ಕಾಂಪ್ಯಾಕ್ಟ್ ಸೆಡಾನ್ ಕಾರುಗಳ ಮಾರಾಟದಲ್ಲಿ ಮತ್ತೆ ಮಾರುತಿ ಸುಜುಕಿ ಡಿಜೈರ್ ಕಾರಿನದ್ದೆ ಮೇಲುಗೈ..
ಕಾಂಪ್ಯಾಕ್ಟ್ ಸೆಡಾನ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚುತ್ತಿದ್ದು, ಸಧ್ಯಕೆ ಹಲವಾರು ವರ್ಶಗಳಿಂದಲೂ ಈ ಸೆಗ್ಮೆಂಟ್‍ನಲ್ಲಿ ಮಾರುತಿ ಸುಜುಕಿ ಸಂಸ್ಥೆಯ ಡಿಜೈರ್ ಕಾರುಗಳು ಮುಂಚುಣಿಯಲ್ಲಿದೆ. 2019ರ ಮಾರ್ಚ್ ತಿಂಗಳಿನಲ್ಲಿಯೂ ಸಹ ಈ ಕಾರು ಮಾರಾಟದಲ್ಲಿ ಮೊದಲನೆಯ ಸ್ಥಾನವನ್ನು ಪಡೆದುಕೊಂಡಿದೆ.

ಮಾರ್ಚ್ 2019ರಲ್ಲಿ 19,935 ಯೂನಿಟ್ ಕಾರುಗಳು ಮಾರಟಗೊಂಡಿದ್ದರೆ ಇನ್ನು ಮಾರುಕಟ್ಟೆಯಲ್ಲಿ ತನ್ನ ಎದುರಾಳಿಗಳಾದ ಹೋಂಡಾ ಅಮೇಜ್ 7,419 ಯೂನಿಟ್, ಹ್ಯುಂಡೈ ಆಕ್ಸೆಂಟ್ 1,792 ಯೂನಿಟ್, ಫೋರ್ಡ್ ಆಸ್ಫೈರ್ 1,277 ಯೂನಿಟ್, ಟಾಟಾ ಟಿಗೋರ್ 1,236 ಯೂನಿಟ್, ಫೋಕ್ಸ್‌ವ್ಯಾಗನ್ ಎಮಿಯೊ 792 ಯೂನಿಟ್‍ಗಳು ಮಾರಾಟಗೊಂಡಿದೆ.

ಡಿಜೈರ್ ಕಾರುಗಳು ಸ್ವಂತ ಬಳಕೆಗೆ ಮಾತ್ರವಲ್ಲದೆ ಕ್ಯಾಬ್ ಆಪರೇಟರ್‍ಗಳು ಕೂಡಾ ಹೆಚ್ಚು ಬಳಸುವ ಕಾರಾಗಿದ್ದು, ಓಲಾ ಮತ್ತು ಊಬರ್ ಕ್ಯಾಬ್ ಸರ್ವಿಸ್‍ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಂಸ್ಥೆಯು ಕೆಲ ದಿನಗಳ ನಂತರ ಎರಡನೆಯ ತಲೆಮಾರಿನ ಡಿಜೈರ್ ಟೂರ್ ಕಾರನ್ನು ಬಿಡುಗಡೆಗೊಳಿಸಿ ಕೇವಲ ಕ್ಯಾಬ್ ಚಾಲಕರಿಗೆ ಸಹಾಯವಾಗುವಂತೆ ತಯಾರು ಮಾಡಲಾಗಿದೆ.

ಇದಲ್ಲದೆ ಸಂಸ್ಥೆಯು ಮೂರನೆಯ ತಲೆಮಾರಿನ ಡಿಜೈರ್ ಕಾರುಗಳನ್ನು ಕೂಡ ಬಿಡುಗಡೆಗೊಳಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿದೆ. ಮೂರನೆಯ ತಲೆಮಾರಿನ ಡಿಜೈರ್ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 5.56 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ
ಮೂರನೆಯ ತಲೆಮಾರಿನ ಡಿಸೈರ್ ಕಾರುಗಳು 1.2 ಲೀಟರ್ ಕೇ ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82 ಬಿಹೆಚ್‍ಪಿ ಮತ್ತು 113ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಡೀಸೆಲ್ ಮಾದರಿಯ ಡಿಜೈರ್ ಕಾರುಗಳು 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಎಂಜಿನ್ ಸಹಾಯದಿಂದ 74ಬಿಹೆಚ್‍ಪಿ ಮತ್ತು 190ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಮಾದರಿಗಳಂತೆಯೆ 5 ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‍ಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಡಿಜೈರ್ ಕಾರಿನ ಎಲ್ಲಾ ವೇರಿಯಂಟ್‍ಗಳಲ್ಲಿಯು ಟ್ವಿನ್ ಏರ್‍ಬ್ಯಾಗ್ಸ್ ಮತ್ತು ಎಬಿಎಸ್ ಅನ್ನು ಅಳವಡಿಸಲಾಗಿದ್ದು, ಟಾಪ್ ಎಂಡ್ ವೇರಿಯಂಟ್ ಕಾರುಗಳು ಮಾರುತಿ ಸುಜುಕಿ ಸಂಸ್ಥೆಯ ಸ್ಮಾರ್ಟ್ ಫೋನ್ ಕನೆಕ್ಟಿವಿಯನ್ನು ಹೊಂದಿರುವ ಸ್ಮಾರ್ಟ್‍ಪ್ಲೇ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದುಕೊಂಡಿರಲಿದೆ.


Click it and Unblock the Notifications








