ನೈಟ್ ಶಿಫ್ಟ್ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಕಾರು ಖರೀದಿಯ ನಂತರ ಅದರ ನಿರ್ವಹಣೆ ಕೂಡಾ ತುಂಬಾ ಮುಖ್ಯ. ಆದ್ರೆ ಹಗಲಿನ ವೇಳೆ ಸಿಗುವ ಸರ್ವಿಸ್ ಸೆಂಟರ್‌ಗಳ ಸೌಲಭ್ಯ ರಾತ್ರಿ ಹೊತ್ತಿನಲ್ಲಿ ಸಿಗುವುದು ತುಂಬಾ ಕಷ್ಟ. ಹೀಗಾಗಿ ಮಾರುತಿ ಸುಜುಕಿ ತನ್ನ ನೆಚ್ಚಿನ ಗ್ರಾಹಕರಿಗೆ ಹೊಸ ಸೌಲಭ್ಯವೊಂದನ್ನು ತೆರೆದಿದೆ.

ನೈಟ್ ಶಿಫ್ಟ್ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಹೌದು, ಮಾರುತಿ ಸುಜುಕಿ ಸಂಸ್ಥೆಯ ಸರ್ವಿಸ್ ಸೆಂಟರ್‌ಗಳು ಇನ್ಮುಂದೆ ನೈಟ್ ಶಿಫ್ಟ್‌ನಲ್ಲೂ ಸಹ ಕಾರ್ಯನಿರ್ವಹಿಸಲಿದ್ದು, ರಾತ್ರಿ ವೇಳೆ ಆಗುವ ತಾಂತ್ರಿಕ ತೊಂದರೆಗಳಿಂದ ಪರದಾಟುತ್ತಿದ್ದ ಮಾರುತಿ ಸುಜುಕಿ ಕಾರು ಮಾಲೀಕರಿಗೆ ಇದೊಂದು ಖುಷಿಯ ವಿಚಾರ ಎಂದು ಹೇಳಬಹುದು. ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಹಗಲಿನ ವೇಳೆಯಲ್ಲಿ ವಿಧಿಸಲಾಗುವ ದರಗಳೇ ರಾತ್ರಿ ಸಮಯದ ಸರ್ವಿಸ್‌ಗಳಿಗೂ ಅನ್ವಯವಾಗಲಿರುವುದು ಮತ್ತೊಂದು ಆಕರ್ಷಣೆ.

ನೈಟ್ ಶಿಫ್ಟ್ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಸದ್ಯಕ್ಕೆ ಮಾರುತಿ ಸುಜುಕಿ ಸಂಸ್ಥೆಯು ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ವಾಣಿಜ್ಯ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿರುವ ಮಂಗಳೂರಿನಲ್ಲಿ ಮಾತ್ರವೇ ರಾತ್ರಿ ಪಾಳೆಯದಲ್ಲಿ ಸರ್ವಿಸ್ ಸೆಂಟರ್‌ಗಳು ಕಾರ್ಯನಿರ್ವಹಿಸಲಿದ್ದು, ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ರಾಜ್ಯದ ಮತ್ತಷ್ಟು ಪ್ರಮುಖ ನಗರಗಳಿಗೂ ಈ ಸೇವೆಯನ್ನು ವಿಸ್ತರಿಸುವ ಯೋಜನೆ ರೂಪಿಸಿದೆ.

ನೈಟ್ ಶಿಫ್ಟ್ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಹೊಸ ಸೌಲಭ್ಯದಿಂದಾಗಿ ರಾತ್ರಿ ವೇಳೆ ತಾಂತ್ರಿಕ ಸಮಸ್ಯೆಗಳಿಂದ ಪರದಾಟುವ ಕಾರು ಮಾಲೀಕರಿಗೆ ಇದು ವರದಾನವಾಗಲಿದ್ದು, ಬೆಂಗಳೂರಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯ ಅರೆನಾ ಮತ್ತು ನೆಕ್ಸಾ ಎರಡು ಮಾದರಿಯ ಆಯ್ದ ಡೀಲರ್ಸ್‌ಗಳಲ್ಲಿ 24x7 ಸರ್ವಿಸ್ ಲಭ್ಯವಿರಲಿದೆ.

ನೈಟ್ ಶಿಫ್ಟ್ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಉಚಿತ ಪಿಕ್ ಅಪ್ ಆ್ಯಂಡ್ ಡ್ರಾಪ್

ರಾತ್ರಿ ವೇಳೆ ಕಾರಿನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದಲ್ಲಿ ಅಧಿಕೃತ ಸರ್ವಿಸ್ ಡೀಲರ್ಸ್‌‌ಗಳಿಂದ ಉಚಿತವಾಗಿ ಪಿಕ್ ಆ್ಯಂಡ್ ಡ್ರಾಪ್ ಸೌಲಭ್ಯ ಸಿಗಲಿದ್ದು, ಪ್ರಮುಖ ಬೆಂಗಳೂರಿನಂತಹ ಪ್ರಮುಖ ಐಟಿ ಸಂಸ್ಥೆಗಳ ಉದ್ಯೋಗಿಗಳಿಗೆ ಇದು ಸಾಕಷ್ಟು ಸಹಕಾರಿಯಾಗಲಿದೆ.

ನೈಟ್ ಶಿಫ್ಟ್ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ ನೀಡಿದ ಮಾರುತಿ ಸುಜುಕಿ

ಜೊತೆಗೆ ಕ್ಯಾಬ್ ಮಾಲೀಕರಿಗೂ ಇದರಿಂದ ಸಾಕಷ್ಟು ಅನುಕೂಲತೆಗಳಿದ್ದು, ರಾತ್ರಿ ವೇಳೆ ಆಗುವ ತಾಂತ್ರಿಕ ಸಮಸ್ಯೆಗಳಿಗೆ ಮುಂಜಾನೆಯ ತನಕ ಕಾಯುವ ಪರಿಸ್ಥಿತಿ ತಪ್ಪಲಿದೆ. ಅಂದಹಾಗೆ ಮತ್ತೊಂದು ಮುಖ್ಯ ವಿಚಾರ ಅಂದ್ರೆ ನೈಟ್ ಶಿಫ್ಟ್‌ನಲ್ಲಿ ಕಾರಿನ ಎಂಜಿನ್ ತಾಂತ್ರಿಕ ಸಮಸ್ಯೆ ಮತ್ತು ಬಿಡಿಭಾಗಗಳ ಸೇವೆ ಮಾತ್ರ ಲಭ್ಯವಿರಲಿದ್ದು, ಬಾಡಿ ವರ್ಕ್ ಸೇರಿದಂತೆ ಇನ್ನಿತರೆ ಸರ್ವಿಸ್‌ಗಳಿಗಾಗಿ ಹಗಲಿನ ವೇಳೆಯೇ ಸಂಪರ್ಕಿಸಿಬೇಕು.

Article Published On: Wednesday, February 13, 2019, 10:58 [IST]
English summary
Maruti Suzuki Night Service Announced — Check Out The Details Of The 24x7 Maruti Service Facility. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+