ದಸರಾ ಸಂಭ್ರಮಕ್ಕೆ ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಮಾರುತಿ ಸುಜುಕಿ
ನಾಡಿನಾದ್ಯಂತ ದಸರಾ ಸಂಭ್ರಮ ಜೋರಾಗಿದ್ದು, ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಕಾರು ಆವೃತ್ತಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್‌ಗಳನ್ನು ಘೋಷಣಿಸಿದೆ. ಹೊಸ ಆಫರ್‌ಗಳು ಅಕ್ಟೋಬರ್ 10ರ ತನಕ ಲಭ್ಯವಿರಲಿದ್ದು, ಆಯ್ದ ಕೆಲವು ಕಾರುಗಳ ಮೇಲೆ ಗರಿಷ್ಠ ಪ್ರಮಾಣದ ಆಫರ್ ಕೂಡಾ ಪಡೆದುಕೊಳ್ಳಬಹುದು.

ಕಾರು ಮಾರಾಟದಲ್ಲಿ ಸತತ ಹಿನ್ನಡೆಯಿಂದಾಗಿ ಕಂಗೆಟ್ಟಿರುವ ಮಾರುತಿ ಸುಜುಕಿ ಸಂಸ್ಥೆಯು ಉತ್ಸವ ದಿನಗಳಲ್ಲಿ ಗರಿಷ್ಠ ಪ್ರಮಾಣ ಕಾರು ಮಾರಾಟ ಗುರಿಹೊಂದಿದ್ದು, ಅಕ್ಟೋಬರ್ 10ರ ತನಕ ಅನ್ವಯವಾಗುವಂತೆ ಆಯ್ದ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್, ವಿಸ್ತರಿತ ವಾರಂಟಿ, ಎಕ್ಸ್‌ಚೆಂಜ್ ಬೋನಸ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಘೋಷಣೆ ಮಾಡಿದೆ. ಈ ಹೊಸ ಆಫರ್‌ಗಳು ಕೇವಲ ಅರೆನಾ ಕಾರು ಮಾರಾಟ ಮಳಿಗೆಗಳಲ್ಲಿ ಮಾತ್ರವೇ ಲಭ್ಯವಿರಲಿದ್ದು, ಬಿಎಸ್-6 ಎಂಜಿನ್ ಕಾರುಗಳ ಮೇಲೂ ಡಿಸ್ಕೌಂಟ್ ನೀಡಲಾಗುತ್ತಿದೆ.

ಆಲ್ಟೋ(ರೂ.60 ಸಾವಿರ)
ಎಂಟ್ರಿ ಲೆವಲ್ ಕಾರುಗಳಲ್ಲಿ ಭಾರೀ ಬೇಡಿಕೆಯಿರುವ ಆಲ್ಟೋ ಖರೀದಿ ಮೇಲೆ ರೂ.60 ಸಾವಿರ ತನಕ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ರೂ.40 ಸಾವಿರ ಡಿಸ್ಕೌಂಟ್, ರೂ.15 ಸಾವಿರ ಎಕ್ಸ್‌ಚೆಂಜ್ ಬೋನಸ್ ಮತ್ತು ರೂ.5 ಸಾವಿರ ಕಾರ್ಪೊರೇಟ್ ಡಿಸ್ಕೌಂಟ್ ಸಿಗಲಿದೆ.

ಆಲ್ಟೊ ಕಾರು ಬಿಎಸ್-6 ಪ್ರೇರಿತ 800ಸಿಸಿ ಪೆಟ್ರೋಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 48-ಬಿಎಚ್‌ಪಿ, 69-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಆಲ್ಟೊ ಕೆ10(ರೂ.35 ಸಾವಿರ)
ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಆಲ್ಟೋ ಕೆ10 ಕೂಡಾ ಬಹುಬೇಡಿಕೆಯ ಕಾರು ಮಾದರಿಯಾಗಿದ್ದು, ಈ ಕಾರಿನ ಮೇಲೂ ರೂ.35 ಸಾವಿರ ಮೌಲ್ಯದ ವಿವಿಧ ಆಫರ್‌ಗಳನ್ನು ಪಡೆಯಬಹುದಾಗಿದೆ. ಆಲ್ಟೋ ಕೆ10 ಕೂಡಾ ಬಿಎಸ್-6 ಪ್ರೇರಿತ 1.0-ಲೀಟರ್(998) ಎಂಜಿನ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಎಎಂಟಿ ಗೇರ್‌ಬಾಕ್ಸ್ ಪ್ರೇರಣೆಯೊಂದಿಗೆ 67-ಬಿಎಚ್‌ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಸ್ವಿಫ್ಟ್(ರೂ.70 ಸಾವಿರ)
ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿ ಸ್ವಿಫ್ಟ್ ಕಾರಿನ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಾಗುತ್ತಿದ್ದು, ಪೆಟ್ರೋಲ್ ವರ್ಷನ್ ಮೇಲೆ ಗರಿಷ್ಠ ರೂ.50 ಸಾವಿರ ಮತ್ತು ಡೀಸೆಲ್ ಕಾರಿನ ಮೇಲೆ ರೂ.70 ಸಾವಿರ ತನಕ ಆಫರ್‌ಗಳು ಲಭ್ಯವಿವೆ.

ಇದರೊಂದಿಗೆ ಬಿಎಸ್-4 ಎಂಜಿನ್ ಪ್ರೇರಿತ ಡೀಸೆಲ್ ಸ್ವಿಫ್ಟ್ ಖರೀದಿ ಮೇಲೆ ರೂ.70 ಸಾವಿರ ಡಿಸ್ಕೌಂಟ್ ಮಾತ್ರವಲ್ಲದೇ ಬರೋಬ್ಬರಿ 5 ವರ್ಷಗಳ ವಾರಂಟಿ ಸಹ ನೀಡಲಾಗುತ್ತಿದ್ದು, ಡೀಲರ್ಸ್ ಮಟ್ಟದಲ್ಲಿ ಡೀಸೆಲ್ ಕಾರುಗಳ ಮೇಲೆ ಇನ್ನು ಹೆಚ್ಚಿನ ಆಫರ್‌ಗಳನ್ನು ಪಡೆಯಬಹುದಾಗಿದೆ.

ವಿಟಾರಾ ಬ್ರೆಝಾ(ರೂ.96 ಸಾವಿರ)
ಡೀಸೆಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ವಿಟಾರಾ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಮೇಲೆ ರೂ.96 ಸಾವಿರ ಡಿಸ್ಕೌಂಟ್ ನೀಡಲಾಗುತ್ತಿದ್ದು, ಇದರ ಜೊತೆಗೆ ಹೆಚ್ಚುವರಿಯಾಗಿ 5 ವರ್ಷಗಳ ವಾರಂಟಿಯನ್ನು ಪಡೆದುಕೊಳ್ಳಬಹುದು.

ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಬಿಎಸ್-6 ಡೀಸೆಲ್ ಕಾರುಗಳ ಬಿಡುಗಡೆಗೆ ಸಿದ್ದತೆ ನಡೆಸುತ್ತಿದ್ದು, ಹೊಸ ನಿಯಮ ಅನುಸಾರ ಉನ್ನತೀಕರಣ ಸಾಧ್ಯವಿಲ್ಲದ 1.3-ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಮಾತ್ರ ಬಿಡುಗಡೆ ಮಾಡಲಿದೆ. ಹೀಗಾಗಿ 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ವಿಟಾರಾ ಬ್ರೆಝಾ ಕಾರಿನಲ್ಲೂ ಮಹತ್ವ ಬದಲಾವಣೆಗಳನ್ನು ತರಲಾಗುತ್ತಿದ್ದು, ಡೀಸೆಲ್ ಬದಲಾಗಿ ಇನ್ಮುಂದೆ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಾಗಲಿದೆ.

ಡಿಜೈರ್(ರೂ.83 ಸಾವಿರ)
ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲಿ ಅಗ್ರಸ್ಥಾನದಲ್ಲಿರುವ ಡಿಜೈರ್ ಕಾರುಗಳ ಮೇಲೂ ಭರ್ಜರಿ ಡಿಸ್ಕೌಂಟ್ ಆಫರ್ ನೀಡಲಾಗುತ್ತಿದ್ದು, ಪೆಟ್ರೋಲ್ ಆವೃತ್ತಿಯ ಮೇಲೆ ರೂ.55 ಸಾವಿರ ಮತ್ತು ಡೀಸೆಲ್ ಕಾರುಗಳ ಮೇಲೆ ರೂ. 83 ಸಾವಿರದಷ್ಟು ಡಿಸ್ಕೌಂಟ್ ಲಭ್ಯವಿದೆ.

ಸೆಲೆರಿಯೊ(ರೂ.35 ಸಾವಿರ)
ಹ್ಯಾಚ್‌ಬ್ಯಾಕ್ ಪ್ರಿಯರ ಸೆಲೆರಿಯೊ ಮಾದರಿಯ ಮೇಲೂ ರೂ. 35 ಸಾವಿರ ಕ್ಯಾಶ್ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಮಾರುತಿ ಸುಜುಕಿ ಮಾರಾಟ ಮಳಿಗೆಗಳಲ್ಲೇ ಹಳೆಯ ಕಾರು ಮಾರಾಟ ಮಾಡಿ ಹೊಸ ಕಾರು ಖರೀದಿ ಮಾಡುವುದಾದರೇ ರೂ.60 ಸಾವಿರ ತನಕ ಬೋನಸ್ ನೀಡಲಾಗುತ್ತಿದೆ.

ಇಕೋ(ರೂ. 50 ಸಾವಿರ)
ವಾಣಿಜ್ಯ ಮತ್ತು ಪ್ರಯಾಣಿಕ ವಾಹನ ಮಾದರಿಯಾಗಿರುವ ಇಕೋ ಖರೀದಿ ಮೇಲೂ ಆಕರ್ಷಕ ಡಿಸ್ಕೌಂಟ್‌ಗಳನ್ನು ನೀಡಲಾಗುತ್ತಿದ್ದು, 7-ಸೀಟರ್ ಇಕೋ ಕಾರಿನ ಮೇಲೆ ರೂ.50 ಸಾವಿರ ಮತ್ತು 5-ಸೀಟರ್ ಮೇಲೆ ರೂ. 40 ಸಾವಿರ ಡಿಸ್ಕೌಂಟ್ ಪಡೆಯಬಹುದಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಬಿಎಸ್-6 ಪ್ರೇರಿತ ಕಾರುಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಬಿಎಸ್-6 ನಿಯಮ ಕಡ್ಡಾಯ ಜಾರಿಗೆ ಬರುವ ಮುನ್ನವೇ ಬಿಎಸ್-4 ವಾಹನಗಳ ಸ್ಟಾಕ್ ಪೂರ್ಣಗೊಳಿಸುವ ನಿಟ್ಟಿನಲ್ಲಿ ಆಟೋ ಉತ್ಪಾದನಾ ಸಂಸ್ಥೆಗಳು ಭರ್ಜರಿ ಆಫರ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ.


Click it and Unblock the Notifications








