ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 (ಕ್ರಾಸ್) ಎಂಪಿವಿ ಕಾರಿನ ಉತ್ಪಾದನೆ ಶುರು

ಮಾರುತಿ ಸುಜುಕಿ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಹೊಸ ವಾಹನವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯು ಮುಂದಿನ ತಿಂಗಳು ತಮ್ಮ ಆರು ಆಸಗಳುಳ್ಳ ಎರ್ಟಿಗಾ ಎಂಪಿವಿ ಕಾರನ್ನು ಬಿಡುಗಡೆ ಮಾಡಲಿದೆ. ಮಾರುತಿ ಸುಜುಕಿ ಆಗಸ್ಟ್ 21ರಂದು ತಮ್ಮ ಪ್ರೀಮಿಯಂ ಮಾದರಿಯ 6 ಸೀಟರ್ ಎರ್ಟಿಗಾ ಕ್ರಾಸ್ ಕಾರನ್ನು ಬಿಡುಗಡೆ ಮಾಡಲಿದೆ.

ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರಿನ ಉತ್ಪಾದನೆ ಶುರು

ಬಿಡುಗಡೆ ಮಾಡುವ ಮುನ್ನ ಕೊನೆಯೆ ಬಾರಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಈ ಕಾರಿನ ಚಿತ್ರಗಳು ಇದೀಗ ಸೋರಿಕೆಯಾಗಿ. ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಈ ಚಿತ್ರಗಳನ್ನು ಗಮನಿಸಿದ್ದಲ್ಲಿ ಸಾಧಾರಣ ಎರ್ಟಿಗಾ ಕಾರಿಗಿಂತಲೂ, ಎರ್ಟಿಗಾ ಕ್ರಾಸ್ (6 ಸೀಟರ್) ಮಾದರಿಯು ಪ್ರೀಮಿಯಂ ಲುಕ್ ಅನ್ನು ಹೊಂದಿದ್ದು, ಕಾರಿನ ಮೇಲ್ಭಾಗದಲ್ಲಿ ಲಗೇಜ್ ಇರಿಸಿಕೊಳ್ಳಲು ಕ್ಯಾರಿಯರ್ ಅನ್ನು ಸಹ ನೀಡಲಾಗುತ್ತಿದೆ.

ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರಿನ ಉತ್ಪಾದನೆ ಶುರು

ಇಷ್ಟೆ ಅಲ್ಲದೆಯೆ ಹಿಂಭಾಗದಿಂಗ ಗಮನಿಸಿದ್ದಲ್ಲಿ ಮಾರುತಿ ಸುಜುಕಿ ಎಸ್‍-ಕ್ರಾಸ್ ಮಾದರಿಯ ವಿನ್ಯಾಸವನ್ನು ಕೊಂಚ ಇದು ಹೋಲುತ್ತದೆ. ಕಾರಿನ ಹಿಂಭಾಗದಲ್ಲಿ ನೆಕ್ಸಾ ಸ್ಟಿಕ್ಕರಿಂಗ್ ಅನ್ನು ಸಹ ನೀಡಲಾಗಿದ್ದು, ಈ ಕಾರು ಕೇವಲ ನೆಕ್ಸಾ ಶೋರುಂನಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದೆ. ಈ 6 ಸೀಟರ್ ಎರ್ಟಿಗಾ ಕಾರಿನಲ್ಲಿ ಮಧ್ಯ ಭಾಗದಲ್ಲಿರುವ ಸೀಟ್‍‍ಗಳು ಕ್ಯಾಪ್ಟೇನ್ ಸೀಟ್ ವೈಶಿಷ್ಟ್ಯತೆಯನ್ನು ಪಡೆಯಲಿದೆ.

ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರಿನ ಉತ್ಪಾದನೆ ಶುರು

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಎರ್ತಿಗಾ ಕ್ರಾಸ್ ಕಾರು ನೆಕ್ಸಾ ಬ್ಲೂ ಬಣ್ಣವನ್ನು ಹೊಂದಿದ್ದು, ಕಪ್ಪು ಬಣ್ಣದ ರೂಫ್ ಅನ್ನು ಪಡೆದುಕೊಂಡಿದೆ. ಹಾಗೆಯೆ ಸೈಡ್ ಪ್ರೊಫೈಲ್‍ ಕೂಡಾ ಕರ್ಷಕವಾಗಿ ಕಾಣಲು 15 ಇಂಚನ ಅಲಾಯ್ ವ್ಹೀಲ್ಸ್, ಋಊ[ಹ್ ರೈಲ್ಸ್, ವಿಂಗ್ ಮಿರರ್ಸ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಅನ್ನು ಹೊತ್ತು ವಿಭಿನ್ನವಾದ ಎಂಪಿವಿಯಾಗಿ ಕಾಣಿಸಿಕೊಂಡಿದೆ.

ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರಿನ ಉತ್ಪಾದನೆ ಶುರು

ಎರ್ಟಿಗಾ ಕ್ರಾಸ್ ಕಾರು ಸಾಮಾನ್ಯ ಮಾದರಿಯ ಎರ್ಟಿಗಾ ಕಾರಿಗಿಂತಲೂ ವಿಭಿನ್ನವಾಗಿದ್ದು, ವಿನೂತನವಾದ ಫ್ಲೇರ್ಡ್ ವ್ಹೀಲ್ ಆರ್ಚೆಸ್, ಹೊಸ ಕ್ರೋಮ್ ಗ್ರಿಲ್ ಅನ್ನು ನೀಡಲಾಗಿದೆ. ಹಾಗೆಯೇ ಆಕರ್ಷಕವಾದ ಹೆಡ್‍ಲೈಟ್‍ಗಳು ಮತ್ತು ಎಲ್ಇಡಿ ಡಿಆರ್‍ಎಲ್ ಅನ್ನು ಅಳವಡಿಸಲಾಗಿದ್ದು, ಉತ್ತಮ ಡ್ರೈವ್ ಅನುಭವಕ್ಕಾಗಿ ಹೈ ಗ್ರೌಂಡ್ ಕ್ಲಿಯರೆನ್ಸ್, ರೂಫ್ ರೈಲ್ಸ್ ಮತ್ತು ಇನ್ನಿತರೆ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ.

ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರಿನ ಉತ್ಪಾದನೆ ಶುರು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಮುಖ್ಯವಾಗಿ ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರು 6 ಆಸನಗಳನ್ನು ಹೊಂದಿರಲಿದ್ದು, ಮಧ್ಯಭಾಗದಲ್ಲಿನ ಸೀಟ್‍‍ಗಳನ್ನು ಕ್ಯಾಪ್ಟನ್ ಸೀಟ್ ಮಾದರಿಗಳಲ್ಲಿ ನೀಡುವ ಸಾಧ್ಯತೆಗಳಿವೆ. ಎರ್ಟಿಗಾ ಬ್ಲಾಕ್ ಎಡಿಷನ್‍ನಂತೆಯೇ ಈ ಕಾರು ಕೂಡಾ ಒಳಭಾಗದಲ್ಲಿ ಸಂಪೂರ್ಣವಾಗಿ ಕಪ್ಪು ಬಣ್ಣವನ್ನು ಪಡೆಯಲಿದ್ದು, ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆಯಲಿದೆ.

ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರಿನ ಉತ್ಪಾದನೆ ಶುರು

ಎಂಜಿನ್ ಸಾಮರ್ಥ್ಯ

ಹೊಸ ಎರ್ಟಿಗಾ ಕ್ರಾಸ್ ಕಾರು ಮಾದರಿಯು ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದ್ದು, ಇದು 104-ಬಿಹೆಚ್‍ಪಿ ಮತ್ತು 138-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಳ್ಳಲಿದೆ. ಹಾಗೆಯೇ ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಬರಲಿದೆ ಎನ್ನಲಾಗಿದೆ.

ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರಿನ ಉತ್ಪಾದನೆ ಶುರು

ಸದ್ಯ ಮಾರುಕಟ್ಟೆಯಲ್ಲಿ ಎರಡನೇ ತಲೆಮಾರಿನ ಮಾರುತಿ ಸುಜುಕಿ ಎರ್ಟಿಗಾ ಕಾರುಗಳು ಎಂಪಿವಿ ವಿಭಾಗದಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದ್ದು, ಕಳೆದ ಅಗಸ್ಟ್‌ನಿಂದ ಇಲ್ಲಿಯ ತನಕ ಸುಮಾರು 50 ಸಾವಿರಕ್ಕೂ ಹೆಚ್ಚು ಕಾರುಗಳು ಮಾರಾಟವಾಗಿವೆ.

ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರಿನ ಉತ್ಪಾದನೆ ಶುರು

ಎರಡನೇ ತಲೆಮಾರಿನ ಎರ್ಟಿಗಾ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.45 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 11.21 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 13 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರಿನ ಉತ್ಪಾದನೆ ಶುರು

ಇದೀಗ ಬಿಡುಗಡೆಯಾಗುತ್ತಿರುವ ಹೊಸ ಎರ್ಟಿಗಾ ಕ್ರಾಸ್ ವೆರಿಯೆಂಟ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ 13 ವೆರಿಯೆಂಟ್‌ಗಳಿಂತ ತುಸು ಭಿನ್ನವಾಗಿರಲಿದೆ. ವಿಶೇಷವಾಗಿ ಇದು ವ್ಯಯಕ್ತಿಕ ಕಾರು ಬಳಕೆದಾರರ ಬೇಡಿಕೆಯೆಂತೆ ಎರ್ಟಿಗಾ ಕ್ರಾಸ್ ಮಾದರಿಯನ್ನು ಅಭಿವೃದ್ಧಿಗೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರಿನ ಬೆಲೆಯು ಆರಂಭಿಕವಾಗಿ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರಿನ ಉತ್ಪಾದನೆ ಶುರು

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಮಾತ್ರ ವರ್ಷದಲ್ಲಿ ಸುಮಾರು ವಾಹನಗಳನ್ನು ಬಿಡುಗಡೆ ಮಾಡುತ್ತಾ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಕಾರುಗಳನ್ನು ನೀಡುವಲ್ಲಿ ಯಶಸ್ವಿಯಾಗುತ್ತಿದ್ದು, ಇನ್ನು ಈ ವರ್ಷದಲ್ಲಿ ಸಂಸ್ಥೆಯು ಎಸ್‍-ಪ್ರೆಸ್ಸೊ ಎಂಬ ಮಿನಿ ಕಾರು ಮತ್ತು 7 ಸೀಟರ್ ವ್ಯಾಗನ್ ಆರ್ ಕಾರುಗಳನ್ನು ಹಬ್ಬದ ಋತುವಿನಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

Source: GaadiWaadi

More from DriveSpark

Article Published On: Tuesday, July 23, 2019, 9:33 [IST]
English summary
Maruti Suzuki Ertiga Cross 6 Seater Spied - Production Begins. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+