ಬಿಎಸ್-6 ಎಫೆಕ್ಟ್- ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆ ಮಾರುತಿ ಸುಜುಕಿ..!

ದೇಶಾದ್ಯಂತ ಸದ್ಯ ಬಿಎಸ್-4 ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ತಾಂತ್ರಿಕ ಗುಣವೈಶಿಷ್ಟ್ಯ ಹೊಂದಿರುವ ವಾಹನಗಳಿಗೆ ಮಾತ್ರವೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದ್ದು, ಇದು ಕೂಡಾ ಮುಂದಿನ ಕೆಲವೇ ದಿನಗಳಲ್ಲಿ ನಿಷೇಧವಾಗುವುದು ಖಚಿತವಾಗಿದೆ.

ಬಿಎಸ್-6 ಎಫೆಕ್ಟ್- ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆ ಮಾರುತಿ ಸುಜುಕಿ..!

ಈ ಹಿಂದೆ ಕೇಂದ್ರ ಸರ್ಕಾರವು 2017ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ದೇಶಾದ್ಯಂತ ಬಿಎಸ್-3 (ಭಾರತ್ ಸ್ಟೇಜ್) ಸೌಲಭ್ಯಗಳನ್ನು ಒಳಗೊಂಡ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಮೇಲೆ ನಿಷೇಧ ನಿಷೇಧ ಹೇರಿದ್ದಲ್ಲದೆ ಬಿಎಸ್-4 ಮತ್ತು ಅದಕ್ಕೂ ಮೇಲ್ಪಟ್ಟ ವಾಹನ ಮಾದರಿಗಳ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಿತ್ತು.

ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿಡುತ್ತಿರುವ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಸೂಚನೆಯೆಂತೆ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಉತ್ಪಾದನೆ ಮತ್ತು ಮಾರಾಟ ಮೇಲೆ ನಿಷೇಧ ಹೇರುವುದು ಖಚಿತವಾಗಿದ್ದು, ಬಿಎಸ್-6 ವಾಹನಗಳು ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ವಾಹನ ಮಾದರಿಗಳಿಗೆ ಮಾತ್ರವೇ ಅವಕಾಶ ನೀಡಲಿದೆ.

ಬಿಎಸ್-6 ಎಫೆಕ್ಟ್- ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆ ಮಾರುತಿ ಸುಜುಕಿ..!

ಹೀಗಾಗಿ ಕೇಂದ್ರ ಸರ್ಕಾರದ ಡೆಡ್‌ಲೈನ್‌ಗೂ ಮುನ್ನವೇ ಬಿಎಸ್ 6 ವೈಶಿಷ್ಟ್ಯತೆಯುಳ್ಳ ಎಂಜಿನ್ ಪ್ರೇರಿತ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು, ಈ ಮೂಲಕ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಬಹುದೊಡ್ಡ ಬದಲಾವಣೆ ಮಾಡುತ್ತಿದೆ.

ಬಿಎಸ್-6 ಎಫೆಕ್ಟ್- ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆ ಮಾರುತಿ ಸುಜುಕಿ..!

ಈ ಹಿನ್ನೆಲೆ ಬಿಎಸ್-6 ಹೊಸ ನಿಯಮವನ್ನು ಪಾಲಿಸಲು ಸಾಧ್ಯವಾಗದ ಡೀಸೆಲ್ ಎಂಜಿನ್ ಮಾದರಿಗಳ ಮಾರಾಟವನ್ನು 2020ರ ಎಪ್ರಿಲ್ 1ರಿಂದಲೇ ಬಂದ್ ಮಾಡಲು ನಿರ್ಧರಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಪೆಟ್ರೋಲ್, ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳ ಅಭಿವೃದ್ಧಿ ಮೇಲೆ ಹೆಚ್ಚಿನ ಗಮನಹರಿಸುತ್ತಿದ್ದು, ಡೀಸೆಲ್ ಎಂಜಿನ್ ಕೈಬಿಡುತ್ತಿರುವ ಬಗ್ಗೆ ಸ್ವತಃ ಸುಜುಕಿ ಸಂಸ್ಥೆಯ ಅಧ್ಯಕ್ಷ ಆರ್‌ಸಿ ಭಾರ್ಗವ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.

ಬಿಎಸ್-6 ಎಫೆಕ್ಟ್- ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆ ಮಾರುತಿ ಸುಜುಕಿ..!

ಇನ್ನು ಬಿಎಸ್ 4 ವಾಹನಗಳಿಂತ ಬಿಎಸ್ 6 ವಾಹನಗಳು ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯ ಪಡೆಯುತ್ತಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ಬೆಲೆಯಲ್ಲಿ ಸರಾಸರಿ ರೂ. 1 ಲಕ್ಷದಿಂದ ರೂ. 2.50 ಲಕ್ಷ ಏರಿಕೆಯಾಗಲಿದ್ದು,ಇದರಿಂದ ಅಗ್ಗದ ಬೆಲೆಯ ಕಾರು ಮಾರಾಟ ಮಾಡುವ ಮಾರುತಿ ಸುಜುಕಿ ಇದು ಹಿನ್ನಡೆಯಾಗುವ ಸಾಧ್ಯತೆಗಳಿವೆ.

ಇದರಿಂದ ಬೆಲೆ ಹೆಚ್ಚಳದಿಂದ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಡೀಸೆಲ್ ಕಾರುಗಳ ಬದಲಾಗಿ ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಕಾರುಗಳತ್ತ ಹೆಚ್ಚಿನ ಒತ್ತು ಕೊಡಲು ಮುಂದಾಗಿದೆ.

ಬಿಎಸ್-6 ಎಫೆಕ್ಟ್- ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆ ಮಾರುತಿ ಸುಜುಕಿ..!

2020ರ ಆರಂಭದಿಂದಲೇ ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಮತ್ತು ಸಿಎನ್‌ಜಿ ಆಧರಿತ ವಾಹನ ಮಾರಾಟವನ್ನು ಹೆಚ್ಚಿಸುವ ಸಂಬಂಧ ಕೆಲವು ಮಹತ್ವದ ನಿರ್ಧಾರ ಪ್ರಕಟಿಸಲಾಗುತ್ತಿದ್ದು, ಇದರಿಂದ ಡೀಸೆಲ್ ಕಾರುಗಳನ್ನು ಖರೀದಿಸುವ ಗ್ರಾಹಕರು ಪೆಟ್ರೋಲ್ ಕಾರುಗಳತ್ತ ಆಕರ್ಷಣೆಯಾಗುವಂತೆ ಮಾಡಲಿದೆ.

ಬಿಎಸ್-6 ಎಫೆಕ್ಟ್- ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆ ಮಾರುತಿ ಸುಜುಕಿ..!

ಇದರಿಂದ ಡೀಸೆಲ್ ಕಾರುಗಳಿಗೆ ಸರಿಸಮಾನವಾದ ಮೈಲೇಜ್ ಸೇರಿದಂತೆ ಎಂಜಿನ್ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಡಿಸೇಲ್ ಕಾರುಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲಿರುವ ಮಾರುತಿ ಸುಜುಕಿಯು ಇತರೆ ಕಾರು ಉತ್ಪಾದನಾ ಸಂಸ್ಥೆಗಳಿಗೆ ಮತ್ತೊಮ್ಮೆ ಟಾಂಗ್ ನೀಡುವ ತವಕದಲ್ಲಿದೆ.

ಬಿಎಸ್-6 ಎಫೆಕ್ಟ್- ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆ ಮಾರುತಿ ಸುಜುಕಿ..!

ಬಿಎಸ್-6 ನಿಯಮ ಜಾರಿ ಉದ್ದೇಶ ಏನು?

ವಿಶ್ವಾದ್ಯಂತ ಈಗಾಗಲೇ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಹೆಚ್ಚು ಹೊಗೆ ಉಗುಳುವ ವಾಹನಗಳಿಗೆ ಬ್ರೇಕ್ ಹಾಕಲು ಯುರೋಪ್‌ನಲ್ಲಿ ಯುರೋ-6, ಇತರೆ ಖಂಡಗಳಲ್ಲಿ ವಿವಿಧ ಮಾದರಿಯ ಗುಣಮಟ್ಟದ ವಾಹನಗಳಿಗೆ ಮಾತ್ರವೇ ಅವಕಾಶವಿದ್ದು, ಇದರ ಭಾಗವಾಗಿ ಭಾರತದಲ್ಲಿ ಬಿಎಸ್-6 ವಾಹನಗಳು ರಸ್ತೆಗಿಳಿಯಲಿವೆ.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಬಿಎಸ್-6 ಎಫೆಕ್ಟ್- ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆ ಮಾರುತಿ ಸುಜುಕಿ..!

ಯುರೋಪ್‌ನಲ್ಲಿ ಈ ಹಿಂದೆ 2016ರಿಂದಲೇ ಯುರೋ-6 ತಾಂತ್ರಿಕ ಅಂಶಗಳನ್ನು ಹೊಂದಿರುವ ವಾಹನಗಳಿಗೆ ಮಾತ್ರವೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದ್ದು, ಇದು ಬಿಎಸ್-6 ವೈಶಿಷ್ಟ್ಯತೆಗೆ ಸರಿಸಮನಾಗಿದೆ.

ಬಿಎಸ್-6 ಎಫೆಕ್ಟ್- ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆ ಮಾರುತಿ ಸುಜುಕಿ..!

ಹೊಸ ನಿಯಮ ಜಾರಿಯಿಂದಾಗಿ ವಾಹನ ಎಂಜಿನ್ ಮಾದರಿಗಳಲ್ಲಿ ಭಾರೀ ಬದಲಾವಣೆಯಾಗಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಎಂಜಿನ್ ಮಾದರಿಗಿಂತಲೂ ಬಿಎಸ್-6 ಹೆಚ್ಚಿನ ಗುಣಮಟ್ಟದೊಂದಿಗೆ ಹೊಗೆ ಉಗುಳುವ ಪ್ರಮಾಣದಲ್ಲಿ ಪರಿಣಾಮಕಾರಿ ತಗ್ಗಿಸಲಿದೆ.

MOST READ: ಸ್ಮಾರ್ಟ್ ಹೈಬ್ರಿಡ್‌ ತಂತ್ರಜ್ಞಾನದೊಂದಿಗೆ ಬಿಎಸ್-6 ಮಾರುತಿ ಬಲೆನೊ ಬಿಡುಗಡೆ

ಬಿಎಸ್-6 ಎಫೆಕ್ಟ್- ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಲಿದೆ ಮಾರುತಿ ಸುಜುಕಿ..!

ಹೀಗಿರುವಾಗ ಮಾಲಿನ್ಯದಲ್ಲಿ ಬಹುದೊಡ್ಡ ಕೊಡುಗೆ ಹೊಂದಿರುವ ಭಾರತದಲ್ಲಿ ಬಿಎಸ್-6 ವೈಶಿಷ್ಟ್ಯತೆಯ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಒತ್ತಡಗಳಿದ್ದು, ಇದರಿಂದಾಗಿ ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಆಟೋಉತ್ಪಾದನಾ ಸಂಸ್ಥೆಗಳು ಡೀಸೆಲ್ ಎಂಜಿನ್‌ಗಳನ್ನು ಕಡಿತಗೊಳಿಸಿ ಬಿಎಸ್-6 ಪ್ರೇರಿತ ಪೆಟ್ರೋಲ್ ಮತ್ತು ಹೈಬ್ರಿಡ್ ವಾಹನಗಳನ್ನು ಮಾರಾಟಮಾಡಲು ಸಜ್ಜಾಗುತ್ತಿವೆ.

Article Published On: Friday, April 26, 2019, 9:00 [IST]
English summary
Maruti Suzuki To Stop Diesel Cars By 1 April 2020. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+