ಮಿನಿ ಬೆಡ್‍ರೂಂನಂತೆ ಮಾರ್ಪಾಡಾದ ಮಾರುತಿ ಸುಜುಕಿ ಎರ್ಟಿಗಾ ಕಾರು

ಎಂಪಿವಿ ಕಾರು ಅಂದರೇನೆ ಮೊದಲಿಗೆ ನೆನಪಾಗೊದು ಸ್ನೇಹಿತರೆಲ್ಲರೂ ಅಥವಾ ಕುಟುಂಬದ ಜೊತೆಗೆ ಬೇರೊಂದು ಊರಿಗೆ ಲಾಂಗ್ ಡ್ರೈವ್ ಹೋಗೊದು. ಏಕೆಂದರೆ ಇದರಲ್ಲಿ ನೀಡಲಾದ ಲೆಗ್‍‍ರೂಂ ಮತ್ತು ಹೆಡ್‍ರೂಂಗಳ ವಿಶಾಲತೆಯು ಸುಮಾರು 8 ರಿಂದ 9 ಮಂದಿ ಕೂರಬಹುದಾದ ಹಾಗೆ ವಿನ್ಯಾಸ ಮಾಡಲಾಗಿರುತ್ತದೆ. ಇದಕ್ಕಾಗಾಗಿಯೇ ಈ ಕಾರನ್ನು ಸ್ವಂತ ಬಳಕೆಗಿಂತಲೂ ಟ್ಯಾಕ್ಸಿ ಆಪರೇಟರ್‍‍ಗಳು ಹೆಚ್ಚಿನದಾಗಿ ಖರೀದಿ ಮಾಡುತ್ತಾರೆ.

ಮಿನಿ ಬೆಡ್‍ರೂಂನಂತೆ ಮಾರ್ಪಾಡಾದ ಮಾರುತಿ ಸುಜುಕಿ ಎರ್ಟಿಗಾ ಕಾರು

ಸದ್ಯ ಮಾರುಕಟ್ಟೆಯಲ್ಲಿರುವ ಎಂಪಿವಿ ಕಾರುಗಳಲ್ಲಿ ಮಾರುತಿ ಸುಜುಕಿ ಸಂಸ್ಥೆಯ ಎರ್ಟಿಗಾ ಕಾರು ಹೆಚ್ಚು ಬೇಡಿಕೆಯನ್ನು ಮತ್ತು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಕಚೇರಿಗಳಿಗಾಗಿ ಅಥವಾ ದಿನನಿತ್ಯದ ಸಂಚಾರಕ್ಕಾಗಿ ಕೆಲವರು ಹ್ಯಾಚ್‍ಬ್ಯಾಕ್ ಕಾರುಗಳನ್ನು ಬಳಸಿದರೂ ಸಹ ಫ್ಯಾಮಿಲಿ ಜೊತೆಗೆ ಹೊರ ಸಂಚಾರಕ್ಕೆ ಹೋಗಲು ಎಂಪಿವಿ ಕಾರುಗಳನ್ನು ಖರೀದಿ ಮಾಡುತ್ತಾರೆ. ಇಷ್ಟೆಲ್ಲಾ ಯಾಕೆ ಹೇಳ್ತಿದಿವಿ ಅಂದರೆ, ಮಾರುತಿ ಸುಜುಕಿ ಎರ್ಟಿಗಾ ಕಾರಿನ ಮಾಲೀಕನೊಬ್ಬ ತನ್ನ ಕಾರನ್ನು ಸಂಪೂರ್ಣವಾಗಿ ಮಿನಿ ಬೆಡ್‍ರೂಂನಂತೆ ತಯಾರು ಮಾಡಿದ್ದಾನೆ.

ಮಿನಿ ಬೆಡ್‍ರೂಂನಂತೆ ಮಾರ್ಪಾಡಾದ ಮಾರುತಿ ಸುಜುಕಿ ಎರ್ಟಿಗಾ ಕಾರು

ಹೌದು, ನೀವು ಓದಿದ್ದು ಸರಿಯಾಗಿಯೆ ಇದೆ. ನೈನ್ ಎಂ ಟ್ರೆಕ್ಕರ್ ಎಂಬ ವ್ಯಕ್ತಿಯು ತನ್ನ ಮಡದಿ ಮತ್ತು ಮಗುವಿನ ಜೊತೆಗೆ ಹೊರ ಸಂಚಾರಕ್ಕೆ ಹೋಗಲು ಕಾರಿನ ಹಿಂಭಾಗದಲ್ಲೇ ಬೆಡ್, ಬೆಡ್‍ಶೀಟ್ ಮತ್ತು ತಲೆ ದಿಂಬನ್ನು ಹೊದಿಸಿ ಮಿನಿ ರೂಂನಂತೆ ತಯಾರು ಮಾಡಿಕೊಂಡಿದ್ದಾನೆ. ಈ ಆಲೋಚನೆ ನಮ್ಮಲ್ಲಿ ಹಲವರಿಗೆ ಬಂದರೂ ಸಹ ನಾವು ಇದನ್ನು ಮಾಡಲು ಮುಂದಾಗುವುದಿಲ್ಲ.

ಎರ್ಟಿಗಾ ಕಾರಿನಲ್ಲಿ ಹಿಂಬದಿಯ ಸೀಟ್‍‍ಗಳನ್ನು ಮಡಚಿಕೊಳ್ಳುವ ಸೌಲಭ್ಯವಿರುವ ಕಾರಣ ಅವುಗಳನ್ನು ಫೋಲ್ಡ್ ಮಾಡಿ ಅಲ್ಲಿಯೇ ಬೆಡ್ ಅನ್ನು ಹಾಸಿ ಅಲ್ಲಿಯೇ ಮಲಗುವ ಹಾಗೆ ವ್ಯವಸ್ಥೆ ಮಾಡುಕೊಳ್ಳಲಾಗಿದ್ದು, ಈ ನೀವು ಕೆಳಗಿನ ವಿಡಿಯೋದಲ್ಲಿ ಕಾಣಬಹುದಾಗಿದೆ.

ಮಿನಿ ಬೆಡ್‍ರೂಂನಂತೆ ಮಾರ್ಪಾಡಾದ ಮಾರುತಿ ಸುಜುಕಿ ಎರ್ಟಿಗಾ ಕಾರು

ಹೀಗೆ ಮಾಡುವುದು ಸರಿಯೇ?

ಈ ರೀತಿಯಾದ ವ್ಯವಸ್ಥೆಯನ್ನು ನೀವು ಸಹ ಟ್ರೈ ಮಾಡಬಹುದು. ಆದ್ರೆ ಹೀಗೆ ಮಾಡುವುದು ತಪ್ಪು ಏಕೆಂದರೆ ಕಾರು ವೇಗದಲ್ಲಿ ಚಲಿಸುವಾಗ ಬೆಡ್ ಮೇಲೆ ಮಲಗಿರುವ ವ್ಯಕ್ತಿಗಳು ಸೀಟ್ ಬೆಲ್ಟ್ ಧರಿಸಿರುವುದಿಲ್ಲ. ಅದಾಗ್ಯೂ ಅಕಸ್ಮಾತ್ ಅಪಘಾತಗಳು ಸಂಭವಿಸಿದಲ್ಲಿ ಮುಂದಿರುವ ಪ್ರಯಾಣಿಕರಿಗಿಂತಲೂ ಹಿಂದಿರುವ ವ್ಯಕ್ತಿಗಳಿಗೆ ಹೆಚ್ಚು ಗಾಯವಾಗುವ ಸಾಧ್ಯತೆಗಳಿದ್ದು, ವೇಗದಲ್ಲಿ ಚಲಿಸುತ್ತಿದ್ದಾಗ ಯಾವುದಾದರೂ ಸ್ಪೀಡ್ ಬ್ರೇಕರ್ ಕೆಲವು ತೊಂದರೆಗಳು ಉಂಟಾಗಬಹುದು.

ಮಿನಿ ಬೆಡ್‍ರೂಂನಂತೆ ಮಾರ್ಪಾಡಾದ ಮಾರುತಿ ಸುಜುಕಿ ಎರ್ಟಿಗಾ ಕಾರು

ಇದನ್ನು ನೀವು ಮೂರು ಅಥವಾ ನಾಲ್ಕು ಮಂದಿ ಹೊರ ಸಂಚಾರಕ್ಕೆ ಹೋದಾಗ ಪ್ರಯತ್ನಿಸಬಹುದು. ಆದರೆ ಇದನ್ನು ಕಾರಿನಲ್ಲಿ ಚಲಾಯಿಸುವಾಗ ಮಾಡುವುದಕ್ಕಿಂತಲೂ ಯಾವುದಾದರೂ ಸುರಕ್ಷಿತವಾದ ಜಾಗದಲ್ಲಿ ಇದನ್ನು ಮಾಡಬಹುದಾಗಿದೆ. ಈ ಕಾರಿನಲ್ಲಿರುವ ರೂಫ್ ಮೌಂಟೆಡ್ ಮತ್ತು ರಿಯರ್ ಎಸಿ ವೆಂಟ್ಸ್ ನಿಮಗೆ ಉತ್ತಮವಾದ ಅನುಭವವನ್ನು ನೀಡುತ್ತದೆ.

ಮಿನಿ ಬೆಡ್‍ರೂಂನಂತೆ ಮಾರ್ಪಾಡಾದ ಮಾರುತಿ ಸುಜುಕಿ ಎರ್ಟಿಗಾ ಕಾರು

ಇನ್ನು ಮಾರುತಿ ಸುಜುಕಿ ಕಾರಿನ ಬಗೆಗೆ ಹೇಳುವುದಾದರೆ, ಕೆಲ ತಿಂಗಳುಗಳ ಹಿಂದಷ್ಟೆ ಮಾರುತಿ ಸುಜುಕಿಯು ತಮ್ಮ ಹೊಸ ತಲೆಮಾರಿನ ಎರ್ಟಿಗಾ ಎಂಪಿವಿ ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 7.44 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದೆ. ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಮರಾಜೋ ಕಾರುಗಳಿಗೆ ಇದು ತೀವ್ರ ಪೈಪೋಟಿಯನ್ನು ನೀಡುತ್ತಿದೆ.

ಮಿನಿ ಬೆಡ್‍ರೂಂನಂತೆ ಮಾರ್ಪಾಡಾದ ಮಾರುತಿ ಸುಜುಕಿ ಎರ್ಟಿಗಾ ಕಾರು

ನೆಕ್ಸ್ಟ್ ಜನರೇಷನ್ ಮಾರುತಿ ಸುಜುಕಿ ಎರ್ಟಿಗಾ ಕಾರು ವಿಶ್ವದರ್ಜೆ ಕಾರು ಉತ್ಪಾದನಾ ಮಾದರಿಯಾದ 'ಹಾರ್ಟ್‍ಟೆಕ್ಟ್' ಪ್ಲಾಟ್‍‍ಫಾರ್ಮ್‍ನ ಅಡಿಯಲ್ಲಿ ವಿನ್ಯಾಸ ಮಾಡಲಾಗಿದ್ದು, ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರ ಆಸನ ವಿನ್ಯಾಸವನ್ನು ಈ ಬಾರಿ ತುಸು ವಿಸ್ತರಿಸಲಾಗಿದೆ.

ಮಿನಿ ಬೆಡ್‍ರೂಂನಂತೆ ಮಾರ್ಪಾಡಾದ ಮಾರುತಿ ಸುಜುಕಿ ಎರ್ಟಿಗಾ ಕಾರು

ನೆಕ್ಸ್ಟ್ ಜನರೇಷನ್ ಎರ್ಟಿಗಾ ಎಂ‍ಪಿವಿ ಕಾರಿನ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍‍ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿದ್ದು, ಹಾಗೆಯೇ ಕಾರಿನ ಸೈಡ್‍‍ನಲ್ಲಿ ಫ್ಲೋಟಿಂಗ್ ರೂಫ್ ವಿನ್ಯಾಸ, 15-ಇಂಚಿನ ಅಲಾಯ್ ಚಕ್ರಗಳು ಮತ್ತು ಕಾರಿನ ಹಿಂಭಾಗದಲ್ಲಿ 'ಎಲ್' ಆಕಾರದ ಟೈಲ್ ಲೈಟ್ ಅನ್ನು ಪಡೆದಿದೆ.

MOST READ: ಹೊಸ ಮೋಟಾರ್ ವೆಹಿಕಲ್ ಕಾಯ್ದೆಗೆ ಸಿಕ್ತು ಗ್ರೀನ್ ಸಿಗ್ನಲ್ - ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ.?

ಮಿನಿ ಬೆಡ್‍ರೂಂನಂತೆ ಮಾರ್ಪಾಡಾದ ಮಾರುತಿ ಸುಜುಕಿ ಎರ್ಟಿಗಾ ಕಾರು

ತಾಂತ್ರಿಕ ವೈಶಿಷ್ಟ್ಯತೆಗಳು

ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿರುವ 7-ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಸ ಎರ್ಟಿಗಾದಲ್ಲೂ ಬಳಕೆ ಮಾಡಲಾಗಿದ್ದು, ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಮತ್ತು ಬ್ಲೂಟೂಥ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಇದಲ್ಲದೇ ಕಪ್ ಹೋಲ್ಡರ್ಸ್ ಅನ್ನೂ ಕೂಡಾ ನೀಡಲಾಗುತ್ತಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್‍‍‍ಗೆ ಸಹಾಯವಾಗುವ ಹಲವಾರು ಬಟನ್‍‍ಗಳೊಂದಿಗೆ ಲೆದರ್‍ ಹೊದಿಕೆಯಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಜೋಡಿಸಲಾಗಿದೆ.

MOST READ: ಪೆಟ್ರೋಲ್ ಬದಲಿಗೆ ಕೋಕಾಕೋಲಾ ತುಂಬಿಸಿದ ಭೂಪ- ಮುಂದೇನಾಯ್ತು?

ಮಿನಿ ಬೆಡ್‍ರೂಂನಂತೆ ಮಾರ್ಪಾಡಾದ ಮಾರುತಿ ಸುಜುಕಿ ಎರ್ಟಿಗಾ ಕಾರು

ಸುರಕ್ಷಾ ವೈಶಿಷ್ಟ್ಯತೆಗಳು

ಹೊಸ ಎರ್ಟಿಗಾ ಕಾರಿನಲ್ಲಿ ಈ ಬಾರಿ ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಕಾರಿನ ಎಲ್ಲಾ ಮಾದರಿಗಳಲ್ಲಿ ನೀಡಲಾಗಿದೆ. ಇದಲ್ಲದೆ ಹೈ ಎಂಡ್ ಮಾದರಿಗಳಲ್ಲಿ ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಒದಗಿಸಲಾಗಿದೆ.

MOST READ: ಮಾರುಕಟ್ಟೆಯಲ್ಲಿ 6 ಲಕ್ಷದೊಳಗೆ ದೊರೆಯುತ್ತಿರುವ ಬೆಸ್ಟ್ ಎಎಂಟಿ ಕಾರುಗಳಿವು

ಮಿನಿ ಬೆಡ್‍ರೂಂನಂತೆ ಮಾರ್ಪಾಡಾದ ಮಾರುತಿ ಸುಜುಕಿ ಎರ್ಟಿಗಾ ಕಾರು

ಎಂಜಿನ್ ಸಾಮರ್ಥ್ಯ

ಹೊಸ ಎರ್ಟಿಗಾ ಕಾರಿನಲ್ಲಿ ಪ್ರಮುಖ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಈ ಹಿಂದಿನ 1.4-ಲೀಟರ್ ಪೆಟ್ರೋಲ್ ಎಂಜಿನ್ ಬದಲಾಗಿ 1.5-ಲೀಟರ್ ಕೆ-ಸೀರಿಸ್ ಪೆಟ್ರೋಲ್ ಎಂಜಿನ್ ಜೋಡಿಸಲಾಗಿದೆ. ಹಾಗೆಯೇ ಡೀಸೆಲ್ ಕಾರು 1.3-ಲೀಟರ್ ಎಂಜಿನ್ ಪಡೆದಿದ್ದು, ಇಂಧನ ದಕ್ಷತೆ ಹೆಚ್ಚಿಸಲು ಎಸ್‍‍ಹೆಚ್‍‍ವಿಎಸ್ ಮೈಲ್ಡ್-ಹೈಬ್ರಿಡ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ. ಜೊತೆಗೆ ಬೇಡಿಕೆಗೆ ಅನುಗುಣವಾಗಿ 4-ಸ್ಪೀಡ್ ಆಟೋಮ್ಯಾಟಿಕ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದಿದೆ.

ಮಿನಿ ಬೆಡ್‍ರೂಂನಂತೆ ಮಾರ್ಪಾಡಾದ ಮಾರುತಿ ಸುಜುಕಿ ಎರ್ಟಿಗಾ ಕಾರು

ಮೈಲೇಜ್

ಮಾರುತಿ ಸುಜುಕಿ ಸಂಸ್ಥೆಯು ಹೇಳಿಕೊಂಡಿರುವ ಪ್ರಕಾರ, ಡಿಸೇಲ್ ವರ್ಷನ್‌ಗಳು ಪ್ರತಿ ಲೀಟರ್‌ಗೆ 25 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ಪೆಟ್ರೋಲ್ ಮಾದರಿಯ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ 19 ಕಿ.ಮಿ ಮತ್ತು ಆಟೋಮ್ಯಾಟಿಕ್ ಆವೃತ್ತಿಯು ಪ್ರತಿ ಲೀಟರ್‌ಗೆ 18 ಕಿ.ಮಿ ಮೈಲೇಜ್ ಹಿಂದಿರುಗಿಸಲಿದೆ.

More from DriveSpark

Article Published On: Wednesday, June 26, 2019, 14:35 [IST]
English summary
Maruti Suzuki Ertiga Turned Into A Caravan With Mini Bedroom. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+