ಎರ್ಟಿಗಾ ಕಾರಿಗಿಂತಲೂ ಪ್ರೀಮಿಯಂ ಇಂಟೀರಿಯರ್ ಪಡೆದ ಮಾರುತಿ ಸುಜುಕಿ ಎಕ್ಸ್ಎಲ್6

ಮಾರುತಿ ಸುಜುಕಿ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಹೊಸ ವಾಹನವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯು ಮುಂದಿನ ತಿಂಗಳು ತಮ್ಮ ಆರು ಆಸಗಳುಳ್ಳ ಎರ್ಟಿಗಾ ಎಂಪಿವಿ ಕಾರನ್ನು ಬಿಡುಗಡೆ ಮಾಡಲಿದೆ. ಮಾರುತಿ ಸುಜುಕಿ ಇದೇ ಆಗಸ್ಟ್ 21ರಂದು ತಮ್ಮ ಪ್ರೀಮಿಯಂ ಮಾದರಿಯ 6 ಸೀಟರ್ ಎರ್ಟಿಗಾ ಎಕ್ಸ್ಎಲ್6 ಕಾರನ್ನು ಬಿಡುಗಡೆ ಮಾಡಲಿದೆ.

ಎರ್ಟಿಗಾ ಕಾರಿಗಿಂತಲೂ ಪ್ರೀಮಿಯಂ ಇಂಟೀರಿಯರ್ ಪಡೆದ ಮಾರುತಿ ಸುಜುಕಿ ಎಕ್ಸ್ಎಲ್6

ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ಎಂ‍‍ಪಿವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಪ್ರೀಮಿಯಂ ಎಂಪಿ‍‍ವಿ 6 ಸೀಟುಗಳನ್ನು ಹೊಂದಿರಲಿದೆ. ಈ ಎಂಪಿವಿಗೆ ಎಕ್ಸ್ ಎಲ್6 ಎಂದು ಹೆಸರಿಡಲಾಗಿದೆ. ಈ ಎಂಪಿವಿಯನ್ನು ಬಿಡುಗಡೆಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಕಂಪನಿಯು ಈ ವಾಹನದ ವಿನ್ಯಾಸ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.

ಎರ್ಟಿಗಾ ಕಾರಿಗಿಂತಲೂ ಪ್ರೀಮಿಯಂ ಇಂಟೀರಿಯರ್ ಪಡೆದ ಮಾರುತಿ ಸುಜುಕಿ ಎಕ್ಸ್ಎಲ್6

ಹೊಸ 6 ಸೀಟರ್‍‍ನ ಪ್ರೀಮಿಯಂ ಎಂ‍‍ಪಿವಿ, ಜನಪ್ರಿಯ ಎರ್ಟಿಗಾದ ಮೇಲೆ ಆಧಾರಿತವಾಗಿದೆ. ಅಧಿಕೃತವಾಗಿ ಬಿಡುಗಡೆಗೊಳಿಸಲಾಗಿರುವ ಸ್ಕೆ‍‍ಚ್‍‍ಗಳ ಪ್ರಕಾರ ಈ ವಾಹನದಲ್ಲಿ ಅನೇಕ ಅಪ್‍‍ಡೇಟ್‍‍ಗಳನ್ನು ಕಾಣಬಹುದು. ಈ ಅಪ್‍‍‍ಡೇಟ್‍‍ಗಳೆಂದರೆ ಮುಂಭಾಗದಲ್ಲಿರುವ ಹೊಸ ವಿನ್ಯಾಸದ ಗ್ರಿಲ್, ಅಪ್‍‍ಡೇಟ್ ಆಗಿರುವ ಬ್ಲಾಕ್ ಇನ್ಸರ್ಟ್‍‍ಗಳಿರುವ ಹೆಡ್‍‍ಲ್ಯಾಂಪ್ ಕ್ಲಸ್ಟರ್‍‍ಗಳು ಹಾಗೂ ಹೊಸ ವಿನ್ಯಾಸದ ಎಲ್‍‍ಇ‍‍ಡಿ ಡಿ‍ಆರ್‍ಎಲ್‍‍ಗಳು.

ಎರ್ಟಿಗಾ ಕಾರಿಗಿಂತಲೂ ಪ್ರೀಮಿಯಂ ಇಂಟೀರಿಯರ್ ಪಡೆದ ಮಾರುತಿ ಸುಜುಕಿ ಎಕ್ಸ್ಎಲ್6

ಇನ್ನಿತರ ಅಪ್‍‍ಡೇಟ್‍‍ಗಳೆಂದರೆ ರೂಫ್ ರೇಲ್‍‍ಗಳು, ಕಾರಿನ ಸುತ್ತಲೂ ಅಳವಡಿಸಿರುವ ಮಸಲ್ ಹಾಗೂ ನವೀಕರಣಗೊಂಡಿರುವ ಎಲ್‍ಇ‍‍ಡಿ ಟೇಲ್‍‍ಲೈಟ್‍‍ಗಳು. ಕಾರಿನ ಒಳಭಾಗದಲ್ಲಿ ಟಾಪ್ ಮಾದರಿಯ ಎರ್ಟಿಗಾ ಎಂ‍‍ಪಿ‍‍ಯಲ್ಲಿದ್ದಂತಹ ಎಕ್ವಿಪ್‍‍ಮೆಂಟ್‍‍ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಹೆಚ್ಚುವರಿ ಫೀಚರ್‍‍ಗಳನ್ನು ಅಳವಡಿಸಲಾಗಿದೆ.

ಎರ್ಟಿಗಾ ಕಾರಿಗಿಂತಲೂ ಪ್ರೀಮಿಯಂ ಇಂಟೀರಿಯರ್ ಪಡೆದ ಮಾರುತಿ ಸುಜುಕಿ ಎಕ್ಸ್ಎಲ್6

ಇನ್ನು ಬಹಿರಂಗಗೊಂಡ ಮಾರುತಿ ಸುಜುಕಿ ಎಕ್ಸ್ಎಲ್6 ಕಾರುಗಳಲ್ಲಿ ಈ ಬಾರಿ ಸಾಧಾರಣ ಎರ್ಟಿಗಾ ಕಾರಿನಂತೆಯೆ ಕಾಣುವ ಇಂಟೀರಿಯರ್ ಅನ್ನು ಪಡೆದಿದ್ದು, ಆಲ್ ಬ್ಲಾಕ್ ಇಂಟೀರಿಯರ್ ಥೀಮ್, ಮತ್ತು ಇನ್ನಿತರೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಿಡುಗಡೆಯಾಗಲಿರುವ ಈ ಕಾರು ನೆಕ್ಸಾ ಶೋರುಂನಲ್ಲಿ ಮಾತ್ರ ಖರೀದಿ ಮಾಡಲು ಸಾಧ್ಯ.

ಎರ್ಟಿಗಾ ಕಾರಿಗಿಂತಲೂ ಪ್ರೀಮಿಯಂ ಇಂಟೀರಿಯರ್ ಪಡೆದ ಮಾರುತಿ ಸುಜುಕಿ ಎಕ್ಸ್ಎಲ್6

ಸಾಧಾರಣ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಕಾರಿನಂತೆಯೆ ಪ್ರೀಮಿಯಂ ಎಕ್ಸ್ಎಲ್6 ಎಂಪಿವಿ ಕಾರಿನ ಒಳವಿನ್ಯಾಸ ಕೂಡಾ ಇರಲಾಗಿದ್ದು, 2+2+2 ವ್ಯವಸ್ಥೆಯಲ್ಲಿರಲಿದೆ. ಹಾಗೆಯೆ ಈ 6 ಸೀಟರ್ ಎರ್ಟಿಗಾ ಕಾರಿನ ಮಧ್ಯಭಾಗದಲ್ಲಿರುವ ಸೀಟ್‍‍ಗಳು ಈ ಬಾರಿ ಕ್ಯಾಪ್ಪ್ಟೇನ್ ಸೀಟ್‍‍ಗಳ ಅರೇಂಜ್‍ಮೆಂಟ್ ಅನ್ನು ಹೊಂದಿರಲಿದೆ ಎಂಬುದು ಗಮನಾರ್ಹ.

ಎರ್ಟಿಗಾ ಕಾರಿಗಿಂತಲೂ ಪ್ರೀಮಿಯಂ ಇಂಟೀರಿಯರ್ ಪಡೆದ ಮಾರುತಿ ಸುಜುಕಿ ಎಕ್ಸ್ಎಲ್6

ಸೋರಿಕೆಯಾದ ಚಿತ್ರಗಳಲ್ಲಿ ಗಮನಿಸಿದರೆ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 ಕಾರಿನ ಒಳಭಾಗದಲ್ಲಿ 4 ಸ್ಪೀಡ್ ಆಟೋ‍ಮ್ಯಾಟಿಕ್ ಗೇರ್‍‍ಬಾಕ್ಸ್, ಮಲ್ಟಿ ಫಂಕ್ಷನಿಂಗ್ ಸ್ಟೀರಿಂಗ್ ವ್ಹೀಲ್ ಮತ್ತು ಕಾರಿನ ಒಳಭಾಗದಲ್ಲಿರುವ ಬಹುತೇಕ ಭಾಗಗಳನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಇವುಗಳಲ್ಲದೆಯೆ ಆಪಲ್ ಕಾರ್‍‍ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ನ್ಯಾವಿಗೇಷನ್ ಸಪೋರ್ಟ್ ಮಾಡುವ ಸ್ಮಾರ್ಟ್‍ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಹೋಲ್ಡ್ ಅಸಿಸ್ಟ್ ಎಂಬ ಸುರಕ್ಷಾ ಸಾಧನಗಳನ್ನು ಕೂಡಾ ಹೊಂದಿರಲಿದೆ.

ಎರ್ಟಿಗಾ ಕಾರಿಗಿಂತಲೂ ಪ್ರೀಮಿಯಂ ಇಂಟೀರಿಯರ್ ಪಡೆದ ಮಾರುತಿ ಸುಜುಕಿ ಎಕ್ಸ್ಎಲ್6

ಇನ್ನು ಈ ಕಾರು ಬಿಡುಗಡೆ ಮಾಡುವ ಮುನ್ನ ಕೊನೆಯೆ ಬಾರಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಈ ಕಾರಿನ ಚಿತ್ರಗಳು ಇದೀಗ ಸೋರಿಕೆಯಾಗಿ. ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಈ ಚಿತ್ರಗಳನ್ನು ಗಮನಿಸಿದ್ದಲ್ಲಿ ಸಾಧಾರಣ ಎರ್ಟಿಗಾ ಕಾರಿಗಿಂತಲೂ, ಎರ್ಟಿಗಾ ಎಕ್ಸ್ಎಲ್6 (6 ಸೀಟರ್) ಮಾದರಿಯು ಪ್ರೀಮಿಯಂ ಲುಕ್ ಅನ್ನು ಹೊಂದಿದ್ದು, ಕಾರಿನ ಮೇಲ್ಭಾಗದಲ್ಲಿ ಲಗೇಜ್ ಇರಿಸಿಕೊಳ್ಳಲು ಕ್ಯಾರಿಯರ್ ಅನ್ನು ಸಹ ನೀಡಲಾಗುತ್ತಿದೆ.

ಎರ್ಟಿಗಾ ಕಾರಿಗಿಂತಲೂ ಪ್ರೀಮಿಯಂ ಇಂಟೀರಿಯರ್ ಪಡೆದ ಮಾರುತಿ ಸುಜುಕಿ ಎಕ್ಸ್ಎಲ್6

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಎರ್ಟಿಗಾ ಎಕ್ಸ್ಎಲ್6 ಕಾರು ನೆಕ್ಸಾ ಬ್ಲೂ ಬಣ್ಣವನ್ನು ಹೊಂದಿದ್ದು, ಕಪ್ಪು ಬಣ್ಣದ ರೂಫ್ ಅನ್ನು ಪಡೆದುಕೊಂಡಿದೆ. ಹಾಗೆಯೆ ಸೈಡ್ ಪ್ರೊಫೈಲ್‍ ಕೂಡಾ ಕರ್ಷಕವಾಗಿ ಕಾಣಲು 15 ಇಂಚನ ಅಲಾಯ್ ವ್ಹೀಲ್ಸ್, ರೂಫ್ ರೈಲ್ಸ್, ವಿಂಗ್ ಮಿರರ್ಸ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಅನ್ನು ಹೊತ್ತು ವಿಭಿನ್ನವಾದ ಎಂಪಿವಿಯಾಗಿ ಕಾಣಿಸಿಕೊಂಡಿದೆ.

ಎರ್ಟಿಗಾ ಕಾರಿಗಿಂತಲೂ ಪ್ರೀಮಿಯಂ ಇಂಟೀರಿಯರ್ ಪಡೆದ ಮಾರುತಿ ಸುಜುಕಿ ಎಕ್ಸ್ಎಲ್6

ಎರ್ಟಿಗಾ ಎಕ್ಸ್ಎಲ್6 ಕಾರು ಸಾಮಾನ್ಯ ಮಾದರಿಯ ಎರ್ಟಿಗಾ ಕಾರಿಗಿಂತಲೂ ವಿಭಿನ್ನವಾಗಿದ್ದು, ವಿನೂತನವಾದ ಫ್ಲೇರ್ಡ್ ವ್ಹೀಲ್ ಆರ್ಚೆಸ್, ಹೊಸ ಕ್ರೋಮ್ ಗ್ರಿಲ್ ಅನ್ನು ನೀಡಲಾಗಿದೆ. ಹಾಗೆಯೇ ಆಕರ್ಷಕವಾದ ಹೆಡ್‍ಲೈಟ್‍ಗಳು ಮತ್ತು ಎಲ್ಇಡಿ ಡಿಆರ್‍ಎಲ್ ಅನ್ನು ಅಳವಡಿಸಲಾಗಿದ್ದು, ಉತ್ತಮ ಡ್ರೈವ್ ಅನುಭವಕ್ಕಾಗಿ ಹೈ ಗ್ರೌಂಡ್ ಕ್ಲಿಯರೆನ್ಸ್, ರೂಫ್ ರೈಲ್ಸ್ ಮತ್ತು ಇನ್ನಿತರೆ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ.

ಎರ್ಟಿಗಾ ಕಾರಿಗಿಂತಲೂ ಪ್ರೀಮಿಯಂ ಇಂಟೀರಿಯರ್ ಪಡೆದ ಮಾರುತಿ ಸುಜುಕಿ ಎಕ್ಸ್ಎಲ್6

ಎಂಜಿನ್ ಸಾಮರ್ಥ್ಯ

ಹೊಸ ಎರ್ಟಿಗಾ ಎಕ್ಸ್ಎಲ್6 ಕಾರು ಮಾದರಿಯು ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದ್ದು, ಇದು 104-ಬಿಹೆಚ್‍ಪಿ ಮತ್ತು 138-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಳ್ಳಲಿದೆ. ಹಾಗೆಯೇ ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ನೊಂದಿಗೆ ಬರಲಿದೆ ಎನ್ನಲಾಗಿದೆ.

ಎರ್ಟಿಗಾ ಕಾರಿಗಿಂತಲೂ ಪ್ರೀಮಿಯಂ ಇಂಟೀರಿಯರ್ ಪಡೆದ ಮಾರುತಿ ಸುಜುಕಿ ಎಕ್ಸ್ಎಲ್6

ಇದೀಗ ಬಿಡುಗಡೆಯಾಗುತ್ತಿರುವ ಹೊಸ ಎರ್ಟಿಗಾ ಎಕ್ಸ್ಎಲ್6 ವೇರಿಯೆಂಟ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ 13 ವೇರಿಯೆಂಟ್‌ಗಳಿಂತ ತುಸು ಭಿನ್ನವಾಗಿರಲಿದೆ. ವಿಶೇಷವಾಗಿ ಇದು ವ್ಯಯಕ್ತಿಕ ಕಾರು ಬಳಕೆದಾರರ ಬೇಡಿಕೆಯೆಂತೆ ಎರ್ಟಿಗಾ ಎಕ್ಸ್ಎಲ್6 ಮಾದರಿಯನ್ನು ಅಭಿವೃದ್ಧಿಗೊಂಡಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರಿನ ಬೆಲೆಯು ಆರಂಭಿಕವಾಗಿ ರೂ.9 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 12 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Image Courtesy: Gaadiwaadi

Most Read Articles

Kannada
English summary
Maruti Suzuki XL6 Grill Seats And Dashboard Revealed On Website. Read In Kannada
Story first published: Saturday, August 3, 2019, 16:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X