ ಎರಡು ಕಾರು ಆವೃತ್ತಿಗಳಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಇದ್ದಲ್ಲಿ ಟಾಪ್ ಎಂಡ್ ಆವೃತ್ತಿಗಳು 5-ಸ್ಪೀಡ್ ಎಜಿಎಸ್(ಆಟೋ ಗೇರ್ ಶಿಫ್ಟ್) ಸೌಲಭ್ಯ ಹೊಂದಿವೆ.

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕಾರಿನಲ್ಲಿ ಯಾವ ವೆರಿಯೆಂಟ್ ಖರೀದಿಗೆ ಬೆಸ್ಟ್?

ಈ ಮೇಲಿನ ಎಲ್ಲಾ ತಾಂತ್ರಿಕ ಸೌಲಭ್ಯಗಳನ್ನು ಗಮನಿಸಿದಾಗ ಬಜೆಟ್ ಬೆಲೆಯಲ್ಲಿ ಎಲ್ಎಕ್ಸ್ಐ ಆವೃತ್ತಿಯು ಖರೀದಿ ಮಾಡಲು ಯೋಗ್ಯವಾದಲ್ಲಿ ಹೆಚ್ಚಿನ ಮಟ್ಟದ ಸೆಫ್ಟಿ ಫೀಚರ್ಸ ಬಯಸುವ ಗ್ರಾಹಕರಿಗೆ ಟಾಪ್ ಎಂಡ್ ಮಾದರಿಯಾದ ವಿಎಕ್ಸ್ಐ ಪ್ಲಸ್ ಅತ್ಯುತ್ತಮ ಆಯ್ಕೆ ಎನ್ನಬಹುದು.

Article Published On: Monday, September 30, 2019, 17:42 [IST]
English summary
Maruti Suzuki S-Presso Variants In Detail. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+