ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಲಿದೆ ಹೊಸ ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಕಾರು
ಕಳೆದ ಕೆಲವು ತಿಂಗಳುಗಳಲ್ಲಿ ಕಾರು ತಯಾರಕರು ಕಠಿಣ ಸಮಯವನ್ನು ಅನುಭವಿಸುತ್ತಿದ್ದಾರೆ, ಏಕೆಂದರೆ ಈ ಹಣಕಾಸು ವರ್ಷದ ಆರಂಭಿಕ ಹಂತಗಳಲ್ಲಿ ಮಾರಾಟದ ಸ್ಥಿರ ಕುಸಿತವು ಪರಿಮಾಣದ ಭವಿಷ್ಯವನ್ನು ನೋಯಿಸಿದೆ. ಆದಾಗ್ಯೂ, ದೇಶೀಯ ಮಾರುಕಟ್ಟೆಯು 2018 ರ ಎರಡನೇ ಭಾಗದಲ್ಲಿ ಮತ್ತೆ ಮೇಲೇಳುವ ಸಾಧ್ಯತೆಗಳಿದ್ದು ಮತ್ತು ಇದರ ಪರಿಣಾಮವಾಗಿ ಹೊಸ ಉತ್ಪನ್ನಗಳನ್ನು ವಿವಿಧ ವಿಭಾಗಗಳಲ್ಲಿ ಗ್ರಾಹಕರು ನಿರೀಕ್ಷಿಸಬಹುದು.

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಮಾತ್ರ ವರ್ಷದಲ್ಲಿ ಸುಮಾರು ವಾಹನಗಳನ್ನು ಬಿಡುಗಡೆ ಮಾಡುತ್ತಾ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಕಾರುಗಳನ್ನು ನೀಡುವಲ್ಲಿ ಯಶಸ್ವಿಯಾಗುತ್ತಿದ್ದು, ಇನ್ನು ಈ ವರ್ಷದಲ್ಲಿ ಸಂಸ್ಥೆಯು ಎಸ್-ಪ್ರೆಸ್ಸೊ ಎಂಬ ಮಿನಿ ಕಾರು ಮತ್ತು 7 ಸೀಟರ್ ವ್ಯಾಗನ್ ಆರ್ ಕಾರುಗಳನ್ನು ಹಬ್ಬದ ಋತುವಿನಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಮಾರುತಿ ಸುಜುಕಿ ಕಾರಿನಲ್ಲಿ ಮತು ಸ್ವಿಫ್ಟ್ ಆರ್‍ಎಸ್ ಕಾರುಗಳಲ್ಲಿ ಬಲೆನೊ ಕಾರಿನಿಂದ ಪಡೆದ 1.0 ಲೀಟರ್ ಬೂಸ್ಟರ್‍ಜೆಟ್ ಟರ್ಬೋ ಎಂಜಿನ್ ಅನ್ನು ಹೊಂದಿದ್ದು, ಇದೀಗ ತಮ್ಮ ಜನಪ್ರಿಯ ಎರ್ಟಿಗಾ ಎಂಪಿವಿ ಕಾರಿನಲ್ಲಿಯು ಸಹ ಇದೇ ಎಂಜಿನ್ ಅನ್ನು ನೀಡಿ ಎರ್ಟಿಗಾ ಕ್ರಾಸ್ ಮಾದರಿಯಲ್ಲಿ ಬಿಡುಗಡೆ ಮಾಡಲಿದೆ.

ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರು ಕೇವಲ ನೆಕ್ಸಾ ಡೀಲರ್‍ಗಳ ಬಳಿ ಮಾತ್ರ ದೊರೆಯಲಿದ್ದು, ಸಾಧಾರಣ ಮಾರುತಿ ಸುಜುಕಿ ಎರ್ಟಿಗಾ ಕಾರಿಗಿಂತಲೂ ವಿಭಿನ್ನವಾದ ಸ್ಪೋರ್ಟಿ ವಿನ್ಯಾಸದಲ್ಲಿ ಈ ಕಾರು ಬರಲಿದೆ ಮತ್ತು ಹಲವಾರು ಬದಲಾವಣೆಗಳನ್ನು ಸಹ ಪಡೆದುಕೊಳ್ಳಲಿದೆ.

ಹೊಸ ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಕಾರಿನಲ್ಲಿ ವಿನೂತನವಾದ ಫ್ಲೇರ್ಡ್ ವ್ಹೀಲ್ ಆರ್ಚೆಸ್, ಹೊಸ ಕ್ರೋಮ್ ಗ್ರಿಲ್ ಅನ್ನು ನೀಡಲಾಗಿದ್ದು, ಆಕರ್ಷಕವಾದ ಹೆಡ್‍ಲೈಟ್‍ಗಳು ಮತ್ತು ಎಲ್ಇಡಿ ಡಿಆರ್‍ಎಲ್ ಅನ್ನು ಅಳವಡಿಸಲಾಗಿದೆ. ಇವುಗಳ ಜೊತೆಗೆ ರಸ್ತೆಯಲ್ಲಿ ಉತ್ತಮವಾದ ಅನುಭವವನ್ನು ನೀಡಲು ಗ್ರೌಂಡ್ ಕ್ಲಿಯರೆನ್ಸ್ ಅನ್ನು ಏರಿಸಲಾಗಿದ್ದು ರೂಫ್ ರೈಲ್ಸ್ ಮತ್ತು ಇನ್ನಿತರೆ ಬದಲಾವಣೆಗಳನ್ನು ಪಡೆಯಲಿದೆ.

ಮುಖ್ಯವಾಗಿ ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಎಂಪಿವಿ ಕಾರು 6 ಆಸನಗಳನ್ನು ಹೊಂದಿರಲಿದ್ದು, ಮಧ್ಯಭಾಗದಲ್ಲಿನ ಸೀಟ್‍ಗಳನ್ನು ಕ್ಯಾಪ್ಟೇನ್ ಸೀಟ್ ಮಾದರಗಳಲ್ಲಿ ನೀಡುವ ಸಾಧ್ಯತೆಗಳಿವೆ. ಎರ್ಟಿಗಾ ಬ್ಲಾಕ್ ಎಡಿಷನ್‍ನಂತೆಯೆ ಈ ಕಾರು ಕೂಡಾ ಒಳಭಾಗದಲ್ಲಿ ಸಂಪೂರ್ಣವಾಗಿ ಕಪ್ಪು ಬಣ್ಣವನ್ನು ಪಡೆಯಲಿದ್ದು, ಹೊಸ ಉಪಕರಣಗಳನ್ನು ಪಡೆಯಲಿದೆ.

ಎಂಜಿನ್ ಸಾಮರ್ಥ್ಯ
ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ಎರ್ಟಿಗಾ ಕ್ರಾಸ್ ಕಾರು ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಪಡೆದ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದ್ದು, ಇದು 104 ಬಿಹೆಚ್‍ಪಿ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಳ್ಳಲಿದೆ. ಹಾಗೆಯೆ ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಬರಲಿದೆ ಎನ್ನಲಾಗಿದೆ.

ಸಧ್ಯ ಮಾರುಕಟ್ಟೆಯಲ್ಲಿ ಮೊದಲನೆಯ ತಲೆಮಾರಿನ ಕಾರಿನಂತೆಯೆ ಎರಡನೆಯ ತಲೆಮಾರಿನ ಮಾರುತಿ ಸುಜುಕಿ ಎರ್ಟಿಗಾ ಕಾರುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆಯುತ್ತಿದ್ದು, ಬಿಡುಗಡೆಗೊಂಡಾಗಿನಿಂದಲೂ ಇಲ್ಲಿಯ ವರೆಗೂ ಸುಮಾರು 47,388 ಕ್ಕು ಅಧಿಕ ಕಾರುಗಳು ಮಾರಾಟಗೊಂಡಿವೆಯಂತೆ. ವರದಿ ಪ್ರಕಾರ ನವೆಂಬರ್ 2018ರಲ್ಲಿ ಬಿಡುಗಡೆಗೊಂಡ ಎರಡನೆಯ ತಲೆಮಾರಿನ ಮಾರುತಿ ಸುಜುಕಿ ಎರ್ಟಿಗಾ ಕಾರುಗಳು ಪ್ರತೀ ತಿಂಗಳುಗೆ ಸಮರು 7,898 ಯೂನಿಟ್ ಮಾರಾಟವಾಗುತ್ತಿದೆ.

ಮಾರುತಿ ಸುಜುಕಿ ಸಂಸ್ಥೆಯು ಕೆಲ ತಿಂಗಳುಗಳ ಹಿಂದಷ್ಟೆ ತಮ್ಮ ಹೊಸ ತಲೆಮಾರಿನ ಎರ್ಟಿಗಾ ಎಂಪಿವಿ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 7.44 ಲಕ್ಷದ ಪ್ರಾರಂಭಿಕ ಬಲೆಯನ್ನು ನೀಡಲಾಗಿದ್ದು, ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಮರಾಜೋ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದೆ.

ಮೈಲೇಜ್
ಮಾರುತಿ ಸುಜುಕಿ ಸಂಸ್ಥೆಯು ಹೇಳಿಕೊಂಡಿರುವ ಪ್ರಕಾರ, ಡಿಸೇಲ್ ವರ್ಷನ್‌ಗಳು ಪ್ರತಿ ಲೀಟರ್‌ಗೆ 25 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಪೆಟ್ರೋಲ್ ಮಾದರಿಯ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ 19 ಕಿ.ಮಿ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18 ಕಿ.ಮಿ ಮೈಲೇಜ್ ಹಿಂದಿರುಗಿಸಲಿದೆ.

ಸುರಕ್ಷಾ ವೈಶಿಷ್ಟ್ಯತೆಗಳು
ಹೊಸ ಎರ್ಟಿಗಾ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕಾರಿನ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಇದಲ್ಲದೆ ಹೈ ಎಂಡ್ ಮಾದರಿಗಳಲ್ಲಿ ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಒದಗಿಸಲಾಗಿದೆ.
Source: IAB


Click it and Unblock the Notifications








