Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗ್ರಾಹಕರ ಕೈ ಸೇರುತ್ತಿರುವ ಟ್ಯಾಕ್ಸಿ ವರ್ಷನ್ ಮಾರುತಿ ಸುಜುಕಿ ಎರ್ಟಿಗಾ ಕಾರು
ಎಂಪಿವಿ ಕಾರು ವಿಭಾಗದಲ್ಲಿ ಹಿಂದಿನಿಂದಲೂ ಹೆಚ್ಚು ಜನಪ್ರೀಯತೆಯನ್ನು ಪಡೆಯುತ್ತಿರುವ ಮಾರುತಿ ಸುಜುಕಿ ಎರ್ಟಿಗಾ ಕಾರು, ಕೇವಲ ಸ್ವಂತ ಬಳಕೆಗೆ ಮಾತ್ರವಲ್ಲದೆಯೆ ಟ್ಯಾಕ್ಸಿ ಚಾಲಕರಿಗು ಸಹ ಅಚ್ಚುಮೆಚ್ಚು. ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ವಿಶೇಷವಾಗಿ ಟ್ಯಾಕ್ಸಿ ಆಪರೇಟರ್‍ಗಳಿಗಾಗಿಯೇ ಎರ್ಟಿಗಾ ಟೂರ್ ಎಂ ಎಂಬ ಮಾದರಿಯನ್ನು ಬಿಡುಗಡೆ ಮಾಡಲಾಗಿತ್ತು.

ಇದೀಗ ಸಾಧಾರಣ ಮಾರುತಿ ಸುಜುಕಿ ಎರ್ಟಿಗಾ ಕಾರಿನಂತೆಗೆ ಟ್ಯಾಕ್ಸಿ ವರ್ಷನ್ ಎರ್ಟಿಗಾ ಕರುಗೂ ಸಹ ಡಿಮ್ಯಾಂಡ್ ಅಧಿಕವಾಗುತ್ತಿದ್ದು, ಬೇಡಿಕೆಗಳ ಅನುಸಾರ ಉತ್ಪಾದನೆಯ ಸಂಖ್ಯೆಯನ್ನು ಕೊಂಚ ಜಾಸ್ತಿ ಮಾಡಲಿದೆ ಮಾರುತಿ ಸುಜುಕಿ. ಹಾಗೆಯೆ ದೇಶದಲ್ಲಿರುವ ಕೆಲ ಮಾರುತಿ ಸುಜುಕಿ ಡೀಲರ್‍ಗಳು ಈ ಹೊಸ ಟ್ಯಾಕ್ಸಿ ವರ್ಷನ್ ಮಾರುತಿ ಸುಜುಕಿ ಎರ್ಟಿಗಾ ಕಾರಿನ ವಿತರಣೆಯನ್ನು ಶುರು ಮಾಡಲಾಗಿದೆ ಎಂದು ಗಾಡಿವಾಡಿ ವರದಿಗಳು ತಿಳಿಸುತ್ತಿವೆ.

ಮಾರುತಿ ಸುಜುಕಿ ಸಂಸ್ಥೆಯು ಬಿಡುಗಡೆ ಮಾಡಲಾದ ಎರ್ಟಿಗಾ ಎಂ ಆವೃತ್ತಿಯು ಎಕ್ಸ್ ಶೋರುಂ ಪ್ರಕಾರ ರೂ. 7.99 ಲಕ್ಷಕ್ಕೆ ನಿಗದಿ ಮಾಡಲಾಗಿದ್ದು, ಸಾಧಾರಣ ಎರ್ಟಿಗಾ ಕಾರಿನ ವಿಎಕ್ಸ್ಐ ಟ್ರಿಮ್ ಮಾದರಿಯಲ್ಲಿ ಮಾತ್ರ ಲಭ್ಯವಿದೆ. ಈ ಕಾರು 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 105 ಬಿಹೆಚ್‍ಪಿ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಪ್ರತೀ ಲೀಟರ್‍ಗೆ ಸುಮಾರು 18.8 ಕಿಲೋಮೀಟರ್ ಮೈಲೇಜ್ ನೀಡಬಲ್ಲದು.

ಟ್ಯಾಕ್ಸಿ ಚಾಲಕರಿಗಾಗಿ ಬಿಡುಗಡೆಯಾದ ವಿಶೇಷ ಮಾರುತಿ ಸುಜುಕಿ ಎರ್ಟಿಗಾ ಟೂರ್ ಎಂ ಆವೃತ್ತಿಯಲ್ಲಿ ಡ್ಯುಯಲ್ ಫ್ರಂಟ್ ಏರ್‍ಬ್ಯಾಗ್ಸ್, ಎಬಿಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಸ್ಪೀಡ್ ಲಿಮಿಟ್ ಫಂಕ್ಷನ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ ಹಾಗು ಟಿಎಫ್‍ಟಿ ಮಲ್ಟಿ ಇನ್ಫರ್ಮೆಷನ್ ಡಿಸ್ಪ್ಲೇ, ವಿದ್ಯುತ್‍ನಿಂದ ಹೊಂದಾಣಿಕೆ ಮಾಡಬಹುದಾದ ಒಆರ್‍ವಿಎಂ, ರಿಯರ್ ಎಸಿ ವೆಂಟ್ಸ್ ಮತ್ತು ಡ್ಯುಯಲ್ ಟೋನ್ ಇಂಟೀರಿಯರ್ ಅನ್ನು ನೀಡಲಾಗಿದೆ.

ಮೇಲೆ ಹೇಳಿರುವ ವೈಶಿಷ್ಟ್ಯತೆಗಳನ್ನು ಹೊರತು ಪಡಿಸಿ ಮಾರುತಿ ಸುಜುಕಿ ಎರ್ಟಿಗಾ ಟೂರ್ ಎಂ ಮಾದರಿಯಲ್ಲಿ ಬೇರಾವ ಮಾರ್ಪಾಡುಗಳನ್ನು ಮಾಡಲಿಲ್ಲ. ಪ್ರತೀ ತಿಂಗಳೂ ಸುಮಾರು 8 ಸಾವಿರಕ್ಕು ಅಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಮರುತಿ ಸುಜುಕಿ ಎರ್ಟಿಗಾ ಕಾರುಗಳು ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಮರಾಜೊ ಮತ್ತು ಟೊಯೊಟಾ ಇನೊವಾ ಕ್ರಿಸ್ಟಾ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದೆ.

ಇನ್ನು ಸಾಧಾರಣ ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಕಾರು ವಿಶ್ವದರ್ಜೆ ಕಾರು ಉತ್ಪಾದನಾ ಮಾದರಿಯಾದ 'ಹಾರ್ಟ್‍ಟೆಕ್ಟ್' ಪ್ಲಾಟ್‍ಫಾರ್ಮ್‍ನ ಅಡಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರ ಆಸನ ವಿನ್ಯಾಸವನ್ನು ಈ ಬಾರಿ ತುಸು ವಿಸ್ತರಿಸಲಾಗಿದೆ.

ನೆಕ್ಸ್ಟ್ ಜನರೇಷನ್ ಎರ್ಟಿಗಾ ಎಂಪಿವಿ ಕಾರಿನ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‍ಲ್ಯಾಂಪ್‍ಗಳನ್ನು ಪಡೆದುಕೊಂಡಿದ್ದು, ಹಾಗೆಯೇ ಕಾರಿನ ಸೈಡ್‍ನಲ್ಲಿ ಫ್ಲೋಟಿಂಗ್ ರೂಫ್ ವಿನ್ಯಾಸ, 15-ಇಂಚಿನ ಅಲಾಯ್ ಚಕ್ರಗಳು ಮತ್ತು ಕಾರಿನ ಹಿಂಭಾಗದಲ್ಲಿ 'ಎಲ್' ಆಕಾರದ ಟೈಲ್ ಲೈಟ್ ಅನ್ನು ಪಡೆದಿದೆ.
MOST READ: ಹೊಸ ಮೋಟಾರ್ ವೆಹಿಕಲ್ ಕಾಯ್ದೆಗೆ ಸಿಕ್ತು ಗ್ರೀನ್ ಸಿಗ್ನಲ್ - ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ.?

ತಾಂತ್ರಿಕ ವೈಶಿಷ್ಟ್ಯತೆಗಳು
ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿರುವ 7-ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಸ ಎರ್ಟಿಗಾದಲ್ಲೂ ಬಳಕೆ ಮಾಡಲಾಗಿದ್ದು, ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಮತ್ತು ಬ್ಲೂಟೂಥ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೇ ಕಪ್ ಹೋಲ್ಡರ್ಸ್ ಅನ್ನೂ ಕೂಡಾ ನೀಡಲಾಗುತ್ತಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್‍ಗೆ ಸಹಾಯವಾಗುವ ಹಲವಾರು ಬಟನ್‍ಗಳೊಂದಿಗೆ ಲೆದರ್ ಹೊದಿಕೆಯಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಜೋಡಿಸಲಾಗಿದೆ.
MOST READ: 2030ರ ನಂತರ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟ ಸಂಪೂರ್ಣ ಬಂದ್..

ಸುರಕ್ಷಾ ವೈಶಿಷ್ಟ್ಯತೆಗಳು
ಹೊಸ ಎರ್ಟಿಗಾ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಡ್ಯುಯಲ್ ಏರ್‌ಬ್ಯಾಗ್, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕಾರಿನ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಇದಲ್ಲದೆ ಹೈ ಎಂಡ್ ಮಾದರಿಗಳಲ್ಲಿ ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಒದಗಿಸಲಾಗಿದೆ.
MOST READ: ರಾಜ್ಯದೆಲ್ಲೆಡೆ 650 ಎಲೆಕ್ಟ್ರಿಕ್ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದೆಯೆಂತೆ ಬೆಸ್ಕಾಂ

ಎಂಜಿನ್ ಸಾಮರ್ಥ್ಯ
ಹೊಸ ಎರ್ಟಿಗಾ ಕಾರಿನಲ್ಲಿ ಪ್ರಮುಖ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಈ ಹಿಂದಿನ 1.4-ಲೀಟರ್ ಪೆಟ್ರೋಲ್ ಎಂಜಿನ್ ಬದಲಾಗಿ 1.5-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದೆ. ಹಾಗೆಯೇ ಡೀಸೆಲ್ ಕಾರು 1.3-ಲೀಟರ್ ಎಂಜಿನ್ ಪಡೆದಿದ್ದು, ಇಂಧನ ದಕ್ಷತೆ ಹೆಚ್ಚಿಸಲು ಎಸ್‍ಹೆಚ್‍ವಿಎಸ್ ಮೈಲ್ಡ್-ಹೈಬ್ರಿಡ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ. ಜೊತೆಗೆ ಬೇಡಿಕೆಗೆ ಅನುಗುಣವಾಗಿ 4-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದಿದೆ.

ಮೈಲೇಜ್ ಮಾರುತಿ ಸುಜುಕಿ ಸಂಸ್ಥೆಯು ಹೇಳಿಕೊಂಡಿರುವ ಪ್ರಕಾರ, ಡಿಸೇಲ್ ವರ್ಷನ್‌ಗಳು ಪ್ರತಿ ಲೀಟರ್‌ಗೆ 25 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಪೆಟ್ರೋಲ್ ಮಾದರಿಯ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ 19 ಕಿ.ಮಿ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18 ಕಿ.ಮಿ ಮೈಲೇಜ್ ಹಿಂದಿರುಗಿಸಲಿದೆ.