ತೀವ್ರ ಕುಸಿತ ಕಾಣುತ್ತಿರುವ ಮಾರುತಿ ಸುಜುಕಿ ಕಾರು ಮಾರಾಟ

ಭಾರತದ ಅಗ್ರಗಣ್ಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಕಾರು ಮಾರಾಟವು ಕಳೆದ ಎರಡು ತಿಂಗಳುಗಳಿಂದ ಸತತವಾಗಿ ಕುಸಿಯುತ್ತಿದೆ. 2019ರ ಜುಲೈ ತಿಂಗಳಲ್ಲಿ ಮಾರುತಿ ಸುಜುಕಿಯ ಕಾರು ಮಾರಾಟ ಪ್ರಮಾಣವು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ.

ತೀವ್ರ ಕುಸಿತ ಕಾಣುತ್ತಿರುವ ಮಾರುತಿ ಸುಜುಕಿ ಕಾರು ಮಾರಾಟ

2019ರ ಜುಲೈ ತಿಂಗಳ ಮಾರಾಟ ಮಾಹಿತಿಯ ಪ್ರಕಾರ, ಮಾರುತಿ ಸುಜುಕಿ ಕಂಪನಿಯು ಕಾರು ಮಾರಾಟದಲ್ಲಿ ಹಿಂದಿನ ತಿಂಗಳು 36%ನಷ್ಟು ಕುಸಿತ ದಾಖಲಿಸಿದೆ. ಕಂಪನಿಯು 2019ರ ಜುಲೈನಲ್ಲಿ 98,210 ಯುನಿಟ್ ಮಾರಾಟವನ್ನು ದಾಖಲಿಸಿದೆ. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ 1,54,427 ಕಾರುಗಳು ಮಾರಾಟವಾಗಿದ್ದವು.

ತೀವ್ರ ಕುಸಿತ ಕಾಣುತ್ತಿರುವ ಮಾರುತಿ ಸುಜುಕಿ ಕಾರು ಮಾರಾಟ

ಮಾರಾಟದ ವಿಭಜನಾ ವರದಿ ಪ್ರಕಾರ ಮಾರುತಿ ಸುಜುಕಿಯ ಮಿನಿ ಹಾಗೂ ಕಾಂಪ್ಯಾಕ್ಟ್ ಸೆಗ್‍‍ಮೆಂಟ್‍‍ನಲ್ಲಿನ ಕಾರುಗಳ ಮಾರಾಟವು ಅತ್ಯಂತ ಕೆಟ್ಟದಾಗಿದೆ. ಈ ಸೆಗ್‍‍ಮೆಂಟಿನ ಮಾರಾಟದಲ್ಲಿ 38%ನಷ್ಟು ಕುಸಿತ ಉಂಟಾಗಿದೆ. ಆಲ್ಟೊ ಹಾಗೂ ಹಳೆಯ ತಲೆಮಾರಿನ ವ್ಯಾಗನ್ ಆರ್ ಸೇರಿದಂತೆ ಮಿನಿ ಕಾರುಗಳ ಸೆಗ್‍‍ಮೆಂಟ್‍‍ನಲ್ಲಿನ ಮಾರಾಟ ಪ್ರಮಾಣವು (ಎಂಟ್ರಿ ಲೆವೆಲ್ ಸೆಗ್‍‍ಮೆಂಟ್) ಇನ್ನೂ ಕೆಟ್ಟದಾಗಿದೆ.

ತೀವ್ರ ಕುಸಿತ ಕಾಣುತ್ತಿರುವ ಮಾರುತಿ ಸುಜುಕಿ ಕಾರು ಮಾರಾಟ

37,710 ಯುನಿಟ್‍‍ಗಳಿದ್ದ ಮಾರಾಟವು ಜುಲೈ 2019 ತಿಂಗಳಿನಲ್ಲಿ 11,577 ಯುನಿಟ್‍‍ಗಳಿಗೆ ಇಳಿದಿದ್ದು, 69.3%ನಷ್ಟು ಕುಸಿತ ಕಂಡಿದೆ. ಕಾಂಪ್ಯಾಕ್ಟ್ ಸೆಗ್‍‍ಮೆಂಟಿನಲ್ಲಿರುವ ಸ್ವಿಫ್ಟ್, ಇಗ್ನಿಸ್, ಬಲೆನೊ, ಡಿಜೈರ್ ಹಾಗೂ ಹೊಸ ವ್ಯಾಗನ್ ಆರ್ ಕಾರುಗಳ ಮಾರಾಟ ಪ್ರಮಾಣವು 22.7%ನಷ್ಟು ಕುಸಿದಿದೆ.

ತೀವ್ರ ಕುಸಿತ ಕಾಣುತ್ತಿರುವ ಮಾರುತಿ ಸುಜುಕಿ ಕಾರು ಮಾರಾಟ

ಈ ಸೆಗ್‍‍ಮೆಂಟಿನಲ್ಲಿರುವ ವಾಹನಗಳ ಮಾರಾಟವು 2019ರ ಜುಲೈನಲ್ಲಿ 57,512 ಯುನಿಟ್ ಆಗಿದ್ದರೆ, ಹಿಂದಿನ ವರ್ಷ 74,373 ಯುನಿಟ್‍‍ಗಳ ಮಾರಾಟವಾಗಿತ್ತು. ಯುಟಿಲಿಟಿ ವೆಹಿಕಲ್ಸ್ ಹಾಗೂ ವ್ಯಾನ್‌ಗಳ ಸೆಗ್‍‍ಮೆಂಟಿನಲ್ಲಿಯೂ ಸಹ ತಲಾ 38%ನಷ್ಟು ಕುಸಿತ ಉಂಟಾಗಿದೆ.

ತೀವ್ರ ಕುಸಿತ ಕಾಣುತ್ತಿರುವ ಮಾರುತಿ ಸುಜುಕಿ ಕಾರು ಮಾರಾಟ

ಜನಪ್ರಿಯ ವಾಹನಗಳಾದ ಎರ್ಟಿಗಾ, ಎಸ್ ಕ್ರಾಸ್ ಹಾಗೂ ವಿಟಾರಾ ಬ್ರಿಝಾವನ್ನು ಒಳಗೊಂಡಿರುವ ಯುವಿ ಸೆಗ್‍‍ಮೆಂಟಿನ ಮಾರಾಟವು ಜುಲೈ 2019ರಲ್ಲಿ 151,781 ಯುನಿಟ್‌ಗಳಷ್ಟಿತ್ತು. ಓಮ್ನಿ ಹಾಗೂ ಇಕೊ ವಾಹನಗಳನ್ನು ಒಳಗೊಂಡಿರುವ ವ್ಯಾನ್‍‍ಗಳ ಸೆಗ್‍‍ಮೆಂಟಿನಲ್ಲಿ 2018ರ ಜುಲೈನಲ್ಲಿ 15,791 ಯುನಿಟ್‌ಗಳ ಮಾರಾಟವಾಗಿತ್ತು.

ತೀವ್ರ ಕುಸಿತ ಕಾಣುತ್ತಿರುವ ಮಾರುತಿ ಸುಜುಕಿ ಕಾರು ಮಾರಾಟ

ಜುಲೈ 2019ರಲ್ಲಿ 9,814 ಯುನಿಟ್‌ಗಳ ಮಾರಾಟವಾಗಿ 38%ನಷ್ಟು ಕುಸಿತ ಉಂಟಾಗಿದೆ. ಹಿಂದಿನ ತಿಂಗಳುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದ ಮಾರುತಿ ಸುಜುಕಿಯ ಕಮರ್ಷಿಯಲ್ ವಾಹನಗಳು ಸಹ ತಮ್ಮ ವೇಗವನ್ನು ಉಳಿಸಿಕೊಳ್ಳಲು ವಿಫಲವಾಗಿವೆ.

ತೀವ್ರ ಕುಸಿತ ಕಾಣುತ್ತಿರುವ ಮಾರುತಿ ಸುಜುಕಿ ಕಾರು ಮಾರಾಟ

ಕಂಪನಿಯ ಎಲ್‍‍ಸಿ‍‍ವಿ, ಸೂಪರ್ ಕ್ಯಾರಿ ವಾಹನಗಳು 2019ರ ಜುಲೈನಲ್ಲಿ 1,732 ಯುನಿಟ್ ಮಾರಾಟದೊಂದಿಗೆ 0.5%ನಷ್ಟು ಕುಸಿತವನ್ನು ದಾಖಲಿಸಿವೆ. ಮಾರುತಿ ಸುಜುಕಿ ಕಂಪನಿಯು ವಾಹನಗಳ ರಫ್ತಿನಲ್ಲೂ ಕಳಪೆ ಸಾಧನೆ ಮಾಡಿದೆ.

ತೀವ್ರ ಕುಸಿತ ಕಾಣುತ್ತಿರುವ ಮಾರುತಿ ಸುಜುಕಿ ಕಾರು ಮಾರಾಟ

2019ರ ಜುಲೈ ತಿಂಗಳಿನಲ್ಲಿ 9.4%ನಷ್ಟು ಕುಸಿತ ಉಂಟಾಗಿದೆ. 2018ರ ಜುಲೈನಲ್ಲಿ 10,219 ಯುನಿಟ್‍‍ಗಳಷ್ಟಿದ್ದ ರಫ್ತು ಪ್ರಮಾಣವು ಕಳೆದ ತಿಂಗಳು 9,258 ಯುನಿಟ್‍‍ಗಳಿಗೆ ಇಳಿದಿದೆ. ಈ ಮೂಲಕ ಕಾರುಗಳ ರಫ್ತಿನಲ್ಲೂ ಹಿನ್ನಡೆಯನ್ನು ಅನುಭವಿಸಿದೆ.

ತೀವ್ರ ಕುಸಿತ ಕಾಣುತ್ತಿರುವ ಮಾರುತಿ ಸುಜುಕಿ ಕಾರು ಮಾರಾಟ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಕಂಪನಿಯ ಕಾರುಗಳ ಮಾರಾಟವು ಕಳೆದ ಎರಡು ತಿಂಗಳುಗಳಿಂದ ಕುಸಿಯುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಕಂಪನಿಯು ಸತತವಾಗಿ ಕುಸಿತ ಕಾಣುತ್ತಿದೆ. ಮಾರಾಟದಲ್ಲಿ ಚೇತರಿಕೆ ಕಾಣಲು ವಿಫಲವಾಗುತ್ತಿದೆ. 2019ರ ಜುಲೈ ತಿಂಗಳಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ 36%ನಷ್ಟು ಕುಸಿತ ಕಂಡಿದೆ. ಹಬ್ಬಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಾರಾಟದಲ್ಲಿ ಚೇತರಿಕೆ ಕಾಣಬಹುದೆಂಬ ಆಶಯವನ್ನು ಮಾರುತಿ ಸುಜುಕಿ ಕಂಪನಿ ಹೊಂದಿದೆ.

Most Read Articles

Kannada
English summary
Maruti Suzuki Sales Decline By 36 Percent In July 2019 — Steepest Decline Recorded Till Date - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X