ಬಿಎಸ್6 ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳ ಮೇಲೆ ಡಿಸ್ಕೌಂಟ್
ನಮಗೆಲ್ಲರಿಗು ತಿಳಿದಿರುವ ಹಾಗೆ ಇನ್ನು ಕೆಲವೇ ದಿನಗಳಲ್ಲಿ ಬಿಎಸ್-6 ಎಮಿಷನ್ ನಿಯಮಾವಳಿಗಳು ಶುರುವಾಗಲಿದ್ದು, ವಾಹನ ತಯಾರಕ ಸಂಸ್ಥೆಗಳು ತಮ್ಮಲ್ಲಿರುವ ಜನಪ್ರಿಯ ವಾಹನಗಳಿಗೆ ಬಿಎಸ್-6 ಎಂಜಿನ್ ಅನ್ನು ಅಳವಡಿಸಲು ಮುಂದಾಗುತ್ತಿದ್ದಾರೆ. ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಕೂಡಾ ಕೆಲ ದಿನಗಳ ಹಿಂದಷ್ಟೇ ತಮ್ಮ ಬಿಎಸ್-6 ಎಂಜಿನ್ ಆಧಾರಿತ ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳನ್ನು ಬಿಡುಗಡೆ ಮಾಡಿತ್ತು.

ದೇಶಾದ್ಯಂತ ಬಿಎಸ್-6 ಪ್ರೇರಿತ ವಾಹನಗಳ ಮಾರಾಟವನ್ನು ಕಡ್ಡಾಯಗೊಳಿಸುವ ಸಂಬಂಧ ಕೇಂದ್ರ ಸರ್ಕಾರವು ಮಹತ್ವದ ಯೋಜನೆಯೊಂದನ್ನು ಜಾರಿಗೊಳಿಸುತ್ತಿದ್ದು, ಕೇಂದ್ರ ಸರ್ಕಾರದ ಡೆಡ್‌ಲೈನ್‌ಗೂ ಮುನ್ನವೇ ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಕಾರುಗಳನ್ನು ಬಿಎಸ್-6 ಎಂಜಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಸಧ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಕಡಿಮೆ ಸಂಖ್ಯೆಯಲ್ಲಿ ಮಾರಾಟವನ್ನು ಕಾಣುತ್ತಿದ್ದು, ಈ ನಿಟ್ಟಿನಲ್ಲಿ ತಮ್ಮ ಮಾರಾಟವನ್ನು ಹೆಚ್ಚಿಸಲ್ಲು ಮತ್ತು ಬಿಎಸ್-6 ವಾಹನಗಳ ಬೇಡಿಕೆಯು ಅಧಿಕವಾಗುತ್ತಿರುವ ಕಾರಣ ತಮ್ಮ ವಾಹನಗಳ ಮೇಲೆ ರಿಯಾಯಿತುಯನ್ನು ನೀಡಲಾಗುತ್ತಿದೆ. ಈ ಲೇಖನದಲ್ಲಿ ಮಾರುತಿ ಸುಜುಕಿ ಈ ಆಗಸ್ಟ್ ತಿಂಗಳಿನಲ್ಲಿ ಯಾವ ಯಾವ ಕಾರುಗಳ ಮೇಲೆ ಎಷ್ಟು ರಿಯಾಯಿತಿಯನ್ನು ನೀಡುತ್ತಿದೆ ಎಂದು ತಿಳಿಯಿರಿ.

ಮಾರುತಿ ಸುಜುಕಿ ಡಿಜೈರ್
ಮಾರುತಿ ಸುಜುಕಿ ಪ್ಯಾಸೆಂಜರ್ ಸೆಡಾನ್ ಕಾರುಗಳ ಮಾರಾಟದಲ್ಲಿ ಮತ್ತು ಟ್ಯಾಕ್ಸಿ ಉದ್ಯಮದಲ್ಲಿ ಜನಪ್ರೀಯವಾಗಿರುವ ಡಿಜೈರ್ ಪೆಟ್ರೋಲ್ ಕಾರಿನ ಮೇಲೆ ಸಂಸ್ಥೆಯು ರೂ. 19,000 ನಗದು ರಿಯಾಯಿತಿ ಮತ್ತು ಸ್ವಾತಂತ್ರ್ಯ ದಿನಾಚರಣೆ ಮುಗುಯುವ ವರೆಗು ರೂ, 10,000 ಫೀಡಂ ಆಫರ್ ಅನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಬಿಎಸ್-6 ಎಂಜಿನ್ ಹೊಂದಿರುವ ಡಿಜೈರ್ ಪೆಟೋಲ್ ಕಾರುಗಳ ಮೇಲೆ ರೂ. 10,000 ನಗದು ರಿಯಾಯಿತಿ, ರೂ. 20,000 ಎಕ್ಸ್ಚೆಂಜ್ ಬೋನಸ್ ಮತ್ತು ರೂ. 4,000 ಕಾರ್ಪೊರೇಟ್ ಬೋನಸ್ ಅನ್ನು ನೀಡುತ್ತಿದೆ.

ಮಾರುತಿ ಸುಜುಕಿ ಸ್ವಿಫ್ಟ್
ಇನ್ನು ತಮ್ಮ ಸ್ವಿಫ್ಟ್ ಡೀಸೆಲ್ ಕಾರುಗಳ ಮ್ಯಾನುವಲ್ ಮತ್ತು ಎಎಂಟಿ ವೇರಿಯೆಂಟ್‍ಗಳ ಮೇಲೆ ಮಾರುತಿ ಸುಜುಕಿ ಸಂಸ್ಥೆಯು ರೂ. 10,000 ನಗದು ರಿಯಾಯಿತಿ, ಸ್ವಾತಂತ್ರ್ಯ ದಿನಾಚರಣೆ ಮುಗುಯುವ ವರೆಗು ರೂ. 15,750 ಫ್ರೀಡಂ ಆಫರ್ ಅಥವಾ ರೂ, 17,700 5 ವರ್ಷದ ಉಚಿತ ಎಕ್ಸ್ಟೆಂಡೆಡ್ ವಾರೆಂಟಿ ನೀಡುತ್ತಿದೆ. ಹಾಗೆಯೆ ಬಿಎಸ್-6 ಎಂಜಿನ್ ಆಧಾರಿತ ಸ್ವಿಫ್ಟ್ ಕಾರುಗಳ ಮೇಲೆ ರೂ. 10,000 ನಗದು ರಿಯಾಯಿತಿ, ರೂ. 25000 ಎಕ್ಸ್ಚೆಂಜ್ ಬೋನಸ್, ರೂ. 5,000 ಕಾರ್ಪೊರೆಟ್ ಬೋನಸ್ ಅನ್ನು ನೀಡಲಾಗುತ್ತಿದೆ.

ಮಾರುತಿ ಸುಜುಕಿ ಸಂಸ್ಥೆಯು ಹೀಗಾಗಿ ಈ ಹಿಂದಿಗಿಂತಲೂ ಉತ್ತಮ ಪರ್ಫಾಮೆನ್ಸ್ ಪಡೆದುಕೊಂಡಿರುವ ಹೊಸ ಬಿಎಸ್-6 ಕಾರುಗಳಲ್ಲಿ ಡ್ಯುಯಲ್ ಚಾನೆಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್, ಹೈ ಸ್ಪೀಡ್ ಅಲರ್ಟ್ ಸೇರಿದಂತೆ ಕೆಲವು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಜೊತೆಗೆ ಹೊಸ ಎಂಜಿನ್ ಮಾದರಿಯು ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಶೇ.25ರಷ್ಟು ಕಡಿತವಾಗಿದ್ದು, ಈ ಹಿಂದಿಗಿಂತಲೂ ಶೇ.10ರಿಂದ ಶೇ.15 ರಷ್ಟು ಹೆಚ್ಚು ಮೈಲೇಜ್ ನೀಡುವ ಮೂಲಕ ಮತ್ತಷ್ಟು ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯುವ ತವಕದಲ್ಲಿದೆ. ಹಾಗೆಯೇ ಬಿಎಸ್-6 ನಿಯಮದಿಂದಾಗಿ ಹೊಸ ಕಾರುಗಳ ಬೆಲೆಯೂ ಕೂಡಾ ತುಸು ದುಬಾರಿಯಾಗಿದ್ದು, ಸುಧಾರಿತ ಎಂಜಿನ್ ಮತ್ತು ಕೆಲವು ಸ್ಟ್ಯಾಂಡರ್ಡ್ ಸುರಕ್ಷಾ ಸೌಲಭ್ಯಗಳನ್ನು ಹೊರತುಪಡಿಸಿ ಯಾವುದೇ ಬದಲಾವಣೆಗಳನ್ನು ತರಲಾಗಿಲ್ಲ.

ಎಂಜಿನ್ ಸಾಮಾರ್ಥ್ಯ
ಬಿಎಸ್-6 ನಿಯಮಕ್ಕೆ ಉನ್ನತಿಕರಣಗೊಂಡಿರುವ ಮಾರುತಿ ಸುಜುಕಿ ಸ್ವಿಫ್ಟ್ ಪೆಟ್ರೋಲ್ ಹ್ಯಾಚ್‍ಬ್ಯಾಕ್ ಆವೃತ್ತಿಗಳು ಈ ಹಿಂದಿನಂತೆಯೇ 1.2-ಲೀಟರ್ ಕೆ12ಬಿ ಎಂಜಿನ್ ಹೊಂದಿದ್ದು, ಎರಡು ಮಾದರಿಯಲ್ಲೂ ಗ್ರಾಹಕರ ಬೇಡಿಕೆಯೆಂತೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋ ಗೇರ್‍ಶಿಫ್ಟ್ ಆಯ್ಕೆಯನ್ನು ಒದಗಿಸಲಾಗಿದೆ.

ಕಾರಿನ ಬೆಲೆಗಳು(ಎಕ್ಸ್‌ಶೋರೂಂ ಪ್ರಕಾರ)
ಈ ಹಿಂದೆ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.4.99 ಲಕ್ಷದಿಂದ ರೂ.7.85 ಲಕ್ಷ ಬೆಲೆ ಹೊಂದಿದ್ದ ಸ್ವಿಫ್ಟ್ ಪೆಟ್ರೋಲ್ ಆವೃತ್ತಿಯು ಬಿಎಸ್-6 ಎಂಜಿನ್ ಉನ್ನತಿಕರಣದ ನಂತರ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.14 ಲಕ್ಷದಿಂದ ರೂ. 8.89 ಲಕ್ಷ ಬೆಲೆ ಹೊಂದಿದೆ.

ಡಿಜೈರ್ ಪೆಟ್ರೋಲ್ ಮಾದರಿಗಳು ಇದೀಗ ಹೊಸ ನಿಯಮಗಳಿಗೆ ಅನುಗುಣವಾಗಿ ಹೆಚ್ಚುವರಿ ತಾಂತ್ರಿಕ ಅಂಶಗಳನ್ನು ಹೊಂದಿದ್ದು, ಈ ಹಿಂದಿನ ಬೆಲೆಗಳಿಂತ 13 ಸಾವಿರ ಹೆಚ್ಚುವರಿ ದರದೊಂದಿಗೆ ಪೆಟ್ರೋಲ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.82 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ.8.70 ಲಕ್ಷ ಬೆಲೆ ಹೊಂದಿವೆ.

ಇದರಲ್ಲಿ ಡೀಸೆಲ್ ಮಾದರಿಯು ಈ ಹಿಂದೆನಂತೆಯೇ ಬಿಎಸ್-4 ಎಂಜಿನ್ ಹೊಂದಿದ್ದು, ಕೆಲವು ಕಡ್ಡಾಯ ಸುರಕ್ಷಾ ಸಾಧನಗಳ ಜೋಡಣೆ ಹಿನ್ನಲೆಯಲ್ಲಿ ರೂ.3 ಸಾವಿರ ಏರಿಕೆ ಮಾಡಲಾಗಿದೆ. ಡಿಜೈರ್ ಡಿಸೇಲ್ ಮಾದರಿಗಳು ಸದ್ಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.57 ಲಕ್ಷ ಬೆಲೆ ಹೊಂದಿರಲಿವೆ.
Source: Gaadiwaadi


Click it and Unblock the Notifications








