Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಕರ್ಷಕ ಬೆಲೆಗಳಲ್ಲಿ ಮಾರುತಿ ಸುಜುಕಿ 6 ಸೀಟರ್ ಎಕ್ಸ್ಎಲ್6 ಬಿಡುಗಡೆ
ಮಾರುತಿ ಸುಜುಕಿ ಸಂಸ್ಥೆಯು ತನ್ನ ಜನಪ್ರಿಯ ಎಂಪಿವಿ ಆವೃತ್ತಿಯಾದ ಎರ್ಟಿಗಾ ಮಾದರಿಯಲ್ಲಿ ಹೊಸದಾಗಿ 6 ಸೀಟರ್ ವರ್ಷನ್ ಎಕ್ಸ್ಎಲ್6 ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಎರ್ಟಿಗಾಗಿಂತಲೂ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ವ್ಯಯಕ್ತಿಕ ಕಾರು ಬಳಕೆದಾರರನ್ನು ಗುರಿಯಾಗಿಸಿ ಎಕ್ಸ್ಎಲ್6 ಮಾದರಿಯನ್ನು ಬಿಡುಗಡೆ ಮಾಡಿರುವ ಮಾರುತಿ ಸುಜುಕಿಯು 7 ಸೀಟರ್ ಬದಲಾಗಿ 6 ಸೀಟರ್ ಮಾದರಿಯಲ್ಲಿ ಬಿಡುಗಡೆಗೊಳಿಸಿದ್ದು, ಎರ್ಟಿಗಾಗಿಂತಲೂ ಉತ್ತಮ ತಾಂತ್ರಿಕ ಅಂಶಗೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳಿಂದಾಗಿ ನೆಕ್ಸಾದಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ. ಸಾಮಾನ್ಯ ಎರ್ಟಿಗಾ ಕಾರುಗಳು ಅರೆನಾ ಮಾರಾಟಮಳಿಗೆಗಳಲ್ಲಿ ಖರೀದಿ ಲಭ್ಯವಿದ್ದಲ್ಲಿ ಎಕ್ಸ್ಎಲ್6 ಮಾದರಿಯು ನೆಕ್ಸಾದಲ್ಲಿ ಮಾತ್ರವೇ ಖರೀದಿ ಮಾಡಬಹುದಾಗಿದ್ದು, ಬೆಲೆಯಲ್ಲೂ ತುಸು ದುಬಾರಿ ಎನ್ನಿಸಲಿದೆ.

ಸಾಮಾನ್ಯ ಎರ್ಟಿಗಾಗಿಂತ ರೂ.70 ಸಾವಿರ ಹೆಚ್ಚುವರಿ ಬೆಲೆ ಪಡೆದಿರುವ ಎಕ್ಸ್‌ಎಲ್6 ಮಾದರಿಯು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.9.79 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 11.46 ಲಕ್ಷ ಬೆಲೆ ಪಡೆದುಕೊಂಡಿದೆ.

ಎಕ್ಸ್ಎಲ್6 ಕಾರು ಎರ್ಟಿಗಾ ಕಾರಿನ ಜೆಟಾ ಮತ್ತು ಅಲ್ಫಾ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಒಟ್ಟು ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಎಕ್ಸ್ಎಲ್6 ಕಾರು 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಎಂಜಿನ್ ಸಾಮರ್ಥ್ಯ
ಎಕ್ಸ್ಎಲ್6 ಕಾರು ಕೇವಲ ಪೆಟ್ರೋಲ್ ಎಂಜಿನ್ ಮಾತ್ರವೇ ಖರೀದಿ ಮಾಡಬಹುದಾಗಿದ್ದು, ಡೀಸೆಲ್ ಎಂಜಿನ್ ಪರಿಚಯಿಸಿಲ್ಲ. ಹೀಗಾಗಿ ಇದು ವ್ಯಯಕ್ತಿಯ ಕಾರು ಬಳಕೆದಾರನ್ನೇ ಗುರಿಯಾಗಿಸಿ ಬಿಡುಗಡೆ ಮಾಡಲಾಗಿದ್ದು, ಹೊಸ ಕಾರು ಬಿಎಸ್-6 ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಕೆ15ಬಿ ಪೆಟ್ರೋಲ್ ಎಂಜಿನ್ ಮೂಲಕ 105-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಈ ಮೂಲಕ ಇಂಧನ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯಲಿದೆ.

ಆಸನ ಸೌಲಭ್ಯ
7 ಸೀಟರ್ ಎರ್ಟಿಗಾಗಿಂತಲೂ ತುಸು ಬದಲಾವಣೆ ಹೊಂದಿರುವ ಎಕ್ಸ್ಎಲ್6 ಮಾದರಿಯು 6 ಸೀಟರ್ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, 2+2+2 ಆಸನ ವ್ಯವಸ್ಥೆಯೊಂದಿಗೆ ಮಧ್ಯದ ಸಾಲಿನಲ್ಲಿ ಕ್ಯಾಪ್ಟನ್ ಸೀಟರ್ ವೈಶಿಷ್ಟ್ಯತೆ ಹೊಂದಿದೆ.

ಎಕ್ಸ್ ಎಲ್6 4,445 ಎಂಎಂ ಉದ್ದ, 1,775 ಎಂಎಂ ಅಗಲ ಹಾಗೂ 1,700 ಎಂಎಂ ಎತ್ತರವನ್ನು ಹೊಂದಿದ್ದು, ಹೊಸ ಕಾರು ಎರ್ಟಿಗಾ ಕಾರಿಗಿಂತಲೂ 50-ಎಂಎಂ ಹೆಚ್ಚು ಉದ್ದ, 40-ಎಂಎಂ ಹೆಚ್ಚು ಅಗಲ ಹಾಗೂ 10-ಎಂಎಂ ನಷ್ಟು ಹೆಚ್ಚು ಎತ್ತರದೊಂದಿಗೆ 3ನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶ ಒದಗಿಸಿದೆ.

ಡಿಸೈನ್ ಮತ್ತು ಒಳಾಂಗಣ ವಿನ್ಯಾಸ
ಎರ್ಟಿಗಾಗಿಂತಲೂ ಹೆಚ್ಚು ಪ್ರೀಮಿಯಂ ಸೌಲಭ್ಯಗಳನ್ನು ಪಡೆದುಕೊಂಡಿರುವ ಎಕ್ಸ್ಎಲ್6 ಕಾರು ಈ ಬಾರಿ ಹೊಸ ಡಿಸೈನ್ ಪ್ರೇರಿತ ಫ್ರಂಟ್ ಗ್ರಿಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಹೆಡ್‌ಲ್ಯಾಂಪ್ ಕ್ಲಸ್ಟರ್, ಎಲ್‌ಇಡಿ ಡಿಆರ್‌ಎಸ್ ಟರ್ನ್ ಇಂಡಿಕೇಟರ್, 15-ಇಂಚಿನ ಅಲಾಯ್ ವೀಲ್ಹ್ ಮತ್ತು ಎಲ್ಇಡಿ ಟೈಲ್ ಲೈಟ್ಸ್ ಸೌಲಭ್ಯ ಪಡೆದಿದೆ.

ಎಕ್ಸ್ಎಲ್6 ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಕಪ್ಪು ಮತ್ತು ಸಿಲ್ವರ್ ಆಕ್ಸೆಂಟ್ ಬಳಕೆ ಮಾಡಲಾಗಿದ್ದು, ಲೆದರ್ ಹೊದಿಕೆಯ ಸ್ಟಿರಿಂಗ್ ವೀಲ್ಹ್, ಲೆದರ್ ಆಸನ ಸೌಲಭ್ಯ, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಆಸನ, ರಿಯರ್ ಡಿಫಾಗರ್, ಕೀ ಲೆಸ್ ಎಂಟ್ರಿ, ಪವರ್ ವಿಂಡೋ, 7-ಇಂಚಿನ ಸ್ಮಾರ್ಟ್ ಪ್ಲೇ ಸ್ಟುಡಿಯೋ ಸಿಸ್ಟಂ, ವಾಯ್ಸ್ ಕಮಾಂಡ್, ಬ್ಲೂಟೂಥ್, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸೌಲಭ್ಯವಿದೆ.

ಹಾಗೆಯೇ ಪ್ರಯಾಣಿಕರ ಗರಿಷ್ಠ ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್, Isofix ಚೈಲ್ಡ್ ಸೀಟ್ ಮೌಂಟ್, ಕ್ರೂಸ್ ಕಂಟ್ರೋಲರ್, ಎಲೆಕ್ಟ್ರಾನಿಕ್ ಸ್ಟಾಬಿಲಿಟಿ ಪ್ರೋಗ್ರಾಂ, ಹಿಲ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಸೆಂಟ್ರಲ್ ಲಾಕಿಂಗ್, ಫ್ರಂಟ್ ಮತ್ತು ರಿಯರ್ ಸ್ಕಿಡ್ ಪ್ಲೇಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಸೌಲಭ್ಯವನ್ನು ಜೋಡಿಸಲಾಗಿದೆ.

ಇನ್ನು ಮಾರುತಿ ಎಕ್ಸ್ಎಲ್6 ಕಾರು ಬ್ಲೂ, ಖಾಕಿ , ಕೆಂಪು, ಗ್ರೇ, ಸಿಲ್ವರ್ ಹಾಗೂ ಬಿಳಿ ಬಣ್ಣ ಸೇರಿದಂತೆ ಒಟ್ಟು ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 19.01 ಕಿ.ಮಿ ಮೈಲೇಜ್ ಹಿಂದಿರುಗಿಸುವುದಾಗಿ ಮಾರುತಿ ಸುಜುಕಿಯೇ ಹೇಳಿಕೊಂಡಿದೆ.

ಈ ಮೂಲಕ ಮತ್ತಷ್ಟು ಎಂಪಿವಿ ಕಾರು ಬಳಕೆದಾರರನ್ನು ಸೆಳೆಯಲು ಯತ್ನಿಸಿರುವ ಮಾರುತಿ ಸುಜುಕಿಯು ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಮರಾಜೋ ಕಾರಿಗೆ ತೀವ್ರ ಪೈಪೋಟಿ ನೀಡಲಿದ್ದು, ವ್ಯಯಕ್ತಿಕ ಕಾರು ಬಳಕೆದಾರರಿಗೆ ಇದು ಉತ್ತಮ ಆಯ್ಕೆಯಾಗಲಿದೆ.