ಅಗಸ್ಟ್ ಅಂತ್ಯಕ್ಕೆ ಮಾರುತಿ ಸುಜುಕಿ ಬ್ರೆಝಾ ಪೆಟ್ರೋಲ್ ವರ್ಷನ್ ಬಿಡುಗಡೆ ಪಕ್ಕಾ?

ಮಾರುತಿ ಸುಜಕಿ ಸಂಸ್ಥೆಯು ಸದ್ಯ ಡೀಸೆಲ್ ಎಂಜಿನ್ ಕಾರುಗಳ ಮಾರಾಟದಲ್ಲಿ ಸಾಕಷ್ಟು ಬದಲಾವಣೆ ತರುತ್ತಿದ್ದು, 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಆಯ್ಕೆಯನ್ನು ಕೈಬಿಡುತ್ತಿದೆ. ಹೀಗಾಗಿ ಪೆಟ್ರೋಲ್, ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳ ಮೇಲೆ ಹೆಚ್ಚಿನ ಗಮನಹರಿಸಿದ್ದು, ತನ್ನ ಜನಪ್ರಿಯ ಬ್ರೆಝಾ ಆವೃತ್ತಿಯಲ್ಲೂ ಕೂಡಾ ಇದೀಗ ಮಹತ್ವದ ಬದಲಾವಣೆ ಮಾಡುತ್ತಿದೆ.

ಅಗಸ್ಟ್ ಅಂತ್ಯಕ್ಕೆ ಮಾರುತಿ ಸುಜುಕಿ ಬ್ರೆಝಾ ಪೆಟ್ರೋಲ್ ವರ್ಷನ್ ಬಿಡುಗಡೆ ಪಕ್ಕಾ?

ಹೌದು, ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮವನ್ನು ಪಾಲನೆ ಮಾಡಲು ಸಾಧ್ಯವಿರದ ಡೀಸೆಲ್ ಎಂಜಿನ್‌ಗಳಿಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದು, ಪೆಟ್ರೋಲ್, ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದೆ. ಇದರಿಂದ ಡೀಸೆಲ್ ಎಂಜಿನ್ ಕಾರುಗಳ ಆಯ್ಕೆಯನ್ನು ಈಗಿನಿಂದಲೇ ಕಡಿತಗೊಳಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಮೊದಲ ಹಂತವಾಗಿ ಬ್ರೆಝಾ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಭಾರೀ ಬದಲಾವಣೆ ತರುತ್ತಿದೆ.

ಅಗಸ್ಟ್ ಅಂತ್ಯಕ್ಕೆ ಮಾರುತಿ ಸುಜುಕಿ ಬ್ರೆಝಾ ಪೆಟ್ರೋಲ್ ವರ್ಷನ್ ಬಿಡುಗಡೆ ಪಕ್ಕಾ?

ಟೈಮ್ಸ್ ಡ್ರೈವ್ ವರದಿ ಪ್ರಕಾರ, ಮಾರುತಿ ಸುಜುಕಿಯು ಅಗಸ್ಟ್ 20ರಂದು ವಿಟಾರಾ ಬ್ರೆಝಾದಲ್ಲಿ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ನಿಧಾನವಾಗಿ ಡೀಸೆಲ್ ಎಂಜಿನ್ ಆಯ್ಕೆ ತಗ್ಗಿಸಲು ತಗ್ಗಿಸಲು ಕ್ರಮಕೈಗೊಳ್ಳಲಾಗಿದೆಯೆಂತೆ. ಇದಕ್ಕಾಗಿಯೇ ಪೆಟ್ರೋಲ್ ಮಾದರಗಳಲ್ಲಿ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನವನ್ನು ಪರಿಚಯಿಸುತ್ತಿರುವ ಮಾರುತಿ ಸುಜುಕಿಯು 2020ರ ಏಪ್ರಿಲ್ 1ರಿಂದಲೇ ಪೂರ್ಣ ಪ್ರಮಾಣದಲ್ಲಿ ಡೀಸೆಲ್ ಕಾರುಗಳ ಮಾರಾಟವನ್ನು ಬಂದ್ ಮಾಡಲಿದೆ.

ಅಗಸ್ಟ್ ಅಂತ್ಯಕ್ಕೆ ಮಾರುತಿ ಸುಜುಕಿ ಬ್ರೆಝಾ ಪೆಟ್ರೋಲ್ ವರ್ಷನ್ ಬಿಡುಗಡೆ ಪಕ್ಕಾ?

ಕಳೆದ ಮೂರು ವರ್ಷಗಳಿಂದ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ನಂ.1 ಸ್ಥಾನದಲ್ಲಿರುವ ವಿಟಾರಾ ಬ್ರೆಝಾ ಕಾರನ್ನು ಕೇವಲ ಡೀಸೆಲ್ ಮಾದರಿಯಲ್ಲಿ ಮಾರಾಟ ಮಾಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಇದೇ ಮೊದಲ ಬಾರಿಗೆ ಪೆಟ್ರೋಲ್ ಆವೃತ್ತಿಯ ಮೊರೆಹೋಗಿದೆ. ಇದಕ್ಕೆ ಪ್ರಮುಖ ಕಾರಣ, ಬಿಎಸ್-6 ನಿಯಮವನ್ನು ಪಾಲಿಸಲು ಸಾಧ್ಯವಾಗದ ಬ್ರೆಝಾ ಡೀಸೆಲ್ ಎಂಜಿನ್ ಮಾದರಿಯು ಮಾರುಕಟ್ಟೆಯಿಂದ ನಿರ್ಗಮಿಸುವ ಅನಿವಾರ್ಯತೆ ಎದುರಾಗಿದೆ.

ಅಗಸ್ಟ್ ಅಂತ್ಯಕ್ಕೆ ಮಾರುತಿ ಸುಜುಕಿ ಬ್ರೆಝಾ ಪೆಟ್ರೋಲ್ ವರ್ಷನ್ ಬಿಡುಗಡೆ ಪಕ್ಕಾ?

ಒಂದು ವೇಳೆ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ನಿಯಮ ಅನುಸಾರವಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಡೀಸೆಲ್ ಎಂಜಿನ್ ಮಾದರಿಗಳನ್ನು ಉನ್ನತಿಕರಣ ಮಾಡಿದರೂ ಸಹ ಬೆಲೆಯಲ್ಲಿ ಭಾರೀ ಏರಿಕೆಯಾಗಲಿದ್ದು, ಇದರಿಂದ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಡೀಸೆಲ್ ಎಂಜಿನ್ ಬಗೆಗೆ ಹೆಚ್ಚು ತೆಲೆಕೆಡಿಸಿಕೊಳ್ಳದೇ ಪೆಟ್ರೋಲ್, ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳಿಗೆ ವಿಶೇಷ ಗಮನಹರಿಸಲು ನಿರ್ಧರಿಸಲಾಗಿದ್ದು, ಡೀಸೆಲ್ ಎಂಜಿನ್‌ನಷ್ಟೇ ಇತರೆ ಕಾರುಗಳಲ್ಲೂ ಮೈಲೇಜ್ ಮತ್ತು ಪರ್ಫಾಮೆನ್ಸ್ ನೀಡುವುದರ ಬಗ್ಗೆ ಹೆಚ್ಚಿನ ಗಮನಹರಿಸಿದೆ.

ಅಗಸ್ಟ್ ಅಂತ್ಯಕ್ಕೆ ಮಾರುತಿ ಸುಜುಕಿ ಬ್ರೆಝಾ ಪೆಟ್ರೋಲ್ ವರ್ಷನ್ ಬಿಡುಗಡೆ ಪಕ್ಕಾ?

ಇನ್ನು ಮಾರುತಿ ಸುಜುಕಿಯು ಇತ್ತೀಚಿಗಷ್ಟೆ ಹೊಸ ತಂತ್ರಜ್ಞಾನ ಪ್ರೇರಿತ 1.5 ಲೀಟರ್ ಪೆಟ್ರೊಲ್ ಎಂಜಿನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಹೊಸ ಪೆಟ್ರೋಲ್ ಎಂಜಿನ್ ಅನ್ನು ಮೊದಲ ಬಾರಿಗೆ ಸಿಯಾಜ್ ಸೆಡಾನ್‍ನಲ್ಲಿ ಅಳವಡಿಸಲಾಗಿತ್ತು.ಇದೀಗ ಇದೇ ಎಂಜಿನ್ ಅನ್ನು ವಿಟಾರಾ ಬ್ರಿಝಾ ಸೇರಿದಂತೆ ಇತರೆ ಕೆಲವು ಕಾರು ಮಾದರಿಗಳಲ್ಲೂ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಅಗಸ್ಟ್ ಅಂತ್ಯಕ್ಕೆ ಮಾರುತಿ ಸುಜುಕಿ ಬ್ರೆಝಾ ಪೆಟ್ರೋಲ್ ವರ್ಷನ್ ಬಿಡುಗಡೆ ಪಕ್ಕಾ?

ಹೊಚ್ಚ ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು ಬಿಎಸ್-6 ಪ್ರೇರಣೆಯೊಂದಿಗೆ ಅಭಿವೃದ್ಧಿ ಹೊಂದಿದ್ದು, ಉತ್ತಮ ಮೈಲೇಜ್‌ನೊಂದಿಗೆ 105-ಬಿಹೆಚ್‍ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಅಗಸ್ಟ್ ಅಂತ್ಯಕ್ಕೆ ಮಾರುತಿ ಸುಜುಕಿ ಬ್ರೆಝಾ ಪೆಟ್ರೋಲ್ ವರ್ಷನ್ ಬಿಡುಗಡೆ ಪಕ್ಕಾ?

ಹಾಗೆಯೇ ಪೆಟ್ರೋಲ್ ಎಂಜಿನ್ ಜೊತೆಯಲ್ಲಿ ವಿಟಾರಾ ಬ್ರೆಝಾದಲ್ಲಿ ಸ್ಮಾರ್ಟ್ ಹೈಬ್ರಿಡ್ ಸಿಸ್ಟಮ್ ಹೊಂದಿರಲಿದ್ದು, ಸ್ಟಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಬರಲಿದೆ. ಭವಿಷ್ಯದ ಯೋಜನೆಗಳಿಗಾಗಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಫೋರ್ ಸ್ಪೀಡ್ ಟಾರ್ಕ್ ಕನ್ವರ್ಟರ್‍‍ಗಳನ್ನು ನೀಡಲಾಗಿದ್ದು, ಇದೇ ಮಾದರಿಯ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಈಗಾಗಲೇ ಸಿಯಾಜ್ ಸೆಡಾನ್ ನಲ್ಲಿ ಅಳವಡಿಸಲಾಗಿದೆ.

ಅಗಸ್ಟ್ ಅಂತ್ಯಕ್ಕೆ ಮಾರುತಿ ಸುಜುಕಿ ಬ್ರೆಝಾ ಪೆಟ್ರೋಲ್ ವರ್ಷನ್ ಬಿಡುಗಡೆ ಪಕ್ಕಾ?

ಬರಲಿರುವ ಪೆಟ್ರೋಲ್ ಎಂಜಿನ್ ಬ್ರೆಝಾ ಹೊರತಾಗಿ ಹೊಸ ಕಾರಿನಲ್ಲಿ ಇನ್ನು ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದ್ದು, ಕ್ರಾಸ್ ಬ್ಯಾಡ್ಜ್ ಯೋಜನೆಯಲ್ಲಿ ಟೊಯೊಟಾ ಸಂಸ್ಥೆಯು ಸಹ ಇದೇ ಕಾರನ್ನು ಕೆಲವು ಬದಲಾವಣೆಗಳೊಂದಿಗೆ ಪೆಟ್ರೋಲ್ ಮತ್ತು ಸ್ಮಾರ್ಟ್ ಹೈಬ್ರಿಡ್ ವೈಶಿಷ್ಟ್ಯತೆಗಳೊಂದಿಗೆ ಮರುಬಿಡುಗಡೆ ಮಾಡಲಿದೆ.

Source:Times Drive

Article Published On: Saturday, July 6, 2019, 19:18 [IST]
English summary
Maruti Suzuki Vitara Brezza petrol will be launched on 20 August 2019 in all likelihood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+