ಉದ್ದಳತೆಯಲ್ಲಿ ಸಾಮಾನ್ಯ ಎರ್ಟಿಗಾಗೆ ಪೈಪೋಟಿ ನೀಡಲಿದೆ ಎರ್ಟಿಗಾ ಎಕ್ಸ್ಎಲ್6

ಮಾರುತಿ ಸುಜುಕಿ ಸಂಸ್ಥೆಯು ಇದೇ ತಿಂಗಳು 21ಕ್ಕೆ ತನ್ನ ಜನಪ್ರಿಯ ಎರ್ಟಿಗಾ ಕಾರು ಆವೃತ್ತಿಯಲ್ಲಿ ವಿಶೇಷ ವಿನ್ಯಾನವುಳ್ಳ ಎರ್ಟಿಗಾ ಎಕ್ಸ್‌ಎಲ್6 ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಸಾಮಾನ್ಯ ಎರ್ಟಿಗಾ ಮಾದರಿಗಿಂತಲೂ ಉದ್ದಳತೆಯಲ್ಲಿ ಗ್ರಾಹಕರನ್ನು ಸೆಳೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಉದ್ದಳತೆಯಲ್ಲಿ ಸಾಮಾನ್ಯ ಎರ್ಟಿಗಾಗೆ ಪೈಪೋಟಿ ನೀಡಲಿದೆ ಎರ್ಟಿಗಾ ಎಕ್ಸ್ಎಲ್6

ಸದ್ಯ ಮಾರುಕಟ್ಟೆಯಲ್ಲಿರುವ ಎರ್ಟಿಗಾ ಖರೀದಿಗೆ ಹೆಚ್ಚಿನ ಬೇಡಿಕೆಯಿದ್ದರೂ ಸಹ ಮೂರನೇ ಸಾಲಿನ ಆಸನದಲ್ಲಿ ಅನುಕೂಲಕರ ಸ್ಥಳಾವಕಾಶ ಇಲ್ಲದಿರುವ ಕುರಿತು ಬಹುತೇಕ ಗ್ರಾಹಕರ ಅಸಮಾಧಾನ ಹೊಂದಿದ್ದಾರೆ. ಹೀಗಾಗಿಯೇ ಗ್ರಾಹಕರ ಬೇಡಿಕೆಯೆಂತೆ ಏಳು ಆಸನದ ಜೊತೆಗೆ ಆರು ಆಸನದ ಎರ್ಟಿಗಾ ಎಕ್ಸ್ಎಲ್6 ಆವೃತ್ತಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಕಾರು ಹಳೆಯ ಆವೃತ್ತಿಗಿಂತಲೂ ಹಲವು ಪ್ರೀಮಿಯಂ ಸೌಲಭ್ಯಗಳೊಂದಿಗೆ ಉದ್ದಳತೆಯಲ್ಲಿ ಉತ್ತಮ ಸ್ಥಳಾವಕಾಶ ಹೊಂದಿದೆ ಎನ್ನಲಾಗಿದೆ.

ಉದ್ದಳತೆಯಲ್ಲಿ ಸಾಮಾನ್ಯ ಎರ್ಟಿಗಾಗೆ ಪೈಪೋಟಿ ನೀಡಲಿದೆ ಎರ್ಟಿಗಾ ಎಕ್ಸ್ಎಲ್6

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಎರ್ಟಿಗಾ ಮಾದರಿಯು 4,395-ಎಂಎಂ ಉದ್ದ ಹೊಂದಿದ್ದರೆ ಎರ್ಟಿಗಾ ಎಕ್ಸ್ಎಲ್6 ಮಾದರಿಯು 4,445-ಎಂಎಂ ಉದ್ದ ಹೊಂದಿದೆಯೆಂತೆ. ಹಾಗೆಯೇ ಸಾಮಾನ್ಯ ಎರ್ಟಿಗಾಗಿಂತಲೂ 40-ಎಂಎಂ ಹೆಚ್ಚುವರಿ ಅಗಲ ಮತ್ತು 10-ಎಂಎಂ ಹೆಚ್ಚುವರಿ ಎತ್ತರ ಹೊಂದಿದೆಯೆಂತೆ.

ಉದ್ದಳತೆಯಲ್ಲಿ ಸಾಮಾನ್ಯ ಎರ್ಟಿಗಾಗೆ ಪೈಪೋಟಿ ನೀಡಲಿದೆ ಎರ್ಟಿಗಾ ಎಕ್ಸ್ಎಲ್6

ಇದರಿಂದ ಮಹೀಂದ್ರಾ ಮರಾಜೊ ಕಾರಿನ ಗಾತ್ರಕ್ಕೆ ಸರಿಸಮನಾಗುವ ಎರ್ಟಿಗಾ ಎಕ್ಸ್ಎಲ್6 ಮಾದರಿಯು ಈ ಬಾರಿ ಮತ್ತಷ್ಟು ಎಂಪಿವಿ ಕಾರು ಖರೀದಿದಾರರನ್ನು ಸೆಳೆಯುವ ವಿಶ್ವಾಸದಲ್ಲಿದ್ದು, ಹಲವು ಹೊಸ ಪ್ರೀಮಿಯಂ ಸೌಲಭ್ಯಗಳಿಂದಾಗಿ ನೆಕ್ಸಾ ಶೋರೂಂನಲ್ಲಿ ಮಾತ್ರವೇ ಹೊಸ ಕಾರು ಖರೀದಿಗೆ ಲಭ್ಯವಾಗಲಿದೆ.

ಉದ್ದಳತೆಯಲ್ಲಿ ಸಾಮಾನ್ಯ ಎರ್ಟಿಗಾಗೆ ಪೈಪೋಟಿ ನೀಡಲಿದೆ ಎರ್ಟಿಗಾ ಎಕ್ಸ್ಎಲ್6

ಮಾರುತಿ ಸುಜುಕಿ ಸಂಸ್ಥೆಯು ಕಾರು ಮಾರಾಟದಲ್ಲಿ ಎರಡು ಮಾದರಿಯ ಶೋರೂಂ ಸೌಲಭ್ಯವನ್ನು ಹೊಂದಿದ್ದು, ಸಾಮಾನ್ಯ ಕಾರುಗಳನ್ನು ಅರೆನಾ ಡೀಲರ್ಸ್‌ಗಳಲ್ಲಿ ಮತ್ತು ಪ್ರೀಮಿಮಂ ಕಾರುಗಳನ್ನು ನೆಕ್ಸಾ ಶೋರೂಂನಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡುತ್ತದೆ. ಇದೀಗ ಬಿಡುಗಡೆಗಾಗಿ ಸಿದ್ದವಾಗಿರುವ ಎಕ್ಸ್ಎಲ್6 ಕೂಡಾ ಸಾಮಾನ್ಯ ಮಾದರಿಯಾಗಿರದೇ ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಿಂಚಲಿದ್ದು, ಬಿಎಸ್-6 ವೈಶಿಷ್ಟ್ಯತೆಯೊಂದಿಗೆ ಮತ್ತಷ್ಟು ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಉದ್ದಳತೆಯಲ್ಲಿ ಸಾಮಾನ್ಯ ಎರ್ಟಿಗಾಗೆ ಪೈಪೋಟಿ ನೀಡಲಿದೆ ಎರ್ಟಿಗಾ ಎಕ್ಸ್ಎಲ್6

ಇನ್ನು ಬಹಿರಂಗಗೊಂಡ ಮಾರುತಿ ಸುಜುಕಿ ಎಕ್ಸ್ಎಲ್6 ಕಾರುಗಳಲ್ಲಿ ಸಾಮಾನ್ಯ ಎರ್ಟಿಗಾ ಕಾರಿನಂತೆಯೇ ಇಂಟೀರಿಯರ್ ಜೋಡಿಸಲಾಗಿದ್ದು, ಹೊಸದಾಗಿ ಆಲ್ ಬ್ಲಾಕ್ ಥೀಮ್ ಮತ್ತು 2+2+2 ಆಸನ ವಿನ್ಯಾಸ ಹೊಂದಿದೆ. ಇದರೊಂದಿಗೆ 6 ಸೀಟರ್ ಎರ್ಟಿಗಾ ಕಾರಿನ ಮಧ್ಯಭಾಗದಲ್ಲಿರುವ ಸೀಟ್‍‍ಗಳು ಈ ಬಾರಿ ಕ್ಯಾಪ್ಟನ್ ಸೀಟ್‍ ಅನ್ನು ಹೊಂದಿರಲಿದೆ ಎಂಬುದು ಗಮನಾರ್ಹ.

ಉದ್ದಳತೆಯಲ್ಲಿ ಸಾಮಾನ್ಯ ಎರ್ಟಿಗಾಗೆ ಪೈಪೋಟಿ ನೀಡಲಿದೆ ಎರ್ಟಿಗಾ ಎಕ್ಸ್ಎಲ್6

ಇನ್ನು ಕೆಲವು ಮಾಹಿತಿಗಳ ಪ್ರಕಾರ, ಎಕ್ಸ್ಎಲ್6 ಕಾರಿನ ಒಳಭಾಗದಲ್ಲಿ 4 ಸ್ಪೀಡ್ ಆಟೋ‍ಮ್ಯಾಟಿಕ್ ಗೇರ್‍‍ಬಾಕ್ಸ್, ಮಲ್ಟಿ ಫಂಕ್ಷನಿಂಗ್ ಸ್ಟೀರಿಂಗ್ ವ್ಹೀಲ್ ಮತ್ತು ಕಾರಿನ ಒಳಭಾಗದಲ್ಲಿರುವ ಬಹುತೇಕ ಭಾಗಗಳನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಜೊತೆಗೆ ಆಪಲ್ ಕಾರ್‍ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ನ್ಯಾವಿಗೇಷನ್ ಸಪೋರ್ಟ್ ಮಾಡುವ ಸ್ಮಾರ್ಟ್‍ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಎಂಬ ಸುರಕ್ಷಾ ಸಾಧನಗಳನ್ನು ಕೂಡಾ ಹೊಂದಿರಲಿದೆ.

ಉದ್ದಳತೆಯಲ್ಲಿ ಸಾಮಾನ್ಯ ಎರ್ಟಿಗಾಗೆ ಪೈಪೋಟಿ ನೀಡಲಿದೆ ಎರ್ಟಿಗಾ ಎಕ್ಸ್ಎಲ್6

ಎಂಜಿನ್ ಸಾಮರ್ಥ್ಯ

ಹೊಸ ಎರ್ಟಿಗಾ ಎಕ್ಸ್ಎಲ್6 ಕಾರು ಮಾದರಿಯು ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದ್ದು, ಇದು 104-ಬಿಹೆಚ್‍ಪಿ ಮತ್ತು 138-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಳ್ಳಲಿದೆ. ಹಾಗೆಯೇ ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಬರಲಿದೆ ಎನ್ನಲಾಗಿದೆ.

ಉದ್ದಳತೆಯಲ್ಲಿ ಸಾಮಾನ್ಯ ಎರ್ಟಿಗಾಗೆ ಪೈಪೋಟಿ ನೀಡಲಿದೆ ಎರ್ಟಿಗಾ ಎಕ್ಸ್ಎಲ್6

ಎರಡನೇ ತಲೆಮಾರಿನ ಎರ್ಟಿಗಾ ಮಾದರಿಯು ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.45 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 11.21 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 13 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಉದ್ದಳತೆಯಲ್ಲಿ ಸಾಮಾನ್ಯ ಎರ್ಟಿಗಾಗೆ ಪೈಪೋಟಿ ನೀಡಲಿದೆ ಎರ್ಟಿಗಾ ಎಕ್ಸ್ಎಲ್6

ಇದೀಗ ಬಿಡುಗಡೆಯಾಗುತ್ತಿರುವ ಹೊಸ ಎರ್ಟಿಗಾ ಎಕ್ಸ್ಎಲ್6 ವೇರಿಯೆಂಟ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ 13 ವೆರಿಯೆಂಟ್‌ಗಳಿಂತಲೂ ತುಸು ಭಿನ್ನವಾಗಿರಲಿದೆ. ವಿಶೇಷವಾಗಿ ಇದು ವ್ಯಯಕ್ತಿಕ ಕಾರು ಬಳಕೆದಾರರ ಬೇಡಿಕೆಯೆಂತೆ ಎರ್ಟಿಗಾ ಎಕ್ಸ್ಎಲ್6 ಮಾದರಿಯನ್ನು ಅಭಿವೃದ್ಧಿಗೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರಿನ ಬೆಲೆಯು ಆರಂಭಿಕವಾಗಿ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Source:autocarindia

Article Published On: Monday, August 5, 2019, 11:38 [IST]
English summary
Maruti suzuki XL6 dimensions and it appears to be larger than the Ertiga.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+