ಹೊಸ ಕಾರು ಖರೀದಿಗೆ ಹಿಂದೇಟು- ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿಯಿಂದ ಭರ್ಜರಿ ಆಫರ್

ಕಳೆದ ಐದಾರು ತಿಂಗಳಿನಿಂದ ಹೊಸ ಕಾರು ಮಾರಾಟದಲ್ಲಿ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ತೀವ್ರ ನಷ್ಟ ಅನುಭವಿಸಿದ್ದು, ಮಾರುತಿ ಸುಜುಕಿ ಸಂಸ್ಥೆಯು ಸಹ ಕಳೆದ 5 ವರ್ಷಗಳಲ್ಲೇ ಮೊದಲ ಬಾರಿಗೆ ಭಾರೀ ಹಿನ್ನಡೆ ಅನುಭವಿಸಿದೆ. ಹೀಗಾಗಿ ಕಾರು ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಅಗಸ್ಟ್ ಅವಧಿಯಲ್ಲಿ ಆಯ್ದ ಕಾರು ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

ಹೊಸ ಕಾರು ಖರೀದಿಗೆ ಹಿಂದೇಟು- ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿಯಿಂದ ಭರ್ಜರಿ ಆಫರ್

ಲೋಕಸಭಾ ಚುನಾವಣೆಯ ನಂತರವೂ ದೇಶಿಯ ಆಟೋ ಉದ್ಯಮವು ನಷ್ಟದಲ್ಲೇ ಮುಂದುವರಿಯುತ್ತಿದ್ದು, ಹೊಸ ವಾಹನಗಳ ಮೇಲಿನ ನೋಂದಣಿ ಶುಲ್ಕ ಹೆಚ್ಚಳ ಸೇರಿದಂತೆ ಕೆಲವು ಕಠಿಣ ಕ್ರಮಗಳು ಮತ್ತಷ್ಟು ಹಿನ್ನಡೆಗೆ ಕಾರಣವಾಗಿದೆ. ಇದರಿಂದ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಕನಿಷ್ಠ ಮಟ್ಟದ ಹೊಸ ವಾಹನಗಳನ್ನು ಮಾರಾಟ ಮಾಡಲು ಸಹ ಪರದಾಡುವಂತಾಗಿದ್ದು, ಸ್ಟಾಕ್ ಪ್ರಮಾಣವನ್ನು ಕರಗಿಸುವ ಸಂಬಂಧ ಖರೀದಿದಾರರನ್ನು ಸೆಳೆಯಲು ಭಾರೀ ಪ್ರಮಾಣದ ಡಿಸ್ಕೌಂಟ್‌ಗಳನ್ನು ನೀಡಲಾಗುತ್ತಿದೆ.

ಹೊಸ ಕಾರು ಖರೀದಿಗೆ ಹಿಂದೇಟು- ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿಯಿಂದ ಭರ್ಜರಿ ಆಫರ್

ಮಾರುತಿ ಸುಜುಕಿ ಸಹ ತನ್ನ ಜನಪ್ರಿಯ ಪ್ರೀಮಿಯಂ ಕಾರು ಆವೃತ್ತಿಗಳಾದ ಸಿಯಾಜ್ ಸೆಡಾನ್, ಎಸ್-ಕ್ರಾಸ್ ಎಸ್‌ಯುವಿ, ಬಲೆನೊ ಹ್ಯಾಚ್‌ಬ್ಯಾಕ್ ಮತ್ತು ಇಗ್ನಿಸ್ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಕಾರು ಖರೀದಿದಾರರಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಹೊಸ ಕಾರು ಖರೀದಿಗೆ ಹಿಂದೇಟು- ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿಯಿಂದ ಭರ್ಜರಿ ಆಫರ್

ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯು ಎಸ್-ಕ್ರಾಸ್ ಎಸ್‌ಯುವಿ ಮತ್ತು ಸಿಯಾಜ್ ಸೆಡಾನ್ ಮಾದರಿ ಮೇಲೆ ಅತಿ ಹೆಚ್ಚು ಡಿಸ್ಕೌಂಟ್ ಘೋಷಣೆ ಮಾಡಿದ್ದು, ಹ್ಯಾಚ್‌ಬ್ಯಾಕ್ ಮಾದರಿಗಳಾದ ಬಲೆನೊ ಮತ್ತು ಇಗ್ನಿಸ್ ಕಾರುಗಳ ಮೇಲೂ ಆಕರ್ಷಕ ರಿಯಾಯ್ತಿ ದರ ಘೋಷಣೆ ಮಾಡಲಾಗಿದೆ.

ಹೊಸ ಕಾರು ಖರೀದಿಗೆ ಹಿಂದೇಟು- ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿಯಿಂದ ಭರ್ಜರಿ ಆಫರ್

ಸಿಯಾಜ್ (ರೂ. 70 ಸಾವಿರ)

ಸಿ ಸೆಗ್ಮೆಂಟ್ ಸೆಡಾನ್ ಕಾರುಗಳಲ್ಲಿ ಅಗ್ರಸ್ಥಾನದಲ್ಲಿರುವ ಸಿಯಾಜ್ ಕಾರುಗಳಿಗೆ ಸದ್ಯ ಮಾರುಕಟ್ಟೆಯಲ್ಲಿ ಪೂರಕ ವಾತಾವರಣ ಇಲ್ಲದಿರುವುದು ಮಾರಾಟಕ್ಕೆ ಹಿನ್ನಡೆಯಾಗಿದ್ದು, ಮರಾಟವನ್ನು ಪ್ರಮಾಣವನ್ನು ಸರಿ ದಾರಿಗೆ ತರಲು ರೂ.70 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ.

ಹೊಸ ಕಾರು ಖರೀದಿಗೆ ಹಿಂದೇಟು- ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿಯಿಂದ ಭರ್ಜರಿ ಆಫರ್

ಎಸ್-ಕ್ರಾಸ್( ರೂ.60 ಸಾವಿರ)

ಮಾರುತಿ ಸುಜುಕಿಯ 1.3-ಲೀಟರ್ ಡೀಸೆಲ್ ಎಂಜಿನ್ ಪ್ರೇರಿತ ಪ್ರೀಮಿಯಂ ಕಾರುಗಳಲ್ಲಿ ಅಗ್ರಸ್ಥಾನದಲ್ಲಿರುವ ಎಸ್-ಕ್ರಾಸ್ ಕಾರಿನ ಮೇಲೆ ರೂ.60 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ 1.5-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಬಿಡುಗಡೆಯ ಹಿನ್ನೆಲೆಯಲ್ಲಿ ಭರ್ಜರಿ ಆಫರ್ ನೀಡಲಾಗಿದೆ.

ಹೊಸ ಕಾರು ಖರೀದಿಗೆ ಹಿಂದೇಟು- ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿಯಿಂದ ಭರ್ಜರಿ ಆಫರ್

ಇಗ್ನಿಸ್(ರೂ. 55 ಸಾವಿರ)

ಹ್ಯಾಚ್‌ಬ್ಯಾಕ್ ಮಾದರಿಯಾದ ಇಗ್ನಿಸ್ ಕಾರು ಪ್ರೀಮಿಯಂ ಸೌಲಭ್ಯಗಳೊಂದಿಗೆ ಉತ್ತಮ ಬೇಡಿಕೆ ಹೊಂದಿದ್ದರೂ ಸಹ ಕಳೆದ ಕೆಲ ತಿಂಗಳಿನಿಂದ ಮಾರಾಟದಲ್ಲಿ ಹಿನ್ನಡೆ ಅನುಭವಿಸಿದೆ. ಹೀಗಾಗಿ ಮಾರಾಟವಾಗದೇ ಇರುವ ಸ್ಟಾಕ್ ಕ್ಲಿಯೆರೆನ್ಸ್ ಮಾಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಇಗ್ನಿಸ್ ಮೇಲೆ ರೂ.55 ಸಾವಿರ ಘೋಷಣೆ ಮಾಡಿದೆ.

ಹೊಸ ಕಾರು ಖರೀದಿಗೆ ಹಿಂದೇಟು- ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿಯಿಂದ ಭರ್ಜರಿ ಆಫರ್

ಬಲೆನೊ(ರೂ. 45 ಸಾವಿರ)

ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಅಗ್ರಸ್ಥಾನದಲ್ಲಿರುವ ಬಲೆನೊ ಕಾರಿನ ಖರೀದಿ ಮೇಲೆ ರೂ.40 ಸಾವಿರದಷ್ಟು ಡಿಸ್ಕೌಂಟ್ ನೀಡುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಹೆಚ್ಚಿನ ಮಟ್ಟದಲ್ಲಿ ಕಾರು ಮಾರಾಟಕ್ಕೆ ಯೋಜನೆ ರೂಪಿಸಿದ್ದು, ಮುಂಬರುವ ತಿಂಗಳ ಕಾರು ಮಾರಾಟ ವರದರಿಯಲ್ಲಿ ಡಿಸ್ಕೌಂಟ್ ಫಲಿತಾಂಶ ಲಭ್ಯವಾಗಲಿದೆ.

ಹೊಸ ಕಾರು ಖರೀದಿಗೆ ಹಿಂದೇಟು- ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿಯಿಂದ ಭರ್ಜರಿ ಆಫರ್

ಇನ್ನು ಹೊಸ ವಾಹನಗಳ ಮಾರಾಟ ಪ್ರಮಾಣವು ಕಳೆದ ಕೆಲ ತಿಂಗಳಿನಿಂದ ತೀವ್ರ ಕುಸಿತ ಕಾಣುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕಿವೆ. ಇಲ್ಲದೇ ಕಾರು ಮಾರಾಟವನ್ನೇ ನಂಬಿಕೊಂಡಿರುವ ಅಧಿಕೃತ ಡೀಲರ್ಸ್‌ಗಳು ಕದ ಮುಚ್ಚುವ ಅತಂತ್ರ ಸ್ಥಿತಿಯಲ್ಲಿದ್ದು, ಡೀಲರ್ಸ್ ಮಟ್ಟದಲ್ಲೇ ಬರೋಬ್ಬರಿ 2 ಲಕ್ಷ ಉದ್ಯೋಗಗಳು ಕಡಿತಗೊಂಡಿವೆ ಎನ್ನಲಾಗಿದೆ.

ಹೊಸ ಕಾರು ಖರೀದಿಗೆ ಹಿಂದೇಟು- ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿಯಿಂದ ಭರ್ಜರಿ ಆಫರ್

ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಸದ್ಯ ಆರ್ಥಿಕವಾಗಿ ಹೊರೆಯಾಗಿರುವ ಸ್ಟಾಕ್ ಕ್ಲಿಯೆರೆನ್ಸ್‌ಗಾಗಿ ಹರಸಾಹಸ ಪಡುತ್ತಿದ್ದು, ಹೊಸ ಉತ್ಪಾದನಾ ಪ್ರಕ್ರಿಯೆಯು ಕೂಡಾ ಕುಂಟುತ್ತಾ ಸಾಗಿದೆ.

ಹೊಸ ಕಾರು ಖರೀದಿಗೆ ಹಿಂದೇಟು- ಗ್ರಾಹಕರನ್ನು ಸೆಳೆಯಲು ಮಾರುತಿ ಸುಜುಕಿಯಿಂದ ಭರ್ಜರಿ ಆಫರ್

ಹೀಗಿರುವಾಗ ಹೊಸ ವಾಹನಗಳ ಮಾರಾಟದಲ್ಲಿ ತೀವ್ರ ಹಿನ್ನಡೆ ಅನುಭವಿಸಿರುವ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹ್ಯುಂಡೈ, ಮಹೀಂದ್ರಾ ಸೇರಿದಂತೆ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಹೊಸ ಕಾರುಗಳ ಉತ್ಪಾದನ್ನು ತಾತ್ಕಾಲಿಕವಾಗಿ ಬಂದ್ ಮಾಡಿರುವುದಲ್ಲದೇ ಸ್ಟಾಕ್ ಪ್ರಮಾಣದಲ್ಲಿ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.

Article Published On: Monday, August 5, 2019, 18:17 [IST]
English summary
Maruti Suzuki Cars Discounts August 2019. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+