ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ರಿಯಾಯಿತಿ

ಮಾರುತಿ ಸುಜುಕಿ ಕಂಪನಿಯು ಜುಲೈ ತಿಂಗಳಿನಲ್ಲಿ ತನ್ನ ಮಾದರಿಯ ಕಾರುಗಳ ಮೇಲೆ ಹೊಸ ರಿಯಾಯಿತಿ ಯೋಜನೆಯನ್ನು ಪ್ರಕಟಿಸಿದೆ. ವರ್ಷದ ಅತ್ಯಂತ ಬಿಸಿಲಿನ ತಿಂಗಳೆಂದು ಪರಿಗಣಿಸಲ್ಪಡುವ ತಿಂಗಳಿನಲ್ಲಿ ವಾಹನ ತಯಾರಕರು ಕಳೆದ ಕೆಲವು ತಿಂಗಳುಗಳಿಗಿಂತ ಹೆಚ್ಚಿನ ಮಾರಾಟವನ್ನು ಮಾಡುವ ಆಶಯವನ್ನು ಹೊಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಇಡೀ ಉದ್ಯಮವು ನಿಧಾನಗತಿಯಲ್ಲಿ ಸಾಗುತ್ತಿದೆ. ರಿಯಾಯಿತಿಗಳ ಕುರಿತು ಹೇಳುವುದಾದರೆ, ಕಾರುಗಳ ಕೊಡುಗೆಗಳು ನೆಕ್ಸಾ ಕಾರುಗಳು ಹಾಗೂ ಅರೆನಾ ಕಾರುಗಳ ಮೇಲೆ ಲಭ್ಯವಿದೆ. ನೀವು ಶೀಘ್ರದಲ್ಲೇ ಮಾರುತಿ ಸುಜುಕಿ ವಾಹನವನ್ನು ಖರೀದಿಸುವ ಯೋಜನೆಯಲ್ಲಿದ್ದರೆ, ನಿಮಗಾಗಿ ಈ ರಿಯಾಯಿತಿ ಯೋಜನೆಗಳ ಮಾಹಿತಿಯನ್ನು ನೀಡುತ್ತಿದ್ದೇವೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ರಿಯಾಯಿತಿ

ಆಲ್ಟೊ 800 ಬಿಎಸ್ 6

ಗರಿಷ್ಠ. ರಿಯಾಯಿತಿ: ರೂ. 45,000ಗಳವರೆಗೆ

ಮಾರುತಿ ಸುಜುಕಿ ಇತ್ತೀಚೆಗೆ ಆಲ್ಟೊ 800 ಕಾರ್ ಅನ್ನು ನವೀಕರಿಸಿದೆ. ಕೆಲವು ಸಣ್ಣ ಪುಟ್ಟ ವಿನ್ಯಾಸಗಳ ಬದಲಾವಣೆಯೊಂದಿಗೆ ಬಿಎಸ್‌6 ಎಂಜಿನ್ ಅಳವಡಿಸಿದೆ. ಹೊಸ ಬಿಎಸ್‌6 ಆಲ್ಟೊ 800 ಕಾರಿನ ಮೇಲೆ ಪ್ರಸ್ತುತ ರೂ. 45,000ಗಳವರೆಗೆ ರಿಯಾಯಿತಿ ದೊರೆಯಲಿದ್ದು, ಈ ಯೋಜನೆಯಲ್ಲಿ ರೂ. 20,000 ಕ್ಯಾಶ್ ಬ್ಯಾಕ್, ಜೊತೆಗೆ ಹೆಚ್ಚುವರಿಯಾಗಿ ರೂ. 20,000 ಮೌಲ್ಯದ ವಿನಿಮಯ ಬೋನಸ್ ಹಾಗೂ ರೂ.5,000ಗಳ ಕಾರ್ಪೊರೇಟ್ ರಿಯಾಯಿತಿ ದೊರೆಯಲಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ರಿಯಾಯಿತಿ

ಆಲ್ಟೊ ಕೆ10

ಗರಿಷ್ಠ.ರಿಯಾಯಿತಿ: ರೂ. 52,500ಗಳವರೆಗೆ

ಈ ಸರಣಿಯಲ್ಲಿರುವ ಆಲ್ಟೊ ಕೆ 10 ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಕಾರು ಅಗ್ರ ಮಾರಾಟದ ಕಾರುಗಳಲ್ಲಿ ಒಂದಾಗಿದೆ. ಈ ಜನಪ್ರಿಯ ಹ್ಯಾಚ್‌ಬ್ಯಾಕ್‌ಗೆ ಕಾರಿನ ಮೇಲೆ ಈ ತಿಂಗಳು ರೂ. 52,500ಗಳವರೆಗೆ ರಿಯಾಯಿತಿ ದೊರೆಯಲಿದೆ. ಮ್ಯಾನುವಲ್ ಆವೃತ್ತಿಯ ಕಾರಿನ ಮೇಲೆ ರೂ.20,000 ರೂ. ನಗದು ರಿಯಾಯಿತಿ ನೀಡಲಾಗುವುದು. ಆಟೋಮ್ಯಾಟಿಕ್ ಆವೃತ್ತಿಯ ಮೇಲೆ ರೂ.30,000ಗಳವರೆಗೆ ನಗದು ರಿಯಾಯಿತಿ ನೀಡಲಾಗುವುದು. ಎರಡೂ ಮಾದರಿಗಳ ಮೇಲೆ ವಿನಿಮಯ ಬೋನಸ್‍‍ಗಾಗಿ ರೂ.20,000ಗಳ ರಿಯಾಯಿತಿ ನೀಡಲಾಗುವುದು. ಇದರ ಜೊತೆಗೆ ಕಂಪನಿಯು ಈ ಕಾರಿನ ಮೇಲೆ ರೂ.2,500ಗಳ ಕಾರ್ಪೋರೇಟ್ ಬೋನಸ್ ನೀಡಲಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ರಿಯಾಯಿತಿ

ಇಕೊ

ಗರಿಷ್ಠ. ರಿಯಾಯಿತಿ: ರೂ. 22,500ಗಳವರೆಗೆ

ಓಮ್ನಿ ಕಾರು ಸ್ಥಗಿತಗೊಂಡ ನಂತರ ಇಕೊ ಈಗ ದೇಶದ ಏಕೈಕ ಕೈಗೆಟುಕುವ ಪೀಪಲ್ ಕ್ಯಾರಿಯರ್ ವಾಹನವಾಗಿ ಉಳಿದಿದೆ. ಈ ತಿಂಗಳು ಮಾರುತಿ ಸುಜುಕಿ ಕಂಪನಿಯು ಈ ಕಾರಿನ ಮೇಲೆ ರೂ.22,500ಗಳವರೆಗೆ ರಿಯಾಯಿತಿ ನೀಡುತ್ತಿದೆ. ಸಿಎನ್‌ಜಿ ಮಾದರಿಯ ಕಾರುಗಳ ಮೇಲೆ ರೂ.10,000 ನಗದು ರಿಯಾಯಿತಿ ನೀಡಲಾಗುವುದು. ಪೆಟ್ರೋಲ್ ಮಾದರಿಯ ಮೇಲೆ ರೂ.5,000ಗಳ ರಿಯಾಯಿತಿ ನೀಡಲಾಗುವುದು. ಎರಡೂ ಮಾದರಿಗಳ ಮೇಲೆ ರೂ.10,000ಗಳ ವಿನಿಮಯ ಬೋನಸ್ ಮತ್ತು ರೂ. 2,500ಗಳ ಕಾರ್ಪೋರೇಟ್ ಬೋನಸ್ ನೀಡಲಾಗುವುದು.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ರಿಯಾಯಿತಿ

ಸೆಲೆರಿಯೊ

ಗರಿಷ್ಠ. ರಿಯಾಯಿತಿ: ರೂ. 52,500ಗಳವರೆಗೆ

ಮಾರುತಿ ಸುಜುಕಿ ಕಂಪನಿಯ ಸೆಲೆರಿಯೊ ಮಾದರಿಗಳು ವ್ಯಾಗನ್ಆರ್ ಕಾರುಗಳಿಗಿಂತ ಕೆಳಗಿದ್ದು, ಈ ಸೆಗ್‍‍ಮೆಂಟಿನಲ್ಲಿ ಟಾಟಾ ಟಿಯಾಗೊ ಹಾಗೂ ಹ್ಯುಂಡೈ ಸ್ಯಾಂಟ್ರೊ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಈ ತಿಂಗಳು ಈ ಹ್ಯಾಚ್‌ಬ್ಯಾಕ್ ಕಾರಿನ ಮೇಲೆ ರೂ.52,500ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಪೆಟ್ರೋಲ್ ಮಾದರಿಯ ಕಾರುಗಳ ಮೇಲೆ ರೂ.25,000ಗಳ ಕ್ಯಾಶ್‍‍ಬ್ಯಾಕ್ ಹಾಗೂ ಎಎಂಟಿ / ಸಿಎನ್‌ಜಿ ಮಾದರಿಯ ಕಾರುಗಳ ಮೇಲೆ ರೂ.30,000ಗಳ ಕ್ಯಾಶ್‍‍ಬ್ಯಾಕ್ ನೀಡಲಾಗುವುದು. 2018ರ ಪೆಟ್ರೋಲ್/ಸಿ‍ಎನ್‍‍ಜಿ ಮಾದರಿಗಳ ಮೇಲೆ ರೂ.33,000ಗಳ ಕ್ಯಾಶ್‌ಬ್ಯಾಕ್ ನೀಡಲಾಗುವುದು. ಎಎಂಟಿ ಮಾದರಿಗಳ ಮೇಲೆ ರೂ.30,000ಗಳ ಕ್ಯಾಶ್‍‍ಬ್ಯಾಕ್ ನೀಡಲಾಗುವುದು. ರೂ.20,000ಗಳ ವಿನಿಮಯ ಬೋನಸ್ ನೀಡಲಾಗುವುದು. ಇದರ ಜೊತೆಗೆ ರೂ.2,500ಗಳ ಕಾರ್ಪೊರೇಟ್ ರಿಯಾಯಿತಿ ಇರಲಿದೆ.

ವ್ಯಾಗನ್ಆರ್

ಗರಿಷ್ಠ. ರಿಯಾಯಿತಿ: ರೂ.17,500ಗಳವರೆಗೆ

ಹೊಸ ಮಾರುತಿ ಸುಜುಕಿ ವ್ಯಾಗನ್ಆರ್ ಅನ್ನು ಈ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರುಗಳೂ ಸಹ ಹಳೆಯ ತಲೆಮಾರಿನ ಮಾದರಿಗಳು ಹೊಂದಿದ್ದ ಬೇಡಿಕೆ ಹಾಗೂ ಜನಪ್ರಿಯತೆಯನ್ನು ಉಳಿಸಿಕೊಂಡಿವೆ. ಈ ಕಾರುಗಳ ಮೇಲೆ ರೂ.17,500ರವರೆಗೆ ರಿಯಾಯಿತಿ ನೀಡಲಾಗುವುದು. ವಿನಿಮಯ ಬೋನಸ್‍ ರೂ.15,000 ಹಾಗೂ ಕಾರ್ಪೊರೇಟ್ ಬೋನಸ್ ರೂ.2,500 ರಿಯಾಯಿತಿ ಇರಲಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ರಿಯಾಯಿತಿ

ಇಗ್ನಿಸ್

ಗರಿಷ್ಠ ರಿಯಾಯಿತಿ: ರೂ.45,000ಗಳವರೆಗೆ

ಮಾರುತಿ ಸುಜುಕಿ ಕಂಪನಿಯ ಇಗ್ನಿಸ್ ಕಾರು ಟಾಲ್‌ಬಾಯ್ ಮಾದರಿಯ ಹ್ಯಾಚ್‌ಬ್ಯಾಕ್ ಆಗಿದ್ದು, ಈ ಕಾರ್ ಅನ್ನು ಯುವ ಜನತೆಗಾಗಿ ಹಾಗೂ ಮೊದಲ ಬಾರಿಗೆ ಕಾರು ಖರೀದಿಸುವವರನ್ನು ಗುರಿಯಾಗಿರಿಸಿಕೊಂಡು ತಯಾರಿಸಲಾಗಿದೆ. ಕೆಲವು ತಿಂಗಳ ಈ ಕಾರಿನಲ್ಲಿ ಸಣ್ಣ ಪುಟ್ಟ ಅಪ್‍‍ಡೇಟ್ ಮಾಡಲಾಗಿದೆ. ಈ ಹ್ಯಾಚ್‌ಬ್ಯಾಕ್ ಕಾರಿನ ಮೇಲೆ ಈ ತಿಂಗಳು ರೂ. 45,000ಗಳವರೆಗೆ ರಿಯಾಯಿತಿ ನೀಡಲಾಗುವುದು. ಈ ಯೋಜನೆಯಲ್ಲಿ 15 ಸಾವಿರ ರೂ.ಗಳ ನಗದು ರಿಯಾಯಿತಿಯ ಜೊತೆಗೆ ರೂ.25,000ಗಳ ವಿನಿಮಯ ಬೋನಸ್ ನೀಡಲಾಗುವುದು. ಜೊತೆಗೆ ರೂ. 5,000ಗಳ ಹೆಚ್ಚುವರಿ ಕಾರ್ಪೊರೇಟ್ ರಿಯಾಯಿತಿ ಲಭ್ಯವಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ರಿಯಾಯಿತಿ

ಸ್ವಿಫ್ಟ್

ಗರಿಷ್ಠ ರಿಯಾಯಿತಿ: ರೂ.42,500ಗಳವರೆಗೆ

ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ಅನ್ನು 2005ರಿಂದಲೂ ಮಾರಾಟ ಮಾಡಲಾಗುತ್ತಿದೆ. ಕಂಪನಿಯು ಕಳೆದ ವರ್ಷ ಜನಪ್ರಿಯ ಹ್ಯಾಚ್‌ಬ್ಯಾಕ್‌ನ ಹೊಸ ಪೀಳಿಗೆಯ ಕಾರ್ ಅನ್ನು ಬಿಡುಗಡೆಗೊಳಿಸಿತ್ತು. ಈ ತಿಂಗಳು ಈ ಕಾರಿನ ಮೇಲೆ ರೂ.42,500ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಪೆಟ್ರೋಲ್ ಮಾದರಿಗಳ ಮೇಲೆ ರೂ.20,000ಗಳ ನಗದು ರಿಯಾಯಿತಿ ಜೊತೆಗೆ ರೂ.20,000ಗಳ ವಿನಿಮಯ ಬೋನಸ್ ನೀಡಲಾಗುವುದು. ಸ್ವಿಫ್ಟ್‌ನ ಡೀಸೆಲ್ ಮಾದರಿಗಳ ಮೇಲೆ ರೂ.10,000ಗಳ ನಗದು ರಿಯಾಯಿತಿ ಜೊತೆಗೆ ರೂ. 20,000ಗಳ ವಿನಿಮಯ ಬೋನಸ್ ನೀಡಲಾಗುವುದು. ಕಾರ್ಪೊರೇಟ್ ರಿಯಾಯಿತಿಯಾಗಿ ರೂ.2,500 ಲಭ್ಯವಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ರಿಯಾಯಿತಿ

ಬಲೆನೊ

ಗರಿಷ್ಠ ರಿಯಾಯಿತಿ: ರೂ. 20,000ಗಳವರೆಗೆ

ಮಾರುತಿ ಸುಜುಕಿ ಬಲೆನೊ ಕಾರು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್‍‍ಮೆಂಟಿನಲ್ಲಿ ಯಾವ ರೀತಿಯಲ್ಲಿ ಜನಪ್ರಿಯತೆಯನ್ನು ಪಡೆದಿದೆಯೆಂದರೆ ಮಾರಾಟದಲ್ಲಿ ಮಿಡ್-ಸೆಗ್‍‍ಮೆಂಟಿನಲ್ಲಿ ಯಾವುದೇ ಪ್ರತಿಸ್ಪರ್ಧಿಗಳನ್ನೇ ಹೊಂದಿಲ್ಲ. ಈ ಕಾರಿನ ಮೇಲೆ ರೂ.20,000ಗಳವರೆಗೆ ರಿಯಾಯಿತಿ ಲಭ್ಯವಿದೆ. ಆದರೆ ಈ ರಿಯಾಯಿತಿಗಳು, 1.2-ಲೀಟರ್ ಪೆಟ್ರೋಲ್ ಎಂಜಿನ್‍‍ನ ಹೈಬ್ರಿಡ್ ಹಾಗೂ ಹೈಬ್ರಿಡ್ ಅಲ್ಲದ ಬಿಎಸ್ 6 ಮಾದರಿಗಳಿಗೆ ಮಾತ್ರ ಅನ್ವಯವಾಗಲಿವೆ. ಈ ಕಾರುಗಳ ಮೇಲೆ ರೂ.15,000 ಮೌಲ್ಯದ ವಿನಿಮಯ ಬೋನಸ್ ಜೊತೆಗೆ ರೂ.5,000ದ ಕಾರ್ಪೋರೇಟ್ ಬೋನಸ್ ಲಭ್ಯವಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ರಿಯಾಯಿತಿ

ಡಿಜೈರ್

ಗರಿಷ್ಠ ರಿಯಾಯಿತಿ: ರೂ. 47,500ಗಳವರೆಗೆ

ಮಾರುತಿ ಸುಜುಕಿ ಡಿಜೈರ್ ಸಬ್4 ಮೀಟರ್ ಸೆಡಾನ್ ಸೆಗ್‍‍ಮೆಂಟಿನಲ್ಲಿರುವ ಭಾರತದ ಅತ್ಯಂತ ಜನಪ್ರಿಯ ಕಾಂಪ್ಯಾಕ್ಟ್ ಸೆಡಾನ್ ಆಗಿದೆ. ಈ ಕಾರಿನ ಮೇಲೆ ರೂ.47,500ಗಳವರೆಗೆ ರಿಯಾಯಿತಿ ದೊರೆಯಲಿದೆ. ಡಿಜೈರ್‌ನ ಪೆಟ್ರೋಲ್ ಮಾದರಿಗಳ ಮೇಲೆ ರೂ.20,000ಗಳವರೆಗೆ ನಗದು ರಿಯಾಯಿತಿ ಹಾಗೂ ರೂ.20,000ಗಳ ವಿನಿಮಯ ಬೋನಸ್ ದೊರೆಯಲಿದೆ. ಇದರ ಜೊತೆಗೆ ಕಾರ್ಪೊರೇಟ್ ರಿಯಾಯಿತಿಯಾಗಿ ರೂ.2,500 ಲಭ್ಯವಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ರಿಯಾಯಿತಿ

ವಿಟಾರಾ ಬ್ರಿಝಾ

ಗರಿಷ್ಠ ರಿಯಾಯಿತಿ: ರೂ. 45,000ಗಳವರೆಗೆ

ವಿಟಾರಾ ಬ್ರಿಝಾ, ಫೋರ್ಡ್ ಕಂಪನಿಯ ಇಕೋಸ್ಪೋರ್ಟ್ ಹಾಗೂ ಟಾಟಾ ನೆಕ್ಸಾನ್ ಕಾರುಗಳಿಗೆ ಪೈಪೋಟಿ ನೀಡುತ್ತಿದ್ದು, ಸಬ್4 ಮೀಟರ್ ಎಸ್‍‍ಯು‍‍ವಿ ಸೆಗ್‍‍ಮೆಂಟಿನಲ್ಲಿ ಹೆಚ್ಚು ಕಾಲದಿಂದ ಮಾರಾಟವಾಗುತ್ತಿರುವ ಕಾರ್ ಆಗಿದೆ. ಈ ತಿಂಗಳು ರೂ.45,000ಗಳವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಇದರಲ್ಲಿ ರೂ.25,000ಗಳ ಕ್ಯಾಶ್‍‍ಬ್ಯಾಕ್ ಹಾಗೂ ವಿನಿಮಯ ಬೋನಸ್‍‍ಗಾಗಿ ರೂ.15,000 ದೊರೆಯಲಿದೆ. ಮಾರುತಿ ಕಂಪನಿಯು ಕಾರ್ಪೊರೇಟ್ ಬೋನಸ್ ರೂಪದಲ್ಲಿ ರೂ.5,000 ನೀಡುತ್ತಿದೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ರಿಯಾಯಿತಿ

ಸಿಯಾಜ್

ಗರಿಷ್ಠ ರಿಯಾಯಿತಿ: ರೂ. 60,000ಗಳವರೆಗೆ

ಸಿಯಾಜ್ ಕಾರು ಮಾರುತಿ ಸುಜುಕಿಯ ಸ್ಟೈಲಿಶ್ ಸೆಡಾನ್ ಆಗಿದ್ದು, ಸಿ-ಸೆಗ್‍‍ಮೆಂಟಿನಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದ್ದು, ಹೋಂಡಾ ಸಿಟಿ ಹಾಗೂ ಹ್ಯುಂಡೈ ವೆರ್ನಾ ಕಾರುಗಳಿಗೆ ಪೈಪೋಟಿ ನೀಡುತ್ತಿದೆ. ಕಂಪನಿಯು ಈ ಕಾರಿನ ಮೇಲೆ 60,000 ರೂ.ಗಳವರೆಗೆ ರಿಯಾಯಿತಿ ನೀಡುತ್ತಿದೆ. ಸಿಗ್ಮಾ, ಡೆಲ್ಟಾ ಹಾಗೂ ಜೇಟಾ ಮ್ಯಾನುವಲ್ ಆವೃತ್ತಿಗಳ ಮೇಲೆ ರೂ.15,000ಗಳ ನಗದು ರಿಯಾಯಿತಿ ದೊರೆಯಲಿದೆ. ಆಲ್ಫಾ ಆಟೋಮ್ಯಾಟಿಕ್‍ ಹಾಗೂ ಆಲ್ಫಾ ಮ್ಯಾನುವಲ್ ಮಾದರಿಗಳ ಮೇಲೆ ಯಾವುದೇ ನಗದು ರಿಯಾಯಿತಿಯನ್ನು ನೀಡುತ್ತಿಲ್ಲ. ಆದರೆ ಎಲ್ಲಾ ಮಾದರಿಗಳು ರೂ.35,000ಗಳ ವಿನಿಮಯ ಬೋನಸ್ ಹಾಗೂ ರೂ.10,000ಗಳ ಕಾರ್ಪೊರೇಟ್ ರಿಯಾಯಿತಿಯನ್ನು ಪಡೆಯುತ್ತವೆ.

ಜುಲೈ ತಿಂಗಳಿನಲ್ಲಿ ಮಾರುತಿ ಸುಜುಕಿ ಕಾರುಗಳ ಮೇಲೆ ಭಾರೀ ರಿಯಾಯಿತಿ

ಎಸ್-ಕ್ರಾಸ್

ಗರಿಷ್ಠ ರಿಯಾಯಿತಿ: ರೂ. 65,000ಗಳವರೆಗೆ

ಎಸ್-ಕ್ರಾಸ್ ಕಾರ್ ಅನ್ನು ಮಾರುತಿ ಕಂಪನಿಯು ತನ್ನ ಕ್ರಾಸ್ಒವರ್ ಸೆಗ್‍‍ಮೆಂಟಿನಲ್ಲಿ ರೂ. 10ಲಕ್ಷಗಳ ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಕಂಪನಿಯ ಪ್ರಮುಖ ಮಾದರಿಯಾದ ಈ ಕಾರಿನ ಮೇಲೆ ಈ ತಿಂಗಳು ರೂ.65,000ಗಳವರೆಗೆ ರಿಯಾಯಿತಿ ಸಿಗಲಿದೆ. ರಿಯಾಯಿತಿ ಯೋಜನೆಯಲ್ಲಿ ರೂ.20,000ಗಳ ಕ್ಯಾಶ್‍‍ಬ್ಯಾಕ್ ಜೊತೆಗೆ ರೂ.35,000ಗಳ ವಿನಿಮಯ ಬೋನಸ ದೊರೆಯಲಿದೆ. ಈ ತಿಂಗಳು ಎಸ್-ಕ್ರಾಸ್ ಖರೀದಿಸಿದರೆ ರೂ.10,000ಗಳ ಕಾರ್ಪೊರೇಟ್ ರಿಯಾಯಿತಿ ಸಿಗುತ್ತದೆ.

Source: mycarhelpline

Most Read Articles

Kannada
English summary
Maruti Suzuki cars with discounts offers on them this July: Alto to Vitara Brezza - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X