ಎಂಟ್ರಿ ಲೆವೆಲ್ ಕಾರುಗಳಿಗೂ ಸ್ಮಾರ್ಟ್ ಪ್ಲೇ ಒದಗಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ತನ್ನ ಕಡಿಮೆ ಬೆಲೆಯ ಕಾರುಗಳಲ್ಲಿರುವ ಇನ್ಫೋಟೇನ್‌ಮೆಂಟ್ ಸುಧಾರಿಸಲು ಹೊಸ ಸ್ಮಾರ್ಟ್‌ಪ್ಲೇ ಡಾಕ್ ಸಿಸ್ಟಂ ಅನ್ನು ಬಿಡುಗಡೆಗೊಳಿಸಿದೆ. ಹೊಸ ಮಾರುತಿ ಸುಜುಕಿ ಸ್ಮಾರ್ಟ್ ಪ್ಲೇ ಡಾಕ್ ಸಿಸ್ಟಂ, ಫೋನ್ ಮೌಂಟ್, ಬ್ಲೂಟೂತ್ ಹೊಂದಿರುವ ಮಾರುತಿ ಸುಜುಕಿಯ ಮ್ಯೂಸಿಕ್ ಸಿಸ್ಟಂ ಹಾಗೂ ಬಳಕೆದಾರರ ಸ್ಮಾರ್ಟ್ ಫೋನ್ ಅನ್ನು ಒಳಗೊಂಡಿದೆ. ಸ್ಮಾರ್ಟ್ ಪ್ಲೇ ಡಾಕ್ ಅಪ್ಲಿಕೇಶನ್ ಮೂಲಕ ಸ್ಮಾರ್ಟ್ಫೋನ್ ಅನ್ನು ಸಿಸ್ಟಂಗೆ ಕನೆಕ್ಟ್ ಮಾಡಬಹುದು.

ಎಂಟ್ರಿ ಲೆವೆಲ್ ಕಾರುಗಳಿಗೂ ಸ್ಮಾರ್ಟ್ ಪ್ಲೇ ಒದಗಿಸಿದ ಮಾರುತಿ ಸುಜುಕಿ

ಕಾರುಗಳ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಯೂನಿಟ್‍‍ಗಳು ಈ ದಿನಗಳಲ್ಲಿ ಕಡಿಮೆ ಐಷಾರಾಮಿ ಹಾಗೂ ಹೆಚ್ಚಿನ ಅವಶ್ಯಕತೆಗಳನ್ನು ಹೊಂದಿವೆ. ಬಹುತೇಕ ಎಲ್ಲಾ ಕಾರು ತಯಾರಕರು ತಮ್ಮ ಬಹುತೇಕ ಎಲ್ಲಾ ಕಾರುಗಳಲ್ಲಿ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಯೂನಿಟ್‍‍ಗಳನ್ನು ಅಳವಡಿಸುತ್ತಾರೆ. ಆದರೆ, ಮಾರುತಿ ಸುಜುಕಿಯಂತಹ ಕಂಪನಿಗಳು, ಈ ಸಿಸ್ಟಂಗಳನ್ನು ಆಲ್ಟೊ 800, ವ್ಯಾಗನ್ಆರ್, ಸೆಲೆರಿಯೊ ಮುಂತಾದ ಸಣ್ಣ ಬೆಲೆಯ ಕಾರುಗಳಲ್ಲಿ ವೆಚ್ಚದ ದೃಷ್ಟಿಯಿಂದ ಅಳವಡಿಸುವುದಿಲ್ಲ.

ಎಂಟ್ರಿ ಲೆವೆಲ್ ಕಾರುಗಳಿಗೂ ಸ್ಮಾರ್ಟ್ ಪ್ಲೇ ಒದಗಿಸಿದ ಮಾರುತಿ ಸುಜುಕಿ

ಒಂದು ಬೇಸಿಕ್ ಆಫ್ಟರ್ ಮಾರ್ಕೆಟ್ ಟಚ್‌ಸ್ಕ್ರೀನ್ ಯೂನಿಟ್‍‍ನ ಬೆಲೆ ಸುಮಾರು ರೂ.7,000ಗಳಾಗುತ್ತವೆ. ಒಇ‍ಎಂ ಅದನ್ನು ಮಾರುತಿ ಸುಜುಕಿಗೆ ಪೂರೈಸಿದರೆ, ಅದರ ಬೆಲೆ ಸುಮಾರು ರೂ.6,000 ಗಳಾಗುತ್ತದೆ. ಸಾಧಾರಣ ಮ್ಯೂಸಿಕ್ ಸಿಸ್ಟಂಗಳನ್ನು ಮೂಲ ಮಾದರಿಯ ಕಾರುಗಳಲ್ಲಿ ಅಳವಡಿಸಲು ರೂ.1,500 ಖರ್ಚಾಗುತ್ತದೆ. ಇದರಿಂದಾಗಿ ಕಾರಿನ ಒಟ್ಟಾರೆ ಬೆಲೆಯೂ ಕಡಿಮೆಯಾಗಲಿದೆ. ಆದರೆ ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ಕಡಿಮೆ ಬೆಲೆಯ ಸಣ್ಣ ಕಾರುಗಳಲ್ಲಿಯೂ ಪ್ರೀಮಿಯಂ ಇನ್ಫೋಟೇನ್‌ಮೆಂಟ್ ಯೂನಿಟ್‍ ಅಳವಡಿಸಲು ನಿರ್ಧರಿಸಿದೆ.

ಎಂಟ್ರಿ ಲೆವೆಲ್ ಕಾರುಗಳಿಗೂ ಸ್ಮಾರ್ಟ್ ಪ್ಲೇ ಒದಗಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು, ಸಣ್ಣ ಕಾರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿ, ಲಾಭವನ್ನು ಪಡೆಯುತ್ತಿದೆ. ಆದ ಕಾರಣ ಈ ಕಾರುಗಳಲ್ಲಿ ಸ್ಮಾರ್ಟ್‌ಪ್ಲೇ ಡಾಕ್ ಸಿಸ್ಟಂಗಳನ್ನು ಅಳವಡಿಸಲು ಬಯಸಿದೆ. ಕಾರನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಯಾವುದಾದರೊಂದು ಸ್ಮಾರ್ಟ್ ಫೋನ್ ಹೊಂದಿರುತ್ತಾನೆ. ಆದ ಕಾರಣ ಮಾರುತಿ ಸುಜುಕಿ ಕಂಪನಿಯು ಈ ವಿಷಯದ ಮೇಲೆಯೇ ಸ್ಮಾರ್ಟ್‌ಪ್ಲೇ ಡಾಕ್ ಸಿಸ್ಟಂ ಅಭಿವೃದ್ಧಿಪಡಿಸಿದೆ.

ಎಂಟ್ರಿ ಲೆವೆಲ್ ಕಾರುಗಳಿಗೂ ಸ್ಮಾರ್ಟ್ ಪ್ಲೇ ಒದಗಿಸಿದ ಮಾರುತಿ ಸುಜುಕಿ

ಈ ಸಿಸ್ಟಂನ ಡಿಸೈನ್ ಒಂದು ನಿರ್ದಿಷ್ಟ ಪ್ರಕಾರದ ಆಫ್ಟರ್ ಮಾರ್ಕೆಟ್ ಮ್ಯೂಸಿಕ್ ಸಿಸ್ಟಂ ತಯಾರಕರಿಂದ ಪ್ರಭಾವಿತವಾಗಿರಬಹುದು. ಮಾರುತಿ ಸುಜುಕಿಯ ಸ್ಮಾರ್ಟ್ ಪ್ಲೇ ಡಾಕ್ ಸಿಸ್ಟಂ ಅನ್ನು ಬಳಸುವುದು ಬಹಳ ಸುಲಭ. ಇದಕ್ಕಾಗಿ ಮಾರುತಿ ಸುಜುಕಿ ಸ್ಮಾರ್ಟ್ ಪ್ಲೇ ಡಾಕ್ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್‍‍ನಲ್ಲಿ ಲಭ್ಯವಿದೆ. ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ಬಳಕೆದಾರರು ವಾಹನ ಗುರುತಿನ ಸಂಖ್ಯೆ (ವಿಐಎನ್) ಹಾಗೂ ರಿಜೆಸ್ಟ್ರೇಷನ್ ನಂಬರ್ ನಮೂದಿಸುವ ಮೂಲಕ ನೋಂದಾಯಿಸಿಕೊಳ್ಳಬೇಕು.

ಎಂಟ್ರಿ ಲೆವೆಲ್ ಕಾರುಗಳಿಗೂ ಸ್ಮಾರ್ಟ್ ಪ್ಲೇ ಒದಗಿಸಿದ ಮಾರುತಿ ಸುಜುಕಿ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇದಾದ ನಂತರ ಬಳಕೆದಾರರು ಫೋನ್‌ನಲ್ಲಿ ಬ್ಲೂಟೂತ್ ಮೂಲಕ ಕಾರಿನಲ್ಲಿರುವ ಮ್ಯೂಸಿಕ್ ಸಿಸ್ಟಂ ಅನ್ನು ಪೇರ್ ಮಾಡಿ ಕೊಳ್ಳಬೇಕು ಹಾಗೂ ಫೋನ್‌ನಲ್ಲಿರುವ ಫೋನ್ ಅನ್ನು ಅಡ್ಡಲಾಗಿ ಡಾಕ್ ಮಾಡಬೇಕು. ಆ್ಯಪ್‍‍ನಲ್ಲಿರುವ ಹೋಮ್‌ಸ್ಕ್ರೀನ್ ಅನ್ನು ದೊಡ್ಡದಾಗಿ, ಹೈ ಎಂಡ್ ಮಾರುತಿ ಸುಜುಕಿ ಕಾರುಗಳಲ್ಲಿರುವಂತಹ ಸ್ಮಾರ್ಟ್‌ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಂನಂತೆಯೇ ವಿನ್ಯಾಸಗೊಳಿಸಲಾಗಿದೆ. ಇದು ಮ್ಯೂಸಿಕ್, ಕಾಂಟ್ಯಾಕ್ಟ್, ನ್ಯಾವಿಗೇಶನ್ ಹಾಗೂ ಅಸಿಸ್ಟ್ ಗಳನ್ನು ಸುಲಭವಾಗಿ ಓದುವಂತೆ ಮಾಡುತ್ತದೆ.

ಎಂಟ್ರಿ ಲೆವೆಲ್ ಕಾರುಗಳಿಗೂ ಸ್ಮಾರ್ಟ್ ಪ್ಲೇ ಒದಗಿಸಿದ ಮಾರುತಿ ಸುಜುಕಿ

ಬಳಕೆದಾರರು ಕಾರಿನ ಯುಎಸ್‌ಬಿ ಪೋರ್ಟ್ ಮೂಲಕ ಅಥವಾ ಎಫ್‌ಎಂ, ಎಎಂ ಮೂಲಕ ಹಾಗೂ ಫೋನ್‌ನಲ್ಲಿ ಅಳವಡಿಸಿರುವ ಥರ್ಡ್ ಪಾರ್ಟಿ ಅಪ್ಲಿಕೇಶನ್‌ನಿಂದಲೂ ಸಂಗೀತವನ್ನು ಪ್ಲೇ ಮಾಡಬಹುದು. ಅಸಿಸ್ಟ್ ಟ್ಯಾಬ್ ಅಡಿಯಲ್ಲಿ, ಬಳಕೆದಾರರು ಎಂಜಿನ್‍‍ನ ಆರ್‍‍ಪಿಎಂ, ಡ್ರೈವಿಂಗ್ ರೇಂಜ್, ಫ್ಯೂಯಲ್ ಎಕಾನಮಿ, ಫ್ಯೂಯಲ್‍‍ನ ಸರಾಸರಿ, ಕೊನೆಯ ಕೆಲವು ಟ್ರಿಪ್‍‍ಗಳ ಇಂಧನ ಆರ್ಥಿಕತೆ ಮುಂತಾದ ವಾಹನ ಅಂಕಿಅಂಶಗಳ ಬಗ್ಗೆ ಅಪ್‍‍ಡೇಟ್‍‍ಗಳನ್ನು ಪಡೆಯಬಹುದು.

ಎಂಟ್ರಿ ಲೆವೆಲ್ ಕಾರುಗಳಿಗೂ ಸ್ಮಾರ್ಟ್ ಪ್ಲೇ ಒದಗಿಸಿದ ಮಾರುತಿ ಸುಜುಕಿ

ಪಾರ್ಕಿಂಗ್ ಬ್ರೇಕ್ ಬಗ್ಗೆ, ಸೀಟ್‌ಬೆಲ್ಟ್ ಹಾಕಿಕೊಳ್ಳದ ಬಗ್ಗೆ, ಡೋರ್ ಒಪನ್ ಆಗಿರುವ ಬಗ್ಗೆ, ಕಡಿಮೆ ಫ್ಯೂಯಲ್ ಬಗ್ಗೆ ಅಲರ್ಟ್‍‍ಗಳನ್ನು ಪಡೆಯಬಹುದು. ಈ ಆ್ಯಪ್‍‍ನಿಂದ ಸಂದೇಶಗಳನ್ನು ಕಳುಹಿಸಲು, ಸಂದೇಶಗಳನ್ನು ಓದಲು, ಕರೆಗಳನ್ನು ಮಾಡಲು ಹಾಗೂ ಕರೆಗಳನ್ನು ಸ್ವೀಕರಿಸಲು ಅನುಕೂಲವಾಗಲಿದೆ. ನ್ಯಾವಿಗೇಷನ್ ಟ್ಯಾಬ್‍‍ನಿಂದಾಗಿ ಗೂಗಲ್ ಮ್ಯಾಪ್ ವೀಕ್ಷಿಸಬಹುದು.

ಎಂಟ್ರಿ ಲೆವೆಲ್ ಕಾರುಗಳಿಗೂ ಸ್ಮಾರ್ಟ್ ಪ್ಲೇ ಒದಗಿಸಿದ ಮಾರುತಿ ಸುಜುಕಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಮಾರುತಿ ಸುಜುಕಿ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವ ಕೆಲವೇ ಕೆಲವು ಕಂಪನಿಗಳಲ್ಲಿ ಒಂದಾಗಿದೆ. ವಿಶೇಷವಾಗಿ ಆಟೋಮೋಟಿವ್ ಸ್ಪೆಕ್ಟ್ರಮ್‌ನ ಭಾಗದಲ್ಲಿ. ಹೊಸ ಸ್ಮಾರ್ಟ್‌ಪ್ಲೇ ಡಾಕ್ ಸಿಸ್ಟಂನೊಂದಿಗೆ, ಎಂಟ್ರಿ ಲೆವೆಲ್ ಕಾರುಗಳ ಮಾಲೀಕರು ಸಹ ಟಚ್‌ಸ್ಕ್ರೀನ್ ಸಿಸ್ಟಂಗಳನ್ನು ಪಡೆಯಲು ಸಾಧ್ಯವಾಗಲಿದೆ.

Article Published On: Friday, July 26, 2019, 12:58 [IST]
English summary
Maruti Suzuki SmartPlay Dock System — Your SmartPhone Becomes Your Infotainment System - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+