ಸ್ಪಾಟ್ ಟೆಸ್ಟ್ ನಡೆಸುವಾಗ ಕಣ್ಣಿಗೆ ಬಿದ್ದ ಬಲೆನೊ ಹೈಬ್ರಿಡ್ ಕಾರು

ಜರ್ಮನಿ ಮೂಲದ ಬಿಡಿಭಾಗಗಳ ತಯಾರಕ ಕಂಪನಿ ಬಾಷ್, ಬೆಂಗಳೂರಿನಲ್ಲಿ ಮಾರುತಿ ಸುಜುಕಿಯ ಬಲೆನೊ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನವನ್ನು (ಎಸ್‌ಹೆಚ್ಇವಿ) ಪರೀಕ್ಷಿಸುತ್ತಿದೆ. ಬಲಶಾಲಿಯಾದ ಹೈಬ್ರಿಡ್ ಎಲೆಕ್ಟ್ರಿಕ್ ವಾಹನವು, 48ವಿ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿರುವ ಕಾರಿನ ಹೈಬ್ರಿಡ್ ಪೆಟ್ರೋಲ್ ಪವರ್‌ಟ್ರೇನ್‌ಗೆ, ಎಲೆಕ್ಟ್ರಿಕ್ ಮೋಟಾರ್ ಸಹಾಯ ಮಾಡುತ್ತದೆ.

ಸ್ಪಾಟ್ ಟೆಸ್ಟ್ ನಡೆಸುವಾಗ ಕಣ್ಣಿಗೆ ಬಿದ್ದ ಬಲೆನೊ ಹೈಬ್ರಿಡ್ ಕಾರು

ಮಾರುತಿ ಬಲೆನೊ ಎಸ್‌ಎಚ್‌ವಿಎಸ್ ಅನೇಕ ಚಾಲನಾ ವಿಧಾನಗಳನ್ನು ನೀಡಲಿದೆ ಎಂಬ ವದಂತಿಗಳಿವೆ. ಇವುಗಳಲ್ಲಿ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್, ಎಂಜಿನ್ ಅಸಿಸ್ಟ್, ಕೋಸ್ಟಿಂಗ್ ಹಾಗೂ ಬ್ರೇಕ್ ಎನರ್ಜಿ ಪುನರುತ್ಪಾದನೆಗಳಿರಲಿವೆ. ಬಲೆನೊದಲ್ಲಿ ಬಲವಾದ ಹೈಬ್ರಿಡ್ ಪವರ್‌ಟ್ರೇನ್‌ ಅನ್ನು ಪರೀಕ್ಷಿಸುವ ವದಂತಿಗಳಿವೆ.

ಸ್ಪಾಟ್ ಟೆಸ್ಟ್ ನಡೆಸುವಾಗ ಕಣ್ಣಿಗೆ ಬಿದ್ದ ಬಲೆನೊ ಹೈಬ್ರಿಡ್ ಕಾರು

ಬಾಷ್ ತನ್ನ ಬಿಡಿಭಾಗಗಳನ್ನು ಭಾರತದಲ್ಲಿರುವ ವಾಹನಗಳಲ್ಲಿ ಅಳವಡಿಸಿ ಪರೀಕ್ಷಿಸುತ್ತಿದೆ. ಆದರೆ ಯಾವುದೇ ವಾಹನಗಳನ್ನು ಬಿಡುಗಡೆಗೊಳಿಸಿಲ್ಲ. ಮಾರುತಿ ಸುಜುಕಿ ಹಲವಾರು ಹೈಬ್ರಿಡ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಬಾಷ್ ಬಿಡಿಭಾಗಗಳನ್ನು ಬಲೆನೊದಲ್ಲಿ ಕಾಣಬಹುದು.

ಸ್ಪಾಟ್ ಟೆಸ್ಟ್ ನಡೆಸುವಾಗ ಕಣ್ಣಿಗೆ ಬಿದ್ದ ಬಲೆನೊ ಹೈಬ್ರಿಡ್ ಕಾರು

ಮಾರುತಿ ಸುಜುಕಿ ಕಂಪನಿಯು, ತನ್ನ ಡೀಸೆಲ್ ಮಾದರಿಯ ವಾಹನಗಳ ಬದಲಿಗೆ ಹೈಬ್ರಿಡ್ ಕಾರುಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಕೆಲವು ಕಂಪನಿಗಳು ಬಿಎಸ್6 ಮಾನದಂಡಗಳನ್ನು ಅಪ್‌ಗ್ರೇಡ್ ಮಾಡುವುದು ವೆಚ್ಚದಾಯಕವಾದ ಕಾರಣ ಡೀಸೆಲ್ ಮಾದರಿಯ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿವೆ.

ಸ್ಪಾಟ್ ಟೆಸ್ಟ್ ನಡೆಸುವಾಗ ಕಣ್ಣಿಗೆ ಬಿದ್ದ ಬಲೆನೊ ಹೈಬ್ರಿಡ್ ಕಾರು

ಡೀಸೆಲ್ ಮಾದರಿಯ ವಾಹನಗಳನ್ನು ಸ್ಥಗಿತಗೊಳಿಸಿದ ನಂತರ ಬಲಶಾಲಿಯಾದ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಮಾದರಿಗಳನ್ನು ಅಭಿವೃದ್ಧಿಪಡಿಸಲು ಕಂಪನಿಗಳು ಚಿಂತನೆ ನಡೆಸಿವೆ. ಮಾರುತಿ ತನ್ನ ವಾಹನಗಳಿಗೆ ಹೈಬ್ರಿಡ್ ಪವರ್‌ಟ್ರೇನ್‌ಗಳನ್ನು ಅಭಿವೃದ್ಧಿಪಡಿಸಲು ಟೊಯೊಟಾ ಹಾಗೂ ಡೆನ್ಸೊ ಕಂಪನಿಗಳ ಜೊತೆಗೆ ಕೈಜೋಡಿಸಿದೆ.

ಸ್ಪಾಟ್ ಟೆಸ್ಟ್ ನಡೆಸುವಾಗ ಕಣ್ಣಿಗೆ ಬಿದ್ದ ಬಲೆನೊ ಹೈಬ್ರಿಡ್ ಕಾರು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಟೊಯೊಟಾ ಹಾಗೂ ಡೆನ್ಸೊ ಜೊತೆಗೂಡಿ ತಯಾರಿಸಿದ ಮೊದಲ ಹೈಬ್ರಿಡ್ ವಾಹನ ಬಲೆನೊ ಎಸ್‌ಎಚ್‌ವಿಎಸ್‍‍ಯಾಗಿದೆ. ಈ ವಾಹನದಲ್ಲಿ ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಅಳವಡಿಸಲಾಗಿದ್ದು, ವಾಹನದ ಅಲ್ಟರ್‍‍ನೇಟರ್ ಹೊರೆ ಕಡಿಮೆ ಮಾಡುವ ಮೂಲಕ ಆಕ್ಸೆಲೇರೆಟರ್ ಸಮಯದಲ್ಲಿ ಪೆಟ್ರೋಲ್ ಎಂಜಿನ್‌ಗೆ ಸಹಾಯ ಮಾಡುತ್ತದೆ.

ಸ್ಪಾಟ್ ಟೆಸ್ಟ್ ನಡೆಸುವಾಗ ಕಣ್ಣಿಗೆ ಬಿದ್ದ ಬಲೆನೊ ಹೈಬ್ರಿಡ್ ಕಾರು

ಮೈಲ್ಡ್ ಹೈಬ್ರಿಡ್ ವಾಹನವು ಬ್ರೇಕ್‌ಗಳ ಅಪ್ಲಿಕೇಶನ್‌ನಲ್ಲಿ ಬ್ಯಾಟರಿ ಪ್ಯಾಕ್ ಅನ್ನು ರೀಚಾರ್ಜ್ ಮಾಡಲು ಬ್ರೇಕ್ ರಿಜನರೇಷನ್ ಟೆಕ್ನಾಲಜಿಯನ್ನು ಸಹ ಒಳಗೊಂಡಿದೆ. ಮಾರುತಿ ಬಲೆನೊ ಎಸ್‌ಎಚ್‌ವಿಎಸ್ ವಾಹನವು 1.2 ಲೀಟರ್‍‍ನ ಬೂಸ್ಟರ್‌ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 90 ಬಿಹೆಚ್‌ಪಿ ಪವರ್ ಹಾಗೂ 119 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್ ನಡೆಸುವಾಗ ಕಣ್ಣಿಗೆ ಬಿದ್ದ ಬಲೆನೊ ಹೈಬ್ರಿಡ್ ಕಾರು

ಈ ವಾಹನವು ಒಂದು ಲೀಟರ್ ಪೆಟ್ರೋಲ್‌ಗೆ 23.87 ಕಿ.ಮೀ ಮೈಲೇಜ್ ನೀಡಲಿದೆ. ಮಾರುತಿ ಬಲೆನೊ 48ವಿ ಪೆಟ್ರೋಲ್ ಹೈಬ್ರಿಡ್ ಮಾದರಿಯು ಹೆಚ್ಚು ಫ್ಯೂಯಲ್ ಎಫಿಶಿಯನ್ಸಿ ಹೊಂದಿರುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್ ನಡೆಸುವಾಗ ಕಣ್ಣಿಗೆ ಬಿದ್ದ ಬಲೆನೊ ಹೈಬ್ರಿಡ್ ಕಾರು

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ವಾಹನಗಳ ಮೇಲೆ ಬಾಷ್ ಬಿಡಿಭಾಗಗಳನ್ನು ನೋಡುವುದು ಖುಷಿಯ ಸಂಗತಿ. ಬಾಷ್ ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ತಯಾರಿಸುತ್ತದೆ. ಹಲವು ಕಂಪನಿಗಳು ಬಾಷ್ ಕಂಪನಿಯ ಬಿಡಿಭಾಗಗಳನ್ನು ಬಳಸುವುದಿಲ್ಲ.

ಸ್ಪಾಟ್ ಟೆಸ್ಟ್ ನಡೆಸುವಾಗ ಕಣ್ಣಿಗೆ ಬಿದ್ದ ಬಲೆನೊ ಹೈಬ್ರಿಡ್ ಕಾರು

ಮುಂಬರುವ ದಿನಗಳಲ್ಲಿ ಕಂಪನಿಗಳು ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ಬಾಷ್ ಕಂಪನಿಯ ಬಿಡಿಭಾಗಗಳನ್ನು ಬಳಸುವ ಸಾಧ್ಯತೆಗಳಿವೆ. ಬಾಷ್ ಬಿಡಿಭಾಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ಈ ವಾಹನದ ಪರೀಕ್ಷೆಯಿಂದ ತಿಳಿಯಲಿದೆ.

Source: Team BHP

Article Published On: Tuesday, July 30, 2019, 12:51 [IST]
English summary
Maruti Suzuki Baleno 48V Spied On While Testing — Details And Spy Pics - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+