ಓಮ್ನಿ ಸ್ಥಗಿತಗೊಂಡ ನಂತರ ಮಾರುತಿ ಸುಜುಕಿ ಇಕೊಗೆ ಭಾರೀ ಡಿಮ್ಯಾಂಡ್

ಕಳೆದ ವರ್ಷದಲ್ಲಿ ನಡೆಸಿದ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ ಬಹುತೇಕ ವಾಹನಗಳು ಕಳಪೆ ಮಟ್ಟದ ಅಂಕವನ್ನು ಪಡೆದ ಕಾರಣ ಕೇಂದ್ರ ಸರ್ಕಾರವು ಹೊಸ ಸುರಕ್ಷಾ ವೈಶಿಷ್ಟ್ಯತೆಗಳನ್ನು ಕಡ್ಡಾಯವಾಗಿ ಅಳವಡಿಸಲು ಆದೇಶಿಸಲಾಯಿತು. ಈ ನಿಟ್ಟಿನಲ್ಲಿ ವಾಹನ ತಯಾರಕ ಸಂಸ್ಥೆಗಳು ಕೇಂದ್ರ ಸರ್ಕಾರದ ಆದೇಶದಂತೆ ತಮ್ಮಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಿ ಹೆಚ್ಚಿನ ಸುರಕ್ಷಾ ವೈಶಿಷ್ಟ್ಯತೆಗಳನ್ನು ಅಳವಡಿಸಿ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.

ಓಮ್ನಿ ಸ್ಥಗಿತಗೊಂಡ ನಂತರ ಮಾರುತಿ ಸುಜುಕಿ ಇಕೊಗೆ ಭಾರೀ ಡಿಮ್ಯಾಂಡ್

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಓಮ್ನಿ ಮತ್ತು ಜಿಪ್ಸಿ ವಾಹನಗಳಲ್ಲಿ ಸರಿಯಾದ ಸುರಕ್ಷಾ ಸಾಧನಗಳು ಇಲ್ಲವಾದ ಕಾರಣ ಅವುಗಳನ್ನು ಮಾರುಕಟ್ಟೆಯಿಂದ ಸ್ಥಗಿತಗೊಳಿಸಲಾಯಿತು. ಸ್ಥಗಿತಗೊಂಡ ಜಿಪ್ಸಿ ಕಾರುಗಳನ್ನು ಸುಜುಕಿ ಜಿಮ್ನಿ ಕಾರುಗಳು ಸ್ಥಳಾಂತರಿಸಬಹುದಾದ ಅವಕಾಶಗಳಿದ್ದು, ಇನ್ನು ಓಮ್ನಿ ಕಾರಿನ ಸ್ಥಾನವನ್ನು ಮಾರುತಿ ಸುಜುಕಿ ಸಂಸ್ಥೆಯ ಇಕೊ ಎಂಪಿವಿ ಕಾರುಗಳು ಪಡೆದಿದೆ. ಓಮ್ನಿ ಮಾರುಕಟ್ಟೆಯಿಂಡ ಹೊರ ಬಂದ ನಂತರ ಇಕೊ ಕಾರಿನ ಮಾರಾಟವು ಹೆಚ್ಚಾಗಿದೆ ಎಂದು ವರದಿಗಳು ತಿಳಿಸುತ್ತಿದೆ.

ಓಮ್ನಿ ಸ್ಥಗಿತಗೊಂಡ ನಂತರ ಮಾರುತಿ ಸುಜುಕಿ ಇಕೊಗೆ ಭಾರೀ ಡಿಮ್ಯಾಂಡ್

ಗಾಡಿವಾಡಿ ವರದಿಗಳ ಪ್ರಕಾರ ಕಳೆದ ವರ್ಷದ ಮೇ ತಿಂಗಳಿನಲ್ಲಿ ಸುಮಾರು 7856 ಯೂನಿಟ್ ಮಾರುತಿ ಸುಜುಕಿ ಇಕೊ ಕಾರುಗಳು ಮಾರಾಟಗೊಂಡಲ್ಲಿ, ಈ ವರ್ಷದ ಮೇ ತಿಂಗಳಿನಲ್ಲಿ ಸುಮಾರು 11,739ಕ್ಕು ಹೆಚ್ಚಿನ ಯೂನಿಟ್‍ನಲ್ಲಿ ಇಕೊ ಕಾರುಗಳು ಮಾರಾಟವಾಗಿದೆ. ಅಂದರೇ ಶೇಕಡ 49ರಷ್ಟು ಅಧಿಕವಾಗಿ ಇಕೊ ಕಾರುಗಳು ಮೇ 2019ರಲ್ಲಿ ಮಾರಾಟಗೊಂಡಿದೆ ಎಂದು ಹೇಳಲಾಗುತ್ತಿದೆ.

ಓಮ್ನಿ ಸ್ಥಗಿತಗೊಂಡ ನಂತರ ಮಾರುತಿ ಸುಜುಕಿ ಇಕೊಗೆ ಭಾರೀ ಡಿಮ್ಯಾಂಡ್

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಇಕೊ ಎಂಪಿವಿ ಕಾರುಗಳಿಗೆ ಹೊಸದಾಗಿ ಅಪ್ಡೇಟ್ ನೀಡಿ ಬಿಡುಗಡೆ ಮಾಡಲಾಗಿದ್ದು, ಹೊಸ ಸೇಫ್ಟಿ ಫೀಚರ್ಸ್ ಪಡೆದ ಮಾರುತಿ ಸುಜುಕಿ ಇಕೊ ಕಾರು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 3.55 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ. ಹೊಸ ಬದಲಾವಣೆಯ ಬಗ್ಗೆ ಮಾರುತಿ ಸಂಸ್ಥೆಯು ಸಹ ತಮ್ಮ ವೆಬ್‍ಸೈಟ್‍ನಲ್ಲಿ ಅಪ್ಡೇಟ್ ಮಾಡಿದ್ದಾರೆ.

ಓಮ್ನಿ ಸ್ಥಗಿತಗೊಂಡ ನಂತರ ಮಾರುತಿ ಸುಜುಕಿ ಇಕೊಗೆ ಭಾರೀ ಡಿಮ್ಯಾಂಡ್

ಹೊಸ ಸುರಕ್ಷಾ ಸಾಧನಗಳು

ಈ ಬಾರಿ ಮಾರುತಿ ಸುಜುಕಿ ಇಕೊ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಡ್ರೈವರ್-ಸೈಡ್ ಏರ್‍‍ಬ್ಯಾಗ್ಸ್, ರಿವರ್ಸ್ ಪಾರ್ಕಿಂಗ್ ಸೆಸ್ನಾರ್ಸ್, ಫ್ರಂಟ್ ಪ್ಯಾಸ್ಸೆಂಜರ್ ಸೀಟ್ ಬೆಲ್ಟ್ ರಿಮೈಂಡರ್ ಮತ್ತು ಸ್ಪೀಡ್ ಅಲರ್ಟ್ ಅಲಾರ್ಮ್ ಎಂಬ ವಿವಿಧ ಸೇಫ್ಟಿ ಫೀಚರ್ಸ್ ಅನ್ನು ನೀಡಲಾಗಿದೆ. ಇವುಗಳ ಜೊತೆಗೆ 'ಟೂರ್ ವಿ' ಟ್ರಿಮ್ ವೇರಿಯಂಟ್‍‍ನಲ್ಲಿ ಸ್ಪೀಡ್ ಲಿಮಿಟರ್ ಹಾಗು, ಹೈ ಸ್ಪ್ದ್ ಅಲರ್ಟ್ ಸಿಸ್ಟಂ ಅನ್ನು ಒದಗಿಸಲಾಗಿದೆ.

ಓಮ್ನಿ ಸ್ಥಗಿತಗೊಂಡ ನಂತರ ಮಾರುತಿ ಸುಜುಕಿ ಇಕೊಗೆ ಭಾರೀ ಡಿಮ್ಯಾಂಡ್

ಇಷ್ಟೆ ಅಲ್ಲದೇ ಹೊಸ ಮಾರುತಿ ಸುಜುಕಿ ಇಕೊ ಕಾರಿನಲ್ಲಿ ಆಲ್ಟೋ ಹ್ಯಾಚ್‍ಬ್ಯಾಕ್‍ನಿಂದ ಪಡೆದ ಹೊಸ ಸ್ಟೀರಿಂಗ್ ವ್ಹೀಲ್ ಅನ್ನು ನೀಡಲಾಗಿದೆ, ಇದು ಅಪಘಾತದ ವೇಳೆ ತಕ್ಷಣವೇ ಡ್ರೈವರ್ ಏರ್‍‍ಬ್ಯಾಗ್ ತೆರೆದುಕೊಳ್ಳುವಲ್ಲಿ ಸಹಾಯಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಓಮ್ನಿ ಸ್ಥಗಿತಗೊಂಡ ನಂತರ ಮಾರುತಿ ಸುಜುಕಿ ಇಕೊಗೆ ಭಾರೀ ಡಿಮ್ಯಾಂಡ್

8 ವರ್ಷದಲ್ಲಿ 5 ಲಕ್ಷ ಇಕೊ ಮಾರಾಟ

ದೇಶಿಯ ಮಾರುಕಟ್ಟೆಯಲ್ಲಿ ಎಂಪಿವಿ ಕಾರುಗಳ ಬೇಡಿಕೆಯು ಹೆಚ್ಚುತ್ತಿದ್ದ ಕಾರಣ ಮಾರುತಿ ಸುಜುಕಿ ಸಂಸ್ಥೆಯು ಮೊದಲ ಬಾರಿಗೆ 2010ರಲ್ಲಿ ತಮ್ಮ ಇಕೊ ಎಂಪಿವಿ ಕಾರನ್ನು ಬಿಡುಗಡೆಗೊಳಿಸಿತ್ತು. ಇದೀಗ ಬಿಡುಗಡೆಗೊಂಡ 9 ವರ್ಷಗಳಲ್ಲಿ ಸುಮಾರು 5 ಲಕ್ಷಕ್ಕಿಂತ ಹೆಚ್ಚಿನ ಇಕೊ ವಾಹನಗಳು ಮಾರಾಟಗೊಂಡು ಹೊಸ ದಾಖಲೆಯನ್ನು ಬರೆದಿದೆ.

ಓಮ್ನಿ ಸ್ಥಗಿತಗೊಂಡ ನಂತರ ಮಾರುತಿ ಸುಜುಕಿ ಇಕೊಗೆ ಭಾರೀ ಡಿಮ್ಯಾಂಡ್

ಹೌದು, ಮಾರುಕಟ್ಟೆಯಲ್ಲಿ ಹಲವಾರು ಎಂಪಿವಿ ಕಾರುಗಳು ಬಿಡುಗಡೆಗೊಳ್ಳುತ್ತಿದ್ದರೂ ಗ್ರಾಹಕರು ಇನ್ನು 8 ವರ್ಷಗಳ ಹಿಂದೆ ಬಿಡುಗಡೆಗೊಂಡ ಇಕೊ ಎಂಪಿವಿ ಕಾರಿನ ಕಡೆಗೆ ಒಲವನ್ನು ತೋರುತ್ತಿದ್ದಾರೆ. ಏಕೆಂದರೆ ಸುಮಾರು 5 ಮತ್ತು 7 ಮಂದಿ ಕೂರಬಹುದಾದ ಈ ಕಾರು ಕುಟುಂಬದೊಂದಿಗೆ ಹೊರಸಂಚಾರಕ್ಕೆ ಹೋಗಲು ಬಹು ಸೌಕರ್ಯವಂತವಾಗಿದೆ.

ಓಮ್ನಿ ಸ್ಥಗಿತಗೊಂಡ ನಂತರ ಮಾರುತಿ ಸುಜುಕಿ ಇಕೊಗೆ ಭಾರೀ ಡಿಮ್ಯಾಂಡ್

ಮಾರುತಿ ಸುಜುಕಿ ಸಂಸ್ಥೆಯು ಇಕೊ ಎಂಪಿವಿ ಕಾರನ್ನು ಕೇವಲ ಸ್ವಂತ ಬಳಕೆಗೆ ಮಾತ್ರವಲ್ಲದೇ ವ್ಯವಹಾರಿಕ ಕಾರ್ಯಗಳಿಗೆ ಕೂಡಾ ಬಳಸಬಹುದಾದ ಹಾಗೆ ವಿನ್ಯಾಸ ಮಾಡಲಾಗಿದ್ದು, ಇದರಲ್ಲಿ ಹೆಚ್ಚಿನ ವಸ್ತುಗಳನ್ನು ಸರಬರಾಜು ಮಾಡಬಹುದಾಗಿದೆ.

ಓಮ್ನಿ ಸ್ಥಗಿತಗೊಂಡ ನಂತರ ಮಾರುತಿ ಸುಜುಕಿ ಇಕೊಗೆ ಭಾರೀ ಡಿಮ್ಯಾಂಡ್

ಈಗಲೂ ಕೂಡ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇರುವ ಈ ಕಾರು ಪ್ರತೀ ತಿಂಗಳು ಸುಮಾರು 7 ಸಾವಿರ ಕಾರುಗಳ ಬುಕ್ಕಿಂಗ್ ಪಡೆದುಕೊಳ್ಳುತ್ತಿದ್ದು, ಉತ್ತಮ ಲೆಗ್‍ರೂಂ ಮತ್ತು ಪ್ಯಾಸೆಂಜರ್‍‍‍ಗಳಿಗಾಗಿ ಆರಾಮದಾಯಕವಾದ ಹೆಡ್‍‍ರೂಂ ಅನ್ನು ಒದಗಿಸಲಾಗಿದೆ.

ಓಮ್ನಿ ಸ್ಥಗಿತಗೊಂಡ ನಂತರ ಮಾರುತಿ ಸುಜುಕಿ ಇಕೊಗೆ ಭಾರೀ ಡಿಮ್ಯಾಂಡ್

ಎಂಜಿನ್ ಸಾಮರ್ಥ್ಯ

ಜನಪ್ರಿಯ ಮಾರುತಿ ಸುಜುಕಿ ಇಕೊ ಎಂಪಿವಿ ಕಾರು 1196ಸಿಸಿ 4 ಸಿಲೆಂಡರ್ ಮಲ್ಟಿ-ಪಾಯಿಂಟ್ ಇಂಜೆಕ್ಷನ್, ಪೆಟ್ರೋಲ್ ಎಂಜಿನ್ ಸಹಾಯದಿಂದ 69ಬಿಹೆಚ್‍ಪಿ ಮತ್ತು 101ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಓಮ್ನಿ ಸ್ಥಗಿತಗೊಂಡ ನಂತರ ಮಾರುತಿ ಸುಜುಕಿ ಇಕೊಗೆ ಭಾರೀ ಡಿಮ್ಯಾಂಡ್

ಮಾರುತಿ ಸುಜುಕಿ ಎಂಪಿವಿ ಕಾರು ಐದು ಹಾಗು ಏಳು ಆಸಗಳುಳ್ಳ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಜೊತೆಗೆ ಅಧಿಕವಾಗಿ ಸರಕುಗಳನ್ನು ಸಾಗಿಸಲು ಮತ್ತು ಹೊರಸಂಚಾಕ್ಕೆ ಹೋಗುವ ಸಮಯದಲ್ಲಿ ಅಧಿಕವಾಗಿ ಬೇಕಾದ ಸಾಮಗ್ರಿಗಳನ್ನು ತುಂಬಿಕೊಳ್ಳಲು 540ಲೀಟರ್‍‍ನ ಬೂಟ್ ಸ್ಪೇಸ್ ಅನ್ನು ನೀಡಲಾಗಿದೆ.

ಓಮ್ನಿ ಸ್ಥಗಿತಗೊಂಡ ನಂತರ ಮಾರುತಿ ಸುಜುಕಿ ಇಕೊಗೆ ಭಾರೀ ಡಿಮ್ಯಾಂಡ್

ಮರುತಿ ಸುಜುಕಿ ಇಕೊ ಎಂಪಿವಿ ಕಾರು 3675ಎಂಎಂ ಉದ್ದ, 1475ಎಂಎಂ ಅಗಲ, 1800ಎಂಎಂ ಎತ್ತರ, 2350ಎಂಎಂ ವ್ಹೀಲ್‍‍ಬೇಸ್, 160ಎಂಎಂನ ಗ್ರೌಂಡ್ ಕ್ಲಿಯರೆನ್ಸ್ ಮತ್ತು 40 ಲೀಟರ್‍‍ನಷ್ಟು ಫ್ಯುಯಲ್ ಟ್ಯಾಂಕ್ ಕೆಪಾಸಿಟಿಯನ್ನು ಪಡೆದುಕೊಂಡಿದೆ.

More from DriveSpark

Article Published On: Thursday, June 20, 2019, 11:10 [IST]
English summary
Maruti Suzuki Eeco Getting More Demand After Omni Discontinued From Market. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+