4 ವರ್ಷ, 363 ಡೀಲರ್ಸ್- ನೆಕ್ಸಾ ಮೂಲಕ ಹೊಸ ದಾಖಲೆ ಬರೆದ ಮಾರುತಿ ಸುಜುಕಿ

ಮಾರುತಿ ಸುಜುಕಿ ಸಂಸ್ಥೆಯು ಸದ್ಯ ದೇಶದಲ್ಲಿ ನಂ.1 ಕಾರು ಮಾರಾಟ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದೆ. 2015ರಲ್ಲಿ ಆರಂಭವಾದ ನೆಕ್ಸಾ ಮಾರಾಟ ಮಳಿಗೆಗಳ ಮೂಲಕ ಹೊಸ ಮುನ್ನಡೆ ಸಾಧಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಯಶಸ್ವಿಯಾಗಿ 4 ವರ್ಷಗಳನ್ನು ಪೂರೈಸಿದೆ.

4 ವರ್ಷ, 363 ಡೀಲರ್ಸ್- ನೆಕ್ಸಾ ಮೂಲಕ ಹೊಸ ದಾಖಲೆ ಬರೆದ ಮಾರುತಿ ಸುಜುಕಿ

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ಎರಡು ಹಂತದ ಕಾರು ಮಾರಾಟ ಪ್ರಕ್ರಿಯೆಯನ್ನು ಹೊಂದಿದ್ದು, ಅರೆನಾ ಶೋರೂಂಗಳ ಮೂಲಕ ಸಾಮಾನ್ಯ ಕಾರುಗಳನ್ನು ಮತ್ತು ಪ್ರೀಮಿಯಂ ಕಾರುಗಳನ್ನು ನೆಕ್ಸಾ ಶೋರೂಂ ಮೂಲಕ ಕಾರು ಮಾರಾಟವನ್ನು ಮಾಡುತ್ತಿದೆ. ದೇಶ್ಯಾದ್ಯಂತ ಸದ್ಯ 363 ನೆಕ್ಸಾ ಶೋರೂಂಗಳು ಕಾರ್ಯನಿರ್ವಹಣೆಯಲ್ಲಿದ್ದು, ಪ್ರೀಮಿಯಂ ಕಾರುಗಳನ್ನು ಮಾರಾಟವನ್ನು ಹೆಚ್ಚಿಸಲು ಇದು ಪ್ರಮುಖ ಆಕರ್ಷಣೆಯಾಗಿದೆ.

4 ವರ್ಷ, 363 ಡೀಲರ್ಸ್- ನೆಕ್ಸಾ ಮೂಲಕ ಹೊಸ ದಾಖಲೆ ಬರೆದ ಮಾರುತಿ ಸುಜುಕಿ

ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಉದ್ದೇಶದಿಂದ ನೆಕ್ಸಾ ಶೋರೂಂ ಮೂಲಕ ಹೊಸ ಪ್ರಯತ್ನಕ್ಕೆ ಕೈಹಾಕಿದ್ದ ಮಾರುತಿ ಸುಜುಕಿ ಸಂಸ್ಥೆಯು 2015ರಲ್ಲಿ ಕೇವಲ 100 ನೆಕ್ಸಾ ಮಾರಾಟ ಮಳಿಗೆಗಳ ಮೂಲಕ ಪ್ರೀಮಿಯಂ ಕಾರು ಮಾರಾಟವನ್ನು ಶುರುಮಾಡಿತ್ತು. ತದನಂತರ ಕಳೆದ ನಾಲ್ಕು ವರ್ಷಗಳಲ್ಲಿ 363 ಡೀಲರ್ಸ್‌ಗಳ ಸಂಖ್ಯೆಯನ್ನು ತಲುಪಿದ್ದು, ಶೇ.70ರಷ್ಟು ಯುವಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

4 ವರ್ಷ, 363 ಡೀಲರ್ಸ್- ನೆಕ್ಸಾ ಮೂಲಕ ಹೊಸ ದಾಖಲೆ ಬರೆದ ಮಾರುತಿ ಸುಜುಕಿ

ಇನ್ನು ಪ್ರತಿಸ್ಪರ್ಧಿ ಕಾರು ಉತ್ಪಾದನಾ ಸಂಸ್ಥೆಗಳಿಗೆ ಮತ್ತಷ್ಟು ಪೈಪೋಟಿ ನೀಡುವ ನಿಟ್ಟಿನಲ್ಲಿ ನೆಕ್ಸಾ ಶೋರೂಂಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಜೊತೆಗೆ ಪ್ರೀಮಿಯಂ ಕಾರುಗಳ ಮಾರಾಟವನ್ನು ಹೆಚ್ಚಿಸುವ ಸಂಬಂಧ ಟೊಯೊಟಾ ಜೊತೆಗೂಡಿ ರೀ ಬ್ಯಾಡ್ಜ್ ಕಾರುಗಳನ್ನು ಮಾರಾಟಮಾಡುವ ಮಹತ್ವದ ಯೋಜನೆಗೆ ಚಾಲನೆ ನೀಡಿವೆ.

4 ವರ್ಷ, 363 ಡೀಲರ್ಸ್- ನೆಕ್ಸಾ ಮೂಲಕ ಹೊಸ ದಾಖಲೆ ಬರೆದ ಮಾರುತಿ ಸುಜುಕಿ

ಹೀಗಾಗಿ ಹೊಸ ಯೋಜನೆಯಿಂದಾಗಿ ಇನ್ಮುಂದೆ ಕಾರು ಖರೀದಿದಾರರು ಮಾರುತಿ ಸುಜುಕಿ ಶೋರೂಂಗಳಲ್ಲಿ ಟೊಯೊಟಾ ನಿರ್ಮಾಣದ ಕಾರುಗಳನ್ನು ಮತ್ತು ಟೊಯೊಟಾ ಶೋರೂಂಗಳಲ್ಲಿ ಮಾರುತಿ ಸುಜುಕಿ ನಿರ್ಮಾಣದ ರೀ ಬಾಡ್ಜ್ ಕಾರುಗಳನ್ನು ಖರೀದಿಸಬಹುದಾಗಿದೆ. ಇದಕ್ಕಾಗಿ ಟೊಯೊಟಾ ಬಿಡದಿ ಘಟಕದ ವಿಸ್ತರಣೆಗಾಗಿ ಬರೋಬ್ಬರಿ 7 ಸಾವಿರ ಕೋಟಿ ಹೂಡಿಕೆ ಮಾಡಿರುವ ಮಾರುತಿ ಸುಜುಕಿ ಸಂಸ್ಥೆಯು ಹೊಸ ಕಾರುಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ದೇಶಾದ್ಯಂತ ಪ್ರತಿ ನಗರಗಳಲ್ಲೂ ಕಾರು ಮಾರಾಟ ಮಳಿಗೆಗಳನ್ನು ತೆರೆಯುವ ಉದ್ದೇಶ ಹೊಂದಿದೆ. ಇವುಗಳಲ್ಲಿ ಅರೆನಾ ಕಾರು ಮಾರಾಟ ಮಳಿಗೆಗಳು ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿದ್ದು, ಪ್ರೀಮಿಯಂ ಕಾರುಗಳಿಗಾಗಿ ನೆಕ್ಸಾ ಶೋರೂಂಗಳನ್ನು ಹೆಚ್ಚಿಸುವ ಗುರಿಹೊಂದಿದೆ.

4 ವರ್ಷ, 363 ಡೀಲರ್ಸ್- ನೆಕ್ಸಾ ಮೂಲಕ ಹೊಸ ದಾಖಲೆ ಬರೆದ ಮಾರುತಿ ಸುಜುಕಿ

ಈ ಮೂಲಕ ಮೆಟ್ರೋ ನಗರಗಳಲ್ಲಿ ಮಾತ್ರವಲ್ಲದೇ 2ನೇ ಮತ್ತು 3ನೇ ದರ್ಜೆಯ ನಗರಗಳಲ್ಲೂ ಸುಲಭವಾಗಿ ಪ್ರೀಮಿಯಂ ಕಾರು ಖರೀದಿಗೆ ಅನುಕೂಲಕವಾಗುವಂತೆ ಹೊಸ ಡೀಲರ್ಸ್‌ಗಳನ್ನು ತೆರೆಯಲು ನಿಶ್ಚಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರತಿಸ್ಪರ್ಧಿ ಹ್ಯುಂಡೈಗೆ ಮತ್ತಷ್ಟು ಪೈಪೋಟಿ ನೀಡಲಿದೆ.

4 ವರ್ಷ, 363 ಡೀಲರ್ಸ್- ನೆಕ್ಸಾ ಮೂಲಕ ಹೊಸ ದಾಖಲೆ ಬರೆದ ಮಾರುತಿ ಸುಜುಕಿ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಪ್ರಸ್ತುತ ಮಾರುಕಟ್ಟೆಯಲ್ಲಿ ಅರೆನಾ ಮಾರಾಟ ಮಳಿಗೆಯಲ್ಲಿ ಸ್ವಿಫ್ಟ್, ಆಲ್ಟೋ, ಆಲ್ಟೋ ಕೆ10, ವ್ಯಾಗನ್ಆರ್, ಸೆಲೆರಿಯೊ, ಸೆಲೆರಿಯೊ ಎಕ್ಸ್, ಡಿಜೈರ್, ಎರ್ಟಿಗಾ, ಬ್ರೆಝಾ, ಜಿಪ್ಸಿ, ಓಮ್ನಿ ಮತ್ತು ಇಕೋ ವಾಹನಗಳನ್ನು ಮಾರಾಟ ಮಾಡುತ್ತಿದೆ.

4 ವರ್ಷ, 363 ಡೀಲರ್ಸ್- ನೆಕ್ಸಾ ಮೂಲಕ ಹೊಸ ದಾಖಲೆ ಬರೆದ ಮಾರುತಿ ಸುಜುಕಿ

ಹಾಗೆಯೇ ನೆಕ್ಸಾ ಮಾರಾಟ ಮಳಿಗೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಬಲೆನೊ, ಎಸ್ ಕ್ರಾಸ್ ಮತ್ತು ಸಿಯಾಜ್ ಕಾರುಗಳನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಪ್ರೀಮಿಯಂ ಕಾರುಗಳ ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೈಗೊಳ್ಳುತ್ತಿದೆ.

4 ವರ್ಷ, 363 ಡೀಲರ್ಸ್- ನೆಕ್ಸಾ ಮೂಲಕ ಹೊಸ ದಾಖಲೆ ಬರೆದ ಮಾರುತಿ ಸುಜುಕಿ

ಇದರಿಂದ ಗ್ರಾಹಕರು ಹೊಸ ಕಾರುಗಳಿಗೆ ಬುಕ್ಕಿಂಗ್ ಮಾಡಿದ ನಂತರ ಕಾಯುವಿಕೆಯ ಅವಧಿಯು ತಗ್ಗಲಿದ್ದು, ಮೆಟ್ರೋ ನಗರಗಳಲ್ಲಿ ಮಾತ್ರವಲ್ಲ 2ನೇ ಮತ್ತು 3ನೇ ದರ್ಜೆಯ ವಾಸಿಸುವ ಕಾರು ಖರೀದಿದಾರರಿಗೂ ಪ್ರೀಮಿಯಂ ಕಾರುಗಳ ಬಗೆಗೆ ಹೆಚ್ಚಿನ ಆಸಕ್ತಿ ಹುಟ್ಟು ಹಾಕುವಂತೆ ಮಾಡಲು ಇದು ಪೂರಕವಾಗಲಿದೆ.

Most Read Articles

Kannada
English summary
Maruti Suzuki Nexa Completes 4 Years In India. Read in Kannada.
Story first published: Tuesday, July 23, 2019, 17:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X