ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ 800 ಬಿಡುಗಡೆ

ಮಾರುತಿ ಸುಜುಕಿ ಸಂಸ್ಥೆಯು ಈಗಾಗಲೇ ಬಿಎಸ್-6 ಎಂಜಿನ್ ಪ್ರೇರಿತ ಪೆಟ್ರೋಲ್ ಕಾರುಗಳ ಮಾದರಿಗಳನ್ನು ಆಯ್ದ ಕಾರು ಆವೃತ್ತಿಗಳಲ್ಲಿ ಮಾರಾಟ ಮಾಡುತ್ತಿದ್ದು, ಇದೀಗ ಜನಪ್ರಿಯ ಕಾರು ಆವೃತ್ತಿಯಾದ ಆಲ್ಟೋ 800 ಬಿಎಸ್-6 ಮಾದರಿಯನ್ನು ಬಿಡುಗಡೆಗೊಳಿಸಿದೆ.

ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ 800 ಬಿಡುಗಡೆ

ಆಲ್ಟೋ 800 ವಿಎಕ್ಸ್ಐ ಪ್ಲಸ್ ವೆರಿಯೆಂಟ್ ಇದೀಗ ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.3.80 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ. 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರಲಿರುವ ಬಿಎಸ್-6 ನಿಯಮದಿಂದಾಗಿ ಹೊಸ ಕಾರಿನಲ್ಲಿ ಎಂಜಿನ್‌ ಮಾತ್ರವಲ್ಲದೇ ಸುರಕ್ಷಾ ಫೀಚರ್ಸ್‌ ಉನ್ನತೀಕರಿಸಲಾಗಿದ್ದು, ಪ್ರೀಮಿಯಂ ಸೌಲಭ್ಯಗಳನ್ನು ಜೋಡಣೆ ಮಾಡಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ 800 ಬಿಡುಗಡೆ

ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ ಆಲ್ಟೋ 800 ವಿಎಕ್ಸ್ಐ ಪ್ಲಸ್‌ನಲ್ಲಿ 2.0 ಏಳು ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಸ್ಟ್ಯಾಂಡರ್ಡ್ ಆಗಿ ಡ್ರೈವರ್ ಸೈಡ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ನೀಡಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ 800 ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಸೀಟ್ ಬೆಲ್ಟ್ ರಿಮೆಂಡರ್, ಸ್ಪೀಡ್ ಅಲರ್ಟ್ ಸೌಲಭ್ಯಗಳನ್ನು ಸಹ ನೀಡಲಾಗಿದ್ದು, ವರ್ಷದ ಆರಂಭದಲ್ಲಿ ಬಿಡುಗಡೆಗೊಂಡಿದ್ದ ಬಿಎಸ್-4 ಎಂಜಿನ್ ಪ್ರೇರಿತ ಆಲ್ಟೋ 800 ಫೇಸ್‌ಲಿಫ್ಟ್‌ಗಿಂತಲೂ ಹೊಸ ಕಾರಿನಲ್ಲಿ ಅತಿಹೆಚ್ಚು ಮರುಬಳಿಕೆ ಮಾಡಬಹುದಾದ ಬಿಡಿಭಾಗಗಳನ್ನು ಉಪಯೋಗಿಸಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ 800 ಬಿಡುಗಡೆ

ಎಂಜಿನ್ ಸಾಮಾರ್ಥ್ಯ

ಬಿಎಸ್-6 ಎಂಜಿನ್ ಹೊಂದಿರುವ ಆಲ್ಟೋ 800 ವಿಎಕ್ಸ್ಐ ಪ್ಲಸ್‌ ಕಾರು ಮಾದರಿಯು 796ಸಿಸಿ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಹೊಸ ಕಾರು ಹಳೆಯ ಮಾದರಿಗಿಂತ ಶೇ.25 ರಷ್ಟು ನೆಟ್ರೊಜೆನ್ ಆಕ್ಸೆಡ್ ಹೊರಹಾಕುವ ಮೂಲಕ ಪರಿಸರ ಸ್ನೇಹಿ ವಾಹನ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಈ ಮೂಲಕ 47-ಬಿಎಚ್‌ಪಿ ಮತ್ತು 69-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಹೊಸ ಕಾರು ಉತ್ತಮ ಎಂಜಿನ್ ಕಾರ್ಯಕ್ಷಮತೆ ಹೊಂದಿದೆ.

ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ 800 ಬಿಡುಗಡೆ

ಇದರೊಂದಿಗೆ ಹೊಸ ಕಾರು ಹಳೆಯ ಮಾದರಿಗಿಂತಲೂ ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ಪರಿಸರ ಸ್ನೇಹಿ ಕಾರು ಮಾದರಿ ಎಂಬ ಹೆಗ್ಗಳಿಕೆಯೊಂದಿಗೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದ್ದು, ಹೊಸ ಕಾರು ಖರೀದಿಗೆ ಇಂದಿನಿಂದಲೇ ಬುಕ್ಕಿಂಗ್ ಮಾಡಬಹುದಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ 800 ಬಿಡುಗಡೆ

ಇನ್ನು ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮ ಜಾರಿಗೆ ಬರುವ ಮುನ್ನವೇ ಹೊಸ ಎಂಜಿನ್ ಪ್ರೇರಿತ ಕಾರುಗಳ ಮಾರಾಟದಲ್ಲಿ ದಾಖಲೆಗೆ ಕಾರಣವಾಗಿದ್ದು, ಕಳೆದ ಏಳು ತಿಂಗಳ ಅವಧಿಯಲ್ಲಿ ಬರೋಬ್ಬರಿ 2.50 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.

ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ 800 ಬಿಡುಗಡೆ

ಸದ್ಯಕ್ಕೆ ಬಿಎಸ್-6 ಪೆಟ್ರೋಲ್ ಎಂಜಿನ್ ಪ್ರೇರಿತ ಕಾರುಗಳನ್ನು ಮಾತ್ರವೇ ಮಾಡುತ್ತಿರುವ ಮಾರುತಿ ಸುಜುಕಿಯು ಡೀಸೆಲ್ ಕಾರುಗಳನ್ನು ಬಿಎಸ್-4 ಎಂಜಿನ್‌‌ನೊಂದಿಗೆ ಮಾರಾಟ ಮುಂದುವರಿಸಿದ್ದು, ಶೀಘ್ರದಲ್ಲೇ ಬಿಎಸ್-6 ಎಂಜಿನ್ ಪ್ರೇರಿತ ಡೀಸೆಲ್ ಕಾರುಗಳನ್ನು ಮಾರಾಟ ಮಾಡಲಿದೆ.

ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ 800 ಬಿಡುಗಡೆ

ಜಗತ್ತಿನಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪ್ರೇರಿತ ವಾಹನಗಳ ಮಾರಾಟವನ್ನು ತಗ್ಗಿಸಲಾಗುತ್ತಿದ್ದು, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಹಿನ್ನಲೆ ಭವಿಷ್ಯದ ವಾಹನ ಮಾದರಿಗಳಿಗಾಗಿ ಮಾರುತಿ ಸುಜುಕಿ ಸಂಸ್ಥೆಯು ಹೊಸ ತಂತ್ರಜ್ಞಾನ ಪ್ರೇರಿತ ಹೈಬ್ರಿಡ್ ಪವರ್‌ಟ್ರೈನ್ ಅಭಿವೃದ್ದಿಗೊಳಿಸಿದೆ.

ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ 800 ಬಿಡುಗಡೆ

ಜಪಾನ್ ಆಟೋ ದಿಗ್ಗಜ ಸಂಸ್ಥೆಯಾದ ಸುಜುಕಿ ಸಂಸ್ಥೆಯು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸ್ವಿಫ್ಟ್ ಸ್ಪೋರ್ಟ್ ಮತ್ತು ವಿಟಾರ್ ಎಸ್‌ಯುವಿ ಕಾರು ಮಾದರಿಗಳಿಗಾಗಿ 48ವೋಲ್ಟ್ ಸ್ಪೆಲ್ಫ್ ಚಾರ್ಜ್ಡ್ ಕೆ14ಡಿ 1.4-ಲೀಟರ್ ಬೂಸ್ಟರ್‌ಜೆಟ್ ಟರ್ಬೋ ಪೆಟ್ರೋಲ್ ಎಂಜಿನ್ ಪರಿಚಯಿಸಿದ್ದು, ಹೊಸ ಹೈಬ್ರಿಡ್ ಎಂಜಿನ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿರುವ ಬ್ರೆಝಾ, ಸ್ವಿಫ್ಟ್, ಎಸ್-ಕ್ರಾಸ್ ಕಾರು ಮಾದರಿಗಳಿಗೂ ಜೋಡಣೆ ಮಾಡಲು ಉದ್ದೇಶಿಸಿದೆ.

ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ 800 ಬಿಡುಗಡೆ

ಮಾರುತಿ ಸುಜುಕಿಯು ಈಗಾಗಲೇ ಭಾರತದಲ್ಲಿ 16ವೊಲ್ಟ್ ಪ್ರೇರಿತ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ ಕಾರುಗಳನ್ನು ಮಾರಾಟಮಾಡುತ್ತಿದ್ದು, ಇದೀಗ ಹೊಸದಾಗಿ ಪರಿಚಯಿಸುತ್ತಿರುವ 1.4-ಲೀಟರ್ ಬೂಸ್ಟರ್‌ಜೆಟ್ ಟರ್ಬೋ ಪೆಟ್ರೋಲ್ ಎಂಜಿನ್ ಮತ್ತಷ್ಟು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಕಾರು ಖರೀದಿದಾರರನ್ನು ಆಕರ್ಷಿಸಲಿದೆ.

ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ 800 ಬಿಡುಗಡೆ

ಕೆ14ಡಿ 1.4-ಲೀಟರ್ ಬೂಸ್ಟರ್‌ಜೆಟ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಕೆ14ಸಿ ಪೆಟ್ರೋಲ್ ಎಂಜಿನ್‌‌ಗಿಂತಲೂ ಸಾಕಷ್ಟು ಸುಧಾರಣೆ ಕಂಡಿದ್ದು, ಹಳೆಯ ಎಂಜಿನ್‌ಗಿಂತಲೂ ಹೊಸ ಎಂಜಿನ್‌ನಲ್ಲಿ 15 ಕಿಲೋ ತೂಕವನ್ನು ಕಡಿತಗೊಳಿಸಲಾಗಿದೆ.

ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ 800 ಬಿಡುಗಡೆ

ಈ ಮೂಲಕ ಕೆ14ಡಿ 1.4-ಲೀಟರ್ ಬೂಸ್ಟರ್‌ಜೆಟ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ಹಳೆಯ ಎಂಜಿನ್‌ಗಿಂತಲೂ ಶೇ.20 ರಷ್ಟು ಮಾಲಿನ್ಯ ಹೊರಸೂಸುವಿಕೆಯಲ್ಲಿ ಇಳಿಕೆ ಕಂಡಿರುವುದಲ್ಲದೇ ಶೇ.15ರಷ್ಟು ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸುವಂತೆ ಮಾಡಿದೆ. ಇದರಿಂದ ಪೆಟ್ರೋಲ್ ಮಾದರಿಗಳಲ್ಲೂ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ನೀರಿಕ್ಷೆ ಮಾಡಬಹುದಾದ ಮೈಲೇಜ್ ಅನ್ನು ಈ ಪೆಟ್ರೋಲ್ ಹೈಬ್ರಿಡ್ ಎಂಜಿನ್‌ನಲ್ಲಿ ಪಡೆಯಬಹುದಲ್ಲದೇ ಪರ್ಫಾಮೆನ್ಸ್‌ನಲ್ಲೂ ಗಮನಸೆಳೆಯಲಿದೆ.

Most Read Articles

Kannada
English summary
Maruti Alto 800 VXI+ Launched In India. Read in Kannada.
Story first published: Thursday, December 19, 2019, 19:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X